Link copied!
Sign in / Sign up
10
Shares

ನಿಮ್ಮ ಮಗುವಿಗೆ ರಾಗಿಯಿಂದಾಗುವ ೨೫ ಅರೋಗ್ಯ ಪ್ರಯೋಜನಗಳು (25 Health Benefits Of Ragi For Your Baby in Kannada)

ನೀವು ನಿಮ್ಮ ಮಗುವಿಗೆ ಚಿಕ್ಕ ವಯಸ್ಸಿನಲ್ಲಿ ಏನು ತಿನ್ನಿಸುತ್ತಿರೋ ಅದುವೇ ಅವರ ನಂತರದ ವಯಸ್ಸಿನಲ್ಲಿ ಆಹಾರ ಅಭ್ಯಾಸವಾಗುತ್ತದೆ. ಇದು ನಿಮ್ಮ ಮಗುವಿನ ಭವಿಷ್ಯತ್ತಿನ ಜೇವನಶೈಲಿಯಾಗಿ ಪರಿಣಮಿಸುತ್ತದೆ. ನಿಮ್ಮ ಮಗು ಆರೋಗ್ಯಕರವಾಗಿ ಮತ್ತು ಬಲಿಷ್ಠವಾಗಿ ಬೆಳೆಯಲು, ಆರೋಗ್ಯಕರ ಆಹಾರದ ಅಗತ್ಯವಿದೆ. ಆ ರೀತಿಯ ಆರೋಗ್ಯಕರ ಆಹಾರಗಳು ಯಾವುವು ಎಂದು ನೀವು ಯೋಚಿಸುತ್ತಿದ್ದರೆ, ರಾಗಿ ಖಂಡಿತವಾಗಿಯೂ ಅದರಲ್ಲಿ ಒಂದು. ರಾಗಿಯ ಪೌಷ್ಟಿಕತೆ ಹೆಚ್ಚಿದೆ. ಹಾಗೆಯೆ ಅದರ ಅರೋಗ್ಯ ಲಾಭಗಳು ಸಹ. ಇದು ನಿಶ್ಚಯವಾಗಿ ಆರೋಗ್ಯಕರ ಧಾನ್ಯಗಳಲ್ಲಿ ಒಂದು. ಇದುನ್ನು ನಿರಾತಂಕವಾಗಿ ನಿಮ್ಮ ಮಗುವಿನ ಆಹಾರದಲ್ಲಿ ಸೇರಿಸಬಹುದು. ಆದರೆ ರಾಗಿಯ ಪ್ರಯೋಜನಗಳು ಮತ್ತು ಸಂಭವನೀಯ ಅಡ್ಡಪರಿಣಾಮಗಳೇನು? ಅದೆಲ್ಲದರ ಮಾಹಿತಿ ಈ ಲೇಖನದಲ್ಲಿದೆ. 

ಪರಿವಿಡಿ:

೧. ರಾಗಿ ಎಂದರೇನು? (What Is Ragi? in Kannada)

೨. ರಾಗಿಯ ಪೌಷ್ಟಿಕತೆ ಸತ್ಯಾಂಶ (Ragi Nutritional Facts in Kannada)

೩. ನಿಮ್ಮ ಮಗುವಿಗೆ ರಾಗಿಯನ್ನು ಹೇಗೆ ಮತ್ತು ಯಾವಾಗ ನೀಡಬೇಕು? (How And When To Give Ragi To Your Baby? in Kannada)

೪. ರಾಗಿಯ ೨೫ ಅದ್ಭುತ ಅರೋಗ್ಯ ಲಾಭಗಳು (25 Amazing Health Benefits Of Ragi in Kannada)

೫. ಮಗುವಿನಲ್ಲಿ ರಾಗಿಯಿಂದ ಆಗಬಹುದಾದ ಅಡ್ಡಪರಿಣಾಮಗಳು (Side Effects Of Ragi For Babies in Kannada)

೧. ರಾಗಿ ಎಂದರೇನು? (What Is Ragi? in Kannada) 

ರಾಗಿ (ಆಂಗ್ಲದಲ್ಲಿ "ಫಿಂಗರ್ ಮಿಲ್ಲೆಟ್" ಮತ್ತು ಮರಾಠಿಯಲ್ಲಿ "ಭಕ್ರಿ"), ಪ್ರೋಟೀನ್ಸ್, ಐರನ್ ಮತ್ತು ಕ್ಯಾಲ್ಸಿಯಂ ಅಂತಹ ಅಗತ್ಯ ಪೌಷ್ಟಕಾಂಶಗಳನ್ನು ಹೊಂದಿದ್ದು, ನಿಮ್ಮ ಮಗುವಿನ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಅದರಲ್ಲಿ ಫೆನಿಲಲಾನಿನ್, ಮೆಥಿಯೋನಿನ್, ಐಸೋಲುಸಿನ್, ಲ್ಯೂಸಿನ್ ನಂತಹ ಅಮೈನೊ ಆಮ್ಲಗಳಿವೆ. ರಾಗಿಯ ವೈಜ್ಞಾನಿಕ ಹೆಸರು ಎಲುಸೈನ್ ಕೊರಕನ. 

ರಾಗಿ ವಾರ್ಷಿಕ ಮೂಲಿಕೆಯ ಸಸ್ಯ ಸಮೂಹಕ್ಕೆ ಸೇರಿದ ಏಕದಳ ಬೆಳೆಯಾಗಿದೆ. ಇದನ್ನು ಶಾಶಕ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಬೆಳಸಬಹುದಾಗಿದ್ದು, ಇದು ಬರಪೀಡಿತ ಪ್ರದೇಶದಲ್ಲಿ ಸಹ ಬೆಳೆಯಬಹುದು. ಭಾರತ ರಾಗಿಯ ಪ್ರಮುಖ ಉತ್ಪಾದಕ. 

೨. ರಾಗಿಯ ಪೌಷ್ಟಿಕತೆ ಸತ್ಯಾಂಶ (Ragi Nutritional Facts in Kannada):

ರಾಗಿಯ ಪೌಷ್ಟಿಕ ಮೌಲ್ಯ ಉನ್ನತವಾಗಿದ್ದು, ಅದರ ಅರೋಗ್ಯ ಲಾಭಗಳು ಸಹ ಹೆಚ್ಚಿವೆ. ಮಕ್ಕಳಿಗೆ ರಾಗಿ ಅತ್ಯಂತ ಪೌಷ್ಟಿಕ ಧಾನ್ಯ. ಅದರ ಬದಿನೋಟ ಇಂತಿದೆ:

೩. ನಿಮ್ಮ ಮಗುವಿಗೆ ರಾಗಿಯನ್ನು ಹೇಗೆ ಮತ್ತು ಯಾವಾಗ ನೀಡಬೇಕು? (How And When To Give Ragi To Your Baby? in Kannada)

 

ರಾಗಿ ಒಂದು ಬಹುಮುಖ ಧಾನ್ಯ. ನಿಮ್ಮ ಮಗುವಿಗೆ ರಾಗಿಯನ್ನು ರಾಗಿ ಹಿಟ್ಟಿನಿಂದ ತಯಾರಿಸಿದ ರಾಗಿ ಗಂಜಿ ರೂಪದಲ್ಲಿ ನೀಡಬಹುದು. ರಾಗಿ ಗಂಜಿಯನ್ನು ಮೊಸರು, ಹಣ್ಣಿನ ರಸ, ತರಕಾರಿಯ ಸೂಪ್, ಮಜ್ಜಿಗೆ, ಇತ್ಯಾದಿಗಳ ಜೊತೆ ಉಣಬಡಿಸಬಹುದು. ಇದೆ ರೀತಿ, ರಾಗಿ ಗಂಜಿ ಜೊತೆ ಹಲವು ಜೊತೆಪರಿಕರಗಳನ್ನು ನೀವು ಪ್ರಯತ್ನಿಸಬಹುದು. 

ರಾಗಿ ಜೀರಂವಾಗಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುವ ಕಾರಣ, ರಾಗಿಯನ್ನು ನಿಮ್ಮ ಮಗುವಿಗೆ ಬೆಳಿಗ್ಗೆ ಅಥವಾ ಮಧ್ಯಾಹ್ನ ನೀಡುವುದು ಸೂಕ್ತ. ಹೇಗೆ ಮಾಡಿದ್ದೇ ಆದಲ್ಲಿ, ನಿಮ್ಮ ಮಗುವಿನ ಜೀರ್ಣಾಂಗಗಳಲ್ಲಿ ರಾಗಿ ಸಂಪೂರ್ಣವಾಗಿ ಜೀರ್ಣವಾಗುತ್ತದೆ. ರಾಗಿ ದೇಹದ ಮೇಲೆ ತಂಪಾಗುವ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಅಥವಾ ನಿಮ್ಮ ಮಗು ಶೀತದಿಂದ ಬಳಲುತ್ತಿದ್ದರೆ, ರಾಗಿ ಸೇವಿಸದೇ ಇರುವುದು ಸೂಕ್ತ. 

[Back To Top]

೪. ರಾಗಿಯ ೨೫ ಅದ್ಭುತ ಅರೋಗ್ಯ ಲಾಭಗಳು (25 Amazing Health Benefits Of Ragi in Kannada):

೧. ಮೂಳೆಗಳಿಗೆ ಒಳ್ಳೆಯದು:ರಾಗಿಯ ಪ್ರಮುಖ ಪ್ರಯೋಜನಗಳಲ್ಲಿ ಒಂದು - ನಿಮ್ಮ ಮಗುವಿನ ಬೆಳೆಯುವ ಮೂಳೆಗಳಿಗೆ ಒಳಿತು ಮಾಡುವುದು. ರಾಗಿ ಹಾಲಿನ ಉತ್ಪನ್ನವಲ್ಲದಿದ್ದರೂ, ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಹೊಂದಿದೆ. ಇದು ನಿಮ್ಮ ಮಗುವಿನ ಮೂಳೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮತ್ತು ಮೂಳೆಮುರಿತದಂತಹ ತೊಂದರೆಯನ್ನು ದೂರವಿಡುತ್ತದೆ. ಅದರೊಂದಿಗೆ, ರಾಗಿ ಕಬ್ಬಿಣದ ಪೂರಕದ ಅಗತ್ಯತೆಯನ್ನು ದೂರವಿಡುತ್ತದೆ.  

೨. ಹಲ್ಲುಗಳಿಗೆ ಉತ್ತಮ: ರಾಗಿಯಲ್ಲಿರುವ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಹಲ್ಲಿನ ಬೆಳವಣಿಗೆ ಮತ್ತು ನಿಯಂತ್ರದಲ್ಲಿ ಸಹಾಯ ಮಾಡುತ್ತದೆ. ಇದು ಮೂಳೆ ಮತ್ತು ಹಲ್ಲುಗಳನ್ನು ದುರ್ಬಲಗೊಳಿಸುವ ಅಸ್ಥಿರಂಧ್ರತೆಯಂತಹ ಸಮಸ್ಯೆಯನ್ನು ದೂರವಿಡುತ್ತದೆ. ಪೋಷಣಶಾಸ್ತ್ರಜ್ಞರ ಪ್ರಕಾರ, ನಿಮ್ಮ ರಾಜಿಯಾನ್ನಿ ರಾಗಿ ಗಂಜಿಯ ರೂಪದಲ್ಲಿ ನೀಡುವುದು ಒಳಿತು. 

೩. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ: ರಾಗಿಯಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ, ನಿಮ್ಮ ಮಗುವಿನ ಹೊಟ್ಟೆ ತುಂಬುವಂತೆ ಮಾಡುತ್ತದೆ. 

೪. ಸ್ಥೂಲಕಾಯತೆಯಿಂದ ದೂರವಿರುವಂತೆ ಮಾಡುತ್ತದೆ: ರಾಗಿಯಲ್ಲಿರುವ ಆರೋಗ್ಯಕರ ಅಮೈನೊ ಆಮ್ಲಗಳು ಅಧಿಕವಾಗಿರುವ ಕೊಬ್ಬು ಕಿತ್ತೊಗೆದು, ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಯಕೃತ್ತಿನ ಸುತ್ತದ ಕೊಬ್ಬನ್ನು ನಿವಾರಿಸುವುದರಿಂದ, ನೈಸರ್ಗಿಕವಾದ ನಿರ್ವೀಷೀಕಾರಕವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇದರಿಂದ ನಿಮ್ಮ ಮಗುವಿನಲ್ಲಿ ಸ್ಥೂಲಕಾಯತೆ ಸಮಸ್ಯೆ ಕಾಡದಿರುವಂತೆ ಮಾಡುತ್ತದೆ. 

೫.  ಅನಿಮಿಯಾ ತಡೆಗಟ್ಟುತ್ತದೆ: ಮಗುವಿನ ಆಹಾರದಲ್ಲಿ ಅಗತ್ಯವಿರುವ ಎಲ್ಲ ಪೌಷ್ಠಿಕತೆಗಳು ಇಲ್ಲದಿದ್ದರೆ, ಮಕ್ಕಳಲ್ಲಿ ಅನಿಮಿಯಾ ಸಮಸ್ಯೆ ಕಾಡುವುದು ಸಹಜ. ಆದರೆ ರಾಗಿ ಇದನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ರಾಗಿಯಲ್ಲಿರುವ ಐರನ್ ಸಂಭವನೀಯ ಅನಿಮಿಯಾ ವನ್ನು ತಡೆಗಟ್ಟುತ್ತದೆ. 

೬. ಐರನ್ ಹೀರುವಿಕೆಯಲ್ಲಿ ಸಹಾಯ ಮಾಡುತ್ತದೆ: ರಾಗಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಮಟ್ಟದಲ್ಲಿರುತ್ತದೆ. ರಾಗಿ ಮೊಳಕೆ ಒಡೆದರೆ ಈ ಅಂಶ ಹೆಚ್ಚುತ್ತದೆ. ವಿಟಮಿನ್ ಸಿ ನಿಮ್ಮ ದೇಹದಲ್ಲಿ ಐರನ್ ಹೀರುವಿಕೆಯನ್ನು ಹೆಚ್ಚಿಸುವ ಗುಣಹೊಂದಿದೆ. ಇದರಿಂದ ಅನೀಮಿಯವನ್ನು ತಡೆಗಟ್ಟಬಹುದು. ಅಥವಾ ನಿಮ್ಮ ಮಗು ಈಗಾಗಲೇ ಅನಿಮಿಯಾಯಿಂದ ಬಳಲುತ್ತಿದ್ದರೆ ಇದರಿಂದ ಅದನ್ನು ಚಿಕಿತ್ಸಿಸಬಹುದು. 

೭. ಅಪೌಷ್ಟಿಕತೆ ತಡೆಗಟ್ಟುತ್ತದೆ: ನಿಮ್ಮ ಮಗು ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಕಗಳನ್ನು ಸೇವಿಸದೇ ಇದ್ದರೆ, ನಿಮ್ಮ ಮಗು ಅಪೌಷ್ಟಿಕತೆಯಿಂದ ಬಳಲಬಹುದು. ರಾಗಿಯ ಅರೋಗ್ಯ ಪ್ರಯೋಜನಗಳ ಮೂಲಕ ಇದನ್ನು ತಡೆಗಟ್ಟಬಹುದು. ರಾಗಿಯಲ್ಲಿ ಅಗತ್ಯವಿರುವ ಹೆಚ್ಚಿನ ಪೌಷ್ಠಿಕತೆಯಿದ್ದು, ಅದನ್ನು ನಿಯಮಿತವಾಗಿ ಸೇವಿಸಿದರೆ. ನಿಮ್ಮ ಮಗುವಿನ ಅಪೌಷ್ಟಿಕತೆಯನ್ನು ತಡೆಗಟ್ಟಬಹುದು. 

೮. ನಿದ್ರಾಹೀನತೆಯನ್ನು ನಿವಾರಿಸುತ್ತದೆ: ರಾಗಿ ಹೆಚ್ಚಿನ ಆಂಟಿಆಕ್ಸಿಡೆಂಟ್ ಗಳನ್ನು ಹೊಂದಿರುವ ಕಾರಣ ಅದು ತನ್ನದೇ ಆದ ಅರೋಗ್ಯ ಲಾಭಗಳನ್ನು ಹೊಂದಿದೆ. ಆಂಟಿಆಕ್ಸಿಡೆಂಟ್ಸ್ ಗಳು ನಿಮ್ಮ ಮಗುವಿನ ದೇಹವನ್ನು ನಿರಾಯಾಸಗೊಳಿಸಿ, ಒಳ್ಳೆಯ ನಿದ್ದೆಯನ್ನು ಮಾಡುವಂತೆ ಮಾಡುತ್ತದೆ. ರಾಗಿ ಹೆಚ್ಚಿನ ಕಾಲ ಹೊಟ್ಟೆ ತುಂಬಿರುವ ಭಾವನೆ ನೀಡುವುದರಿಂದ, ಮಗು ವೇಗವಾಗಿ ನಿದ್ರೆಗೆ ಜಾರಿ, ಒಳ್ಳೆಯ ನಿದ್ರೆಯನ್ನು ಮಾಡುತ್ತದೆ. 

 

೯. ತಲೆನೋವು ಮತ್ತು ಆತಂಕದಿಂದ ನಿವಾರಣೆ ನೀಡುತ್ತದೆ: ರಾಗಿಯ ಈ ಲಾಭ ಕೂಡಾ ರಾಗಿಯಲ್ಲಿರುವ ಆಂಟಿಆಕ್ಸಿಡೆಂಟ್ಸ್ ಗಳ ಕಾರಣದಿಂದ. ಮಕ್ಕಳಲ್ಲಿ ನಿದ್ರಾಹೀನತೆಯನ್ನು ನಿವಾರಿಸುವುದರೊಂದಲಿಗೆ, ಆತಂಕ ಮತ್ತು ತಲೆನೋವನ್ನೂ ನಿವಾರಿಸುತ್ತದೆ. 

೧೦. ಮಧುಮೇಹ ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ: ರಾಗಿಯಲ್ಲಿರುವ ನಾರಿನಂಶ ಮತ್ತು ಪೊಲಿಫೆನೋಲ್ ಅಂಶ ಮಧುಮೇಹ ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ. ರಾಗಿ ಹಿಟ್ಟಿನಿಂದ ಮಾಡಿರುವ ರಾಗಿ ಗಂಜಿ ಅಥವಾ ರಾಗಿ ರೊಟ್ಟಿ ಕೆಳಮಟ್ಟದ ಗಲಿಸಿಮಿಕ್ ಪ್ರತಿಕ್ರಿಯೆಯನ್ನು ಹೊಂದಿದ್ದು, ಮಧುಮೇಹ ಉಂಟಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. 

೧೧. ಮಧುಮೇಹವನ್ನು ನಿಯಂತ್ರಿಸುತ್ತದೆ: ನೀವು ಈಗಾಗಲೇ ಮಧುಮೇಹದ ರೋಗದಿಂದ ಬಳಲುತ್ತಿದ್ದರೆ, ರಾಗಿ ಖಂಡಿತವಾಗಿ ನಿಯಂತ್ರಿಸುತ್ತದೆ. ರಾಗಿಯಲ್ಲಿ ಕಡಿಮೆ ಗ್ಲಿಸೆಮಿಕ್ ಸೂಚಕವನ್ನು ಹೊಂದಿದ್ದು, ನಿಮ್ಮ ಆಹಾರದ ಕಡುಬಯಕೆಗಳನ್ನು ಕಡಿಮೆಗೊಳಿಸಿ, ನಿಮ್ಮ ದೇಹದ ಸಕ್ಕರೆ ಮಟ್ಟವನ್ನು ಸುರಕ್ಷಿತ ಮಟ್ಟದಲ್ಲಿರಿಸುತ್ತದೆ. 

[Back To Top]

೧೨. ನರಗಳ ರಚನೆ: ರಾಗಿ ಪೌಷ್ಟಿಕಾಂಶಕಗಳು ಪ್ರೋಟೀನ್ ಗಳನ್ನು ಹೊಂದಿದ್ದು, ನಿಮ್ಮ ಮಗುವಿನ ನರಗಳ ರಚನೆಯಲ್ಲಿ ಸಹಾಯಕವಾಗುತ್ತದೆ. ಪ್ರೋಟೀನ್ ಗಳು ನರಗಳ ರಚನೆಯಲ್ಲಿ ಪಾತ್ರನಿರ್ವಹಿಸಿ, ನಿಮ್ಮ ಮಗುವಿನ ಉನ್ನತ ಬೆಳವಣಿಗೆಗೆ ಸಹಾಯ ಮಾಡುತ್ತವೆ. 

೧೩. ವೇಗವಾಗಿ ಜೀರ್ಣವಾಗುತ್ತದೆ: ಕಡಿಮೆ ಕೊಬ್ಬಿನಂಶ ಮತ್ತು ಹೆಚ್ಚಿನ ನಾರಿನಂಶ ಹೊಂದಿರುವ ಈ ಧಾನ್ಯ, ನಿಮ್ಮ ಮಗುವಿನ ಆರೋಗ್ಯಕ್ಕೆ ಉತ್ತಮಕರ. ಇದು ನಿಮ್ಮ ಮಗುವಿನ ಆಹಾರದಲ್ಲಿ ಸೇರಿಸಲು ಸೂಕ್ತವಾದದ್ದಾಗಿದೆ. ಇದರಿಂದ ನಿಮ್ಮ ಮಗುವಿನ ಹೊಟ್ಟೆ ಸುಲಭವಾಗಿ ತುಂಬುತ್ತದೆ. 

೧೪. ಅಡುಗೆ ಮಾಡಲು ಸುಲಭ: ಪ್ರತಿ ತಾಯಿಗೆ ಅಗತ್ಯವಿರುವ ರೀತಿಯಲ್ಲಿಯೇ ರಾಗಿ ಸಹಾಯ ಮಾಡುತ್ತದೆ. ಎಲ್ಲಾ ಕೆಲಸಗಳ ನಡುವೆ ತಾಯಿ ಸುಲಭವಾಗಿ ಅಡುಗೆ ಮಾಡಬಹುದಾದಂತಹ ಬಗೆಗಳ ಬಗ್ಗೆ ಯೋಚಿಸುವುದು ಸಾಮಾನ್ಯ. ರಾಗಿ ತಾಯಿಯ ಎಲ್ಲ ಚಿಂತೆಗಳನ್ನು ದೂರಗೊಳಿಸಿ, ಅಗತ್ಯವಿರುವ ಎಲ್ಲಾ ಪೌಷ್ಟಿಕತೆಯನ್ನು ಮಗುವಿಗೆ ನೀಡುತ್ತದೆ. ರಾಗಿಯನ್ನು ಬೇರೆ ತರಕಾರಿ ಅಥವಾ ವಿಧವಿಧವಾದ ರಾಗಿ ತಿನಿಸನ್ನು ತಯಾರಿಸಬಹುದು. ಉದಾಹರೆಣೆಗೆ ರಾಗಿ ಗಂಜಿ, ರಾಗಿ ಹಲ್ವಾ, ರಾಗಿ ದೋಸಾ, ಇತ್ಯಾದಿ. 

೧೫. ಗ್ಲುಟೆನ್ ಮುಕ್ತ ರಾಗಿ: ರಾಗಿ ಗ್ಲುಟೆನ್ ಮುಕ್ತವಾಗಿರುವುದರಿಂದ ಅಡ್ಡಪರಿಣಾಮಗಳನ್ನು ಬೀರುವ ಸಾಧ್ಯತೆ ಕಡಿಮೆ. ಇದು ಸುಲಭವಾಗಿ ಜೀರ್ಣವಾಗುವುದರಿಂದ ಹೊಟ್ಟೆ ನೋವು ತರಹದ ಯಾವುದೇ ಸಮಸ್ಯೆಗಳಿಂದ ಬಳಲುವುದಿಲ್ಲ.

 

೧೬. ನೈಸರ್ಗಿಕವಾದ ತಂಪಿಕ: ರಾಗಿ ದೇಹವನ್ನು ತಣ್ಣಗಾಗಿಸುವ ಗುಣವನ್ನು ಹೊಂದಿದೆ. ರಾಗಿ ಮಜ್ಜಿಗೆಯೊಂದಿಗೆ ಸೇರಿಸಿ ಸೇವಿಸಿದರೆ ನೈಸರ್ಗಿಕವಾದ ತಂಪಿಕವಾಗಿ ವರ್ತಿಸುತ್ತದೆ. ಇದು ಕರುಳಿನೊಳಗೆ ಸುಲಭವಾಗಿ ಸಂಯೋಜಿಸಲ್ಪಡುವುದರಿಂದ ಅದು ನಿಮ್ಮ ಮಗುವಿನಲ್ಲಿ ಕರುಳಿನ ಸಂಬಂಧಿತ ಸಮಸ್ಯೆಗಳನ್ನು ದೂರವಿರಿಸುತ್ತದೆ. 

೧೭. ಕೆಂಪು ರಕ್ತ ಕಣಗಳ ಉತ್ಪಾದನೆ: ಕೆಂಪು ರಕ್ತ ಕಣಗಳ ಉತ್ಪಾದನೆಯ ಪರಿಕಲ್ಪನೆಯು ಅನೀಮಿಯಾ ತಡೆಗಟ್ಟುವ ಕಾರಣಕ್ಕಾಗಿ. ಇದರಿಂದ ನಿಮ್ಮ ಮಗುವಿನ ಅರೋಗ್ಯ ಚೆನ್ನಾಗಿರುತ್ತದೆ. ರಾಗಿ ಈ ಅರೋಗ್ಯ ಪ್ರಯೋಜನಗಳಿಗೆ ಕಾರಣ ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ಐರನ್ ಅಂಶ. 

೧೮. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ರಾಗಿ ಅತ್ಯುತ್ತಮ ಅರೋಗ್ಯ ಲಾಭಗಳಲ್ಲಿ ಒಂದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಇದು ನಿಮ್ಮ ಮಗುವಿನ ಒಟ್ಟಾರೆ ಬೆಳವಣಿಗೆಗೆ ಪೂರಕವಾಗುತ್ತದೆ. 

೧೯. ಸಂಪೂರ್ಣ ಆಹಾರ: ಗೋಧಿ ಮತ್ತು ಅಕ್ಕಿಗೆ ರಾಗಿ ಉತ್ತಮ ಪರ್ಯಾಯವಾಗಿದೆ. ರಾಗಿಯ ಪೌಷ್ಟಿಕ ಮೌಲ್ಯ ಅಕ್ಕಿ ಮತ್ತು ಗೋಧಿಗಿಂತ ಲಾಭದಾಯಕವಾಗಿದೆ. ಅದರೊಂದಿಗೆ, ಇದು ಮಗುವಿಗೆ ಸುರ್ಸಕ್ಷಿತ ಕೂಡಾ. 

೨೦. ಪ್ರಾಯೋಗಿಕ ಘಟಕಾಂಶ: ರಾಗಿ ಒಂದು ಬಹುಮುಖಿ ಧಾನ್ಯ.  ಅದು ಯಾವುದೇ ಪಾಕವಿಧಾನಗಳ ಜೊತೆ ಹೊಂದಿಕೊಳ್ಳುತ್ತದೆ. ಉದಾಹರಣೆಗೆ: ಗಂಜಿ, ಸ್ಮುತಿ, ಪರಥ, ಖಿಚಡಿ, ಲಡ್ಡೂ, ಇತ್ಯಾದಿ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಅವುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಹಾಗಾಗಿ, ಅರೋಗ್ಯ ಮತ್ತು ರುಚಿ - ಕಡಿಮೆ ದರದಲ್ಲಿ ಲಭ್ಯ. 

೨೧. ಮುಪ್ಪಾದ ಚರ್ಮವನ್ನು ಹಿಂದಿರುಗಿಸುತ್ತದೆ: ಮೆಥಿಯೋನಿನ್ ಮತ್ತು ಲಿಸಿನ್ ಎಂಬ ಅಮೈನೋ ಆಮ್ಲಗಳು ನಿಮ್ಮ ಚರ್ಮದ ಸುಕ್ಕುಗಳನ್ನು ತಡೆಗಟ್ಟುತ್ತದೆ. ರಾಗಿಯಲ್ಲಿರುವ ವಿಟಮಿನ್ ಡಿ ನಿಮ್ಮ ಆರೋಗ್ಯವನ್ನು ನಿಭಾಯಿಸುವಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಡಿ ಕ್ಯಾಲ್ಸಿಯಂ ಅಣುವಿನ ವಾಹಕವಾಗಿಯೂ ವರ್ತಿಸುತ್ತದೆ. 

೨೨. ಚರ್ಮ ಮತ್ತು ಕೂದಲ ಬೆಳವಣಿಗೆ: ಮೆಥಿಯೋನಿನ್ ಎನ್ನುವ ಅಮೈನೋ ಆಮ್ಲ ನಿಮ್ಮ ಮಗುವಿನ ಚರ್ಮ ಮತ್ತು ಕೂದಲ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ. 

೨೩. ಆತಂಕವನ್ನು ನಿಯಂತ್ರಿಸುತ್ತದೆ: ರಾಗಿ ಅಳುವ ಮಗುವನ್ನು ಸಮಾಧಾನಿಸುವಲ್ಲಿ ಸಹಾಯ ಮಾಡುತ್ತದೆ. ಅದರೊಂದಿಗೆ ಮಗುವಿನ ಮನಃಸ್ಥಿತಿಯನ್ನೂ ಸುಧಾರಿಸುತ್ತದೆ. 

೨೪. ಮೈಗ್ರೇನ್ ಚಿಕಿತ್ಸೆ: ತ್ರ್ಯಪಟೋಫನ್ ತರಹದ ಆಂಟಿಆಕ್ಸಿಡೆಂಟ್ಸ್ ಮತ್ತು ಅಮೈನೋ ಆಮ್ಲಗಳು ನೈಸರ್ಗಿಕ ವಿಶ್ರಾಂತಿಗೃಹಗಳಾಗಿ ವರ್ತಿಸುತ್ತವೆ. ಇದು ಮೈಗ್ರೇನ್ ಚಿಕಿತ್ಸಿಸುವಲ್ಲಿ ಸಹಾಯ ಮಾಡುತ್ತದೆ. ಖಿನ್ನತೆಯನ್ನು ರಾಗಿಯ ಉಪಯೋಗದಿಂದ ಚಿಕಿತ್ಸಿಸಬಹುದು. 

 

೨೫. ಮಲಬದ್ಧತೆಯನ್ನು ತಡೆಗಟ್ಟುತ್ತದೆ: ಇದರಲ್ಲಿರುವ ನಾರಿನಾಂಶದ ಕಾರಣದಿಂದ ಇದು ಸುಲಭವಾಗಿ ಜೀರ್ಣಗೊಳ್ಳುವುದಸ್ಥೆ ಅಲ್ಲದೇ, ನಿಮ್ಮ ಮಗುವಿನ ದೇಹದ ನೀರಿನ ಮಟ್ಟವನ್ನು ನಿರ್ವಹಿಸಿ, ನಿಮ್ಮ ಕರುಳಿನ ಸೂಕ್ತ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ, ಮಲಬದ್ಧತೆಯನ್ನು ತಡೆಗಟ್ಟಬಹುದು. 

[Back To Top]

೫. ಮಗುವಿನಲ್ಲಿ ರಾಗಿಯಿಂದ ಆಗಬಹುದಾದ ಅಡ್ಡಪರಿಣಾಮಗಳು (Side Effects Of Ragi For Babies in Kannada):

ನಾಣ್ಯಕ್ಕೆ ಎರಡು ಮುಖವಿರುವಂತೆ, ರಾಗಿ ಸಹ ಅಡ್ಡಪರಿಣಾಮಗಳನ್ನು ಉಂಟುಮಾಡುವ ಸ್ವಭಾವವನ್ನು ಹೊಂದಿದೆ. 

‣ ಮೊದಲೇ ತಿಳಿಸಿರುವಂತೆ ರಾಗಿ ತಣ್ಣಗಾಗಿಸುವ ಗುಣವನ್ನು ಹೊಂದಿದೆ. ಆದ್ದರಿಂದ, ಚಳಿಗಾಲದಲ್ಲಿ ಮತ್ತು ನಿಮ್ಮ ಮಗು ಶೀತದಿಂದ ಬಳಲುತ್ತಿರುವಾಗ ಸೇವಿಸದೇ ಇರುವುದು ಸೂಕ್ತ. 

‣ ಅತಿಯಾದ ರಾಗಿ ಸೇವನೆಯಿಂದ ದೇಹದಲ್ಲಿನ ಓಕ್ಸಲಿಕ್ ಆಮ್ಲ ಹೆಚ್ಚಿ, ಅದರಿಂದ ಮೂತ್ರಪಿಂಡದ ಕಲ್ಲುಗಳು ಮಾರ್ಪಾಡಾಗಬಹುದು. ಹಾಗಾಗಿ, ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವ ರೋಗಿಗಳು ರಾಗಿಯನ್ನು ಸೇವಿಸದೇ ಇರುವುದು ಸೂಕ್ತ. 

‣ ಅತಿಯಾದ ರಾಗಿ ಸೇವನೆಯಿಂದ ಅಯೋಡೀನ್ ಹೀರುವಿಕೆ ಕಡಿಮೆಯಾಗಬಹುದು. ಹಾಗಾಗಿ, ನಿಮ್ಮ ಮಗುವಿನ ದೇಹದಲ್ಲಿ ಅಯೋಡೀನ್ ಕೊರತೆಯುಂಟಾಗಿ ಗೈಟ್ರೆ ರೀತಿಯ ರೋಗಗಳಿಂದ ಬಳಲುವಂತಾಗಬಹುದು. 

ಸಮಯಕ್ಕೆ ತಕ್ಕಂತೆ ನೀವು ಆಹಾರವನ್ನು ಬೇರೆ  ಬೇರೆ ಆಹಾರಗಳಿಗೆ ಬದಲಾಯಿಸುವುದು ಸೂಕ್ತ. ಹಾಗೆ ಮಾಡಿದಲ್ಲಿ, ನಿಮ್ಮ ಮಗು ಸುರಕ್ಷಿತವಾಗಿರುತ್ತದೆ. ರಾಗಿ ಅರೋಗ್ಯ ಲಾಭಗಳು ಸಹ ಅಡ್ಡಪರಿಣಾಮಗಳಿಗಿಂತ ಹೆಚ್ಚೇ ಆಗಿರುತ್ತದೆ. ಹಾಗಾಗಿ, ರಾಗಿಯ ಪೌಷ್ಟಿಕತೆ ಮತ್ತು ಆರೋಗ್ಯಕರ ಜೀವನ ಅನುಭವಿಸಲು ರಾಗಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ, ನಿಮ್ಮ ಮಗುವಿನ ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಟಿಕತೆಯನ್ನು ಒದಗಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon