Link copied!
Sign in / Sign up
23
Shares

ನಿಮ್ಮ ಮಗುವಿಗೆ ಖಂಡಿತವಾಗಿ ಈ ೧೦ ಆಹಾರ ಪದಾರ್ಥಗಳನ್ನು ನೀಡುವುದನ್ನು ನಿಲ್ಲಿಸಿ

ನಿಮ್ಮ ಮಗುವಿಗೆ ಈ ೧೦ ಆಹಾರಗಳಲ್ಲಿ ಯಾವುದದರನ್ನು ಕೊಡುತ್ತಿರುವಿರಾ?, ಕೊಡುತ್ತಿದ್ದರೆ, ಈಗಲೇ ಅದನ್ನು ನೀಡುವುದನ್ನು ನಿಲ್ಲಿಸಿ. ನಿಮ್ಮ ಮಗು ಬೆಳೆಯುತ್ತಿದ್ದಂತೆ ನಿಮ್ಮ ತಟ್ಟೆಯಲ್ಲಿರುವ ಬಗೆ ಬಗೆಯ ತಿನಿಸುಗಳನ್ನು ತಿನ್ನಲು ಉತ್ಸುಕನಾಗಿರುತ್ತಾನೆ, ಹಾಗೆಯೇ, ನೀವು ಕೂಡ ಶಿಶುವಿಗೆ ವಿವಿಧ ಬಗೆಯ ಆಹಾರಗಳನ್ನು ನೀಡಲು ಕಾತುರರಾಗಿರುತ್ತಿರಿ. ಎಲ್ಲಾ ಬಗೆಯ ಆಹಾರಗಳು/ತಿನಿಸುಗಳು ನಿಮ್ಮ ಮಗುವಿಗೆ ಸುರಕ್ಷಿತವಾಗಿರುವುದಿಲ್ಲ.

ನೀವು, ನಿಮ್ಮ ಮಗುವಿನ ಆಹಾರ ಕ್ರಮದ ಬಗ್ಗೆ ವೈದ್ಯರ ಸಲಹೆಗಳನ್ನು ಪಡೆದು ಅದನ್ನೇ ಮುಂದುವರೆಸುವಿರಿ, ಕೆಲವರು ತುಂಬಾ ಎಚ್ಚರದಿಂದ ಇರುತ್ತಾರೆ, ಮತ್ತೆ ಕೆಲವರು ಮಗುವಿಗೆ ಒಂದು ನಿರ್ದಿಷ್ಟ ವಯಸ್ಸು ಆದಾಗ ಎಲ್ಲಾ ತರಹದ ಆಹಾರವನ್ನು ತಿನ್ನಿಸಲು ಆರಂಬಿಸುತ್ತಾರೆ. ಇಲ್ಲಿ ನೀಡಿರುವ ಪಟ್ಟಿಯಲ್ಲಿರುವ ತಿನಿಸು/ಆಹಾರಗಳನ್ನು ನಿಮ್ಮ ಮಗುವಿಗೆ ನೀಡುವುದನ್ನು ನಿಲ್ಲಿಸಿ.

ಸೂಚನೆ: ಇಲ್ಲಿ ನೀಡಿರುವ ಪಟ್ಟಿಯು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಪಟ್ಟಿಯಾಗಿದೆ, ಅದು ಅಲರ್ಜಿಯನ್ನು ಉಂಟು ಮಾಡಬಹುದು(ಆದರೆ ಅಲರ್ಜಿಯಿಂದ ತಪ್ಪಿಸಲು ಮಾತ್ರ ಅಲ್ಲ.), ಮಾಡದೇ ಇರಬಹುದು.

೧. ಹಸಿ ಹಾಲು

ಲ್ಯಾಕ್ಟೋಸ್ ಮತ್ತು ಹಾಲಿನ ಪ್ರೋಟೀನ್ ಗಳು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು ಮತ್ತು ಅವುಗಳು ಜೀರ್ಣಿಸಿಕೊಳ್ಳಲು ಕಷ್ಟವಾದ ಕಾರಣ ಉದರದ(ಹೊಟ್ಟೆ) ಸಮಸ್ಯೆಗಳಿಗೆ ಕಾರಣವಾಗಬಹುದು. ಹಸುವಿನ ಹಾಲಿನಲ್ಲಿರುವ ಹೆಚ್ಚುವರಿ ಖನಿಜಗಳು, ಪ್ರೋಟೀನ್ ಗಳು ಮತ್ತು ಸೋಡಿಯಂ ಪ್ರಸ್ತುತಗಳನ್ನು ಶಿಶುಗಳು ನಿಭಾಯಿಸುವುದಿಲ್ಲ(ನಿರ್ವಹಣೆ ಮಾಡುವುದಿಲ್ಲ). ಮೊಸರು ಮತ್ತು ಚೀಸ್ಅನ್ನು ಸಂಸ್ಕರಿಸುವುದರಿಂದ ಅವುಗಳನ್ನು ಸುಲಭವಾಗಿ ಶಿಶುಗಳು ಜೀರ್ಣಿಸಿಕೊಳ್ಳಬಹುದು.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೧ ವರ್ಷದ ನಂತರ.

೨. ಬೀಜಗಳು

ಎಲ್ಲಾ ರೀತಿಯ ಬೀಜಗಳನ್ನು ೪ ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳು ಅಗಿಯಲು ಸಾಧ್ಯವಾಗದ ಕಾರಣ ಅದನ್ನು ಹಾಗೆ ನುಂಗುತ್ತವೆ, ಇದರಿಂದ ಉಸಿರುಗಟ್ಟಿಸುವ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಇದರಿಂದ ಅಲರ್ಜಿ ಕೂಡ ಆಗಬಹುದು(ಅದರಲ್ಲೂ ಬಟಾಣಿಯಿಂದ). ನಿಮ್ಮ ಮಗುವಿಗೆ ಬಟಾಣಿ ಮತ್ತು ಇತರೆ ಬೀಜಗಳನ್ನು ನಿಡುವ ಬಗ್ಗೆ ನಿಮ್ಮ ಮಕ್ಕಳ ವೈದ್ಯರನ್ನು ಕೇಳಿ. ಈ ಆಹಾರ ಪದಾರ್ಥಗಳ ಪ್ರತಿಕ್ರಿಯೆಯೂ ಮಾರಾಣಾಂತಿಕವಾಗಿರಬಹುದು.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೪ ವರ್ಷದ ನಂತರ.

೩. ಸಿಟ್ರಸ್ ಅಥವಾ ಆಮ್ಲೀಯ ಹಣ್ಣುಗಳು

ಇವುಗಳಿಂದ ಅಲರ್ಜಿಯಾಗುವುದಿಲ್ಲ, ಆದರೆ ಆಮ್ಲೀಯತೆಯಿಂದ ಗುಳ್ಳೆಗಳು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಒಂದು ಹಣ್ಣಿನ(ನಿಂಬೆ ಅಥವಾ ಅನಾನಸ್) ಭಾಗದಿಂದ ಮಾಡಿದ ರಸವನ್ನು ಕೊಡಬಹುದು, ಆದರೆ ಹಣ್ಣನ್ನು ನೇರವಾಗಿ ತಿನ್ನುವುದನ್ನು ಶಿಫಾರಿಸುವುದಿಲ್ಲ. ಸಿಟ್ರಸ್ ವರ್ಗದಲ್ಲಿ ಟೊಮೆಟೊ ಹಣ್ಣುಗಳು ಇಲ್ಲದಿರುವುದರಿಂದ, ಇದು ಆಮ್ಲೀಯವಲ್ಲ ಎಂದು ಅರ್ಥವಲ್ಲ.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೬ ವರ್ಷದ ನಂತರ.

೪. ಹಸಿ(ರಾ) ಸ್ಟ್ರಾಬೆರಿಗಳು

ನಿಜಕ್ಕೂ ರುಚಿಯಾದ ಹಣ್ಣು, ಆದರೆ ಹಸಿ /ರಾ ಸ್ಟ್ರಾಬೆರಿಗಳು ವಯಸ್ಕರ ಆಹಾರದಲ್ಲಿ ಮಾತ್ರ ಇರಬೇಕು. ಶಿಶುವಿಗೆ ನೀಡುವುದರಿಂದ ತೀವ್ರವಾದ ಅಲರ್ಜಿಯನ್ನು ಉಂಟುಮಾಡಬಹುದು. ಬೇಯಿಸಿದ ಸ್ಟ್ರಾಬೆರಿಗಳನ್ನು ನೀಡಬಹುದು, ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವ ಪ್ರೋಟೀನ್ ಅನ್ನು ಹೆಚ್ಚಿನ ತಾಪಮಾನವು(ಬೇಯಿಸುವುದರಿಂದ) ತಟಸ್ಥಗೊಳಿಸುತ್ತದೆ.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೮ ತಿಂಗಳ ನಂತರ.

೫. ಜೇನುತುಪ್ಪ(ಮಧು/ಹನಿ)

ಕ್ಲಾಸ್ಟ್ರಿಡಿಯಮ್ ಬೊಟುಲಿನಮ್ ಎನ್ನುವುದು ಪ್ರಕೃತಿಯಲ್ಲಿ ಸಾಮಾನ್ಯವಾಗಿರುವ ಬೀಜಕ-ರೂಪಿಸುವ ಸೂಕ್ಷ್ಮಜೀವಿಯಾಗಿದ್ದು, ಈ ಬ್ಯಾಕ್ಟೀರಿಯಾವನ್ನು ಜೇನುತುಪ್ಪವು ಶಿಶುವಿನ ದೇಹದಲ್ಲಿ ಪ್ರಚೋದಿಸುವ ಅವಕಾಶವಿರುತ್ತದೆ. ವಯಸ್ಕರ ಕರುಳು ಈ ಬೀಜಕಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ, ಆದರೆ, ಮಗುವಿನ ಕರುಳಿನ ಪ್ರದೇಶದ ಅಪಕ್ವತೆಯಿಂದ ಬೀಜಕಗಳು ಜೀವಂತ-ಅಪಾಯಕಾರಿ ಜೀವಾಣುಗಳನ್ನು ಬೆಳೆಯಲು ಸಹಕರಿಸಬಹುದು ಮತ್ತು ಉತ್ಪಾದಿಸಬಹುದು.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೧ ವರ್ಷದ ನಂತರ.

೬. ಮೊಟ್ಟೆಯ ಬಿಳಿಭಾಗ(ಎಗ್ಗ್ ವೈಟ್)

ಅನೇಕ ಶಿಶುವೈದ್ಯರು ಹೇಳುವಂತೆ ಬೆಳೆದ ಮಕ್ಕಳಿಗೆ ಸಂಪೂರ್ಣ ಬೇಯಿಸಿದ ಮೊಟ್ಟೆಗಳನ್ನು ಕೊಡಬಹುದು, ಆದರೆ ಬಿಳಿ ಮತ್ತು ಹಳದಿ ಭಾಗವು ಸಂಪೂರ್ಣವಾಗಿ ಬೇಯಿಸಲ್ಪಟ್ಟಿವೆ ಎಂದು ಖಚಿತಪಡಿಸಿಕೊಳ್ಳಿ, ಇಲ್ಲದಿದ್ದರೆ ಇದು ಸಾಲ್ಮೊನೆಲ್ಲಾ ಸೋಂಕುಗಳಿಗೆ ಕಾರಣವಾಗಬಹುದು, ಇದರಿಂದಾಗಿ ಅತಿಸಾರ ಸಂಭವಿಸುತ್ತದೆ.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೧ ವರ್ಷದ ನಂತರ.

೭. ಗಟ್ಟಿಯಾಗಿರುವ ಹಸಿ ತರಕಾರಿಗಳು

ಕ್ಯಾರೆಟ್ ಗಳು, ಹಣ್ಣುಗಳು, ದ್ರಾಕ್ಷಿಗಳು ಮತ್ತು ಒಣದ್ರಾಕ್ಷಿಯಂತಹ ಹಣ್ಣುಗಳು ಉಸಿರುಗಟ್ಟಿಸುವ ಅಪಾಯಗಳನ್ನು ತರಬಹುದು. ಕತ್ತರಿಸಿ ಬೇಯಿಸಿದ ಕ್ಯಾರೆಟ್, ಸೌತೆಕಾಯಿ, ಎಲೆಕೋಸು ಮುಂತಾದ ತರಕಾರಿಗಳನ್ನು ನೀಡಬಹುದು. ಬೇಯಿಸಿದ ತರಕಾರಿಗಳು ಮೃದುವಾಗಿರುವುದರಿಂದ ಅವುಗಳನ್ನು ಶಿಶುಗಳು ಅಗಿಯಬಹುದು ಮತ್ತು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೬ ತಿಂಗಳ ನಂತರ.

೮. ಮೀನು

ನಿಮ್ಮ ಮಗುವನ್ನು ಅದರಿಂದ ದೂರವಿರಿಸಿ, ವಿಶೇಷವಾಗಿ ಸೀಗಡಿ, ಏಡಿ ಮಾಂಸ, ಚಿಪ್ಪುಯುಳ್ಳ ಮೀನುಗಳು, ಅದರಲ್ಲೂ ನಿಮ್ಮ ಕುಟುಂಬದಲ್ಲಿ ಸಮುದ್ರಾಹಾರದ ಅಲರ್ಜಿಗಳು ಇದ್ದರೆ ಅದರಿಂದ ಸಂಪೂರ್ಣ ದೂರವಿರುವುದು ಒಳ್ಳೆಯದು. ವೈದ್ಯರ ಸಲಹೆ ಪಡೆಯಿರಿ.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೧ ವರ್ಷದ ನಂತರ.

೯. ಸಕ್ಕರೆ

ನಿಮ್ಮ ಮಗುವಿನ ಆಹಾರದ ಕ್ರಮದಲ್ಲಿ ಇದು ಸಂಪೂರ್ಣ ಋಣಾತ್ಮಕವಾಗಿರುತ್ತದೆ. ಅತಿಯಾದ ಸಕ್ಕರೆ ದಂತಕ್ಷಯವನ್ನು ಉಂಟುಮಾಡುತ್ತದೆ. ಅದರಬದಲು, ನಿಮ್ಮ ಮಗುವಿನ ಆಹಾರವನ್ನು ಸಿಹಿಯಾಗಿಸಲು, ಸಿಹಿ ಹಣ್ಣುಗಳನ್ನು ಬಳಸಿ.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೧ ವರ್ಷದ ನಂತರ.

೧೦. ಅಂಟು ಆಹಾರ

ಜಿಗುಟಾದ(ಅಂಟು) ಆಹಾರಗಳು ಮತ್ತೊಂದು ಉಸಿರುಗಟ್ಟಿಸುವ ಆಹಾರ ಪದರ್ಥಾಗಳಾಗಿವೆ. ಬೆಲ್ಲ, ಶ್ರಿಖಂದ್, ಜ್ಯಾಮ್, ಮತ್ತು ಅಗಿಯುವಂತಹ ಮಿಠಾಯಿ, ಆಹಾರಗಳು ನಿಮ್ಮ ಮಗುವಿನ ಗಂಟಲಿನಲ್ಲಿ ಸಿಲುಕಿಕೊಳ್ಳಬಹುದು.

ಮಗುವಿಗೆ ನೀಡಲು ಶಿಫಾರಸ್ಸು(ಸಲಹಿಸುವ) ಮಾಡುವ ವಯಸ್ಸು: ೧ ವರ್ಷದ ನಂತರ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon