Link copied!
Sign in / Sign up
42
Shares

ನಿಮ್ಮ ಮಗುವಿನ ತಲೆ ಬೆವರುತ್ತಿದೆಯೇ? ಅದಕ್ಕೆ ಕಾರಣ ಮತ್ತು ಪರಿಹಾರವನ್ನು ತಿಳಿದುಕೊಳ್ಳಿ!

ನನ್ನ ಮಗು ಮಲಗಿದ್ದಾಗಲೂ ಏಕೆ ಅದರ ತಲೆ ಅಷ್ಟೊಂದು ಬೆವೆಯುತ್ತದೆ? ನನ್ನ ಮಗು ಏಕೆ ಕೇವಲ ತಲೆಯಿಂದ ಮಾತ್ರ ಬೆವೆಯುತ್ತಿದೆ? ಹೊಸದಾಗಿ ಪೋಷಕರಾದವರಿಗೆ ಕಾಡುವ ಸಾಮಾನ್ಯ ಪ್ರಶ್ನೆ ಇದು. ಈ ಪ್ರಶ್ನೆ ಹುಟ್ಟಿದೊಡನೆ ಬಹಳಷ್ಟು ಪೋಷಕರು ಮಾಡುವ ಕೆಲಸವೆಂದರೆ ಅದು ತಮ್ಮ ಮಗುವು ಅನಾರೋಗ್ಯಕ್ಕೆ ತುತ್ತಾಗಿರಬೇಕು ಎಂದು ಭಾವಿಸಿ ಕೂಡಲೇ ಮಗುವಿನೊಂದಿಗೆ ತಮ್ಮ ವೈದ್ಯರ ಬಳಿ ಧಾವಿಸುವುದು. ಆದರೆ, ಅದು ತುಂಬಾ ತೀವ್ರವಾಗಿ ಕಾಣಿಸಿಕೊಳ್ಳುವವರೆಗೆ ಆತಂಕ ಪಡುವಂತ ವಿಷಯವೇನಲ್ಲ. ಶಿಶುಗಳು ಮಲಗಿದಾಗ ಅಥವಾ ಎದೆಹಾಲು ಕುಡಿಯುವಾಗ ಬೆವರುವುದು ಸಹಜ ಏಕೆಂದರೆ ಅದು ಆ ಸಂದರ್ಭಗಳಲ್ಲಿ ತುಂಬಾ ಉಷ್ಣತೆಯ ಅನುಭವವಾಗಬಹುದು.

ಮಕ್ಕಳು ಬೆವರುವುದಕ್ಕೆ ಮುಖ್ಯ ಕಾರಣಗಳು ಹಾಗು ಅದನ್ನು ಸರಿಪಡಿಸುವ ಬಗೆಗಳ ಬಗ್ಗೆ ಇಲ್ಲಿ ಬರೆದಿದ್ದೇವೆ ಓದಿ :

ಕಾರಣ ನಂ.1

ಮೊದಮೊದಲು, ಬೆವರಿನ ಗ್ರಂಥಿಗಳು (sweat glands) ಪೂರ್ಣವಾಗಿ ರೂಪುಗೊಂಡು ಕಾರ್ಯನಿರತ ಆಗುವುದು ತಲೆಯಲ್ಲಿ. ನಂತರದ ದಿನಗಳಲ್ಲಿ ಅವುಗಳು ದೇಹದ ಉಳಿದ ಭಾಗಗಳಲ್ಲೂ ಕಾರ್ಯ ನಿರ್ವಹಿಸಲು ಶುರು ಮಾಡುತ್ತವೆ. ವಯಸ್ಕರರ ದೇಹದಲ್ಲಿನ ಬೆವರು ಗ್ರಂಥಿಗಳ ಸಂಖ್ಯೆ ಬದಲಾಗುವುದಿಲ್ಲ. ಆದರೆ, ಕಾಲಕ್ರಮೇಣ ವರ್ಷಗಳು ಕಳೆದಂತೆ ಕೆಲವು ಹೆಚ್ಚುವರಿ ಗ್ರಂಥಿಗಳು ರೂಪುಗೊಳ್ಳುತ್ತವೆ. ಮಗು ಬೆಳದಂತೆ ದೇಹದ ಎಲ್ಲಾ ಭಾಗಗಳಿಗೂ ಈ ಗ್ರಂಥಿಗಳು ಹಬ್ಬಿಕೊಳ್ಳುತ್ತವೆ.

ನಿಮ್ಮ ಮಗುವು ಬೆವರುತ್ತಿದ್ದರೆ ಅದು ಸರಿಯಾದ ಕಾರ್ಯ ನಿರ್ವಹಣೆ ಹಾಗು ಸಹಜ ಮೆದುಳಿನ ಚಟುವಟಿಕೆಗಳನ್ನ ಸೂಚಿಸುತ್ತದೆ. ಅಸಹಜ ಮೆದುಳಿನ ಬೆಳವಣಿಗೆಯುಳ್ಳ ಮಕ್ಕಳ ಮಸ್ತಿಷ್ಕನಿಮ್ನಾಂಗ (hypothalamus) ಅಲ್ಲಿ ಸಹಜ ಸ್ತಿತಿಯ ಉಷ್ಣ ಗ್ರಹಿಕೆಯ ನರಕೋಶಗಳು(neurons) ಇಲ್ಲದಿರುವ ಕಾರಣ ಅವರು ಬೆವೆಯುವುದಿಲ್ಲ. ಇದೇ ಕಾರಣಕ್ಕೆ ವೈದ್ಯರು ನವಜಾತ ಶಿಶುಗಳು ಬೆವೆಯುತ್ತಿದ್ದಾರ ಎಂದು ಪರೀಕ್ಷಿಸುವುದು.

ಕಾರಣ ನಂ.2

ಒಂದು ನವಜಾತ ಶಿಶುವಿನ ನಾಡಿ ಬಡಿತ ಒಂದು ನಿಮಿಷಕ್ಕೆ 130 ಇರುತ್ತದೆ. ಆದರೆ ಒಬ್ಬ ವಯಸ್ಕರ ವ್ಯಕ್ತಿಯ ನಾಡಿ ಬಡಿತ ನಿಮಿಷಕ್ಕೆ 70ರಿಂದ 80 ಆಗಿರುತ್ತದೆ. ವಯಸ್ಕರರಿಗೆ ಹೋಲಿಸಿದಾಗ ಶಿಶುಗಳ ಸಕ್ರಿಯತೆ, ಉಸಿರಾಟದ ತೀವ್ರತೆ ಕೂಡ ಹೆಚ್ಚು ಇರುತ್ತದೆ.

ಶಿಶುಗಳು ತುಂಬಾ ಬೆವೆಯಲು ಇದುವೇ ಮುಖ್ಯ ಕಾರಣ. ನಿಮ್ಮ ಮಗುವಿನ ತಲೆಯನ್ನು ವಾರಕ್ಕೆ 2-3 ಬಾರಿ ಬೆಚ್ಚನೆ ನೀರಿನಿಂದ ತೊಳೆದು ಒರೆಸಿದರೆ ನಿಮ್ಮ ಮಗುವಿಗೆ ತುಂಬಾ ಸಹಾಯವಾಗುತ್ತದೆ. ಆದರೆ ಮಗುವಿಗೆ ಸ್ನಾನ ಮಾಡಿಸಿದೊಡನೆ ಅದರ ತಲೆಯನ್ನು ಚೆನ್ನಾಗಿ ಒರೆಸಿ ಒಣಗಿಸಲು ಮರೆಯಿದಿರಿ. ಅಲ್ಲದೆ, ನಿಮ್ಮ ಮಗುವಿಗೆ ಯಾವುದೇ ಮೈನೂರತೆ ಅಥವಾ ಅನಾರೋಗ್ಯ ತಾಕದಿರಲು ನಿಮ್ಮ ಮನೆಯಲ್ಲಾ ಧೂಳು-ಮುಕ್ತ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇವುಗಳು ನಿಮ್ಮ ಮಗುವಿಗೆ ಇಲ್ಲದಿರುವ ತೊಂದರೆಗಳನ್ನೂ ಉಂಟು ಮಾಡಿ ನಿಮ್ಮ ಮಗುವಿಗೆ ಇರಿಸುಮುರಿಸು ಉಂಟು ಮಾಡುತ್ತವೆ.

ಕಾರಣ ನಂ.೩

 ಪೋಷಕರಾಗಿ, ಹಾಸಿಗೆ ಮೇಲೆ ಮಲಗಿಸುವ ಮುನ್ನ ಬೆಚ್ಚಗೆ ಆರಾಮದಾಯಕವಾಗಿ ಇರುವುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಮಗುವಿನ ತಲೆಯನ್ನು ಬಟ್ಟೆಯಲ್ಲಿ ಸುತ್ತುವುದರಿಂದ ಮಗುವಿಗೆ ಕಿರಿಕಿರಿಯಾಗಬಹುದು. ಅದರ ಬದಲು ಒಂದೇ ಹೊದಿಕೆಯನ್ನು ಮಗುವಿಗೆ ಹೊದ್ದಿಸಿ, ಮಗುವು ತಲೆಯನ್ನು ಆಡಿಸಲು ಮುಕ್ತವಾಗಿ ಬಿಡಿ, ಮತ್ತು ಆರಾಮದಾಯಕವಾಗಿ ನಿದಿರೆ ಮಾಡುವಂತೆ ಮಾಡಿ.


ಜೊತೆಗೆ, ತಮ್ಮ ಕೊಠಡಿಗಳಲ್ಲಿ ಸರಿಯಾಗಿ ಗಾಳಿಯಾಡುತ್ತಿದಿಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಮಗುವು ಶಾಂತಿಯುತವಾಗಿ ನಿದ್ರಿಸಲು, ಸರಿಯಾದ ಮತ್ತು ಸ್ವಚ್ಛವಾದ ಗಾಳಿಯ ಅವಶ್ಯಕತೆ ಇದೆ.

ಕಾರಣ ನಂ.೪

ಶಿಶುಗಳ ತಲೆಯಲ್ಲಿ ಸಕ್ರಿಯ ಬೆವರು ಗ್ರಂಥಿಗಳು ಇರುತ್ತವೆ. ನಿಮ್ಮ ಮಗುವಿನ ತಲೆಯು ಬೆವರುತ್ತಿದ್ದರೆ, ಇದರ ಅರ್ಥ ನಿಮ್ಮ ಮಗುವಿಗೆ ಸೆಕೆಯಾಗುತ್ತಿದೆ ಎಂದು. ನೀವು ಮಗುವಿನ ತಲೆಕೂದಲನ್ನು ತಿಂಗಳಿಗೊಮ್ಮೆ ಅಥವಾ ಬೇಸಿಗೆಯಲ್ಲಿ ಕತ್ತರಿಸುವುದನ್ನು ಪ್ರಯತ್ನಿಸಬಹುದು. ಈ ರೀತಿ ಮಗುವಿನ ಬೆವರನ್ನು ಕಡಿಮೆ ಮಾಡಬಹುದು ಮತ್ತು ಮಗುವು ಎಷ್ಟು ಬೆವರುತ್ತದೆ ಎಂಬುದನ್ನು ಗಮನಿಸಬಹುದು.


ನಿಮ್ಮ ಮಗುವಿನ ತಲೆ ಬಿಸಿಯಾಗಿದ್ದಾರೆ, ಅದು ಮಗುವಿಗೆ ಜ್ವರ ಬಂದಿರುವುದನ್ನು ಸೂಚಿಸುತ್ತದೆ. ಇದನ್ನು ದೃಢಿಕರಿಸಿಕೊಳ್ಳಲು ಮಗುವಿನ ಕೆನ್ನೆ ಅಥವಾ ಕತ್ತನ್ನು ಮುಟ್ಟಿನೋಡಿ ಪರೀಕ್ಷಿಸಿ. ಮಗುವು ಯಾವಾಗಲು ಬೆವರುತ್ತಿದ್ದರೆ, ವೈದ್ಯರ ಬಳಿ ಕರೆದುಕೊಂಡು ಹೋಗುವುದು ಒಳಿತು.

ಸೂಚನೆ:
ವಾತಾವರಣದಲ್ಲಿ ತಾಪಮಾನ ತಂಪಾಗಿದ್ದರು, ಅಥವಾ ಸೆಕೆಯಾಗುವ ಬಿಸಿ ಇಲ್ಲದಿದ್ದರೂ ಮಗು ಬೆವರುತ್ತಿದ್ದರೆ, ಮತ್ತು ನಿಮ್ಮ ಮಗು ವಯಸ್ಸಿಗಿಂತ ಕಡಿಮೆ ಅಥವಾ ಹೆಚ್ಚು ತೂಕ ಇದ್ದರೆ, ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇರುವ ಸಾಧ್ಯತೆ ಇರುತ್ತದೆ. ಮತ್ತೊಂದು ಗುಣಲಕ್ಷಣವೆಂದರೆ, ಚರ್ಮವು ಬಿಳುಚಿಕೊಳ್ಳುವುದು, ಮತ್ತು ಕಳೆಗುಂದಿದಂತೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಮಗುವನ್ನು ಕೂಡಲೇ ವೈದ್ಯರ ಬಳಿ ತೋರಿಸಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon