Link copied!
Sign in / Sign up
24
Shares

ನಿಮ್ಮ ಪತಿ ಮಾಡುವ ಈ ೫ ವಿಷಯಗಳು ನೀವು ಅವರನ್ನು ಮತ್ತಷ್ಟು ಪ್ರೀತಿಸುವಂತೆ ಮಾಡುತ್ತದೆ

ಪೋಷಣೆ ಎಂಬುದು ಉದ್ಯಾನವನದಲ್ಲಿ ನಡೆದಾಡುವುದಲ್ಲ, ಆದರೆ ನಿಮ್ಮ ಪ್ರತಿ ಹೆಜ್ಜೆಯಲ್ಲೂ ಯಾರದರು ಒಬ್ಬರು ನಿಮ್ಮ ಜೊತೆ ಇದ್ದರೆ, ಖಂಡಿತವಾಗಿಯೂ ನಿಮ್ಮ ಪ್ರತಿ ಹೆಜ್ಜೆ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಪತಿ ಅವರದೇ ಯೋಚನೆ ಅಥವಾ ಕೆಲಸದಲ್ಲಿ ಇರುತ್ತಾರೆ, ಆದರೆ ಅವರು ನಿಮ್ಮ ಮಗುವಿನ ಪೋಷಣೆಯಲ್ಲಿ ಸಹಾಯ ಮಾಡಿದ ದಿನ ನಿಮ್ಮ ಖುಷಿಯ ದಿನವನ್ನಾಗಿ ಬದಲಿಸುತ್ತಾರೆ. ಇಲ್ಲಿರುವ ಸಣ್ಣ ೫ ವಿಷಯಗಳು ನಿಮ್ಮ ಪತಿ ಮಾಡುವುದು, ಅದು ನಿಮ್ಮನ್ನು ದೊಡ್ಡ ರೀತಿಯಲ್ಲಿ ಅವರ ಮೇಲಿನ ಪ್ರೀತಿಯನ್ನು ಹೆಚ್ಚಿಸುವಂತೆ ಮಾಡುತ್ತದೆ.

೧. ಅವರು ಮಗುವಿನ ಡೈಪರ್(ಕಚ್ಚಾ ಪಾಡ) ಬದಲಿಸಿದಾಗ

ಡೈಪರ್ ಬದಲಾಯಿಸಿದಾಗ.ಅವರು, ಸ್ವಯಂಪ್ರೇರಣೆಯಿಂದ, ಮಗುವಿನ ಡೈಪರ್ ಅನ್ನು ಬದಲಿಸಲು ನಿರ್ಧರಿಸಿದಾಗ ನೀವು ಅವರನ್ನು ಪ್ರೀತಿಸುವುದಿಲ್ಲವೇ? ನೀವು ಕೆಲಸ ಮಾಡುವಾಗ ಅಥವಾ ಹೊರಗೆ ಹೋಗಿರುವಾಗ ನಿಮ್ಮ ಕಂದಮ್ಮ ಅಳಲು ಪ್ರಾರಂಭಿಸುತ್ತದೆ. ನಿಮಗೆ ಗೊತ್ತು, ಇದು ಸಹಜವಾಗಿ ಮಗುವು ತನ್ನ ಡೈಪರ್ ಅನ್ನು ಒದ್ದೆ ಮಾಡಿಕೊಂಡಿರುವುದು ಕಾರಣ ಮತ್ತು ಅದನ್ನು ಬದಲಿಸಬೇಕೆಂದು. ಆ ಕೆಲಸವನ್ನು ನಿಮ್ಮ ಪತಿಯು ಮಾಡಿದರೆ ಅಂದು ನಿಮ್ಮ ದಿನವನ್ನಾಗಿ ಅವರು ಮಾಡುತ್ತಾರೆ. ಮತ್ತು ಇದು ನೀವು ಅವರನ್ನು ಪ್ರೀತಿಸುವಂತೆ ಮಾಡುತ್ತದೆ.

೨. ಅವರು ಮಗುವಿನೊಂದಿಗೆ ಆಡುವಾಗ

ನಿಮ್ಮ ಗಂಡ ಮಗುವನ್ನು ತನ್ನ ಬೆನ್ನ ಮೇಲೆ ಸವಾರಿ ಮಾಡಿಸುವುದನ್ನು ನೋಡಿದಾಗ, ಅವರ ಅಕ್ಕರೆಯನ್ನು ಕಂಡು, ನಿಮ್ಮ ಹೃದಯ ತುಂಬಿ ಬಂದು ನೀವು ನನ್ನ ಜೀವದ ಗೆಳೆಯ ಎಂದು ಹೇಳದೆ ಇರಲಾರಿರಿ. ಅವರು ಕೆಲಸದಿಂದ ದಣಿದು ಬಂದಿದ್ದರೂ, ತಮ್ಮ ಮಗುವಿನೊಂದಿಗೆ ಆಡಲು ಬಯಸುವ ಕ್ಷಣ ನಿಮ್ಮನ್ನು ಅವರ ಮೇಲಿನ ಪ್ರೀತಿಯಲ್ಲಿ ಬಂಧಿಸುತ್ತದೆ. ಮಗುವು ತನ್ನ ಬೆರೆಳುಗಳನ್ನು ಅವನ ಹತ್ತಿರ ಆಡಿಸುತ್ತಾ ಖುಷಿಯಿಂದಿರುವುದು, ಇಂತಹ ಗೆಳೆಯನನ್ನು ಪಡೆಯಲು ನಾನು ಅದೃಷ್ಟ ಮಾಡಿರುವೆ ಎಂದು ಭಾವಿಸುತ್ತಿರಿ.

 ೩. ಮಧ್ಯ ರಾತ್ರಿಯಲ್ಲಿ ಮಗುವನ್ನು ನೋಡಿಕೊಳ್ಳುವಾಗ

ನೀವು ಆಗ ತಾನೇ ಗಾಡ ನಿದ್ರೆಗೆ ಜಾರಿರುವಿರಿ, ಮತ್ತು ಪ್ರಪಂಚವು ನಿಮ್ಮ ಖುಷಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬಂತೆ ನಿಮ್ಮ ಮಗುವು ಅಳಲು ಆರಂಭಿಸುವುದು. ನೀವು ಅದನ್ನು ಕಳೆದುಕೊಳ್ಳುವಿರಿ ಮತ್ತು ಸ್ಥಗಿತಗೊಳ್ಳುವಿರಿ ಆದರೆ ನಿಮ್ಮ ಪತಿ ನಿಮಗಾಗಿ ಆ ದಿನವನ್ನು ಉಳಿಸುತ್ತಾನೆ. ಅವರು ಮಗುವಿನ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ, ಮತ್ತು ಮಗುವನ್ನು ನಿದ್ರೆಗೆ ಜಾರುವಂತೆ ಮಾಡಿ ಮಲಗುತ್ತಾರೆ. ನಿಮಗೆ ಇದು ಎಂತಹ ಅಧ್ಬುತ ವಿಷಯ.

೪. ಮಗುವಿನ ಜೊತೆ ಕುಳಿತಾಗ

ನಿಮ್ಮ ಸ್ನೇಹಿತರು ಭೇಟಿಯಾಗಲು ಯೋಜಿಸುತ್ತಿದ್ದಾರೆ ಮತ್ತು ಆದರೂ, ನೀವು ನಿಜವಾಗಿಯೂ ಹೋಗಬೇಕೆಂದು ಬಯಸಿದರೂ ನಿಮ್ಮ ಮಗುವನ್ನು ನೋಡಿಕೊಳ್ಳಲು ನೀವು ಮನೆಯಲ್ಲಿಯೇ ಇರಬೇಕಾದಿತು. ನಿಮ್ಮ ಪತಿಯು ಈ ಸಂದರ್ಭದಲ್ಲಿ ಹೇಳುತ್ತಾರೆ, ನಾನು ಮಗುವಿನ ಪೋಷಣೆ ಮಾಡುತ್ತೇನೆ, ನೀನು ನಿನ್ನ ಸ್ನೇಹಿತರನ್ನು ಬೇಟಿಯಾಗು ಎಂದು ಹೇಳಿದಾಗ, ಅವನು ಉತ್ತಮನಲ್ಲವೇ? ಈಗ ನೀವು ನಿಮ್ಮ ಸ್ನೇಹಿತರ ಜೊತೆ ಇದ್ದರೂ ನಿಮ್ಮ ಮನಸ್ಸಿನಲ್ಲಿ ಸಂಪೂರ್ಣ ಅವರದ್ದೇ ನೆನಪು.

೫. ಅವರು ಸರಿಯಾದ ವಿಷಯಗಳನ್ನು ಹೇಳಿದಾಗ

'ನೀವು ಉತ್ತಮ ತಾಯಿ', ಅವರು ತುಂಬಾ ಕಷ್ಟದ ದಿನಗಳಲ್ಲಿ ನಿಮ್ಮನ್ನು ಧೈರ್ಯಪಡಿಸುವಂತೆ ಹೇಳುತ್ತಾರೆ. 'ನೀವು ಇದನ್ನು ಮಾಡಬಹುದು!', ನಿಮ್ಮ ಭರವಸೆ ಕಳೆದುಹೋದ ದಿನಗಳಲ್ಲಿ ಈ ಮಾತುಗಳನ್ನು ಹೇಳುತ್ತಾನೆ. 'ನಾನು ನಿನ್ನ ಪ್ರೀತಿಸುತ್ತೇನೆ', ಪ್ರೀತಿಸುವ ಕಷ್ಟದ ದಿನಗಳಲ್ಲಿ ಹೇಳುವರು. ಪತಿಯಂದಿರು ಒಂದು ಆಶೀರ್ವಾದ. ನಿಮ್ಮ ಮಗುವಿಗೆ ಅವರ ಪ್ರೀತಿಯ ಅಪಾರತೆಯ ಅಭಿವ್ಯಕ್ತಿ ಮತ್ತು ನೀವು ಕುಗ್ಗಬಹುದು ಆದರೆ ನಿಮ್ಮ ಮೇಲಿನ ಅವರ ಭಾವನೆ ಎಂದಿಗೂ ಕಡಿಮೆಯಾಗುವುದಿಲ್ಲ. ಅವರು ಮಾಡುವ ಸಣ್ಣ ವಿಷಯಗಳು, ಅವು ನಿಜಕ್ಕೂ ಎಣಿಸುವ ವಿಷಯಗಳಾಗಿವೆ. ಮತ್ತು ನೀವು ಸರಿಯಾಗಿ ಮಾಡುವುದಕ್ಕಿಂತಲೂ ಅವನನ್ನು ಪ್ರೀತಿಸಲಾಗದು ಎಂದು ನೀವು ಭಾವಿಸಿದಾಗ, ಅವನು ನಿಮ್ಮ ಮಗುವನ್ನು ಅಪ್ಪಿಕೊಳ್ಳುತ್ತಾನೆ, ಮತ್ತು ನೀವು ಅವನನ್ನು ಮತ್ತಷ್ಟು ಪ್ರೀತಿಸುತ್ತೀರಿ.

ಅಭಿನಂದನೆಗಳು!, ನಿಮ್ಮ ಸುಂದರವಾದ ಕುಟುಂಬಕ್ಕೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon