Link copied!
Sign in / Sign up
13
Shares

ನಿಮ್ಮ ಪತಿಗೆ ನೀವೂ ಎಂದಿಗೂ ಹೇಳಬಾರದ ಮಾತುಗಳು!

ನೀವು ಒಂದು ಸಂಬಂಧದಲ್ಲಿ ಇದ್ದಾಗ, ಅದರಲ್ಲೂ ನಿಮಗೆ ಮಕ್ಕಳಿದ್ದಾಗ, ನೀವು ಮತ್ತು ನಿಮ್ಮ ಪತಿಯು ಯೋಚಿಸಬೇಕಾದ ಮತ್ತು ಒಟ್ಟಿಗೆ ಕೂಡಿ ಕೆಲಸ ಮಾಡಬೇಕಾದ ಹಲವಾರು ವಿಷಯಗಳಿರುತ್ತವೆ. ಕೆಲವೊಂದು ವಾದಗಳ ಕೊನೆಯಲ್ಲಿ ನೀವಿಬ್ಬರೂ ಒಂದು ಒಪ್ಪಂದಕ್ಕೆ ಬಾರದೇನೆ ಇರಬಹುದು. ಕೆಲವೊಂದು ಬಾರಿ, ಮಾತಿನ ಚಕಮಕಿ ಉಂಟಾಗುತ್ತದೆ, ನಾಲಿಗೆ ಮೇಲೆ ಹಿಡಿತ ತಪ್ಪುತ್ತದೆ. ಇಂತಹ ಸನ್ನಿವೇಶಗಳಲ್ಲಿ, ನಿಮ್ಮ ಪತಿಗೆ ಹಲವಾರು ವಿಷಯಗಳು ಹೇಳಬೇಕೆಂದು ನಿಮಗೆ ಅನಿಸಬಹುದು. ಅದರಲ್ಲಿ ಬಹಳಷ್ಟು ವಿಷಯಗಳು ಕೇವಲ ಸಿಟ್ಟಿನಲ್ಲಿ ಹೇಳುವಂತವಾಗಿರುತ್ತವೆ. ನಿಮ್ಮ ತುಟಿಯ ಅಂಚಿನಲ್ಲಿರುವ ಇಂತಹ ಅನೇಕ ಮಾತುಗಳಲ್ಲಿ, ಕೆಲವೊಂದನ್ನು ನೀವು ಹೇಳದೇ ಇದ್ದರೆ ಒಳ್ಳೆಯದು. ನಿಮ್ಮ ಕೋಪ ಎಷ್ಟೇ ಇರಲಿ.


“ನನಗೆ ನಿನ್ನ ಸಹಾಯ ಬೇಡ”


ಒಂದು ವೇಳೆ ಇದು ನಿಜವೂ ಆಗಿದ್ದರೆ, ನೀವು ಅದನ್ನ ಅಷ್ಟು ಕಠೋರವಾಗಿ ಹೇಳುವ ಅಗತ್ಯವಿಲ್ಲ. ಏಕೆಂದರೆ ಈ ಮಾತನ್ನು ಬಹುತೇಕ ಬಾರಿ ಜನರು ಬೇಸರದಿಂದಲೇ ತೆಗೆದುಕೊಳ್ಳುತ್ತಾರೆ. ಈ ಮಾತು ಕೇಳಿಸಿಕೊಂಡವನಿಗೆ ತನಗೆ ತಾನು ಬೇಡವಾದವನು, ಕೆಲಸಕ್ಕೆ ಬಾರದವನು ಅಥವಾ ಯಾರೂ ಗುರುತಿಸದವನು ಎನಿಸುವಂತೆ ಮಾಡುತ್ತದೆ. ಇದು ನಿಮ್ಮ ಪತಿಯಲ್ಲಿ ತಾನು ನಿಮಗೆ ಬೇಡವೆಂದೋ, ನಿಮಗೆ ತನ್ನ ಜೊತೆ ಇರುವುದು ಇಷ್ಟವಿಲ್ಲವೆಂದೋ ಅಥವಾ ನಿಮಗೆ ತನ್ನ ಜೊತೆಗೂಡಿ ಕೆಲಸ ಮಾಡುವುದಕ್ಕಿಂತ ಒಬ್ಬರೇ ಮಾಡಲು ಇಷ್ಟವೆಂದೋ ಅನಿಸುವಂತೆ ಮಾಡುತ್ತದೆ. ಇದರ ಬದಲಾಗಿ ನೀವು ಪರವಾಗಿಲ್ಲ ನಾನೇ ಮಾಡುತ್ತೇನೆ ಎಂದು ಅಥವಾ ನನಗೆ ಸಹಾಯ ಬೇಕಾದರೆ ಕೇಳುತ್ತೇನೆ ಎಂದೋ ಹೇಳಬಹುದು.


“ಹಾಳು ಮಾಡಬೇಡ”


ನಿಮ್ಮ ಪತಿಯು ಯಾವುದಾದರು ಒಂದು ಜವಾಬ್ದಾರಿ ವಹಿಸಿಕೊಂಡಾಗ (ಅದು ಮನೆ ಕೆಲಸದ್ದೇ ಆಗಿರಬಹುದು ಅಥವಾ ಮಕ್ಕಳನ್ನ ಎಲ್ಲಿಗಾದರೂ ಕರೆದೊಯ್ಯುವಾಗ, ಮಕ್ಕಳನ್ನ ನೋಡಿಕೊಳ್ಳುವಾಗ) ಈ ಪದಗಳನ್ನ ಬಳಸಲೇಬೇಡಿ. ಒಂದು ವೇಳೆ ನೀವು ಒಳ್ಳೆಯದನ್ನೇ ಬಯಸುತ್ತಿದ್ದರೂ, ಈ ಮಾತುಗಳನ್ನ ಆಡಬೇಡಿ. ಇದು ನಿಮ್ಮ ಪತಿಗೆ ತನ್ನ ಪತ್ನಿಯು ತನ್ನನ್ನ ಅಸಮರ್ಥನೆಂದು ಅಥವಾ ಕೈಲಾಗದವನು ಎಂದುಕೊಂಡಿದ್ದಾಳೆ ಎನಿಸುವಂತೆ ಮಾಡುತ್ತದೆ. ಇದರಿಂದ ತನ್ನ ಬಗ್ಗೆಯೇ ತನಗೆ ಕೀಳರಿಮೆ ಉಂಟಾಗುವಂತೆ ಮಾಡುತ್ತದೆ. ಇದರಿಂದ ನಿಮ್ಮ ಮತ್ತು ನಿಮ್ಮ ಪತಿಯ ನಡುವೆ ಮನಸ್ತಾಪ ಉಂಟಾಗುವಂತೆ ಮಾಡುತ್ತದೆ.


“ನನಗೆ ಏನೂ ಆಗಿಲ್ಲ”

ನೀವು ಈಗಷ್ಟೆ ಜಗಳವಾಡಿದ್ದರೆ ಅಥವಾ ಈಗಷ್ಟೇ ನಡೆದ ಯಾವುದೊ ಒಂದು ಘಟನೆಯಿಂದ ತಲೆಬಿಸಿ ಮಾಡಿಕೊಂಡಿದ್ದರೆ, ಅದು ನಿಮ್ಮ ತಪ್ಪಿರಲಿ ಅಥವಾ ಅವರದ್ದೇ ತಪ್ಪಿರಲಿ, ನಿಮ್ಮ ಪತಿಗೆ ನೀವು ನೀಡಬಹುದಾದ ಅತ್ಯಂತ ಕೆಟ್ಟದಾದ ಉತ್ತರ ಎಂದರೆ, ಅದು “ನನಗೆ ಏನೂ ಆಗಿಲ್ಲ” ಎಂದು ಹೇಳುವುದು. ಅದರಲ್ಲೂ ಅದು ನಿಜವಲ್ಲ ಎಂದು ನಿಮ್ಮ ಮುಖವೇ ಹೇಳುತ್ತಿರುವಾಗ. ಇದು ಕೇವಲ ಅವರಿಗೆ ನೀವು ತನ್ನನ್ನ ನಂಬುವುದಿಲ್ಲ ಎಂಬ ಭಾವನೆ ಮೂಡುವಂತೆ ಮಾಡುವುದಷ್ಟೇ ಅಲ್ಲದೆ, ನೀವು ಆ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತೀರ. ಒಂದು ವೇಳೆ ನಿಮಗೆ ಏನಾಗಿದೆ ಎಂದು ನಿಮ್ಮ ಪತಿಯು ವಿಚಾರಿಸಿದರೆ, ಅದಕ್ಕೆ ಕಾರಣ ನಿಮ್ಮಲ್ಲಿ ಏನೋ ಒಂದು ವ್ಯತ್ಯಾಸ, ಬೇಸರ ಕಾಣಿಸುವುದು. ಜಗಳವನ್ನ ಮತ್ತಷ್ಟು ಕೆದಕದೆ, ಆ ಪ್ರಶ್ನೆಯನ್ನ ತೊಂದರೆ ದೂರ ಮಾಡಲು ಒಂದು ಒಳ್ಳೆಯ ದಾರಿಯಂತೆ ನೋಡಿ.


“ನಿನಗೆ ನನ್ನ ಮೇಲೆ ನಿಜವಾಗಲೂ ಪ್ರೀತಿ ಇದ್ದರೆ…”


ವೈಮನಸ್ಸು ಶಮನ ಮಾಡಿಕೊಳ್ಳಬೇಕೆಂದು  ನೀವು ಮಾಡಬಹುದಾದಂತ ಅತ್ಯಂತ ಕೆಟ್ಟ ಕೆಲಸ ಎಂದರೆ ಅದು ನಿಮ್ಮ ಎದುರಾಳಿಯನ್ನ ಬಿಡಿಸಿಕೊಳ್ಳಲಾಗದಂತಹ ಪರಿಸ್ಥಿಗೆ ಸಿಲುಕಿಸುವುದು. ಈ ಮೇಲಿನ ಮಾತು ಅಂತಹದ್ದನ್ನೇ ಮಾಡುವುದು. ಇದು ಅವರಿಗೆ ತಮ್ಮನ್ನ ಯಾಕೆ ಇವರು ಭಾವನಾತ್ಮಕವಾಗಿ ಬ್ಲಾಕ್ಮೇಲ್ ಮಾಡುತ್ತಿರುವವರು ಎಂದು ಮತ್ತು ತಮಗೆ ಈಗ ಉಳಿದಿರುವುದು ಕೇವಲ ಒಂದೇ ಆಯ್ಕೆ ಎಂದು ಅನಿಸುವಂತೆ ಮಾಡುತ್ತದೆ ಒಂದು ವೇಳೆ ಆ ಆಯ್ಕೆಯು ಕೂಡ ನಿಮ್ಮ ಪತಿಗೆ ಇಷ್ಟವಾಗದೇ ಇದ್ದರೆ, ರಕ್ಷಣಾತ್ಮಕ ನಡೆ ತೋರುವುದು ಅಥವಾ ಒರಟಾಗಿ ವರ್ತಿಸುವುದು, ತಿರುಗಿ ಬೀಳುವ ಯೋಚನೆ ಬರಬಹುದು. ಮದುವೆಯು ಟು-ವೇ ದಾರಿ ಎಂದು ಮತ್ತು ಇಲ್ಲಿ ಒಬ್ಬರಿಗೊಬ್ಬರು ಸೋಲಬೇಕು ಎಂಬುದನ್ನ ನೆನಪಲ್ಲಿಡಿ.

 

“ನಾನು ಆವಾಗ್ಲೇ ಹೇಳ್ದೆ ನಿನಿಗೆ”


ಯಾವುದೇ ದೊಡ್ಡ ತಪ್ಪು? ತಪ್ಪು ಕೆಲಸ ಮಾಡುವುದೋ ಅಥವಾ ತಪ್ಪಾಗಿ ಅಂದುಕೊಳ್ಳುವುದೋ? ಎರಡೂ ಅಲ್ಲ. ಅದನ್ನ ಎತ್ತಿ ಎತ್ತಿ ತೋರಿಸುವುದೇ ದೊಡ್ಡ ತಪ್ಪು. ಈ ಮೇಲಿನ ಮಾತು ಮಾಡುವುದೇ ಆ ಕೆಲಸ. ಇದು ತನ್ನನ್ನ ಹೀಯಾಳಿಸಬೇಕೆಂದೇ ಕಾಯುತ್ತಿದ್ದರೇನೋ ಎಂದು ನಿಮ್ಮ ಪತಿಗೆ ಅನಿಸುವಂತೆ ಮಾಡುತ್ತದೆ. ಅದರಲ್ಲೂ ತನ್ನ ಪತ್ನಿಯೇ ಹೀಗೆ ಮಾಡುತ್ತಿರುವಳು ಎಂಬ ಭಾವನೆ ಯಾವ ಪತಿಗೂ ಬೇಡ. ಗೌರವ ಎನ್ನುವುದು ಒಂದು ಮದುವೆಯಲ್ಲಿ ಬಹಳ ಅಗತ್ಯವಾದದ್ದು. ಹೀಯಾಳಿಸುವುದು ಇದಕ್ಕೆ ತದ್ವಿರುದ್ದವಾದದ್ದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon