Link copied!
Sign in / Sign up
88
Shares

ನಿಮ್ಮ ಮಗುವಿನ ಶೀತ,ಕೆಮ್ಮಿಗೆ ಆಯುರ್ವೇದಿಕ್ ಮನೆ ಔಷಧಗಳು

ಶೀತ ಹಾಗು ಕೆಮ್ಮು ಮಕ್ಕಳಲ್ಲಿ ಸರ್ವೇ ಸಾಮಾನ್ಯ, ಹಾಗಂದ ಮಾತ್ರಕ್ಕೆ ಅದನ್ನು ನಿರ್ಲಕ್ಷಿಸುವಂತೆ ಇಲ್ಲ. ಮಕ್ಕಳಿಗೆ ಅನಾರೋಗ್ಯವಾದರೆ ಪೋಷಕರಿಗೆ ಪೀಕಲಾಟ. ಮಳೆಗಾಲದಲ್ಲಿ ಹಾಗು ಮುಂಗಾರಿನಲ್ಲಿ ಮಕ್ಕಳು ಶೀತ, ಕೆಮ್ಮಿಗೆ ತುತ್ತಾಗುವುದು ಹೆಚ್ಚು. ನಿಮ್ಮ ಪೀಕಲಾಟಕ್ಕೆ ಕೊನೆಯಿಡಲೆಂದು ನಾವು ಮನೆಯಲ್ಲೇ ಸಿಗಬಹುದಂತಹ ಆಯುರ್ವೇದಿಕ್ ಔಷಧಗಳ ಪಟ್ಟಿ ಮಾಡಿದ್ದೇವೆ, ಹಾಗಾಗಿ ನೀವು ನಿರಾಳರಾಗಿ !

೧. ಜೇನುತುಪ್ಪ

ಅರ್ಧ ಚಮಚ ಜೇನುತುಪ್ಪವನ್ನು ಒಂದು ಲೋಟ ಉಗುರುಬೆಚ್ಚಗಿನ ನೀರಲ್ಲಿ ಬೆರೆಸಿ ಮಗುವಿಗೆ ಕುಡಿಸಿ. ಜೇನುತುಪ್ಪವು ನಿಮ್ಮ ಮಗುವಿನ ಪ್ರತಿರಕ್ಷಣಾ ವ್ಯವಸ್ತೆಗೆ ಹಾನಿ ಮಾಡುವುದಿಲ್ಲ.ಆದರೆ ಈ ಪರಿಹಾರಕ ಒಂದು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಸರಿ ಹೊಂದುವುದಿಲ್ಲ.

೨.ಶುಂಟಿ

ಈ ಆಯುರ್ವೇದಿಕ್ ಪರಿಹಾರಕ ಶೀತ ಶಮನಕ್ಕೆ ತುಂಬಾ ಪರಿಣಾಮಕಾರಿ. ನೀರನ್ನು ಕುದಿಸಿ, ಅದಕ್ಕೆ ಶುಂಟಿ ಅನ್ನು ಬೆರೆಸಿ. ನೀರು ಕುದಿಯುವ ಹಂತ ತಲುಪಿದಾಗ, ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸಹ ಬೆರೆಸಿ. ಕುದಿಸಿದ ನೀರನ್ನು ಸ್ವಲ್ಪ ಆರಿಸಿ ಬೆಚ್ಚಗೆ ಮಾಡಿ, ಅದನ್ನು ನಿಮ್ಮ ಮಗುವಿಗೆ ಕುಡಿಸಿ.

೩.ಲವಣಯುಕ್ತ ಲಸಿಕೆಗಳು

ನಿಮ್ಮ ಮಗುವಿನ ಮೂಗನ್ನು ಶುಚಿಗೊಳಿಸಲು, ಒಂದು ಲೋಟ ನೀರಿಗೆ ಕಾಲು ಚಮಚದಷ್ಟು ಉಪ್ಪನ್ನು ಬೆರೆಸಿ. ಬೆರೆಸಿದ ನೀರನ್ನು ಬಲ್ಬ್ ಆಕಾರದ ಪಿಚಕಾರಿಯೊಂದಿಗೆ ಕೆಲವು ಹನಿಗಳಷ್ಟನ್ನು ಮೂಗಿನ ಒಂದು ಹೊಳ್ಳೆಯೊಳಗೆ ಹಾಕಿ ಇನ್ನೊಂದು ಹೊಳ್ಳೆಯಿಂದ ಲೋಳೆ ಹೊರತೆಗಿಯಿರಿ.ಇದನ್ನ ದಿನದಲ್ಲಿ ನಾಲ್ಕು ಬಾರಿಗಿಂತ ಹೆಚ್ಚು ಮಾಡುವಂತಿಲ್ಲ.

೪. ಮಾಂತ್ರಿಕ ಮದ್ದು ೧

೨,೩ ಲವಂಗಗಳೊಂದಿಗೆ ಜೆಜ್ಜಿದ ಶುಂಟಿಯನ್ನು ನೀರಿನಲ್ಲಿ ಬಣ್ಣ ಬದಲಾಗುವವರೆಗೂ ಬೇಯಿಸಿ. ಈ ನೀರಿಗೆ ಸ್ವಲ್ಪ ಜೇನುತುಪ್ಪ, ಚಿಟಿಗೆಯಷ್ಟು ಖಾರದಪುಡಿ, ಕೆಲವು ಹನಿಗಳಷ್ಟು ನಿಂಬೆರಸ ಬೆರೆಸಿ. ಈ ಪರಿಹಾರಕವನ್ನು ಮಗುವಿಗೆ ಎಷ್ಟು ಬಾರಿ ಬೇಕಾದರೂ ನೀಡಬಹುದು.

೫. ಮಾಂತ್ರಿಕ ಮದ್ದು ೨

ಕುದಿಯುತ್ತಿರುವ ನೀರಿಗೆ ಸ್ವಲ್ಪ ಅರಿಶಿಣ ಬೆರಸಿ ಅದು ತಣ್ಣಗಾಗಲಿಕ್ಕೆ ಬಿಡಿ. ಇದಕ್ಕೆ ಸ್ವಲ್ಪ ಬೆಲ್ಲ (ಅಥವಾ ಅರ್ಧ ಚಮಚ ತುಪ್ಪ) ಹಾಗು ಚಿಟಿಗೆಯಷ್ಟು ಉಪ್ಪನ್ನು ಬೆರೆಸಿ.ಈ ಆಯುರ್ವೇದಿಕ್ ಮಿಶ್ರಣವನ್ನು ಕೆಮ್ಮಿನ ಶಮನಕ್ಕಾಗಿ ಮಗುವಿಗೆ ನೀಡಬಹುದು. ಅರಿಶಿಣ ಸೋಂಕು ನಿವಾರಣೆ ಮಾಡುವುದಲ್ಲದೆ, ಉರಿಯೂತವನ್ನು ಸಹ ಕಮ್ಮಿ ಮಾಡುತ್ತಿದೆ.

೬.ಖ್ಯಾಮೊಮೈಲ್ (Chamomile)

ಖ್ಯಾಮೊಮೈಲ್ ಟೀ ಬ್ಯಾಗ್ ಅನ್ನು ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಸೋಕಲು ಬಿಟ್ಟು ಮೃದು ಚಹಾವನ್ನು ತಯಾರಿಸಿ. ಈ ಪಾನೀಯವು ಆರು ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಸೂಕ್ತ. ಗಂಟಲು ಸೋಂಕು ಇರುವ ಮಕ್ಕಳಿಗೆ ಇದು ತುಂಬಾನೆ ಪರಿಣಾಮಕಾರಿ.

ಮಕ್ಕಳು ಶೀತ ಅಥವ ಕೆಮ್ಮಿಗೆ ತುತ್ತಾದಾಗ ಇರಿಸುಮುರಿಸು ಉಂಟಾಗಬಹುದು ಹಾಗು ನಿದ್ರಾಹೀನತೆಗೆ ಒಳಗಾಗಬಹುದು.ವಾಣಿಜ್ಯ ಔಷಧಗಳ ಮೊರೆ ಹೋಗದೆ  ಮನೆಯಲ್ಲೇ ತಯಾರಿಸಬಹುದಾದ ಆಯುರ್ವೇದಿಕ್ ಔಷಧಗಳನ್ನು ಉಪಯೋಗಿಸಿ.ಇವೆಲ್ಲವೂ ನೈಸರ್ಗಿಕವಾಗಿರುವುದು ಅಲ್ಲದೇ, ಅತ್ಯಂತ ಪರಿಣಾಮಕಾರಿಯಾಗಿವೆ. ಹಾಗೆ, ಯಾವುದೇ ಅಡ್ಡ ಪರಿಣಾಮಗಳ ಚಿಂತ ಇರುವುದಿಲ್ಲ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon