Link copied!
Sign in / Sign up
7
Shares

ನಿಮ್ಮ ಮುದ್ದು ಕಂದಮ್ಮಗಳನ್ನು ಅನಾರೋಗ್ಯದಿಂದ ದೂರವಿರಿಸಲು ಈ 6 ಸಲಹೆಗಳು

ನೀವು ನಿಮ್ಮ ಸ್ನೇಹಿತರೊಡನೆ ಮಾತನಾಡುವಾಗ, ನಿಮ್ಮ ಮಗುವಿನ ಆರೋಗ್ಯದಲ್ಲಿ ಆಗುವ ಬದಲಾವಣೆಗಳ ವಿಷಯ ಚರ್ಚೆಗೆ ಬರುವುದು ಸಾಮಾನ್ಯ. ಬಹುಶಃ ಕೆಲವು ಮಕ್ಕಳನ್ನು ನೀವು ಗಮನಿಸಿರಬಹುದು, ಅವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆ ಕಾಣಿಸುವುದಿಲ್ಲ, ಆದರೆ ನಿಮ್ಮ ಮಗುವಿಗೆ ಆಗಾಗ್ಗೆ ಜ್ವರ ಅಥವಾ ಶೀತ ಕಾಣಿಸಿಕೊಳ್ಳಬಹುದು. ಇದರಿಂದ ನಿಮ್ಮ ಪೋಷಕತ್ವವನ್ನು ಸರಿಯಾಗಿ ಮಾಡುತ್ತಿಲ್ಲವೆಂಬ ಭಾವನೆ ನಿಮ್ಮಲ್ಲಿ ಮೂಡಬಹುದು. ನಿಮ್ಮ ಮುದ್ದು ಕಂದಮ್ಮನ ಆರೋಗ್ಯ ಕಾಪಾಡಲು ಇಲ್ಲಿ ಕೆಲವು ಸಲಹೆಗಳಿವೆ.,

೧. ವ್ಯಾಯಾಮ

ನಿಮ್ಮ ಮುದ್ದು ಕಂದಮ್ಮಗಳಿಗೆ ಔಷದಿ, ಸೂಜಿಗಳನ್ನು ಇಂದು ಅಥವಾ ಮುಂದೆ ಕೊಡಿಸುವುದು ಬೇಡ ಎಂದುಕೊಂಡರೆ, ಮತ್ತು ಆರೋಗ್ಯವನ್ನು ದೀರ್ಘಕಾಲದವರೆಗೆ ಅತ್ಯುತ್ತಮವಾಗಿರಿಸಿಕೊಳ್ಳಲು ವ್ಯಾಯಾಮವನ್ನು ಅವರಿಗೆ ಪ್ರತಿದಿನ ಸ್ವಲ್ಪ ಸಮಯವಾದರೂ ಅಭ್ಯಾಸ ಮಾಡಿಸುವುದು ಒಳ್ಳೆಯದು. ಇದು ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸುವುದರ ಜೊತೆಗೆ ರೋಗನಿರೋಧಕ ಜೀವಕೋಶಗಳನ್ನು ಹೆಚ್ಚಿಸಿ ಸೋಂಕು ಉಂಟಾಗುವುದನ್ನು ತಡೆಯುತ್ತದೆ. ನಿಮ್ಮ ಮಗುವನ್ನು ನಿಮ್ಮ ಜೊತೆಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಅದು ಬೈಸಿಕಲ್ ಅಥವಾ ನಿಮ್ಮ ನಾಯಿಯನ್ನು ಸುತ್ತಾಡಿಸಿ ಬರುವುದು ಮುಂತಾದವುಗಳಲ್ಲಿ. ವ್ಯಾಯಾಮ ಮಾಡುವುದರಿಂದ ಮಕ್ಕಳಲ್ಲಿ ಶೇಕಡ ೨೦-೨೫%ರಷ್ಟು ಪ್ರತಿರಕ್ಷಣಾ(ಇಮ್ಯುನಿಟಿ) ವ್ಯವಸ್ತೆಯನ್ನು ಹೆಚ್ಚಿಸುತ್ತದೆ.

೨. ಕೈಗಳನ್ನು ಸ್ವಚ್ಛವಾಗಿರಿಸಿ

ಇದು ಕಡಿಮೆ ಬೆಲೆಯುಳ್ಳ ಚಟುವಟಿಕೆ ಎಂದು ಅನಿಸಿದರೂ, ಮನೆಯಲ್ಲಿ ಇದನ್ನು ಮಾಡಲು ಸಾಧ್ಯವಾದಷ್ಟು ಪ್ರಚೋದಿಸಿರಿ. ನಿಮ್ಮ ಮಗು ಆಹಾರ ಸೇವನೆ ಮಾಡುವ ಮೊದಲು ಮತ್ತು ಹೊರಗಡೆಯಿಂದ ಮನೆಗೆ ಬಂದ ತಕ್ಷಣ ಕೈ ಕಾಲುಗಳನ್ನು ತೊಳೆಯುವಂತೆ ಮಾಡಿ. ಇದರಿಂದ ಅನಾರೋಗ್ಯ ಮತ್ತು ಸುಕ್ಷ್ಮಜೀವಿಗಳು, ಹೊರಗಡೆಯಿಂದ ದೇಹ ಪ್ರವೇಶಿಸುವುದನ್ನು ತಡೆಯಬಹುದು. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವ ವಿಧಾನವನ್ನು ಸಂಪೂರ್ಣವಾಗಿ ಹೇಳಿಕೊಡಿ.

೩. ನಿದ್ರೆ

ನಿಮ್ಮ ಮಗುವಿನ ವಯಸ್ಸಿನ ಆಧಾರದ ಮೇಲೆ, ಅವನ/ಅವಳ, ಅವಶ್ಯಕತೆಯ ಸಂಪೂರ್ಣ ನಿದ್ರೆಯನ್ನು ಮಾಡುವಂತೆ ನೋಡಿಕೊಳ್ಳಿ. ನಿದ್ರೆಯ ಅಭಾವದಿಂದ ನಿಮ್ಮ ಮಗುವಿಗೆ ಶೀತ ಅಥವಾ ಅನಾರೋಗ್ಯವಾಗುವ ಅವಕಾಶಗಳು ಹೆಚ್ಚಾಗಿರುತ್ತವೆ. ತಮ್ಮ ಅವಶ್ಯಕತೆಗೆ ಬೇಕಿರುವ ಸಂಪೂರ್ಣ ನಿದ್ರೆ ಮಾಡುವುದರಿಂದ ಮಕ್ಕಳಲ್ಲಿ ಬಿಳಿ ರಕ್ತಕಣಗಳು ಮತ್ತು ಪ್ರತಿರಕ್ಷಣಾ(ಇಮ್ಯುನಿಟಿ) ವ್ಯವಸ್ತೆಯು ಹೆಚ್ಚುತ್ತದೆ.

೪. ಲಸಿಕೆ

ನಿಮ್ಮ ಮಗುವಿಗೆ ಸೋಂಕು ತಗಿಲಿಕೆಯಿಂದ ಅನಾರೋಗ್ಯವಾಗಿದ್ದರೆ, ಕೂಡಲೇ ವೈದ್ಯರನ್ನು ಬೇಟಿ ಮಾಡಿ ಲಸಿಕೆ ಹಾಕಿಸಿ. ನಿಮ್ಮ ಮಗುವಿನ ಮುಂದಿನ ಆರೋಗ್ಯಕರ ಭವಿಷ್ಯಕ್ಕಾಗಿ, ಪೋಲಿಯೋ, ದಡಾರ ದಂತಹ ಮುನ್ನೆಚೆರಿಕೆ ಲಸಿಕೆಗಳನ್ನು ಮರಿಯದೆ ಹಾಕಿಸಿರಿ. ಮಕ್ಕಳಲ್ಲಿ ವಯಸ್ಕರಿಗಿಂತ ಕಡಿಮೆ ಪ್ರತಿರಕ್ಷಣಾ(ಇಮ್ಯುನಿಟಿ) ವ್ಯವಸ್ತೆ ಇರುವುದರಿಂದ ವೈರಸ್ ಗಳು ಮಕ್ಕಳಲ್ಲಿ ಸುಲಭವಾಗಿ ಸೇರಿಕೊಂಡು ಕಾರ್ಯನಿರ್ವಹಿಸುತ್ತವೆ.

೫. ಮುಖವನ್ನು ಸ್ಪರ್ಶಿಸಬೇಡಿ

ಸ್ವಾಭಾವಿಕವಾಗಿ ಮಕ್ಕಳು ಚಡಪಡಿಕೆ ಮತ್ತು ಪ್ರಕ್ಷುಬ್ಧ(ವಿಶ್ರಾಂತಿ ಇಲ್ಲದೆ)ತೆ ಇಂದ ಕೂಡಿರುತ್ತವೆ. ಅವರು ನೋಡಿದ್ದನ್ನು ಮುಟ್ಟುವುದು ಸಹಜವಾಗಿರುತ್ತದೆ. ಅದನ್ನು ಮುಟ್ಟಿ ಮುಖವನ್ನು ಸ್ಪರ್ಶಿಸಿದರೆ ಅನಾರೋಗ್ಯಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು, ಏಕೆಂದರೆ ಮುಖವು ಸೂಕ್ಷ್ಮಜೀವಿಗಳು ದೇಹ ಪ್ರವೇಶಿಸಲು ಕಿವಿ, ಮೂಗು ಮತ್ತು ಬಾಯಿಯಂತಹ ದೊಡ್ಡ ಪ್ರವೇಶ  ಬಿಂದುಗಳನ್ನು ಹೊಂದಿದೆ. ಅವರಿಗೆ ಕೈ ತೊಳೆಯುದನ್ನು ಹೇಳಿಕೊಡಿ, ಮತ್ತು ಬೇರೆ ಮಕ್ಕಳೊಂದಿಗೆ ಚಮಚ, ಟೂತ್ ಬ್ರಶ್ ಗಳನ್ನು ಹಂಚಿಕೊಳ್ಳಬಾರದೆಂದು ಹೇಳಿಕೊಡಿ.

೬. ಸಮತೋಲನದ ಆಹಾರ ಸೇವನೆ

ನಿಮ್ಮ ಮಗುವಿಗೆ ಸಂಪೂರ್ಣ ಸಮೋತಲನದಿಂದ ಕೂಡಿದ ಆಹಾರವನ್ನು ನಿಡುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಸಾಧ್ಯವಾದಷ್ಟು ವರ್ಣರಂಜಿತವಾಗಿರುವುದು ನಿಮ್ಮ ಮಗು ಸಂಪೂರ್ಣ ಆಹಾರ ಸೇವನೆ ಮಾಡಲು ಮುಖ್ಯ ಅಂಶವಾಗುತ್ತದೆ. ಹೆಚ್ಚು ಹಣ್ಣು ತರಕಾರಿಗಳನ್ನು ನೀಡುವುದರಿಂದ ವಿಟಮಿನ್ ಸಿ ಸಿಗುತ್ತದೆ, ಪ್ರೋಟಿನ್ ಗಾಗಿ ಮಾಂಸ ಕೊಡುವುದು. ವಿಟಮಿನ್ ಡಿ ಗಾಗಿ ಟ್ಯುನ ಮೀನು ಅಥವಾ ಧಾನ್ಯಗಳನ್ನು ನೀಡುವುದು ಉತ್ತಮ. ಹೆಚ್ಚು ನೀರು ಮತ್ತು  ಸಾಧ್ಯವಾದಷ್ಟು ಮೊಸರು ಸೇವಿಸುವುದು ಮೆದುಳಿನ ಪ್ರತಿರಕ್ಷಣಾ(ಇಮ್ಯುನಿಟಿ) ವ್ಯವಸ್ತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon