Link copied!
Sign in / Sign up
3
Shares

ನಿಮ್ಮ ಮಗುವಿನ ಮೊದಲ ಹುಟ್ಟುಹಬ್ಬಕ್ಕೆ ೫ ಮುದ್ದಾದ ಸೃಜನಶೀಲ ಉಪಾಯಗಳು

ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ ಕೇವಲ ಮಗುವಿಗೆ ಅಷ್ಟೇ ಅಲ್ಲದೆ ಪೋಷಕರಿಗೂ ಕೂಡ ಒಂದು ಮೈಲಿಗಲ್ಲು. ಈ ದಿನವು ಸರಿಯಾಗಿ ನಿಮಗೆ ಒಂದು ವರ್ಷದ ಹಿಂದೆ ದೇವರಿಂದ ನಿಮ್ಮ ಮಗು ವರವಾಗಿ ಬಂದದ್ದನ್ನು ಹಾಗು ಅದಾದ ಮೇಲೆ ನಿಮ್ಮ ಜೀವನದಲ್ಲಿ ಆದ ಅನೇಕಾನೇಕ ಬದಲಾವಣೆಗಳು ಹಾಗು ಘಟನೆಗಳನ್ನ ನೆನಪಿಸುವಂತ ದಿನ. ನಿಮ್ಮ ಮಗುವಿನ ಜೀವನದಲ್ಲಿ ಈ ದಿನದಿಂದ ಅನೇಕ ಹೊಸ ಹಾಗು ಅದ್ಭುತ ಬದಲಾವಣೆಗಳು ಆಗುತ್ತವೆ. ಉದಾಹರಣೆಗೆ ಹೊಸ ತಿನಿಸುಗಳನ್ನು ಸೇವಿಸುವುದು, ಬೆಳವಣಿಗೆಯಲ್ಲಿ(ದೈಹಿಕ ಹಾಗು ಮಾನಸಿಕ) ಹೊಸ ಹೊಸ ಹಂತಗಳನ್ನು ತಲುಪುವುದು. ಹಾಗಾಗಿ ಈ ದಿನವು ನಿಮ್ಮ ಮಗುವು ದೊಡ್ಡದಾದ ಮೇಲು ನೀವು ನೆನಪಲ್ಲಿ ಇಡುವಂತಹ ದಿನವಾಗಿರಬೇಕು.

ನೀವು ಈ ದಿನವನ್ನು ಸ್ಮರಣೀಯವಾಗಿಸಲು ನಿಮಗೆ ನಾವು ೮ ಥೀಮ್ ಗಳನ್ನೂ ತಿಳಿಸುತ್ತೇವೆ :

೧. ಪ್ರಾಣಿ ಥೀಮ್ ಪಾರ್ಟಿ

ಸೂಪರ್ ಮಜಾ! ಇದನ್ನ ಮಾಡಲಿಕ್ಕೆ ನಿಮಗೆ ಎಲ್ಲಾ ಸಾಮಗ್ರಿಗಳು ಪ್ರಾಣಿಗಳ ಆಕಾರದಲ್ಲಿ ಇರುವಂತವು ಬೇಕು - ಕೇಕ್, ಚಾಕಲೇಟ್, ಬಲೂನ್ ಗಳು, ಬ್ಯಾನರ್ ಗಳು, ಆಟಿಕೆಗಳು ಹಾಗು ಟೋಪಿಗಳು ಕೂಡ! ನೀವು ನಿಮ್ಮ ಮಗುವನ್ನು ಕೂಡ ಮುದ್ದಾದ ರೋಮದಿಂದ ಕೂಡಿದ ಪ್ರಾಣಿಯ ವೇಷ ತೊಡಿಸಿ ಮಗುವನ್ನು ನೆಲದ ಮೇಲೆ ತೆವಳಲು ಬಿಡಿ. ಆಗ ನೋಡಿ ನಿಮ್ಮ ಮಗು ಎಷ್ಟು ಮುದ್ದಾಗಿ ಕಾಣುವುದೆಂದು!

೨. ಡಿಸ್ನಿ ಥೀಮ್ ಪಾರ್ಟಿ

ಯಾರಿಗೆ ತಾನೇ ಡಿಸ್ನಿ ಕಾರ್ಟೂನ್ ಗಳು ಇಷ್ಟವಾಗುವುದಿಲ್ಲ ಹೇಳಿ?! ನಿಮ್ಮ ಸೃಜನಶೀಲತೆ ತೋರಿಸಲಿಕ್ಕೆ ಇಲ್ಲಿ ಎಣಿಸಲಾಗದಷ್ಟು ಸಾಧ್ಯತೆಗಳಿವೆ. ಕೇಕ್ ಇಂದ ಹಿಡಿದು ಸ್ಪೂನ್ ಹಾಗು ಚಾಕುವಿನವರೆಗೂ. ಇಷ್ಟೇ ಅಲ್ಲದೇ ನೀವು ಡಿಸ್ನಿಯಲ್ಲಿ ಬರುವ ಯಾವುದಾದರೊಂದು ಪಾತ್ರ ಆಯ್ದುಕೊಂಡು, ಅದಕ್ಕೆ ಸಂಬಂಧ ಪಡುವಂತೆಯೇ ಎಲ್ಲವನ್ನೂ ಜೋಡಿಸಿಕೊಳ್ಳಿ.

೩. ಗ್ಯಾಲಕ್ಸಿ ಥೀಮ್ ಪಾರ್ಟಿ

ಚಂದ್ರ, ಸೂರ್ಯ, ನಕ್ಷತ್ರಗಳಿರುವ ಸರಗಳು ಹಾಗು ಇತರೆ ಆಭರಣಗಳು. ಅಲ್ಲದೆ ಗೋಡೆಯ ಮೇಲೆಲ್ಲಾ ರಾತ್ರಿ ಹೊತ್ತು ಹೊಳೆಯುವ ನಕ್ಷತ್ರ, ಧೂಮಕೇತು, ಚಂದ್ರ, ಸ್ಯಾಟಲೈಟ್ ಗಳ ರೇಡಿಯಂ ಸ್ಟಿಕರ್ ಅನ್ನು ಗೋಡೆಗಳಿಗೆ ಅಂಟಿಸಿ. ಕಪ್ಪಾದ ಹಿನ್ನಲೆಯಲ್ಲಿ ಇವುಗಳು ನೋಡಲಿಕ್ಕೆ ಒಳ್ಳೆಯ ಅನುಭವ ನೀಡುವುದು ಅಲ್ಲದೆ ನಿಮ್ಮ ಮಗುವಿನ ಮೊದಲ ಹುಟ್ಟು ಹಬ್ಬ ವಿನೂತನವಾಗಿ ಇರುವಂತೆ ಮಾಡುತ್ತದೆ.

೪. ಕ್ಯಾಂಡಿ ಹಾಗು ಐಸ್ ಕ್ರೀಂ ಥೀಮ್ ಪಾರ್ಟಿ

ಹೊಳೆಯುವ ಪಿಂಕ್ ಬಣ್ಣ, ಸ್ವಪ್ನಮಯ ಬಣ್ಣ ಬಣ್ಣದ ಪೆನ್ಸಿಲ್ ಗಳು, ನಿಯಾನ್ ಲೈಟ್ ಗಳು ಹಾಗು ಎಲ್ಲಾ ಸಿಹಿ ಸಿಹಿಯಾಗಿರುವಂತ ತಿನಿಸುಗಳು - ಒಳ್ಳೆ ಕನಸಿನಂತೆ ಕಾಣಿಸುತ್ತಿದೆ ಅಲ್ಲವಾ? ಮನೆಯ ಅಲ್ಲಲ್ಲಿ ಬುಟ್ಟಿಗಳಲ್ಲಿ ಬಣ್ಣ ಬಣ್ಣ ಕ್ಯಾಂಡಿಗಳು, ಐಸ್ ಕ್ರೀಂ ಕೋನ್ ಗಳು, ತಣ್ಣನೆಯ ಗೋಲಾ/ಕುಲ್ಫಿ , ಎಲ್ಲೆಡೆ ಗೋಡೆಗಳ ಮೇಲೆ ಬಣ್ಣದ ಚಿತ್ತಾರಗಳು. ಇದು ಅತ್ಯಂತ ಅಂದವಾದ ಪಾರ್ಟಿ ಆಗುತ್ತದೆ.

೫. ರಾಜಕುಮಾರಿ ಥೀಮ್ ಪಾರ್ಟಿ

ನಿಮ್ಮ ಮಗುವು ಈಗಾಗಲೇ ನಿಮ್ಮ ಹೃದಯಗಳನ್ನು ಆಳುತ್ತಿದ್ದಾಳೆ. ಹಾಗಾಗಿ ಈ ಸಂಗತಿಯೇ ಅದರ ಮೊದಲ ಹುಟ್ಟುಹಬ್ಬವನ್ನು ಆವರಿಸಲಿ. ನಿಮ್ಮ ಮಗುವಿಗೆ ರಾಜಕುಮಾರ/ರಾಜಕುಮಾರಿ ರೀತಿಯ ವೇಷ ತೊಡಿಸಿ. ಹಾಗು ರಾಜಯೋಗ್ಯವಾಗಿರುವಂತಹ ಸ್ಥಳವನ್ನು ಹುಟ್ಟುಹಬ್ಬಕ್ಕೆ ಆಯ್ಕೆ ಮಾಡಿ.   

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon