Link copied!
Sign in / Sign up
26
Shares

ನಿಮ್ಮ ಮಗುವಿನ ಕೂದಲುಗಳು ಶರವೇಗದಲ್ಲಿ ಬೆಳೆಯಲು 6 ಚಾಣಾಕ್ಷ ಉಪಾಯಗಳು!

ಭೂಮಿಗೆ ಕೆಲವು ಮಕ್ಕಳು ಬೊಕ್ಕತಲೆಯ ಬೆಳಗುವ ಚಂದ್ರನಂತೆ ಕಾಲಿಟ್ಟರೆ, ಇನ್ನೂ ಕೆಲವು ಮಕ್ಕಳಿಗೆ ರಾಶಿಗಟ್ಟಲೆ ಕೂದಲುಗಳು ಇರುತ್ತವೆ. ಕೂದಲ ಬೆಳವಣಿಗೆ ಅನ್ನೋದು ಪರಂಪರಾಗತವಾಗಿ ಬರುವುದು ಆಗಿರುತ್ತದೆ. ಕೆಲವು ಪೋಷಕರಿಗೆ ತಮ್ಮ ಮಗುವಿನ ಕೂದಲು ಬೇಗನೆ ಬೆಳಯಲಿ ಎಂಬ ಅಪೇಕ್ಷಿಸುತ್ತಾರೆ. ಮಗುವಿನ ಕೂದಲು ವೇಗವಾಗಿ,ಧೃಡವಾಗಿ,ದಟ್ಟವಾಗಿ ಬೆಳೆಯಲು ಈ ೬ ಉಪಾಯಗಳನ್ನು ಬಳಸಿ:

೧. ತೈಲ ಮಸಾಜ್

ನಿಮ್ಮ ಮಗುವಿನ ನೆತ್ತಿಗೆ ಎಣ್ಣೆಯನ್ನು ಹಚ್ಚುವುದು ತುಂಬಾ ಮುಖ್ಯ. ಮೃದುವಾಗಿ ಮಸಾಜ್ ಮಾಡುವ ಮೂಲಕ ರಕ್ತಸಂಚಾರ ಕೂಡ ವೃದ್ಧಿಸುತ್ತದೆ. ಎಣ್ಣೆ ಹಚ್ಚುವುದು ಕೇವಲ ನಿಮ್ಮ ಮಗುವಿನ ಕೂದಲುಗಳನ್ನು ಪೋಷಿಸುವುದಲ್ಲದೆ, ನಿಮ್ಮ ಮಗುವಿನ ನೆತ್ತಿ ಯಾವಾಗಲು ತೇವಾಂಶದಿಂದ ಕೂಡಿರುವಂತೆ ಮಾಡಿ ಕೆರತ ಅಥವಾ ಒಟ್ಟು ಆಗುವುದನ್ನು ನಿಲ್ಲಿಸುತ್ತದೆ. ನಿಮ್ಮ ಮಗುವಿನ ತಲೆಗೆ ನೀವು ವಿಧವಾದ ತೈಲಗಳನ್ನು ಬಳಸಿ, ಅವುಗಳಿಂದ ಆದ ಬದಲಾವಣೆಗಳನ್ನು ಗಮನಿಸಿ, ಯಾವುದು ಸೂಕ್ತವೆನಿಸುತ್ತದೋ ಅದನ್ನು ಮುಂದುವರೆಸಿ. ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ನೆಲ್ಲಿ ಎಣ್ಣೆ, ಸಾಸಿವೆ ಎಣ್ಣೆ, ಆಯುರ್ವೇದಿಕ್ ತೈಲಗಳು, ಆಲಿವ್ ಎಣ್ಣೆ, ಹರಳೆಣ್ಣೆ ಹಾಗು ಇನ್ನೂ ಬಹಳಷ್ಟು ಆಯ್ಕೆಗಳು ಇವೆ.

ಇದಲ್ಲದೇ, ನೀವು ಇವುಗಳ ಮಿಶ್ರಣವನ್ನು ಕೂಡ ಪ್ರಯೋಗಿಸಬಹುದು. ತೆಂಗಿನ ಎಣ್ಣೆ ಹಾಗು ಹರಳೆಣ್ಣೆ ಎರಡನ್ನು ಬೆರೆಸಿ, ಅದನ್ನು ಮಸಾಜ್ ಮಾಡುತ್ತಾ ನಿಮ್ಮ ಮಗುವಿನ ತಲೆಗೆ ಲೇಪಿಸಿ. ಇದನ್ನು ರಾತ್ರಿ ಮಾಡಿಬಿಟ್ಟು, ಮಗುವನ್ನು ನಿದ್ರೆಗೆ ಕಳಿಸಿ. ಅದು ಬೆಳಿಗ್ಗೆಯವರೆಗೂ ಹಾಗೆ ಇರಲಿ.

ಉಳಿದವರು, ಮಹಾಭ್ರಿಂಗರಾಜ್ ತೈಲ ಹಾಗು ಬೇವು ಎರಡನ್ನು ಸಮಾನವಾದ ಪ್ರಮಾಣದಲ್ಲಿ ಬೆರೆಸಿ, ನಿಮ್ಮ ಮಗುವಿನ ತಲೆಗೆ ದಿನ ಬಿಟ್ಟು ದಿನ ಹಚ್ಚಿ.

ಸ್ವಲ್ಪ ಅಕ್ಕಿ ಕಾಳುಗಳು,೪-೫ ಮೆಣೆಸುಗಳನ್ನು ತೆಂಗಿನ ಎಣ್ಣೆಗೆ ಬೆರೆಸಿ ಸ್ವಲ್ಪ ಬಿಸಿ ಮಾಡಿ. ಅದು ಸ್ವಲ್ಪ ತಣ್ಣಗಾದಮೇಲೆ ಉಪಯೋಗಿಸಿ.ಇದು ನಿಮ್ಮ ಮಗುವಿನ ಕೂದಲ ಬೆಳವಣಿಗೆಯನ್ನ ಪುಷ್ಟೀಕರಿಸುತ್ತದೆ.

೨. ಆಹಾರ ಪದ್ದತಿ

ಪೋಷಕಾಂಶಗಳು ನಿಮ್ಮ ಮಗುವಿನ  ಅಂಗಾಂಗ ಬೆಳವಣಿಗೆ ಅಷ್ಟೇ ಅಲ್ಲದೆ ಕೂದಲು ಬೆಳವಣಿಗೆಯಲ್ಲೂ ಸಹಕಾರಿ. ನಿಮ್ಮ ಮಗುವಿನ ಆಹಾರದಲ್ಲಿ ಬೇಕಾದಷ್ಟು ವಿಟಮಿನ್ ಡಿ ಇದೆಯಾ ನೋಡಿಕೊಳ್ಳಿ. ಜಲ್ದರು ಹಣ್ಣು, ಕುಂಬಳಕಾಯಿ, ಸಾಲ್ಮನ್ ಮೀನು, ಕ್ಯಾರಟ್, ಬಾದಾಮಿ, ಗೋಡಂಬಿ, ಮೊಟ್ಟೆಗಳು, ಆಕ್ರೋಡು (Walnut) ಇವೆಲ್ಲವೂ ನಿಮ್ಮ ಮಗುವಿನ ಆಹಾರದಲ್ಲಿ ಒಳಗೊಂಡಿರಬೇಕು. ವಿಟಮಿನ್ b12 ಹಾಗು ವಿಟಮಿನ್ E ಹೆಚ್ಚಾಗಿರುವ ಪದಾರ್ಥಗಳು ನಿಮ್ಮ ಮಗುವಿಗೆ ನೀಡಿ. ಪ್ರತಿದಿನ ಸ್ವಲ್ಪ ಖರಜೂರ ಹಾಗು ೨-೩ ಬಾದಮಿಗಳನ್ನು ಅವರಿಗೆ ನೀಡಿದ್ದಲ್ಲಿ, ಕೂದಲ ಬೆಳವಣಿಗೆ ಹೆಚ್ಚುತ್ತದೆ.

೩. ಶಾಂಪೂ ಹಾಗು ಕಂಡೀಶನರ್ ಗಳು

ನಿಮ್ಮ ಮಗುವಿನ ತಲೆಗೆ, ಯಾವಾಗಲು ಮೃದುವಾದ ಶಾಂಪೂ ಅಥವಾ ಕಂಡೀಶನರ್ ಉಪಯೋಗಿಸಿ. ನೀವು ತುಂಬಾ ದಿನಗಳಿಂದ ಒಂದೇ ಶಾಂಪೂ ಅನ್ನು ಉಪಯೋಗಿಸುತ್ತಿದರೆ, ಸೋಪ್ ಗೆ ಬದಲಾಯಿಸಿ. ಸೋಪ್ ಅನ್ನು ಸ್ವಲ್ಪ ದಿನ ಬಳಸಿ ನಂತರ ಪುನಃ ಶಾಂಪೂ ಬಳಸಿ. ಹೀಗೆ ಅವುಗಳನ್ನು ಬದಲಿಸುತ್ತ ಇರಿ. ನಿಮ್ಮ ಮಗುವಿನ ತಲೆಯ ಮೇಲೆ ಸ್ವಲ್ಪ ಬಿಸಿಯಾದ ಎಣ್ಣೆಯನ್ನು ಲೇಪಿಸಿ ಹಾಗು ಪ್ರತಿದಿನ ಶಾಂಪೂ ಅಥವಾ ಕಂಡೀಶನರ್ ಉಪಯೋಗಿಸುವುದು ನಿಲ್ಲಿಸಿ.

ಮಗುವಿನ ಕೂದಲಿನ ವಿನ್ಯಾಸ ಬದಲಾಗುವ ಹವಾಮಾನದಿಂದ ಹಾಳಾಗದಿರಲು ಹಾಗು ಅವುಗಳನ್ನು ಬಿಡಿಸುವುದಕ್ಕೆ ಸಹಾಯವಾಗಲು ಕಂಡೀಶನರ್ ಬಳಸುವುದು ತುಂಬಾ ಮುಖ್ಯ. ನಿಮ್ಮ ಮಗುವಿನ ಕೂದಲು ಗುಂಗರು ಅಥವಾ ಒಣ ಇದ್ದಲ್ಲಿ, ನೀವು ಮನೆಯಲ್ಲೇ ತಯಾರಿಸಿದ ಒಂದು ಮಿಶ್ರಣದೊಂದಿಗೆ ನಿಮ್ಮ ಮಗುವಿನ ಕೂದಲ ರೇಷ್ಮೆಯಂತೆ ಮೃದು ಹಾಗು ಕಲ್ಲಿನಂತೆ ಗಟ್ಟಿಯಾಗಿಸಬಹುದು.

ಜೇನುತುಪ್ಪ ಹಾಗು ಎಕ್ಸ್ಟ್ರಾ-ವರ್ಜಿನ್ ಆಲಿವ್ ಎಣ್ಣೆಯ ಮಿಶ್ರಣವನ್ನು ನಿಮ್ಮ ಮಗುವಿನ ತಲೆಗೆ ಹಚ್ಚಿ ೧೫ ನಿಮಿಷಗಳ ಕಾಲ ಹಾಗೆ ಬಿಟ್ಟರೆ ಅದು ತುಂಬಾನೆ ಉಪಕಾರಿ.

ಆವಕಾಡೊದ ಸಿಪ್ಪೆ, ಒಂದು ಚಮಚ ಜೇನುತುಪ್ಪ ಹಾಗು ಸ್ವಲ್ಪ ತೆಂಗಿನ ಹಾಲನ್ನು ಬೆರೆಸಿದ ಮಿಶ್ರಣವು ನಿಮ್ಮ ಮಗುವಿಗೆ ತಲೆಯ ಬುಡದವರೆಗಿನ ಪೋಷಣೆ ನೀಡುತ್ತದೆ. ಈ ಮಿಶ್ರಣವನ್ನು ಎಂದಿನಂತೆ ಮಗುವಿನ ತಲೆಗೆ ಹಚ್ಚಿ, ೧೫ ನಿಮಿಷಗಳ ನಂತರ ಶಾಂಪೂವಿನಿಂದ ತೊಳೆಯಿರಿ.

ಉಳಿದಂತೆ ನೀವು ನೈಸರ್ಗಿಕವಾಗಿ ಬಳಸಬಹುದಾದಂತ ಕಂಡೀಶನರ್ ಅಂದರೆ ಅವು ಮೊಸರು, ದಾಸವಾಳ ಹಾಗು ಮೊಟ್ಟೆಯ ಬಿಳಿಭಾಗ.

೪. ಬಿಡಿಸುವುದು ಹಾಗು ಬಾಚುವುದು

ಮಗುವಿನ ಕೂದಲಗಳು ತುಂಬಾ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತವೆ. ನೀವು ಪ್ರತಿದಿನ ಸರಿಯಾಗಿ ಬಾಚದೇ ಇದ್ದಾರೆ, ಬಿಡಿಸಲು ಆಗದಂತ ಗಂಟುಗಳು ಆಗುತ್ತವೆ. ಇವುಗಳನ್ನು ಬಿಡಿಸಲು ನೀವು ಕೂದಳನ್ನೇ ಕತ್ತರಿಸಬೇಕಾಗಿ ಆಗುತ್ತದೆ. ಇದು ಆಗದಂತೆ ನೋಡಿಕೊಳ್ಳಲು, ನಿಮ್ಮ ಮಗುವಿಗೆ ಪ್ರತಿದಿನ ಕೂದಲನ್ನು ತೊಳೆಯುವುದನ್ನು ನಿಲ್ಲಿಸಿ. ಹೀಗೆ ಮಾಡದಿದ್ದಲ್ಲಿ ನಿಮ್ಮ ಮಗುವಿನ ಕೂದಲು ಒರಟು ಆಗುತ್ತದೆ ಹಾಗು ಒಣಗುತ್ತವೆ. ಇದರಿಂದ ಕೂದಲು ಸಿಕ್ಕಿ ಹಾಕಿಕೊಳ್ಳುವುದು ಇನ್ನೂ ಹೆಚ್ಚುತ್ತದೆ. ಹಾಗು ನಿಮ್ಮ ಮಗುವಿನ ನೆತ್ತಿಗೆ ಹಾಗು ಮೃದು ಕೂದಲಿಗೆ ಬೇಕಾದ  ನೆತ್ತಿಯ ಮೇಲಿನ ನೈಸರ್ಗಿಕವಾದ ಎಣ್ಣೆಯನ್ನು ಸಹಾ ಹೋಗಲಾಡಿಸುತ್ತದೆ.

ಗುಂಗರು ಕೂದಲು ತೊಂದರೆಯನ್ನು ಉಂಟು ಮಾಡಬಹುದು. ಗುಂಗುರು ಕೂದಲ ಗಂಟುಗಳನ್ನು ಹೋಗಲಾಡಿಸಲು ನಿಮ್ಮ ಮಗುವಿನ ತಲೆಯನ್ನು ಪ್ರತಿದಿನ ಬಾಚಿ.

ದಿನಕ್ಕೆ ೨ ಬಾರಿ ನಿಮ್ಮ ಮಗುವಿನ ತಲೆ ಬಾಚಿ. ಇದು ರಕ್ತಸಂಚಾರ ವೃದ್ಧಿ ಮಾಡುವುದಲ್ಲದೆ, ಕೂದಲುಗಳನ್ನು ಬುಡದಿಂದಲೇ ಗಟ್ಟಿ ಮಾಡುತ್ತವೆ.

೫ . ಜೆಲಟಿನ್ ಬಳಸಿ

ಬಹಳಷ್ಟು ಜನರಿಗೆ ತಿಳಿಯದ ವಿಷಯ ಅಂದರೆ ಅದು, ಜೆಲಟಿನ್ ನಿಮ್ಮ ಮಗುವಿನ ಕೂದಲಿನ ಬೆಳವಣಿಗೆಗೆ ಸಹಾಯಕಾರಿ ಎಂದು. ಇದು ಅಮೈನೊ ಆಸಿಡ್ - ಗ್ಲೈಸಿನ್ ಹಾಗು ಪ್ರೋಲಿನ್. ಇದು ವಯಸ್ಕರರ ದಿನನಿತ್ಯದ ಆಹಾರದಲ್ಲಿ ಲಭ್ಯವಿರುತ್ತದೆ, ಆದರೆ ಶಿಶುಗಳು ದ್ರವ್ಯ ರೂಪದ ಕಾರ್ಬೋಹೈಡ್ರೇಟ್ ಗಳ ಮೇಲೆ ಅವಲಂಬಿತರಾಗಿರುತ್ತಾರೆ, ಆದರಿಂದ ಇವುಗಳು ಹೆಚ್ಚಾಗಿ ಅವರಿಗೆ ಲಭಿಸುವುದಿಲ್ಲ. ಈ ಅಮೈನೊ ಆಸಿಡ್ ಗಳು ಕೇವಲ ನಿಮ್ಮ ಮಗುವಿನ ಕೂದಲ ಬೆಳವಣಿಗೆಯಲ್ಲಿ ಸಹಕಾರಿ ಆಗದೆ, ನಿಮ್ಮ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹಾ ವೃದ್ಧಿ ಮಾಡುತ್ತವೆ.

ನಿಮ್ಮ ಮಗುವಿಗೆ ಜೆಲಟಿನ್ ನೀಡಲು ಮೊದಲು ಬಿಸಿ ನೀರು ಹಾಗು ತಣ್ಣೀರನ್ನು ಸಮನಾಗಿ ಬೆರೆಸಿ, ನಂತರ ಜೆಲಟಿನ್ ಬೆರೆಸಿ, ಅವುಗಳೊಂದಿಗೆ ಒಂದು ಚಮಚ ಜೇನುತುಪ್ಪ ಹಾಗು ಒಂದು ಚಮಚ ವಿನೆಗರ್ ಬೆರೆಸಿ. ಅವುಗಳನ್ನು ಚೆನ್ನಾಗಿ ಕಲಿಸಿ, ಆನಂತರ ಮಗುವಿನ ತಲೆಗೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ನಂತರ ಶಾಂಪೂ ಅಥವಾ ಸೋಪ್ ಇಂದ ನಿಮ್ಮ ಮಗುವಿನ ತಲೆಯನ್ನು ತೊಳೆಯಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon