Link copied!
Sign in / Sign up
187
Shares

ನಿಮಗೆ ಗಂಡು ಮಗು ಬೇಕೋ ಅಥವಾ ಹೆಣ್ಣು ಮಗು ಬೇಕೋ? ಹೀಗೆ ನೀವೇ ನಿರ್ಧರಿಸಿ !

ನೀವು ಮೂರೂ ಹೆಣ್ಣು ಮಕ್ಕಳ ತಾಯಿಯೇ? ನಿಮಗೆ ನಿಮ್ಮ ಕನಸಿನ ಗಂಡು ಮಗು ಬೇಕೇ? ಅಥವಾ ನಿಮ್ಮ ಮೊದಲ ಮಗು ಗಂಡು ಆಗಿರಬೇಕೇ? ಸರಿ, ಆಧುನಿಕ ವಿಜ್ಞಾನದ ಪ್ರಕಾರ, ನೀವು ಪ್ರಯತ್ನಿಸಬಹುದಾದ ಹಲವು ವಿಷಯಗಳಿವೆ, ಇವುಗಳಿಂದ ನೀವು ಬಯಸಿದ ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯುವ ಅವಕಾಶಗಳು ಹೆಚ್ಚಿವೆ.

ಮಗುವಿನ ಲಿಂಗವನ್ನು ಹೇಗೆ ನಿರ್ಧರಿಸಲಾಗುತ್ತದೆ

ಲಿಂಗ ಆಯ್ಕೆಗಳ ವಿಭಿನ್ನ ವಿಧಾನಗಳನ್ನು ಪ್ರವೇಶಿಸುವ ಮೊದಲು, ಮಗುವಿನ ಲಿಂಗವನ್ನು ಹೇಗೆ ನಿರ್ಣಯಿಸಲಾಗುತ್ತದೆ ಎಂಬುದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ನೀವು ಹೆಣ್ಣಾದರೆ ಎರಡು ಎಕ್ಸ್(X) ಕ್ರೋಮೋಜೋಮ್ ಅನ್ನು ಹೊಂದಿರುವಿರಿ(XX). ನೀವು ಹುಡುಗನಾದರೆ ಒಂದು ಎಕ್ಸ್(X) ಮತ್ತು ಒಂದು ವೈ(Y) ಕ್ರೋಮೋಜೋಮ್ ಅನ್ನು ಹೊಂದಿರುವಿರಿ(XY). ಪುರುಷ ಮತ್ತು ಮಹಿಳೆ ಗರ್ಭತಾಳಲು ಸಂಭೋಗಿಸಿದಾಗ ಇಬ್ಬರು ತಮ್ಮಲ್ಲಿರುವ ಒಂದು ಕ್ರೋಮೋಜೋಮ್ ಅನ್ನು ಕಳಿಹಿಸುತ್ತಾರೆ. ಮಹಿಳೆಯು X ಕ್ರೋಮೋಜೋಮ್ ಅನ್ನು ಕಳುಹಿಸುತ್ತಾಳೆ(ಅವಳ ಹತ್ತಿರ ಇರುವುದು ಅದು ಮಾತ್ರ), ಮತ್ತು ಪುರುಷನು X ಅಥವಾ Y ಕ್ರೋಮೋಜೋಮ್ ಅನ್ನು ಕಳುಹಿಸುತ್ತಾನೆ. ಒಂದು ವೇಳೆ ಪುರುಷನು X ಕ್ರೋಮೋಜೋಮ್ ಅನ್ನು ಕಳುಹಿಸಿದರೆ ಮಗುವು ಹೆಣ್ಣಾಗಿರುತ್ತದೆ. ಅಥವಾ ಪುರುಷನು Y ಕ್ರೋಮೋಜೋಮ್ ಅನ್ನು ಕಳುಹಿಸಿದರೆ ಮಗುವು ಗಂಡಾಗಿರುತ್ತದೆ. ಆದ್ದರಿಂದ, ಮೂಲಭೂತವಾಗಿ, ತಂದೆ ಕಳುಹಿಸುವ ಕ್ರೋಮೋಜೋಮ್ ಮೇಲೆ ಮಗುವಿನ ಲಿಂಗ ಅವಲಂಭಿತವಾಗಿರುತ್ತದೆ.

ಕ್ರೋಮೋಜೋಮ್ ಲಿಂಗಗಳು

ಹುಡುಗಿ/ಹೆಣ್ಣು: XX

ಹುಡುಗ/ಗಂಡು:XY

ತಾಯಿಯು X ಕ್ರೋಮೋಜೋಮ್ ಅನ್ನು ಕಳುಹಿಸಿದರೆ, ತಂದೆಯು X ಅಥವಾ Y ಕ್ರೋಮೋಜೋಮ್ ಅನ್ನು ಕಳುಹಿಸಬಹುದು.

ಈಗ ನಿಮಗೆ ಲಿಂಗಗಳ DNA ಮೂಲ ಅರ್ಥವಾಗಿದೆ. ಈಗ ನೀವು ಬಯಸುವ ಲಿಂಗವು ಗರ್ಭತಾಳುವ ಸಾಧ್ಯತೆಗಳನ್ನು ಹೆಚ್ಚಿಸುವ ವಿಷಯದ ಬಗ್ಗೆ ಚರ್ಚಿಸೋಣ.

ಶೆಟ್ಟಲ್ ವಿಧಾನ

ಬಹುಶಃ 1960 ರ ದಶಕದಲ್ಲಿ ಡಾ. ಲ್ಯಾಂಡ್ರಮ್ ಬಿ. ಶೆಟ್ಲೆಸ್ ನಿರ್ಧರಿಸಿದ ಪ್ರಕಾರ ಲಿಂಗ ಕಂಡುಹಿಡಿಯುವ ವಿಧಾನದ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಇದರ ಮೂಲತತ್ವ ಏನೆಂದರೆ, ವೀರ್ಯ ಒಯ್ಯುವ ಹೆಣ್ಣಿನ X ಕ್ರೋಮೋಜೋಮ್ ಮತ್ತು ಗಂಡಿನ Y ಕ್ರೋಮೋಜೋಮ್ ಎರಡು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ಮೊಟ್ಟೆಯನ್ನು ತಲುಪಲು ನೀವು ಒಂದನ್ನು ಅಥವಾ ಇನ್ನೊಬ್ಬರನ್ನು ಪ್ರೋತ್ಸಾಹಿಸಬಹುದು ಮತ್ತು ಸಂಭೋಗದ ಸಮಯದ ಮೂಲಕ ಅದನ್ನು ಫಲವತ್ತಾಗಿಸಬಹುದು ಆದರೆ ಅದನ್ನು ಹೇಗೆ ಮಾಡುವುದು.

ಹೆಣ್ಣು ವಿರುದ್ಧ ಗಂಡು ವೀರ್ಯದ ಗುಣಲಕ್ಪಣಗಳು

1.ಹೆಣ್ಣು ವೀರ್ಯ (X ಕ್ರೋಮೋಜೋಮ್) ಹೆಚ್ಚು ಚೇತರಿಸಿಕೊಳ್ಳುವ (ಹೆಚ್ಚು ಜೀವಿತಾವಧಿ), ಆದರೆ ಅವು ನಿಧಾನವಾಗಿರುತ್ತವೆ. ಅವು ಆಮ್ಲಿಯ ಪರಿಸರದಲ್ಲಿ ಯಶಸ್ವಿಯಾಗಿ ಮುನ್ನುಗುತ್ತವೆ, ಆದರೆ Y ಕ್ರೋಮೋಜೋಮ್ ಗಳು ಹೆಣಗಾಡುತ್ತಿರುತ್ತವೆ.

2.ಗಂಡು ವೀರ್ಯ(Y ಕ್ರೋಮೋಜೋಮ್) ವೇಗವಾಗಿರುತ್ತವೆ, ಆದರೆ ಬೇಗನೆ ಸಾಯುತ್ತವೆ. ಅವು ಕ್ಷಾರೀಯ ಪರಿಸರದಲ್ಲಿ ಯಶಸ್ವಿಯಾಗಿ ಮುನ್ನುಗುತ್ತವೆ.

ಶೆಟ್ಟೆಲ್ ವಿಧಾನ ಉಪಯೋಗಿಸಿಕೊಂಡು ಹೆಣ್ಣು ಶಿಶು ಪಡೆಯಬೇಕಾದಲ್ಲಿ

1.ನಿಮ್ಮ ಅಂಡೋತ್ಪತ್ತಿ ದಿನದ 2-3 ದಿನಗಳು ಇರುವಂತೆಯೇ ಸಂಭೋಗ ನಡೆಸಿ. ಈ ರೀತಿ ಮಾಡಿದರೆ ಅಂಡೋತ್ಪತ್ತಿ ಆಗುವ ದಿನ ಜಾಸ್ತಿ ಆಯಸ್ಸಿನ ಹೆಣ್ಣು ವೀರ್ಯವು ಬದುಕುಳಿದು ಅಂಡನ್ನು ಸೇರುತ್ತದೆ ಹಾಗು ಇಷ್ಟರೊಳಗೆ ಕಮ್ಮಿ ಆಯಸ್ಸಿನ ಗಂಡು ವೀರ್ಯಗಳು ಸತ್ತು ಹೋಗಿರುತ್ತವೆ.

2.ಅಂಡೋತ್ಪತ್ತಿಯ ದಿನದ ಹಿಂದಿನ ೨ ದಿನಗಳ ಒಳಗೆ ಹಾಗು ಅಂಡೋತ್ಪತ್ತಿ ದಿನದ ನಂತರದ ೨ ದಿನಗಳವರೆಗೆ ಸಂಭೋಗ ನಡೆಸಬೇಡಿ. ಹೀಗೆ ಮಾಡದಿದ್ದಲ್ಲಿ, ವೇಗವಾಗಿ ಚಲಿಸುವ ಗಂಡು ವೀರ್ಯವು ಹೆಣ್ಣು ವೀರ್ಯವನ್ನು ಹಿಂದಿಕ್ಕಿ ಅಂಡಿನ ಜೊತೆ ಸೇರುವ ಸಾಧ್ಯತೆ ಇರುತ್ತದೆ.

3.ನಿಮ್ಮ ಗರ್ಭಕಂಠದಿಂದ ದೂರದಲ್ಲಿ ವೀರ್ಯವು ಜಮಾ ಆಗುವಂತ ಭಂಗಿಯಲ್ಲಿ ಸಂಭೋಗ ನಡೆಸಿ. ಉದಾಹರಣೆಗೆ ಮಿಷನರಿ ಭಂಗಿ. ಏಕೆಂದರೆ ಇದು ಹೆಣ್ಣು ವೀರ್ಯಕ್ಕೆ ಹೆಚ್ಚು ಸಹಾಯಕಾರಿ ಆಗುತ್ತದೆ. ಏಕೆಂದರೆ ದೂರವಾದಷ್ಟು ದೀರ್ಘ ಆಯಸ್ಸಿನ ಹೆಣ್ಣು ವೀರ್ಯವು ಸಂಚರಿಸಬಹುದು ಆದರೆ ಗಂಡು ವೀರ್ಯದ ಆಯಸ್ಸು ಕಮ್ಮಿ ಇರುವ ಕಾರಣ ಅವು ಗುರಿ ತಲುಪುವ ಮುನ್ನವೇ ಸಾಯುತ್ತವೆ. ಅಲ್ಲದೆ ಗರ್ಭಕಂಠದ ಪ್ರವೇಶದಲ್ಲಿನ ದ್ರವವು ಹೆಚ್ಚು ಆಮ್ಲೀಯ ಆಗಿರುವ ಕಾರಣ ಇದು ಹೆಣ್ಣು ವೀರ್ಯಕ್ಕೆ ಸಹಾಯಕಾರಿ ಆಗುತ್ತದೆ.

4.ಸಂಭೋಗ ನಡೆಸುವಾಗ ಪತ್ನಿಯು ಪರಾಕಾಷ್ಟೆಗೆ (ಒಳಗಾಗಬಾರದು), ಏಕೆಂದರೆ ಇದು ಆಂತರಿಕ ವಾತಾವರಣವನ್ನು ಕ್ಷಾರೀಕ ಮಾಡುತ್ತದೆ ಹಾಗು ಇದು ಗಂಡು ವೀರ್ಯಕ್ಕೆ ಸಹಾಯಕಾರಿ ಆಗುತ್ತದೆ.

ಶೆಟ್ಟೆಲ್ ವಿಧಾನ ಉಪಯೋಗಿಸಿಕೊಂಡು ಗಂಡು ಶಿಶು ಪಡೆಯಬೇಕಾದಲ್ಲಿ

1.ನಿಮ್ಮ ಅಂಡೋತ್ಪತ್ತಿಯ ದಿನದಂದು ಅಥವಾ ಅದರ ಹಿಂದಿನ/ಮುಂದಿನ ದಿನದಂದು ಸಂಭೋಗ ನಡೆಸಿ. ಹೀಗೆ ಮಾಡಿದರೆ ವೇಗ ಹೊಂದಿರುವ ಗಂಡು ವೀರ್ಯವು ಅಂಡು ಸೇರುವ ಸಾಧ್ಯತೆಗಳು ಹೆಚ್ಚು.

2.ನಿಮ್ಮ ಗರ್ಭಕಂಠಕ್ಕೆ ಹತ್ತಿರದಲ್ಲಿ ವೀರ್ಯ ಜಮಾ ಆಗುವಂತ ಭಂಗಿಯಲ್ಲಿ ಸಂಭೋಗ ನಡೆಸಿ. ಉದಾಹರಣೆಗೆ ಪತಿಯು ಹಿಂಬದಿಯಿಂದ ಶಿಶ್ನ ಪ್ರವೇಶ ಮಾಡಿಸುವುದು. ಗರ್ಭಕಂಠದ ತುದಿಯಲ್ಲಿನ ದ್ರವವು ಹೆಚ್ಚು ಕ್ಷಾರೀಯ ಆಗಿರುವ ಕಾರಣ ಅದು ಗಂಡು ವೀರ್ಯಕ್ಕೆ ಹೆಚ್ಚು ಸಹಕಾರಿಯಾಗುತ್ತದೆ.

3.ಸಂಭೋಗದ ವೇಳೆ ಪತ್ನಿ ಲೈಂಗಿಕ ಪರಾಕಾಷ್ಟೆ(orgasm) ಹೊಂದಬೇಕು. ಏಕೆಂದರೆ ಇದು ಆಂತರಿಕ ವಾತಾವರಣವನ್ನ ಹೆಚ್ಚು ಕ್ಷಾರೀಯ ಮಾಡುತ್ತದೆ. ಇದು ಗಂಡು ವೀರ್ಯಕ್ಕೆ ಹೆಚ್ಚು ಅನುಕೂಲಕರ.

ಖಂಡಿತವಾಗಿಯೂ ಶೆಟ್ಟೆಲ್ ವಿಧಾನ ಪಾಲನೆ ಮಾಡುವುದು ಕಷ್ಟ. ಏಕೆಂದರೆ ಇದಕ್ಕೆ ತುಂಬಾನೇ ಯೋಜನೆ ಮಾಡಬೇಕು ಹಾಗು ಕೆಲವು ನಿಗದಿತ ದಿನಗಳಂದು ನೀವು ಸಂಭೋಗ ನಡೆಸದ ಕಾರಣ ಗರ್ಭತಾಳುವುದಕ್ಕೆ ಹೆಚ್ಚು ಸಮಯ ಕಾಯಬೇಕಾಯಿತು.

ಆಂತರಿಕ pH ಗತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು

ನೀವು ನಿಮ್ಮ pH ಗತಿಗಳನ್ನು ಬದಲಿಸಲು ಮುಂದಾಗುವ ಮುನ್ನ ನಿಮ್ಮ ಈಗಿನ pH ನೀವು ಕ್ಷಾರೀಯದ ಕಡೆ ವಾಲಿದ್ದೀರೋ ಅಥವಾ ಆಮ್ಲೀಯದ ಕಡೆ ವಾಲಿದ್ದೀರೋ ಎಂದು ಪರೀಕ್ಷೆ ಮಾಡಿ ತಿಳಿದುಕೊಳ್ಳುವುದು ಒಳಿತು. ನೀವು ಮೆಡಿಕಲ್ ಶಾಪ್ ಅಲ್ಲಿ ಸಿಗುವ pH ಟೆಸ್ಟ್ ಪೇಪರ್ ಸ್ಟ್ರಿಪ್ ಗಳನ್ನ ಬಳಸಿ ನಿಮ್ಮ ಮೂತ್ರ, ಎಂಜಲು, ಯೋನಿಯ ದ್ರವ್ಯ ಇವುಗಳಲ್ಲಿ ಯಾವುದಾದರು ಒಂದನ್ನು ಬಳಸಿಕೊಂಡು pH ಅನ್ನು ಕಂಡುಹಿಡಿಯಬಹುದು. ನಿಮ್ಮ pH ಗತಿಯು ಜಾಸ್ತಿ ಇದ್ದರೆ, ಅಂದರೆ ನಿಮ್ಮ ದೇಹವು ಕ್ಷಾರೀಯವಾಗಿದೆ ಎಂದರೆ ನಿಮ್ಮ ದೇಹವು ಗಂಡು ವೀರ್ಯಕ್ಕೆ ಅನುಕೂಲಕರ ಎಂದು. ನಿಮ್ಮ pH ಗತಿಯು ಕಮ್ಮಿ ಇದ್ದರೆ, ಅಂದರೆ ನಿಮ್ಮ ದೇಹವು ಆಮ್ಲೀಯವಾಗಿದೆ ಎಂದರೆ ನಿಮ್ಮ ದೇಹವು ಹೆಣ್ಣು ವೀರ್ಯಕ್ಕೆ ಅನುಕೂಲಕರ ಎಂದು. ನೀವು ಇದನ್ನು ಬದಲಾಯಿಸಿಕೊಳ್ಳಲು :

ನಿಮಗೆ ಹೆಣ್ಣು ಮಗು ಬೇಕಾಗಿದ್ದರೆ, ನೀವು ವೀರ್ಯಕ್ಕಾಗಿ ಹೆಚ್ಚು ಆಮ್ಲೀಯ(ಅಸಿಡಿಕ್/acidic) ವಾತಾವರಣ ಸೃಷ್ಟಿ ಮಾಡಬೇಕು

1.ಹೆಚ್ಚೆಚ್ಚು ಕ್ಯಾಲ್ಸಿಯಂ, ಮೆಗ್ನೀಷಿಯಂ ಅಂಶಗಳಿರುವ ಆಹಾರವನ್ನ ಸೇವಿಸಿ. ಇವುಗಳೊಂದಿಗೆ ಆಮ್ಲೀಯ ಪದಾರ್ಥಗಳಾದ ಮೆಕ್ಕೆಜೋಳ, ಬೆರ್ರಿ ಹಣ್ಣುಗಳು(blueberries) ಹಾಗು ಬಹುತೇಕ ಮಾಂಸ ಪದಾರ್ಥಗಳನ್ನ ಸೇವಿಸಿ. ಆಮ್ಲೀಯ ಹಾಗು ಕ್ಷಾರೀಯ (alkaline) ಪದಾರ್ಥಗಳ ಪೂರ್ತಿ ಪಟ್ಟಿಗೆ, ಇಲ್ಲಿ ಕ್ಲಿಕ್ ಮಾಡಿ.

ನಿಮಗೆ ಗಂಡು ಮಗು ಬೇಕಾಗಿದ್ದರೆ, ನೀವು ವೀರ್ಯಕ್ಕಾಗಿ ಹೆಚ್ಚು ಕ್ಷಾರೀಯ(ಆಲ್ಕಲೈನ್/alkaline) ವಾತಾವರಣ ಸೃಷ್ಟಿ ಮಾಡಬೇಕು

1.ಪೊಟ್ಯಾಸಿಯಂ ಹಾಗು ಸೋಡಿಯಂ ಅಂಶ ಹೆಚ್ಚಿರುವ ಉಪ್ಪು, ಬಾಳೆಹಣ್ಣು, ಕ್ಯಾರಟ್ ಹಾಗು ಬಾದಾಮಿ ಥರದ ಆಹಾರವನ್ನ ಸೇವಿಸಿ. ಆಮ್ಲೀಯ ಹಾಗು ಕ್ಷಾರೀಯ ಪದಾರ್ಥಗಳ ಪೂರ್ತಿ ಪಟ್ಟಿಗೆ, ಇಲ್ಲಿ ಕ್ಲಿಕ್ ಮಾಡಿ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon