Link copied!
Sign in / Sign up
4
Shares

ನಿಮ್ಮ ಮಗುವಿನ ಬೆಳವಣಿಗೆ ಸರಿಯಾಗಿ ಆಗುತ್ತಿದೆಯೇ?

ಮಕ್ಕಳಲ್ಲಿ ಬೆಳವಣಿಗೆಯ ತೊಂದರೆ ಕಾಡುವುದು ಸಾಮಾನ್ಯ. ಆದರೆ ಅದರ ಬಗ್ಗೆ ಹೆಚ್ಚು ಯಾರು ಗಮನಿಸುವುದಿಲ್ಲ, ಅಥವಾ ಕೆಲವು ತೊಂದರೆಗಳು ಇದ್ದರು ತಿಳಿಯುವುದಿಲ್ಲ. ಕೆಲವು ತೊಂದರೆಗಳು ಮಕ್ಕಳಲ್ಲಿ ಮಾನಸಿಕವಾಗಿಯೂ ಕಾಡಬಹುದು. ಮಗುವು ಮೊದಲ ವರ್ಷದಲ್ಲಿ ತುಂಬಾ ಬೇಗನೆ ಬೆಳೆಯುತ್ತದೆ, ಅಂದರೆ, ಸುಮಾರು ೨೫ ಸೇಂ. ಮೀ. ನಷ್ಟು ಬೆಳೆದಿರುತ್ತದೆ. ಮುಂದಿನ ಕೆಲವು ವರ್ಷದ ವರೆಗೆ ಈ ಬೆಳವಣಿಗೆ ಕ್ರಮೇಣ ಕಡಿಮೆಯಾಗುತ್ತದೆ. ನಂತರ ಮಗುವಿಗೆ ೪ ವರ್ಷ ತುಂಬಿದ ನಂತರ ನಿರಂತರ ಬೆಳವಣಿಗೆಯನ್ನು ಮುಂದುವರೆಸುತ್ತದೆ.

ಮಗು ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ಹೇಗೆ ಕಂಡುಹಿಡಿಯುವುದು?

೧.೧ವರ್ಷದ ಬಟ್ಟೆ, ಮಗುವಿಗೆ ೧ ೧/೨(ಒಂದೂವರೆ) ಅಥವಾ ೨ ವರ್ಷವಾದರೂ ಆರಾಮವಾಗಿ ಧರಿಸಬಹುದು

೨.ಮಗು ಅವನ/ಳ ಸಹಪಾಠಿಗಳಿಗಿಂತ ಕುಳ್ಳನಾಗಿದ್ದಾನೆ/ಳೆ.

೩.ಮಗುವು ಕಡಿಮೆ ಚಟುವಟಿಕೆ ಹೊಂದಿದೆ.

೪.ಹೆಚ್ಚು ಸ್ನೇಹಿತರ ಜೊತೆ ಬೆರೆಯುವುದಿಲ್ಲ, ಕೀಳಿರಿಮೆಯನ್ನು ಹೊಂದಿರುವುದು.

ಮಗು ಬೆಳೆಯದೆ ಇರಲು ಕಾರಣಗಳೇನು?

ಮಗು ಬೆಳವಣಿಗೆಯಲ್ಲಿ ಕುಸಿತ ಕಾಣಲು, ಪ್ರಮುಖ ಕಾರಣ, ಪೌಷ್ಟಿಕ ಆಹಾರದ ಕೊರತೆ. ಜೊತೆಗೆ ಪ್ರೊಟೀನ್ ಕೊರತೆ, ಜೀನು ಸಂಬಂಧಿ ಕಾರಣ, ಹಾರ್ಮೋನುಗಳ ಅಸಮರ್ಪಕ ಅಥವಾ ಅದರ ಕೊರತೆ, ವಿಟಮಿನ್ ಗಳ ಕೊರತೆ. ಬೆಳವಣಿಗೆಯ ಹಾರ್ಮೋನು ಕೊರತೆಯು ಬೆಳವಣಿಗೆಯನ್ನು ಕುಂಠಿತಗೊಳಿಸಲು ಮುಖ್ಯ ಕಾರಣ. ಒತ್ತಡ ಕೂಡ ಬೆಳವಣಿಗೆ ಕುಂಠಿತಗೊಳ್ಳಲು ಕಾರಣವಾಗುತ್ತದೆ. ಕೆಲವೊಮ್ಮೆ ಥೈರಾಯಿಡ್ ಸಮಸ್ಯೆ ಇದ್ದರು ಮಕ್ಕಳಲ್ಲಿ ಬೆಳವಣಿಗೆ ಕಡಿಮೆಯಾಗುತ್ತದೆ. ತಾಯಿಗೆ ಥೈರಾಯಿಡ್ ಸಮಸ್ಯೆ ಇದ್ದರೆ, ಮಗು ಗರ್ಭದಲ್ಲಿ ಬೆಳವಣಿಗೆಯ ಸಮಸ್ಯೆಯನ್ನು ಎದುರಿಸಬೇಕಾದೀತು.

ಪರೀಕ್ಷೆ

ಮಗು ಜನಿಸಿದ ನಾಲ್ಕು ಅಥವಾ ಐದನೇ ದಿನದಂದು ಮಗುವಿನ ಪಾದದಿಂದ ರಕ್ತ ತೆಗೆದುಕೊಂಡು, ಅದರ ಮಟ್ಟ ಎಷ್ಟಿದೆ ಎಂಬುದನ್ನು ಪರೀಕ್ಷಿಸುತ್ತಾರೆ.

ಚಿಕಿತ್ಸೆ

ಪೌಷ್ಟಿಕ ಆಹಾರ ಸೇವನೆ, ವ್ಯಾಯಾಮ , ಥೈರಾಯಿಡ್ ಸಮಸ್ಯೆಗಳ ತಪಾಸಣೆ, ಜೊತೆಗೆ ಬೇರೆ ಯಾವುದಾದರು ಕಾಯಿಲೆ ಇದೆಯಾ ಎಂದು ಪರೀಕ್ಷಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಇದರಲ್ಲಿ ಯಾವುದೇ ಪ್ರಯೋಜನವಾಗದಿದ್ದರೆ, ಬೆಳೆಯುವ ಹಾರ್ಮೋನುಗಳಲ್ಲಿ ಕೊರತೆ ಇದೆಯಾ ಎಂಬುದನ್ನು ನೋಡಿ, ಅದರಲ್ಲಿ ತೊಂದರೆ ಇದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುತ್ತಾರೆ.

ಸಲಹೆಗಳು

ತಾಯಿಗೆ ಥೈರಾಯಿಡ್ ಸಮಸ್ಯೆ ಇದ್ದರೆ, ಗರ್ಭನಿಲ್ಲುವುದು ಸ್ವಲ್ಪ ಕಷ್ಟ, ವೈದ್ಯರ ಸಲಹೆ ಪಡೆದು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಗರ್ಭಧರಿಸಬಹುದು.

ತಾಯಿಗೆ ಥೈರಾಯಿಡ್ ಸಮಸ್ಯೆ ಇದ್ದರೆ, ಮಗುವಿಗೆ ಇದು ಬರುವ ಸಾಧ್ಯತೆ ಇದೆ, ಆದರೆ ಮಗುವಿಗೆ ಇದು ತಗುಲದಂತೆ ಮಾಡಲು ವೈದ್ಯರನ್ನು ಭೇಟಿ ಮಾಡಿ. ಏಕೆಂದರೆ ಮಗುವಿಗೆ ಈ ಸಮಸ್ಯೆ ಬಂದರೆ ಗರ್ಭದಲ್ಲಿ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ.

ಆದ್ದರಿಂದ ತಾಯಿಯು ಹೆಚ್ಚು ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು, ವ್ಯಾಯಾಮ ಮಾಡಬೇಕು, ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon