Link copied!
Sign in / Sign up
31
Shares

ನಿಮ್ಮ ಮಗುವಿಗೆ ಎದೆಹಾಲು ಬಿಡಿಸಬೇಕೆಂದರೆ ಈ 3 ಪಾಕವಿಧಾನಗಳು ನಿಮಗೆ ತಿಳಿದಿರಲೇ ಬೇಕು!

ಎದೆಹಾಲು ಬಿಡಿಸುವ ಸಮಯ ತಾಯಿಗೆ ಹಾಗು ಮಗುವಿಗೆ ಇಬ್ಬರಿಗೂ ತುಂಬಾ ಭಾವನಾತ್ಮಕತೆಯಿಂದ ಕೂಡಿರುತ್ತದೆ. ಭಾವೋದ್ವೇಗಕ್ಕೆ ಒಳಗಾದ ತಾಯಿಯು ತನ್ನ ಮಗುವಿಗೆ ಹೇಗಾದರೂ ಮಾಡಿ ಗಟ್ಟಿ ಪದಾರ್ಥಗಳನ್ನು ತಿನ್ನುವಂತೆ ಮಾಡಲು ಪ್ರಯತ್ನಿಸುತ್ತಿರುತ್ತಾಳೆ, ಇದರೊಂದಿಗೆ ತನ್ನ ಮಗುವು ತನ್ನ ಎದೆಹಾಲನ್ನು ಬಿಡುವಂತೆ ಮಾಡಲು ಹರಸಾಹಸ ಮಾಡುತ್ತಿರುತ್ತಾಳೆ. ಇದು ಸಹಜ ಪ್ರಕ್ರಿಯೆ ಆಗಿದ್ದರು, ಕಂದಮ್ಮಗಳು ಎಷ್ಟು ಸಾಧ್ಯವೋ ಅಷ್ಟು ತಮ್ಮ ಅಮ್ಮಂದಿರಿಗೆ ಮುಗಿಬೀಳುತ್ತಾರೆ. ಇದರಿಂದ ತಾಯಿಯು ಸಂಕಟ ಅನುಭವಿಸುವಂತೆ ಆಗುತ್ತದೆ.

ಮಕ್ಕಳು ಬೆಳೆಯುತ್ತಿರುವ ಹಾಗೆ, ಅವರ ದೇಹಕ್ಕೆ ಬೆಳೆಯಲು ಹಾಗು ವೃದ್ಧಿಯಾಗಲು ಬೇಕಾಗಿರುವ ಅಗತ್ಯ ಪೋಷಕಾಂಶಗಳನ್ನು ಒದಗಿಸಲು ಕೇವಲ ಎದೆಹಾಲಿಂದ ಸಾಧ್ಯವಾಗುವುದಿಲ್ಲ. ಬೇರೇ ಮೂಲಗಳಿಂದ ಇವುಗಳನ್ನು ಒದಗಿಸಬಹುದು. ಮಕ್ಕಳಿಗೆ ಯಾವುದೋ ದುರದೃಷ್ಟಕರ ಕಾರಣಗಳಿಂದ ಎದೆಹಾಲು ಲಭಿಸದೆ ಇದ್ದಲ್ಲಿ ಅಥವಾ ತಾಯಿಯಲ್ಲಿ ಹಾಲಿನ ಹರಿವು ಕಮ್ಮಿ ಇದ್ದಲ್ಲಿ, ಪರಿವರ್ತನೆಯು ಪುಡಿಹಾಲು ಇಂದ ಗಟ್ಟಿ ಪದಾರ್ಥಗಳೆಡೆಗೆ ಆಗಬೇಕು.

ಎದೆಹಾಲು ಬಿಡಿಸಬೇಕಾಗಿರುವುದು ಯಾವಾಗ?

ಗಮನಿಸಿರುವ ಪ್ರಕಾರ ಮಕ್ಕಳಿಗೆ ೬ ತಿಂಗಳು ವಯಸ್ಸಾದಾಗ, ವಯಸ್ಕರರು ಸೇವಿಸುವ ಆಹಾರದ ಕಡೆ ವಾಲುತ್ತಾರೆ. ಈ ಸಮಯಕ್ಕಾಗಲೇ ಮಗುವಿನ ತಲೆ ನಿಂತಿರುತ್ತದೆ ಹಾಗು ಸ್ವಲ್ಪ ಸಹಾಯದೊಂದಿಗೆ ಮಕ್ಕಳು ಕೂತುಕೊಳ್ಳುತ್ತಾರೆ. ಅದಲ್ಲದೆ, ಈ ಸಮಯದಲ್ಲಿ ಮಗುವಿಗೆ ಹಲ್ಲುಗಳು ಬಳಸುವುದು ಶುರು ಆಗಿರುತ್ತದೆ.

ಸಹಜ ಪ್ರತಿಕ್ರಿಯೆಗಳಾದ, ನಿಮ್ಮ ಕೈಯಲ್ಲಿರುವ ಆಹಾರವನ್ನು ಮುಟ್ಟಲು ಹಾಗು ಹಿಡಿಯಲು ಮುಂದಾಗುವುದು, ನೀವು ಊಟ ಮಾಡುವಾಗ ನನಗೂ ತಿನ್ನಿಸು ಎನ್ನುವಂತೆ ಬಾಯಿ ತೆರೆಯುವುದು ಅಥವಾ ಹಸಿವು ತಿಳಿಸಲು ಜೋರಾಗಿ ಅಳುವುದು ಅಥವಾ ಬೆರಳು ಚೀಪುವುದು ಹಾಗು ಇನ್ನಿತರೆ ಎಲ್ಲವೂ ನಿಮ್ಮ ಮಗುವು ಗಟ್ಟಿ ಪದಾರ್ಥಗಳನ್ನು ಸೇವಿಸಲು ಸಿದ್ದವಾಗಿದೆ ಎಂದರ್ಥ.

ಎದೆಹಾಲು ಬಿಡುವಂತ ಹುಸಿ ಸೂಚನೆಗಳು

ಅಮ್ಮಂದಿರು ತಮ್ಮ ಮಕ್ಕಳು ಎದೆಹಾಲು ಬಿಡುವವರೆಗೂ ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಸರಿಯಾದ ಸಮಯ ನೋಡದೆ ಹಾಗೆಯೇ ಮಗುವಿಗೆ ಎದೆಹಾಲು ಅಥವಾ ಪುಡಿಹಾಲು ಬಿಡಿಸಿ ಗಟ್ಟಿ ಪದಾರ್ಥಗಳನ್ನು ನೀಡಿದರೆ, ನಿಮ್ಮ ಮಗುವಿಗೆ ಭೇದಿ ಅಥವಾ ಶ್ವಾಸಕೋಶದ ಸೋಂಕು ಕೂಡ ಆಗುವ ಸಾಧ್ಯತೆ ಇರುತ್ತದೆ.

ಅತಿಯಾಗಿ ತನ್ನ ಮುಷ್ಟಿಯನ್ನು ಕಚ್ಚುವುದೇ ಆಗಲಿ ಅಥವ ರಾತ್ರಿ ಪದೇ ಪದೇ ಎಚ್ಚರವಾಗುವುದಾಗಲಿ ಅಥವ ಹೆಚ್ಚು ಹಾಲು ಕುಡಿಯಲು ಮುಗಿಬೀಳುವುದು ಆಗಲಿ, ಇಂತಹ ಸೂಚನೆಗಳನ್ನು ಗಮನಿಸಿ ನೀವು ನಿಮ್ಮ ಮಗು ಎದೆಹಾಲು ಬಿಟ್ಟು ಗಟ್ಟಿ ಪದಾರ್ಥ ಸೇವಿಸುವುದಕ್ಕೆ ಸಿದ್ದವಾಗಿದೆ ಎಂದು ತಪ್ಪಾಗಿ ಗ್ರಹಿಸಬೇಡಿ. ಮಗುವು ಒಂದು ರಾತ್ರಿಯ ಅವಧಿಯಲ್ಲಿ ಹಲವು ಬಾರಿ ಆಳವಾದ ನಿದ್ರೆಯಿಂದ ತಿಳಿ ನಿದ್ರೆಗೆ ಜಾರುತ್ತಿರುತ್ತದೆ. ಹಾಗಾಗಿ, ನೀವು ಆಹಾರ ಪದ್ಧತಿ ಬದಲಾಯಿಸಿದೊಡನೆ ನಿದಿರೆಯ ಪದ್ಧತಿ ಬದಲಾಯಿಸಲು  ಸಾಧ್ಯವಿಲ್ಲ. ಅದಲ್ಲದೆ, ಬೆರಳನ್ನು ಅಥವ ಮುಷ್ಟಿಯನ್ನು ಕಚ್ಚಿಕೊಳ್ಳುವುದು ಸಹಜ ಪ್ರಕ್ರಿಯೆಯಾಗಿದ್ದು ಇದು ಹಸಿವನ್ನು ಸೂಚಿಸುವುದಿಲ್ಲ. ಇವೆಲ್ಲವೂ ಅಲ್ಲದೆ, ಹೆಚ್ಚು ಹಾಲುಣಿಸುವಂತೆ ಕೇಳುವುದು ಮಕ್ಕಳ ಸಹಜ ಗುಣ.

ಈ ೩ ಆಹಾರವಿಧಾನಗಳ ಮೊರೆ ಹೋಗಿ

ನಮ್ಮ ಮಕ್ಕಳಿಗೆ ನಮ್ಮಂತೆ ದಿನಕ್ಕೆ ಮೂರು ಬಾರಿ ಊಟ ಮಾಡಿಸುವಂತೆ ಆಗದೆ ಇರುವ ಕಾರಣ, ನಾವು ದಿನದಲ್ಲಿ ಹಲವು ಬಾರಿ ಅವರಿಗೆ ಊಟ ಮಾಡಿಸಬಹುದು. ಎದೆಹಾಲು ಬಿಡಿಸುವುದೆಂದರೆ, ನಿಮ್ಮ ಮಗುವಿಗೆ ಮೆಲ್ಲಮೆಲ್ಲನೆ ಒಂದೊಂದೇ ಪದಾರ್ಥಗಳ ರುಚಿಯನ್ನು ಪರಿಚಯಿಸುವುದು. ನಿಮ್ಮ ಮಗು ಇಂತದ್ದೇ ಆಹಾರ ಇಷ್ಟ ಪಡುತ್ತದೆ ಎಂಡ್ ಕರಾರುವಾಕ್ಕಾಗಿ ಈ ಸಮಯದಲ್ಲಿ ಹೇಳಲು ಆಗುವುದಿಲ್ಲ. ಆದರೆ, ತಲತಲಾಂತರದಿಂದ ತಾಯಿಯರು ಪ್ರಯೋಗಿಸಿ, ಇವೆ ಉತ್ತಮವಾದವು ಎಂದು ಹೇಳಿರುವ ಕೆಲವು ಆಹಾರಗಳಿವೆ. ಈ ಥರ ಪ್ರಯೋಗ ಮಾಡಿ ತಿಳಿದುಕೊಂಡಿರುವ ತಾಯಂದಿರಲ್ಲಿ ನಾನು ಒಬ್ಬಳು ಎಂದು ಹೇಳಿಕೊಳ್ಳಲು ನನಗೆ ಖುಷಿ ಆಗುತ್ತದೆ!

೧. ಹಣ್ಣುಗಳು ಹಾಗು ತರಕಾರಿಗಳು

ನೈಸರ್ಗಿಕ ಉತ್ಪನ್ನಗಳ ಮೊರೆ ಹೋಗುವುದು ನಿಮ್ಮ ಮಗುವಿಗೆ ಅತ್ಯುತ್ತಮವಾಗಿರುತ್ತದೆ. ಬೇಯಿಸಿದ ಸೇಬು, ಬಾಳೆಹಣ್ಣಿನ ಗೊಜ್ಜು, ಜೆಜ್ಜಿದ ಅವಕಾಡೋ , ಬೇಯಿಸಿ ಜೆಜ್ಜಿದ ಗೆಣೆಸು, ಬೇಯಿಸಿ ರುಬ್ಬಿದ ಕ್ಯಾರಟ್, ಬೇಯಿಸಿದ ಆಲೂಗಡ್ಡೆ ಹಾಗು ಇತರೆ. ಈ ಪಟ್ಟಿಯು ಇನ್ನು ಬೆಳೆಯುತ್ತಾ ಹೋಗುತ್ತದೆ! ನಿಮಗೆ ಬೇಕಾದರೆ ರುಚಿಗೆ ತಕ್ಕಷ್ಟು ಉಪ್ಪು ಅಥವಾ ಸಕ್ಕರೆ ಬಳಸಬಹುದು.ಆದರೆ ಅವುಗಳ ಪ್ರಮಾಣ ಹೆಚ್ಚಾಗದಂತೆ ಗಮನವಹಿಸಿ. ಏಕೆಂದರೆ, ಮಗುವಿಗೆ ನೀಡಬೇಕಾಗಿರುವುದು ಪ್ರತಿದಿನಕ್ಕೆ ಕೇವಲ 2 ಗ್ರಾಂ ನಷ್ಟು ಉಪ್ಪು ಹಾಗು 13 ಗ್ರಾಂ ನಷ್ಟು ಸಕ್ಕರೆ. ನೆನಪಿಡಬೇಕಾದ  ಒಂದು ಎಚ್ಚರಿಕೆಯ ವಿಷಯ ಏನೆಂದರೆ, ಪ್ರತಿಸಲವೂ ಹಣ್ಣಿನ ಗೊಜ್ಜು ಅಥವ ಜ್ಯೂಸ್ ಮಾಡಿಕೊಡಬೇಡಿ. ಈ ಹಣ್ಣುಗಳು ತಮ್ಮಲ್ಲಿರುವ ಸಕ್ಕರೆಯನ್ನು ಹೊರಬಿಡುವುದರಿಂದ ಮಕ್ಕಳ ಹಲ್ಲು ಹುಳುಕಾಗಬಹುದು. ಹಣ್ಣುಗಳನ್ನು ಕತ್ತರಿಸಿ ಅವರ ಕೈಗೆ ಚಿಕ್ಕ ಚಿಕ್ಕ ತುಂಡುಗಳನ್ನು ಕೊಡುವುದು ಸೂಕ್ತ.

೨. ಕುದಿಸಿದ ರವೆ (ಗಂಜಿ ರೀತಿ)

ರವೆಯನ್ನು ನೀರಿನೊಂದಿಗೆ ಬೆರೆಸಿ, ಅದಕ್ಕೆ ಉಪ್ಪು ಅಥವಾ ಸಕ್ಕರೆ ಹಾಕಿ ಕುದಿಸಿ, ನಂತರ ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಕೊಟ್ಟರೆ ಅದನ್ನು ಮಕ್ಕಳು ಇಷ್ಟ ಪಡುವವರು. ರುಚಿಗೆ ಬೇಕಾದ್ದಲ್ಲಿ ನೀವು ಯಾವುದಾದರು ಸುಗಂಧ ಭರಿತ ಗಿಡಮೂಲಿಕೆಗಳನ್ನು ಬಳಸಬಹುದು. ಆದರೆ ಖಾರ ಅಥವ ಮಸಾಲೆ ಅಂತವುಗಳನ್ನು ದೂರವಿಡಿ.

೩. ಅನ್ನ

ಕೇವಲ ಬೆಂದ ಅನ್ನವನ್ನು ಉಪ್ಪು ಮತ್ತು ತುಪ್ಪ ಅಥವಾ ಸಕ್ಕರೆ ಮತ್ತು ತುಪ್ಪ ಬೆರೆಸಿ ಕೊಡುವುದರ ಬದಲು ಅಮ್ಮಂದಿರು ಮಕ್ಕಳನ್ನು ಅನ್ನದಿಂದಲೇ ಮಾಡಿದ ಮೃದು ಇಡ್ಲಿ ಹಾಗು ದೋಸೆಗೆ ಪರಿಚಯಿಸಬಹುದು. ಇವುಗಳನ್ನು ಮಕ್ಕಳು ಮೆಲ್ಲನೆ ಅಗಿಯಬಹುದು. ಆದರೆ, ಮಕ್ಕಳಿಗೆ ಏನೇ ಕೊಡುವಾಗ ಅದು ರುಬ್ಬಿರಲಿ ಅಥವಾ ಜೆಜ್ಜಿರಲಿ ಎನ್ನುವದು ನಿಮ್ಮ ನೆನಪಲ್ಲಿರಲಿ.

ಹೆಚ್ಚುವರಿಯಾಗಿ ಈ ಸಮಯವು ನೀವು ನಿಮ್ಮ ಮಗುವಿಗೆ ಎಳನೀರು, ಬೇಯಿಸಿದ ಕಾಲುಗಳು, ಕಾಲೋಚಿತ ಹಣ್ಣುಗಳು ಹಾಗು ತರಕಾರಿಗಳನ್ನು ಪರಿಚಯ ಮಾಡಿಕೊಡಬಹುದು. ಆದರೆ ಗಮನದಲ್ಲಿ ಇಡಬೇಕಾದ ವಿಷಯ ಅಂದರೆ ನೀವು ಪ್ರತಿಬಾರಿ ಮಗುವಿಗೆ ಹೊಸ ಪದಾರ್ಥ ಪರಿಚಯ ಮಾಡಿ ಕೊಟ್ಟೊಡನೆ ಮಗುವಿಗೆ ಇರಿಸುಮುರಿಸು ಉಂಟಾಗುತ್ತಿದೆಯೇ ಅಥವಾ ಮೈನೂರತೆ ಉಂಟಾಗುತ್ತಿದೆಯೇ ಎಂದು ನೋಡಿ.

ಕೆಲವೊಂದು ಪದಾರ್ಥಗಳು ನಿಮ್ಮ ಮಗುವಿನಲ್ಲಿ ಮೈನೂರತೆ ಉಂಟು ಮಾಡಬಹುದು. ಇದೆ ಕಾರಣಕ್ಕೆ ಮಕ್ಕಳಿಗೆ ಏನಾದರು ಅಹಿತಕರ ಸಂದರ್ಭಗಳು ಉಂಟಾದಲ್ಲಿ ನೀವು ಕೂಡಲೇ ಮಕ್ಕಳ ತಜ್ಞರ ಬಳಿ ಕರೆದೊಯ್ಯಿರಿ. ಉದಾಹರಣೆಗೆ ಮಗು ತಿಂದಿದ್ದನ್ನ ಕಕ್ಕುವುದು. ಹಾಗು ಮಗುವು ಉಣಿಸಿದ ಆಹಾರವನ್ನು ನುಂಗದೆ ನಾಲಿಗೆಯನ್ನು ಹೊರಗೆ ಹಾಕಿದರೆ, ಮಗುವಿಗೆ ತಿನ್ನಲು ಒತ್ತಾಯ ಮಾಡಬೇಡಿ. ನಾನು ಮೊದಲೇ ಹೇಳಿದಂತೆ ಹಾಲು ಬಿಡಿಸುವುದಕ್ಕೆ ಬೇಕಾಗಿರುವ ಅತಿಮುಖ್ಯ ಅಂಶ ಎಂದರೆ ಅದು ತಾಳ್ಮೆ! ಹೆಚ್ಚು ತಲೆ ಕೆಡಿಸಿಕೊಳ್ಳದೆ ಈ ಹಂತವನ್ನು ನಿಮ್ಮ ಮಗುವಿನೊಂದಿಗೆ ಖುಷಿಯಾಗಿ ಕಳೆಯಿರಿ. 

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon