Link copied!
Sign in / Sign up
70
Shares

ಈ 7 ವಿಷಯಗಳನ್ನು ನಿಮ್ಮ ಮಕ್ಕಳೇ ನಿಮಗೆ ಕಲಿಸುತ್ತಾರೆ !

ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಪಾಠಗಳನ್ನು ಕಲಿಸುತ್ತಿದ್ದ ದಿನಗಳು ಮತ್ತು ಮಕ್ಕಳು ಅವರಿಂದ ಪಾಠಗಳನ್ನು ಕಲಿಯುತ್ತಿದ್ದ ಆ ದಿನಗಳು ಈಗ ಹೋಗಿವೆ. ನಿಮ್ಮ ಮಗುವನ್ನು ನೀವು ಸ್ವಲ್ಪ ಹೆಚ್ಚು ಗಮನಿಸಿದರೆ, ನೀವು ನಿಮ್ಮ ಮಗುವಿನಿಂದ ಹಲವು ಜೀವನ ಪಾಠಗಳನ್ನು ನೀವು ಕಲಿಯಲು ಶಕ್ತರಾಗಬಹುದು ಮತ್ತು ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಹೇಗೆ ಆನಂದಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ನಿಮ್ಮ ಮಗುವು ನಿಮಗೆ ಕಲಿಸಬಹುದಾದ ಕೆಲವು ಸರಳವಾದ ವಿಷಯಗಳು ಇಲ್ಲಿವೆ.

೧.ಕಾರಣವಿಲ್ಲದೆ ನಗುವುದು

ಮಗುವು ಮುಗುಳ್ನಗಲು ಅಥವಾ ನಗಲು ಯಾವುದೇ ಕಾರಣ ಬೇಕಿಲ್ಲ. ಬದಲಾಗಿ, ಅವರು ನಗಲು ಕಾರಣಗಳನ್ನು ಅವರಾಗೇ ಸೃಷ್ಟಿಸಿಕೊಳ್ಳುತ್ತಾರೆ. ಬಹುಶಃ, ಯಾವುದೇ ಕಾರಣ ಇಲ್ಲದೆ ಸ್ವಲ್ಪ ಸಮಯವಾದರೂ ನಗುವುದನ್ನು ನಾವು ಕಲಿಯಬೇಕಿದೆ.

೨.ಚಿಕ್ಕ ವಿಷಯಗಳನ್ನು ಗಮನಿಸಿ

ಯಾವುದೇ ಚಿಂತೆಗಳಿಲ್ಲದೆ, ಮಗುವು ಬೆಳೆಯುವಾಗ, ಮುಗ್ದ ಮತ್ತು ಕುತೂಹಲಕಾರಿ ಮನಸ್ಸನ್ನು ಹೊಂದಿರುತ್ತಾರೆ. ಆದ್ದರಿಂದ ಅವರು ಅವರ ಸುತ್ತಮುತ್ತ ನಡೆಯುವ ಸಣ್ಣಪುಟ್ಟ ವಿಷಯಗಳನ್ನು ಗಮನಿಸಲು ಸಮರ್ಥರಾಗಿರುತ್ತಾರೆ ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ತಮ್ಮ ತಲೆಯಲ್ಲಿ ಇರಿಸಿಕೊಳ್ಳುತ್ತಾರೆ. ಬಹುಶಃ, ಪೋಷಕರು ತಮ್ಮ ಮಕ್ಕಳಂತೆಯೇ ಒಂದು ನಿಮಿಷದವರೆಗೆ ಪ್ರಪಂಚದ ಚಿಂತೆಗಳನ್ನು ಪಕ್ಕಕ್ಕೆ ಹಾಕಿದರೆ, ಅವರು ಸ್ವಲ್ಪ ವಿಷಯಗಳನ್ನು ಗಮನಸಿ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ.

೩.ಸಣ್ಣ ವಿಷಯಗಳನ್ನು ಆನಂದಿಸುವುದು

ಮಕ್ಕಳು ಯಾವುದೇ ಸಮಯದಲ್ಲಿ ಎಲ್ಲಿಗೆ ಹೋದರು ಖುಷಿಯಾಗಿ ಇರುತ್ತಾರೆ. ಈ ಖುಷಿಗೆ ಪ್ರಮುಖ ಕಾರಣವೆಂದರೆ ಅವರು ತಮ್ಮಲ್ಲಿ ಯಾವುದೇ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ, ಮತ್ತು ಅವರಿಗೆ ಯಾವುದೇ ನಿರೀಕ್ಷೆ ಇಲ್ಲದ ಕಾರಣ ಅವರು ಸಣ್ಣ ವಿಷಯಗಳನ್ನು ಆನಂದದಿಂದ ಅನುಭವಿಸುತ್ತಾರೆ, ದೊಡ್ಡವರಾದ ನಾವು ಅದನ್ನು ಗಮನಿಸುವುದಿಲ್ಲ. ಅದು ಜೀವನದ ಅತಿ ದೊಡ್ಡ ಪಾಠ ನಾವು ಕಲಿಯಬೇಕಿರುವುದು, ಕಡಿಮೆ ನಿರೀಕ್ಷೆ ಹೆಚ್ಚು ಖುಷಿ.

೪.ಮನ್ನಿಸು ಮತ್ತು ಮರೆತುಬಿಡು

ಹೌದು, ಮಗುವು ವಯಸ್ಕರಿಗಿಂತ ಹೆಚ್ಚು ಅಳುತ್ತದೆ, ಮತ್ತು ಅವರು ನಮಗಿಂತ ಹೆಚ್ಚು ಭಾವನಾತ್ಮಕರು. ಆದರೆ, ಒಂದು ಬಾರಿ ಅವರು ಅಳುವುದನ್ನು ನಿಲ್ಲಿಸಿದ ಮೇಲೆ, ನಾನು ಏತಕ್ಕಾಗಿ ಅಳುತ್ತಿದ್ದೆ ಎಂಬ ಕಾರಣವನ್ನು ನೆನಪಿಸಿಕೊಳ್ಳುವುದಿಲ್ಲ, ಅದನ್ನು ಮರೆತುಬಿಡುತ್ತಾರೆ. ಅವರು ತಮ್ಮ ಚಟುವಟಿಕೆಯನ್ನು ಎಂದಿನಂತೆ ಮುಂದುವರೆಸಿಕೊಂಡು, ಆಡುತ್ತಾ, ಖುಷಿಯಿಂದ ಇರುತ್ತಾರೆ. ಯಾವುದೊ ತಪ್ಪು ಸಂಭವಿಸಿದರೆ, ಮತ್ತು ಅದಕ್ಕಾಗಿ ಕ್ಷಮಿಸು ಎಂದರೆ ಸಾಕು, ಅವರು ಆ ಕ್ಷಣವೇ ನಿಮ್ಮನ್ನು ಮನ್ನಿಸಿ, ಮೊದಲಿನಂತೆ ನಿಮ್ಮನ್ನು ಪ್ರೀತಿಸಲು ಶುರುಮಾಡುತ್ತಾರೆ. ಹಿಂದಿನ ಅನುಭವಗಳನ್ನು ಮರೆಯುವುದು, ಮತ್ತು ನಮಗೆ ನೋವುಂಟುಮಾಡಿದವರನ್ನು ಕ್ಷಮಿಸುವುದು ಸುಲಭವಲ್ಲ, ಆದರೆ, ನಿಮ್ಮ ಮಗು ಇಷ್ಟು ಸಂತೋಷವಾಗಿರುವುದನ್ನು ನೋಡಿ ನೀವು ನಿಮ್ಮ ಹಿಂದಿನ ಕೆಟ್ಟ ಅನುಭವಗಳನ್ನು ಮರೆಯಬಹುದು.

೫.ಪ್ರಶ್ನೆಯನ್ನು ಕೇಳುತ್ತಿರುವುದು

ವೇಗವಾಗಿ ಚಲಿಸುತ್ತಿರುವ ಮತ್ತು ಮುಂದುವರೆಯುತ್ತಿರುವ ಪ್ರಪಂಚದಲ್ಲಿ ನಾವು ಜೀವಿಸುತ್ತಿದ್ದೇವೆ, ಆದ್ದರಿಂದ ಪ್ರತಿಯೊಂದು ಹಾಗುಹೋಗು ವಿಷಯಗಳ ಬಗ್ಗೆ ನಾವು ತುಂಬಾ ಕುತೂಹಲವಾಗಿರಬೇಕು. ಆದರೆ, ನಿಜವಾಗಿ ನಾವು ಈ ಸತ್ಯವನ್ನು ಮರೆತು ಜನರು ಏನು ಮಾಡುತ್ತಾರೆ ಮತ್ತು ಮಾತನಾಡುತ್ತಾರೆ ಅದರ ಬಗ್ಗೆ ಯೋಚಿಸುತ್ತೇವೆ. ಆದರೆ ಮತ್ತೊಂದೆಡೆ, ಮಕ್ಕಳು ಅವರು ಕಾಣುವ ಪ್ರತಿಯೊಂದು ವಿಷಯದಲ್ಲೂ ಕುತೂಹಲವಾಗಿ ಅದರ ಬಗ್ಗೆ ಆಸಕ್ತಿಹೊಂದಿ, ಪ್ರತಿ ಸಣ್ಣ ವಿಷಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ, ಅದರಿಂದಲೇ ಅವರು ಕಲಿಯುವುದು. ಬಹುಶಃ ನಾವು ಅದನ್ನು ಮಾಡಲು ಪ್ರಾರಂಭಿಸಬೇಕು.

೬.ಅಳಿಯದಂತಹ ಸ್ನೇಹ

ನಾವು ದೊಡ್ಡವರಾದ ಮೇಲೆ, ನಮ್ಮ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು ಹೆಚ್ಚು ಸಮಯ ನಮ್ಮ ಜೊತೆ ಇರುತ್ತಿದ್ದ ಸ್ನೇಹಿತರನ್ನು ಮರೆತುಬಿಡುವೆವು. ಅಥವಾ ನಾವು ಪ್ರಪಂಚ ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡಿ, ಪ್ರತಿಯೊಬ್ಬರೂ ತಮ್ಮ ಸ್ವಾರ್ಥಕ್ಕಾಗಿ ಜೀವಿಸುತ್ತಿದ್ದಾರೆ ಎಂದು ಭಾವಿಸಲು ಶುರುಮಾಡುವೆವು. ಆದರೆ “ನಿಜವಾದ ಸ್ನೇಹಿತರಲ್ಲಿ” ಅಂತ ಯಾವುದೇ ವಿಷಯಗಳಿಲ್ಲ. ಅದೇನೆಯಿರಲಿ, ನೀವು ನಿಮ್ಮ ಮಗುವನ್ನು ಅವಳ/ಅವನ ಸ್ನೇಹಿತರೊಡನೆ ನೋಡಿರುವಿರಾ? ಅವರು ಅವರ ಸ್ನೇಹಿತರಿಗಾಗಿ ನಿಮ್ಮೊಡನೆ ವಾಗ್ವಾದವನ್ನು ಮಾಡಬಹುದು, ಅದು ಅವರು ಸ್ವಾರ್ಥ ಎಂದರೆ ಏನು ಎಂಬುದನ್ನು ನಿಜವಾಗಿಯೂ ಅರಿಯುವ ಮೊದಲೇ. ಹಾಗೆ ಸ್ನೇಹ ಇರುತ್ತದೆ ಮತ್ತು ನಾವು ತುಂಬಾ ದಿನಗಳ ಹಿಂದೆಯೇ ಅದನ್ನು ಮರೆತಿರುವೆವು.

೭.ಬೇಷರತ್ತು ಪ್ರೀತಿ

ನಾವು ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆ, ಮತ್ತು ಅವರು ಯಾವಾಗಲು ಖುಷಿಯಾಗಿರುವುದನ್ನು ಬಯಸುತ್ತೇವೆ, ಅದಕ್ಕಾಗಿ ಏನನ್ನು ಮಾಡಲು ಸಾಧ್ಯ ಅವೆಲ್ಲವನ್ನು ನಾವು ಮಾಡುತ್ತೇವೆ. ನಮ್ಮ ಮಗುವನ್ನು ನಾವು ಇಷ್ಟಪಡುವಂತೆಯೇ, ನಮ್ಮ ಮಗು ನಮ್ಮನ್ನು ಬೇಷರತ್ತಾಗಿ ಮತ್ತು ಅಜಾಗರೂಕತೆಯಿಂದ ಪ್ರೀತಿಸುತ್ತದೆ ಮತ್ತು ಅವನ/ಅವಳ ಆರಂಭಿಕ ವರ್ಷಗಳಲ್ಲಿ ನಾವು ಅವರ ಇಡೀ ಪ್ರಪಂಚ. ಅವರಿಗೆ ಆಗ ಪ್ರೀತಿ ಎಂದರೇನು ಎಂಬುದರ ಬಗ್ಗೆ ಕಲ್ಪನೆಯು ಇರುವುದಿಲ್ಲ, ಅವರು ನಮ್ಮನ್ನು ಅತಿಯಾಗಿ ಪ್ರೀತಿಸುತ್ತಾರೆ, ಅದರಲ್ಲೂ ನಮ್ಮ ಪ್ರೀತಿ ಅವರ ಪ್ರೀತಿ ಮುಂದೆ ಮಂಕಾಗುವ ಹಾಗೆ ಅವರು ನಮ್ಮನ್ನು ಪ್ರೀತಿಸುತ್ತಾರೆ, ಬಹುಶಃ ಈ ಪ್ರೀತಿಯನ್ನು ನಾವು ಮರಳಿ ಮಾಡಬೇಕಿರುವ ಸಮಯ.

ನಾವೂ ಒಂದು ಕಾಲದಲ್ಲಿ ಮಕ್ಕಳಾಗಿದ್ದೆವು, ಮತ್ತು ನಮ್ಮ ಮಕ್ಕಳು ಈಗ ಮಾಡುತ್ತಿರುವುದನ್ನು ನಾವು ಚಿಕ್ಕವರಾಗಿದ್ದಾಗ ಮಾಡುತ್ತಿದ್ದೆವು. ನಾವೆಲ್ಲರೂ ಒಂದೇ ರೀತಿಯಲ್ಲಿ ಸಂತೋಷಪಟ್ಟಿದ್ದೆವು. ಹಾಗಿದ್ದರೆ ನಿಮ್ಮ ಮಕ್ಕಳನ್ನು ಸ್ಫೂರ್ತಿಯಾಗಿ ಪಡೆದು, ನೀವು ಮರೆಮಾಡಿರುವ ನಿಮ್ಮಲ್ಲಿರುವ ಆ ಮಗುವಿನ ಮನಸ್ಸನ್ನು ಏಕೆ ಪುನಃ ಹೊರತಂದು ನಿಮ್ಮ ಜೀವನಕ್ಕೆ ಅರ್ಥವನ್ನು ನೀಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon