Link copied!
Sign in / Sign up
53
Shares

ನಿಮ್ಮ ಪತಿ ನಿಮ್ಮಿಂದ ಕೇಳಲು ಬಯಸುವ ೭ ವಿಷಯಗಳು

ಮದುವೆ ಆದಮೇಲೆ,ಸಂಸಾರ ಅಂದಮೇಲೆ ಕೆಲವೊಂದು ವಿಷಯಗಳನ್ನು ನಾವು ಬಾಯ್ಬಿಟ್ಟು ಹೇಳುವುದಿಲ್ಲ. ಅದರಿಂದ ಸಂಸಾರಕ್ಕೆ ಒಳಿತು ಆಗುತ್ತಿದ್ದರೆ ಅದರಲ್ಲಿ ಖಂಡಿತ ಯಾವುದೇ ತಪ್ಪಿಲ್ಲ. ಆದರೆ ಕೆಲವೊಂದು ಬಾರಿ ನಮ್ಮ ದಿನ ಎಷ್ಟೇ ಕೆಟ್ಟದಿದ್ದರು, ನಮ್ಮ ಪ್ರೀತಿಪಾತ್ರರ ಮಾತಿನಿಂದ ನಮ್ಮ ಮುಖ ಅರಳುತ್ತದೆ. ಒಬ್ಬ ಗಂಡಸು ಜಗತ್ತಿನಲ್ಲಿ ಅವನು ಅತ್ಯಂತ ಪ್ರೀತಿಸುವ ಆ ಹುಡುಗಿ, ಅಂದರೆ ಹೆಂಡತಿ ಇಂದ ಕೇಳಲು ಬಯಸುವ ಕೆಲವು ವಿಷಯಗಳು ಇಲ್ಲಿವೆ. ನೀವು ಇವುಗಳನ್ನು ಈಗಾಗಲೇ ಮಾಡುತ್ತಿದ್ದರೆ, ನಿಮ್ಮ ಸಂಸಾರ ಖುಷಿ ಇಂದ ಕೂಡಿರುತ್ತೆ ಎಂದು ಖಚಿತವಾಗಿ ಹೇಳಬಲ್ಲೆ. ಇಲ್ಲವಾದಲ್ಲಿ, ಈಗಿನಿಂದಲೇ ಶುರು ಮಾಡಿ. ಇಲ್ಲಿ ಪ್ರಸ್ತಾಪಿಸಿರುವ ಪದಗಳಿಗೆ ಅಥವಾ ವಾಕ್ಯಗಳಿಗೆ ಮಾಂತ್ರಿಕ ಶಕ್ತಿ ಇದ್ದು, ಎಲ್ಲವನ್ನು ಮಾಸುವ ಗುಣವಿದೆ !

೧. “ಧನ್ಯವಾದ/ ಥ್ಯಾಂಕ್ಸ್”

ನಾವು ಯಾರಿಗಾದರು ಸಹಾಯ ಮಾಡಿ, ಅವರು ನಮಗೆ ಧನ್ಯಾವಾದ ಎಂದು ಹೇಳಿದರೆ ನಮಗೆ ಎಷ್ಟು ಖುಷಿ ಆಗುತ್ತದೆ ಆಲ್ವಾ? ನಾವು ಧನ್ಯವಾದಗಳನ್ನ ನಿರೀಕ್ಷಿಸುತ್ತಿರುತ್ತೀವಿ ಎಂದಲ್ಲ, ಆದರು ನಮ್ಮ ಸಹಾಯವನ್ನು ಅವರು ಗುರುತಿಸಿದರು ಎಂದು ಮತ್ತು  ಅದು ಅವರಿಗೆ ಖುಷಿ ತಂದಿದೆ ಎಂದು ತಿಳಿದುಕೊಂಡಾಗ ನಮಗೆ ಏನೋ ಖುಷಿ. ಇದು ಮಾನವನ ಸ್ವಭಾವ. ಇಂತದರಲ್ಲಿ, ನಮ್ಮೊಂದಿಗೆ ಸದಾಕಾಲ ಇರುತ್ತಾ ನಮ್ಮ ಖುಷಿಗಾಗಿಯೇ ತಮ್ಮ ಜೀವನ ಮುಡಿಪಿಟ್ಟ ನಮ್ಮ ಪ್ರೀತಿಪಾತ್ರರಿಗೆ ನಾವು ಧನ್ಯವಾದಗಳು ಹೇಳದೆ ಇದ್ದಾರೆ ಹೇಗೆ ಅಲ್ವ? ನಿಮ್ಮ ಒಂದು ಥ್ಯಾಂಕ್ಸ್ ನಿಮ್ಮ ಪತಿಯು ನಿಮಗಾಗಿ ಪಡುವ ಶ್ರಮವನ್ನು ಗುರುತಿಸಿದ ಹಾಗೆ. ಅಡುಗೆಮನೆಯಲ್ಲಿ ಕೈಗೆ ಎಟುಕದ ಡಬ್ಬ ತೆಗೆದುಕೊಟ್ಟಾಗ ಅಥವಾ ತರಕಾರಿ ಕತ್ತರಿಸಿ ಕೊಟ್ಟಾಗ ಅವರಿಗೆ ಥ್ಯಾಂಕ್ಸ್ ಹೇಳಲು ಮರಿಯಬೇಡಿ. ಇವುಗಳು ಸಣ್ಣ ವಿಷಯವೇ ಇರಬಹುದು, ಆದರೆ ಅವರ ಸಹಾಯದಿಂದ ನೀವು ಮಾಡುತ್ತಿದ್ದ ಕೆಲಸ ಸುಲಭವಾಯಿತು ಅಲ್ಲವ?

೨. “ಕ್ಷಮಿಸಿ/ ಸಾರಿ”

ಸಂಸಾರ ಅಂದ ಮೇಲೆ ಗಂಡ ಒಮ್ಮೆ, ಹೆಂಡತಿ ಒಮ್ಮೆ ತಪ್ಪುಗಳು ಮಾದುತ್ತಿರತಲೇ ಇರುತ್ತಾರೆ. ತಪ್ಪುಗಳು ಮಾಡದೆ ಸಂಸಾರ ನಡೆಸಲು ಸಾಧ್ಯವೇ ಇಲ್ಲ. ನೀವು ಎಂದಾದರು ತಪ್ಪು ಮಾಡಿ ನಂತರ ಅದರ ಅರಿವಾದರೆ, ಕ್ಷಮೆ ಕೇಳಲು ಹಿಂದೆ ಮುಂದೆ ನೋಡಲೇ ಬೇಡಿ. ಕ್ಷಮೆ ಕೇಳುವುದು ವಾತಾವರಣ ತಿಳಿ ಮಾಡುವುದಲ್ಲದೆ, ಕೇಳಿಸಿಕೊಳ್ಳಲು ತುಂಬಾ ವಿನಯವಾಗಿ ಇರುತ್ತದೆ. ಕ್ಷಮೆ ಕೇಳುವುದರಿಂದ ಯಾರು ಚಿಕ್ಕವರಾಗುವುದಿಲ್ಲ. ಪ್ರತಿ ಬಾರಿ ನೀವೇ ಏಕೆ ಕ್ಷಮೆ ಕೇಳಬೇಕೆಂದು ಅಂದುಕೊಳ್ಳಬೇಡಿ, ಒಂದೆರೆಡು ಬಾರಿ ನೀವು ತಪ್ಪು ಮಾಡಿದಾಗ ಕ್ಷಮೆ ಕೇಳಿ, ಆಗ ನಿಮ್ಮ ಪತಿಗೂ ಸಹಾ ಮುಂದೆ ತಪ್ಪು ಮಾಡಿದಾಗ ಒಪ್ಪಿಕೊಳ್ಳಲು ಪ್ರೋತ್ಸಾಹ ಸಿಗುತ್ತದೆ. ಇದರಿಂದ ನಿಮ್ಮ ಬಂಧ ಗಟ್ಟಿಯಾಗುತ್ತದೆ.

೩. “ಇವತ್ತು ಚೆನ್ನಾಗಿ ಕಾಣ್ತಿದಿಯ”

ಅವರು ಸೂಟು ತೊಟ್ಟರು ನೀನು ಬಾಂಡ್ ಹೀರೋ ರೀತಿ ಕಾಣ್ತಿದಿಯ ಎಂದು ಹೇಳುವರು ಅವರು ಸಾಧಾರಣ ಟೀಶರ್ಟ್ ಜೀನ್ಸ್ ಪ್ಯಾಂಟ್ ಧರಿಸಿದಾಗಲು ಕಾಲೇಜು ಹುಡುಗನಂತೆ ಕಾಣುತ್ತಿದ್ದೀಯ ಎಂದು ಹೇಳಲು ಹಿಂಜರಿಯಬೇಡಿ. ಖಂಡಿತವಾಗಿಯೂ ನಿಮ್ಮ ಮಾತು ಕೇಳಿದೊಡನೆ ಅವರು ಮುಗುಳ್ನಗುತ್ತಾರೆ ಮತ್ತು ನಾಚಿಕೊಳ್ಳುತ್ತಾರೆ. ಈ ಮಾತನ್ನು ಯಾವಾಗಲೋ ಒಮ್ಮೆ ಕೇಳುತ್ತಿದ್ದ ಅವರು, ಅದನ್ನು ಕೇಳಿದೊಡನೆ ದಿನವೆಲ್ಲ ಆಕಾಶದಲ್ಲಿಯೇ ಇರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ.

೪. “ನಿನ್ನ ಮೇಲೆ ನಂಬಿಕೆ ಇದೆ”   

ಮದುವೆ ಆದಮೇಲೆ “ನಾನು ನಿನ್ನ ಪ್ರೀತಿಸುವೆ” ಅನ್ನುವ ಸಾಲುಗಳಿಗಿಂತ ಈ ಮೇಲಿನ ಸಾಲು ಹೆಚ್ಚು ಪ್ರಾಮುಖ್ಯ. ನಂಬಿಕೆ ಎನ್ನುವುದು ಇಡೀ ಸಂಸಾರದ ಆಧಾರಸ್ತಂಭ ಆಗಿರುತ್ತದೆ. ಈ ಸಾಲಿನಿಂದ ಅವರ ಆತ್ಮಸ್ಥೈರ್ಯ ಹೆಚ್ಚಿಸಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ, ಅವನ ಎಲ್ಲ ಅಭಿಪ್ರಾಯಗಳನ್ನು ಆಲಿಸಿ ಹಾಗು ಕೊನೆಯಲ್ಲಿ ನನಗೆ ನಿನ್ನ ಮೇಲೆ ನಂಬಿಕೆ ಇದೆ ಎಂದು ಹೇಳಿ. ಅವರು ನಿಮ್ಮೊಂದಿಗೆ ಪುನಃ ಪ್ರೀತಿಯಲ್ಲಿ ಬೀಳುತ್ತಾರೆ !

೫. “ಇದನ್ನ ಸರಿ ಮಾಡ್ತಿಯಾ?”

ಎಲ್ಲಾ ಗಂಡಸರು ತಾವು ಅವಶ್ಯಕ ಎಂಬ ಭಾವನೆ ಬಯಸುತ್ತಾರೆ. ನೀವು ಮನೆಯಲ್ಲಿ ಏನೇ ಆದರೂ ಸರಿ ಮಾಡಬಲ್ಲ ನಿಪುಣತೆ ಹೊಂದಿರಬಹುದು, ಆದರೂ ಕೆಲವೊಮ್ಮೆ ಅವರ ಸಹಾಯ ಕೇಳಿ. ನಿಮ್ಮ ಪತಿಯು ನಿಮ್ಮ ಸಂಸಾರದ,ಅಂದರೆ ತನ್ನ ಮೆಚ್ಚಿನ ಸ್ವಂತದ ಜನರ ಅಗತ್ಯತೆಗಳನ್ನ ಪೂರೈಸುವುದರಲ್ಲಿ  ಅವರು ಖುಷಿ ಪಡೆಯುತ್ತಾರೆ. ಹಾಗಾಗಿ, ಅವರಿಗೆ ಸರಿಪಡಿಸಲು ಬಿಡಿ.

೬. “ನಾನ್ ರೆಡಿ, ಹೋಗೋಣ್ವಾ?”

ಇದನ್ನಂತೂ ಅವರು ಯಾವತ್ತು ಊಹಿಸಿರುವುದೇ ಇಲ್ಲ! ಎಲ್ಲಾದರು ಹೋಗಲು ಅವರು ಬಂದು ನಿಮಗೆ ತಯಾರಾಗಲು ಹೇಳುವ ಮುನ್ನ ನೀವೇ ತಯಾರಾಗಿರಿ. ಮುಂದಿನ ಸಲ ಸಿನಿಮಾಗೆ ಹೋಗುವಾಗ, ತಡವಾಯ್ತು ಎಂದು ಅವರು ನಿಮ್ಮ ಮೇಲೆ ಆರೋಪ ಮಾಡುವಂತೆ ಮಾಡಿಕೊಳ್ಳಬೇಡಿ. ಇದನ್ನು ಮಾಡಿದ್ದಲ್ಲಿ , ಪಕ್ಕಾ ಹೇಳುತ್ತೇನೆ, ಇನ್ನುಮುಂದೆ ಅವರು ನಿಮ್ಮನ್ನು ಇನ್ನು ಹೆಚ್ಚು ಸಿನಿಮಾಗಳಿಗೆ  ಅಥವಾ ಹೊರಗಡೆ ತಿನ್ನಲಿಕ್ಕೆ ಕರೆದುಕೊಂಡು ಹೋಗುತ್ತಾರೆ!

೭ . “ನಾನು ನಿನ್ನ ಪ್ರೀತಿಸುತ್ತೀನಿ , ನಾನು ನಿನ್ನ ಮಿಸ್ ಮಾಡುತ್ತೇನೆ ”

ಕೊನೆಯದಾದರು ಮುಖ್ಯವಾಗಿ ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಹಾಗು ಅವರನ್ನು ಪಡೆಯಲು ನಿಮಗೆ ಎಷ್ಟು ಹೆಮ್ಮೆ ಇದೆ ಎಂದು ಹೇಳುತ್ತೀರಿ. ಅವರು ಕೆಲಸದ ಮೇಲೆ ಅಥವಾ ಸ್ನೇಹಿತರೊಡನೆ ಪ್ರವಾಸಕ್ಕೆ ಹೋದಾಗ, ಅವರಿಗೆ ಕರೆ ಮಾಡಿ ಅವರನ್ನು ಎಷ್ಟು ಕಲೆದುಕೊಳ್ಳುತ್ತಿದ್ದೀರ ಎಂದು ಹೇಳಿ. ಮನೆಗೆ ಬಂದ ಮೇಲೆ ನಿಮಗೆ ಏನೋ ಒಳ್ಳೆ ವಿಷಯ ಕಾದಿದೆ ಎಂದು ಹೇಳಿ. ಹೀಗೆ ಹೇಳಿದೊಡನೆ ಅವರ ಹೃದಯದ ಇಂಜಿನ್ ಓಡುತ್ತಿರುತ್ತದೆ. ಹಾಗು ಇದು ಅವರು ನಿಮ್ಮನ್ನು ಮತ್ತಷ್ಟು ಪ್ರೀತಿಸುವಂತೆ ಮಾಡುತ್ತದೆ.

ಇವು ನೀವು ನಿಮ್ಮ ಪತಿಗೆ ಆಗಾಗ ಹೇಳಬೇಕಾದ ಮಾತುಗಳು. ಸಮಯ ಸಿಕ್ಕಾಗಲೆಲ್ಲ ಅವರಿಗೆ ತಾವು ವಿಶೇಷ ಎಂದು ಭಾವಿಸುವಂತೆ ಮಾಡಿ. ಏಕೆಂದರೆ ಅವರು ಇದಕ್ಕೆಲ್ಲಾ ಅರ್ಹರಾಗಿರುತ್ತಾರೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon