Link copied!
Sign in / Sign up
3
Shares

ನಿಮ್ಮ ಮಗುವನ್ನು ಶುಚಿಗೊಳಿಸುವಾಗ ನೀವು ಮಾಡುವ 5 ತಪ್ಪುಗಳು (ಮತ್ತು ಅದನ್ನು ಹೇಗೆ ಸರಿಪಡಿಸಬಹುದು)

ಕೆಲವು ಸ್ಪಷ್ಟ ಕಾರಣಗಳಿಂದ ಮಗುವು ತನ್ನ ಶುಚಿತ್ವವನ್ನು ಕಳೆದುಕೊಳ್ಳಬಹುದು. ಈ ಕಾರಣಗಳಿಂದಾಗಿ, ಅವರು ಸೂಕ್ಷ್ಮ ಜೀವಾಣುಗಳೊಂದಿಗೆ ಸಂಪರ್ಕಕ್ಕೆ ಬರಬಹುದು, ಅದು ರೋಗ ಮತ್ತು ಸೋಂಕು ತರಲು  ಕಾರಣವಾಗಬಹುದು, ಇದರಿಂದಾಗಿ ನಿಮ್ಮ ಮುದ್ದು ಕಂದಮ್ಮನನ್ನು  ಸಾರ್ವಕಾಲಿಕವಾಗಿ ಸ್ವಚ್ಛಗೊಳಿಸುತ್ತಿರುವುದು ಅಗತ್ಯವಾಗಿದೆ. ನಿಮ್ಮ ಶಿಶುಗಳನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ, ಆದರೆ ಅವರನ್ನು ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸುವುದು ಹೆಚ್ಚು ಮುಖ್ಯ. ಇದರಿಂದಾಗಿ ಸ್ವಚ್ಛಗೊಳಿಸುವ ತಪ್ಪು ವಿಧಾನವು ಅವರ ಆರೋಗ್ಯದ ಮೇಲೆ ಮತ್ತಷ್ಟು ತೊಂದರೆಗಳಿಗೆ ಕಾರಣವಾಗಬಹುದು. ನಿಮ್ಮ ಮಗುವನ್ನು ತಪ್ಪು ವಿಧಾನದಲ್ಲಿ  ಸ್ವಚ್ಛಗೊಳಿಸುತ್ತಿದ್ದರೆ ನೀವು ತಿಳಿದುಕೊಳ್ಳಲು  5 ಅಂಶಗಳು  ಇಲ್ಲಿವೆ. 

೧. ಶಿಶು ದೇಹದ ಮೇಲಿನ ಅಂಟು ಪದರ(ವರ್ನಿಕ್ಸ್) ಸ್ವಲ್ಪ ಕಾಲ ಹಾಗೆ ಇರಲಿ

ಶಿಶುಗಳು ಜನಿಸಿದ ತಕ್ಷಣವೇ, ಪೋಷಕರು ಶಿಶುಗಳಿಗೆ ಸ್ನಾನ ಅಥವಾ ಶಿಶುವನ್ನು ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಮಗು ಜನಿಸುವಾಗ ಅದರ ದೇಹದ ಪೂರ್ತಿ ಶ್ವೇತ ವರ್ಣದ ಅಂಟು ಪದರವನ್ನು ಆವರಿಸಿಕೊಂಡು ಬರುತ್ತದೆ, ಇದನ್ನು ವರ್ನಿಕ್ಸ್ ಎಂದು ಕರೆಯುತ್ತೇವೆ. ಇದು ನಿಮ್ಮ ಶಿಶುವಿನ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಮಗುವಿಗೆ ಜಳಕ ಅಥವಾ ಶುಚಿ ಮಾಡುವ ಕಾರ್ಯವನ್ನು ಕನಿಷ್ಠ ೬ ತಾಸುಗಳು(ಗಂಟೆ) ಮುಂದೂಡುವುದು ಒಳ್ಳೆಯದು. ಅಂಟು ಪದರ(ವರ್ನಿಕ್ಸ್) ನಿಮ್ಮ ಮಗುವಿನ ನೈಸರ್ಗಿಕ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜನನದ ನಂತರ ಕೆಲವು ಗಂಟೆಗಳ ಕಾಲ ಶಿಶುವಿನ ಸೂಕ್ಷ್ಮ ಚರ್ಮವನ್ನು ರಕ್ಷಿಸುತ್ತದೆ.

೨. ಪದೆ ಪದೆ ಜಳಕ(ಸ್ನಾನ) ಮಾಡಿಸುವುದು

ಶಿಶುಗಳ ಚರ್ಮವು ತೆಳುವಾದ ರಚನೆಯಿಂದ ಕೂಡಿರುತ್ತದೆ, ಅದಕ್ಕಾಗಿ ಅವುಗಳ ದೇಹವನ್ನು ಹೆಚ್ಚು ಕಾಲ ಬೆಚ್ಚನೆಯ ಕಂಬಳಿಯಿಂದ ರಕ್ಷಣೆ ಒದಗಿಸುತ್ತಿರ. ರಾತ್ರಿಯ ಸ್ನಾನದ ವಾಡಿಕೆಯಂತೆ ರಾತ್ರಿಯಲ್ಲಿ ಸ್ನಾನ ಮಾಡಿಸುವುದು ಮುಖ್ಯವಾದುದಾದರೂ, ನಿಮ್ಮ ಮಗುವಿಗೆ ಪ್ರತಿ ರಾತ್ರಿ ಸ್ನಾನ ಮಾಡುವುದು ಅನಿವಾರ್ಯವಲ್ಲ. ಸ್ವಚ್ಛವಾಗಿರಿಸಲು ವಾರಕ್ಕೆ ಒಂದು ಅಥವಾ ಎರಡು ಬಾರಿ ಶುಚಿಗೊಳಿಸಿದರೆ ಸಾಕು. ನೆನಪಿನಲ್ಲಿಡಿ ಮಗುವಿನ ಬಟ್ಟೆಗಳನ್ನು ಪ್ರತಿದಿನ ಬದಲಿಸಿ ಶುಚಿಮಾಡುವುದು ಒಳ್ಳೆಯದು. 

೩. ಹಲವಾರು ಶುದ್ಧೀಕರಣ/ಶಿಶು ಉತ್ಪನ್ನಗಳನ್ನು ಬಳಸುವುದು

ಪೋಷಕರು ತಮ್ಮ ಮುದ್ದು ಕಂದಮ್ಮಗಳ ಬಗ್ಗೆ ಆಕರ್ಷಿತರಾಗಿ ಮತ್ತು ತಮ್ಮ ಶಿಶುಗಳನ್ನು ಸಂಪೂರ್ಣವಾಗಿ ಸ್ವಚ್ಛವಾಗಿರಿಸಿಕೊಳ್ಳಲು ಪ್ರತಿ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುತ್ತಾರೆ. ಮತ್ತು ಅವರು ಮಗುವಿಗಾಗಿ ಸ್ನಾನ ಪದಾರ್ಥಗಳು, ಶುಚಿ ಪದಾರ್ಥಗಳು, ಅಂಗಮರ್ಧನ ಪದಾರ್ಥಗಳು ಮತ್ತು ಇತ್ಯಾದಿ ಪದಾರ್ಥಗಳನ್ನು ಕೊಳ್ಳಲು ಸಿದ್ದರಿರುತ್ತಾರೆ. ಹಲವು ಶಿಶು ಉತ್ಪನ್ನಗಳನ್ನು ಬಳಸುವುದರಿಂದ, ಶಿಶುವಿನ ಸೂಕ್ಷ್ಮ ಚರ್ಮ ಅದರಿಂದ ಅಲರ್ಜಿಯಂತಹ ತೊದರೆಗೆ ಒಳಗಾಗಬಹುದು ಅಥವಾ ಅದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಮಗುವಿಗೆ ಅಗತ್ಯವಿರುವುದು ತ್ವಚೆ ರಕ್ಷಣೆ, ಮತ್ತು ಶುಚಿ, ಅದು ಸುಗಂಧ ದ್ರವ್ಯ, ಬಣ್ಣ ಮತ್ತು ರಾಸಾಯನಿಕ ಉತ್ಪನ್ನಗಳಿಂದ ಮುಕ್ತಾವಾಗಿರಲಿ. 

೪. ತೀವ್ರ ತಾಪಮಾನದಲ್ಲಿ(ಹೆಚ್ಚು ಬಿಸಿಯಿರುವ ನೀರಿನಲ್ಲಿ) ಸ್ನಾನ ಮಾಡಿಸುವುದು

ಶಿಶುಗಳು ಅತ್ಯಂತ ಸೂಕ್ಷ್ಮ ಚರ್ಮವನ್ನು ಹೊಂದಿದ್ದು, ಸ್ನಾನವನ್ನು ತುಂಬಾ ಬಿಸಿ ನೀರಿನಿಂದ ಅಥವಾ ತಣ್ಣನೇಯ(ಶೀತ) ನೀರಿನಿಂದ ಮಾಡಿಸುವುದು  ಅವರ ಚರ್ಮಕ್ಕೆ ಹಾನಿಕಾರಕವಾಗಬಹುದು ಮತ್ತು ಚರ್ಮದಲ್ಲಿ ದದ್ದುಗಳನ್ನು ಉಂಟುಮಾಡಬಹುದು. ನಿಮ್ಮ ಮಗುವಿನ ಸ್ನಾನದ ನೀರಿನ ಉಷ್ಣತೆಯು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ (ಸುಮಾರು ೧೦೦ ಡಿಗ್ರಿ ಫ್ಯಾರನ್ಹೀಟ್) ಮತ್ತು ನಿಮ್ಮ ನಿರು ಬಿಸಿ ಮಾಡುವ(ವಾಟರ್ ಹೀಟರ್ ಅನ್ನು) ಬಿಂದುವನ್ನು ೧೨೦ ಡಿಗ್ರಿ ಗಿಂತ ಕಡಿಮೆ ಫ್ಯಾರನ್ಹೀಟ್ಗೆ ಹೊಂದಿಸುವಂತೆ ಮಾಡಿ.

 ೫. ಹೊಕ್ಕುಳು ಬಳ್ಳಿ ಉದ್ದವಿರುವ ಬಗ್ಗೆ ಚಿಂತಿಸುವಿರ

ಯಾವುದೇ ಅನುಭವಿ ಪೋಷಕರು ದೃಢೀಕರಿಸುವಂತೆಯೇ, ಹೊಕ್ಕುಳ ಬಳ್ಳಿ ಒಣಗಲು ಮತ್ತು ಉದುರಿಹೋಗಲು ನೀವು ನಿರೀಕ್ಷಿಸುತ್ತಿರುತ್ತಿರಿ(ಮತ್ತು ಕಾಯುತ್ತಿರುವಿರಿ!), ಮತ್ತು ಅದು ಕಳಚುವವರೆಗೂ ಅದಕ್ಕೆ ನಿಧಾನವಾಗಿ ಚಿಕಿತ್ಸೆ ಕೊಡಿಸುತ್ತಿರಿ. ವೈದ್ಯರು ಹೇಳುವಂತೆ ಒಣಗಿದ ಭಾಗದ ಬಗ್ಗೆ ಯಾವುದೇ ತರಹ ಚಿಂತಿಸಬೇಕಿಲ್ಲ(ಮತ್ತು ಅದನ್ನು ಸ್ವಚ್ಚ ಪಡಿಸಬೇಕಿಲ್ಲ!), ಅದರ ಕೆಳಗೆ ಚರ್ಮ ಆರೋಗ್ಯವಾಗಿದ್ದರೆ ಅದರಿಂದ ಯಾವುದೇ ತೊಂದರೆಯಿಲ್ಲ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon