Link copied!
Sign in / Sign up
0
Shares

ನಿಮ್ಮ ಮಗುವು ತಾನಾಗಿಯೇ ಔಷಧಿ, ಲಸಿಕೆಗಳು ತೆಗೆದುಕೊಳ್ಳುವಂತೆ ಮರುಳು ಮಾಡಲು ಚಾಣಾಕ್ಷ ತಂತ್ರಗಳು

ನಿಮ್ಮ ಕಂದಮ್ಮಗಳನ್ನು ಔಷಧಿ ನುಂಗುವಂತೆ ಮಾಡುವುದು ಅಥವಾ ಅವರನ್ನು ವೈದ್ಯರ ಬಳಿ ಕರೆದೊಯ್ಯುವುದು ಒಂದು ವೇದನೆಯ ಕೆಲಸ ಆಗಿರುತ್ತೆ ನಿಮಗೆ. ನೀವು ನಿಮ್ಮ ಮಗು ಅದು ಅನುಭವಿಸುತ್ತಿರುವ ಸಂಕಟದಿಂದ ಹೊರಬರಬೇಕು ಎಂಬ ಆಶಯ, ಆದರೆ ನಿಮ್ಮ ಮಗು ಔಷಧಿ ಸೇವಿಸುದಕ್ಕೆ ಹಠ ಹಿಡಿಯುತ್ತದೆ. ಮಕ್ಕಳು, ನೀವು ಅವರನ್ನು ಗುಣಪಡಿಸಲು ಪ್ರಯತ್ನಿಸಿದಾಗ ಅವರು ಕಾಟ ಕೊಡುತ್ತಾರೆ ಹಾಗು ಉದ್ಧಟತನ ಪ್ರದರ್ಶಿಸುತ್ತಾರೆ. ನೀವು ಅವರಿಗೆ ತಿಳಿಸಿ ಅರ್ಥೈಸಲು ಸಾಧ್ಯವಾಗದ ಕಾರಣ, ಪರಿಸ್ಥಿತಿ ಇನ್ನಷ್ಟು ಕಷ್ಟಕರ ಆಗುತ್ತದೆ. ಈ ತಲೆನೋವನ್ನು ಶಮನ ಮಾಡಲು ಇಲ್ಲಿವೆ ಕೆಲವು ಉಪಾಯಗಳು

೧.  ವೈದ್ಯರ ಬಳಿ ಭೇಟಿ ಮಾಡಿ ಬರುವ ದಾರಿಯಲ್ಲಿ ಮಗುವಿಗೆ ಚಾಕಲೇಟ್ ಕೊಡಿಸುತ್ತೀನಿ ಎಂದು ಆಮಿಷ ಒಡ್ಡಿ. ಹೀಗೆ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಿ.

೨. ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯಲ್ಲಿ, ನಿಮ್ಮ ಮಗುವಿನದ್ದೆ ಮುಂದಾಳತ್ವ ಎಂದು ಅವರು ಭಾವಿಸುವಂತೆ ಮಾಡಿ. ಅವರಿಗೆ ಸಣ್ಣ ಪುಟ್ಟ ಕೆಲಸಗಳ ಜವಾಬ್ದಾರಿ ನೀಡಿ. ಉದಾಹರಣೆಗೆ ಔಷದಿ ಬಾಟಲಿಯ ಕ್ಯಾಪ್ ಗೆ , ಗುರುತು ಮಾಡಿರುವವರೆಗು ಔಷಧಿಯನ್ನ ಉಯ್ಯಲು ನಿಮ್ಮ ಮಗುವಿಗೆ ನೀಡಿ. ಅವರಿಗೆ ಏನು ಬೇಕು ಅನ್ನುವುದನ್ನು ಅವರೇ ನಿರ್ಧರಿಸುತ್ತಿದ್ದಾರೆ ಎಂಬ ಭಾವನೆ ಅವರಲ್ಲಿ ಮೂಡಲಿ. ಇದು ಅವರಲ್ಲಿ ಜವಬ್ದಾರಿ ಬೆಳೆಸುತ್ತದೆ.

೩. ಮೊದಲನೆಯದಾಗಿ, ನೀವು ಭೇಟಿ ನೀಡುವ ಮಕ್ಕಳ ತಜ್ಞ ಮನೋರಂಜನಕಾರಿ ಆಗಿ ಇರಬೇಕು. ಇದು ನಿಮ್ಮ ಮಗುವು ತಜ್ಞನನ್ನು ಹೆಚ್ಚು ನಂಬುವಂತೆ ಮಾಡುತ್ತದೆ ಹಾಗು ಪ್ರತಿ ಚೆಕ್-ಅಪ್ ಕೊನೆಯಲ್ಲಿ ಒಂದು ಲಾಲಿಪಾಪ್ ಸಿಗುತ್ತದೆ ಎಂಬ ಕಾತುರ ಈ ಸಂದರ್ಭವನ್ನು ಇನ್ನೂ ಸುಗಮವಾಗಿಸುತ್ತದೆ.

೪. ಔಷಧಿಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ. ಇದನ್ನು ನೀವು ಬಿಸಿ ಹಾಲಿಗೆ ಬೆರೆಸಿ ಮಗುವಿಗೆ ಕೊಟ್ಟರೆ, ಮಕ್ಕಳಿಗೆ ಅದರ ಇರುವಿಕೆಯ ಬಗ್ಗೆಯೇ ತಿಳಿಯುವುದಿಲ್ಲ.

೫. ನಿಮ್ಮ ಮಗುವು ತುಂಬಾ ಇಷ್ಟ ಪಟ್ಟು ತಿನ್ನುವ ಊಟದಲ್ಲೋ ಅಥವಾ ಕೇಕ್ ಅಲ್ಲೋ ಔಷಧಿಯನ್ನು ಮರೆಮಾಚಿ. ಇದು ನಿಮ್ಮ ಮಗುವಿಗೆ ಅದನ್ನು ಸೇವಿಸಲು ಇನ್ನಷ್ಟು ಉತ್ತೇಜನ ನೀಡಿದಂತೆ ಆಗುತ್ತದೆ.

೬. ನೀವು ನಿಮ್ಮ ಮಗುವಿಗೆ ಲಸಿಕೆ ಹಾಕಿಸಲು ಅಥವಾ ಚುಚ್ಚುಮದ್ದು ನೀಡಿಸಲು ಕರೆದುಕೊಂಡು ಹೋಗಬೇಕಿದ್ದರೆ, ಅದಕ್ಕೆ ಸೂಕ್ತ ಸಮಯ ಅಂದರೆ ಅದು ಮಗು ಗಾಢ ನಿದ್ದೆಯಲ್ಲಿದ್ದಾಗ. ಲಸಿಕೆ ಹಾಕಿಸಿಕೊಂಡು ಬಂದ ನಂತರ ನೀವು ಮಗುವನ್ನು ತೊಟ್ಟಿಲಿನಲ್ಲಿ ತೂಗಿ ಸಂಭಾಲಿಸಬಹುದು. ನಿಮ್ಮ ವೈದ್ಯರು ಮಕ್ಕಳ ಸ್ನೇಹಿನಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.

ತಾಯಂದಿರು ತಮ್ಮ ಮಕ್ಕಳಿಗೆ ಔಷಧಿ ನೀಡುವಾಗ ಏನೆಲ್ಲಾ ತಲೆ ಓಡಿಸಿ ಸೃಜನಶೀಲತೆ ಮೆರೆಯುತ್ತಾರೆ, ಹಾಗಾಗಿ ನೀವು ನಿಮ್ಮ ತಾಯ್ತನದ ಪ್ರವೃತ್ತಿ ಏನು ಸೂಚಿಸುತ್ತದೋ, ಅದನ್ನು ಮಾಡಿ. ಅವರು ಹಠ ಮಾಡುವುದನ್ನು ಮುಂದುವರೆಸಿದರೆ, ಉಳಿದಂತೆ ಇದ್ದೆ ಇವೆಯಲ್ಲ - ಅಪ್ಪನ ಭಯ ಹಾಗು ಇನ್ನೂ ದೊಡ್ಡ ದೊಡ್ಡ ಆಮಿಷಗಳು!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon