Link copied!
Sign in / Sign up
7
Shares

ನಿಮ್ಮ ಮಕ್ಕಳಿಗೆ ಹೇಳಿಕೊಡಬೇಕಾದ ಉತ್ತಮ ಅಭ್ಯಾಸಗಳು

ನಿಮ್ಮ ಮಗುವಿಗೆ ನೀವು ಪರಿಚಯಿಸುವ ಪ್ರಮುಖ ವಿಷಯವೆಂದರೆ ಅವನ / ಅವಳ ಅಭ್ಯಾಸಗಳು. ಪದ್ದತಿಯೂ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ.ನಿಮ್ಮ ಮಕ್ಕಳು ನಿಮ್ಮನ್ನು ಮಾದರಿಯಾಗಿ ತೆಗೆದುಕೊಂಡು, ನಿಮ್ಮನ್ನು ಅನುಸರಿಸುತ್ತಾರೆ, ನೆನಪಿಡಿ ನೀವು ಏನು ಮಾಡುತ್ತೀರಿ ಅದನ್ನೇ ನಿಮ್ಮ ಮಕ್ಕಳು ಮಾಡಲು ಒಲವು ತೋರುತ್ತಾರೆ. ಮಕ್ಕಳು ತಮಗೆ ಎಷ್ಟು ಸಾಧ್ಯವೋ ಅಷ್ಟು ತಮ್ಮ ಪೋಷಕರನ್ನು ಅನುಸರಿಸುತ್ತವೆ, ಆದ್ದರಿಂದ ನಿಮ್ಮ ಒಳ್ಳೆಯ ಅಭ್ಯಾಸಗಳನ್ನು ನಿಮ್ಮ ಮಗುವಿಗೆ ತೋರಿಸಿ ಒಳ್ಳೆ ಮಾರ್ದರ್ಶನದಲ್ಲಿ ನಡೆದುಕೊಳ್ಳುವಂತೆ ಪ್ರೋತ್ಸಾಹಿಸಿ.

ಇಲ್ಲಿ ನೀವು ನಿಮ್ಮ ಮಕ್ಕಳಲ್ಲಿ ಹುಟ್ಟಿಸಬೇಕಾದಂತಹ ೫ ಒಳ್ಳೆಯ ಅಭ್ಯಾಸಗಳು.

೧. ಆರೋಗ್ಯಕರ ಆಹಾರ ಸೇವನೆ

ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಳ್ಳಬೇಕಾದ ಅಭ್ಯಾಸ ಇದು.  ಮಕ್ಕಳಿಗೆ, ಅವರ ಆರೋಗ್ಯಕರ ಆಹಾರದ ಉತ್ತಮ ಪರಿಣಾಮಗಳ ಬಗ್ಗೆ ಕಲಿಸಿದರೆ ಮತ್ತು ನಿಯಮಿತವಾಗಿ ಆರೋಗ್ಯಕರ ಆಹಾರವನ್ನು ನೀಡುತ್ತಾ ಬಂದರೆ, ಅವರು ಭವಿಷ್ಯದಲ್ಲಿ ಆರೋಗ್ಯಕರ ಆಹಾರವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಕುರುಕಲು ಆಹಾರವನ್ನು ಸೇವಿಸುವ ಜನರಿಗಿಂತ ಇದು ಸುಲಭವಾಗಿ ತನ್ನ ಆಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

೨. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು

ಹಲವು ವಯಸ್ಕರು ಕೂಡ ಇದನ್ನು ಮಾಡುವುದಿಲ್ಲ. ಮಕ್ಕಳು ಹಲ್ಲುಜ್ಜುವುದನ್ನು ತಮ್ಮ ದಿನದ ಬೇಜಾರಿನ ಕೆಲಸ ಎಂದು ಭಾವಿಸುತ್ತಾರೆ, ಮತ್ತು ಅದನ್ನು ಎಷ್ಟು ಸಾಧ್ಯವೋ ಅಷ್ಟು ಮಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ, ಆದ್ದರಿಂದ ನಿಮ್ಮ ಮನೆಯಲ್ಲಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದನ್ನು ಕಾನೂನು ಮಾಡಿ. ಇದರಿಂದ ಹಲ್ಲುಗಳಿಗೆ ಬರುವ ಕಾಯಿಲೆಯನ್ನು ತಪ್ಪಿಸಬಹುದು, ಕ್ಯಾವಿಟಿ, ಹುಳುಕಲ್ಲು ಆಗುವುದನ್ನು ತಪ್ಪಿಸುವ ಜೊತೆಗೆ ಶಾಶ್ವತ ಹಲ್ಲುಗಳನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಬಹುದು. ನಿಮ್ಮ ಮಗುವು ರಾತ್ರಿಯೂ ಹಲ್ಲುಜ್ಜುವುದಾ? ಎಂದು ಗಮನಿಸಿಕೊಳ್ಳಿ, ಅದರಲ್ಲೂ ಸಿಹಿ ಅಥವಾ ಚಾಕಲೇಟ್ ಅಂತ ತಿನಿಸುಗಳನ್ನು ತಿಂದಾಗ ಖಂಡಿತವಾಗಿ ಹಲ್ಲುಜ್ಜಿಸಿ ಮಲಗಿಸಿ.

೩. ಊಟದ ನಂತರ ತೊಳೆದುಕೊಳ್ಳುವುದು

ನಿಮ್ಮ ಮಗುವಿನಲ್ಲಿ ಬೆಳೆಸಬೇಕಾದ ಪ್ರಮುಖ ಅಭ್ಯಾಸಗಳಲ್ಲಿ ಇದು ಒಂದು ಉತ್ತಮ ಅಭ್ಯಾಸವಾಗಿದೆ. ಬಾಯಿಯಲ್ಲಿ ಉಳಿದುಕೊಂಡಿರುವ ಆಹಾರ ಪದಾರ್ಥಗಳು ಹಲ್ಲನ್ನು ಹಾಳುಮಾಡಬಹುದು. ಬಾಯಿ ತೊಳೆದುಕೊಳ್ಳುವುದು ಹಲ್ಲು ಹಾಳಗುವುದನ್ನು ತಡೆಯುತ್ತದೆ, ಮತ್ತು ಹಲ್ಲುಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತವೆ. ಊಟದ ನಂತರ ಬಾಯಿ ಮುಕ್ಕಳಿಸುವುದು/ತೊಳೆಯುವುದು ಮರೆತರೆ ಮಲಗುವ ಮುನ್ನ ಹಲ್ಲುಜ್ಜಿದ ನಂತರ ಬಾಯಿ ತೊಳೆಯುವುದು ಇದಕ್ಕೆ ಪರ್ಯಾಯವಾಗಿದೆ. ಇದು ನಿಮ್ಮನ್ನು ದಂತ ವೈದ್ಯರ ಬಳಿಗೆ ಹೋಗುವುದನ್ನು ತಪ್ಪಿಸುತ್ತದೆ.

೪. ಹೊರಾಂಗಣದಲ್ಲಿ ಆಟಗಳು

ನಿಮ್ಮ ಮಗುವು ತನಗೆ ಅಗತ್ಯವಿರುವ ಉತ್ತಮ ಗಾಳಿ ಮತ್ತು ವ್ಯಾಯಾಮವನ್ನು ಪಡೆದುಕೊಳ್ಳಲು ಕನಿಷ್ಟಪಕ್ಷ ಒಂದು ವಾರಕ್ಕೊಮ್ಮೆ ಮಗುವನ್ನು ಹೊರಾಂಗಣದಲ್ಲಿ ಆಟವಾಡಲು ಕಳುಹಿಸಿ. ಇದರಿಂದ ಅವರು ಮೈದಾನದಲ್ಲಿ ಓಡಾಡುವುದರಿಂದ ಅವರ ದೈಹಿಕ ಶಕ್ತಿ ಹೆಚ್ಚುವುದರ ಜೊತೆಗೆ ಅವರು ವ್ಯಾಯಾಮ ಮಾಡಿದಂತ್ತಾಗುತ್ತದೆ. ಒಳಾಂಗಣದಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳು ಅನಾರೋಗ್ಯಕ್ಕೆ ಬೇಗ ಗುರಿಯಾಗುತ್ತಾರೆ ಮತ್ತು ಹೊರಾಂಗಣದಲ್ಲಿ ಆಡುವ ಮಕ್ಕಳಷ್ಟು ಚುರುಕು ಇರುವುದಿಲ್ಲ. ಹೊರಾಂಗಣದಲ್ಲಿ ಆಡುವುದರಿಂದ ಮಕ್ಕಳಿಗೆ ಅಗತ್ಯವಿರುವ ವಿಟಮಿನ್ ಡಿ ಅನ್ನು ಸೂರ್ಯನಿಂದ ಪಡೆಯಬಹುದು, ಮತ್ತು ಅವರು ಮಾನಸಿಕವಾಗಿ ಸ್ಥಿರತೆ ಹೊಂದಿ ಹೆಚ್ಚು ಏಕಾಗ್ರತೆಯನ್ನುಗಳಿಸುತ್ತಾರೆ.

೫. ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು

ಇದು ಕೈಗಳನ್ನು ತೊಳೆದುಕೊಳ್ಳುವುದು, ಜಳಕ ಮಾಡುವುದು, ತಮ್ಮ ಬಟ್ಟೆಗಳನ್ನು ಒಗೆಯುವುದು, ತಾವು ಇರುವ ಜಾಗವನ್ನು ಸ್ವಚ್ಚವಾಗಿ ಇರಿಸಿಕೊಳ್ಳುವುದು ಮುಂತಾದವುಗಳನ್ನು ಒಳಗೊಂಡಿದೆ. ಇದರಿಂದ ವ್ಯಕ್ತಿಯ ಪ್ರಸ್ತುತಪಡಿಸುವಿಕೆ(ಅಂದ) ಹೆಚ್ಚುವ ಜೊತೆಗೆ, ಯಾವುದೇ ಬ್ಯಾಕ್ಟಿರಿಯಾ ಅಥವಾ ವೈರಸ್ ಗಳಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಮಕ್ಕಳಿಗೆ ಕಲಿಸಬೇಕಾದ ಬಹಳ ಮುಖ್ಯವಾದ ಅಭ್ಯಾಸ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon