Link copied!
Sign in / Sign up
18
Shares

ಈ ೩ ಹಣ್ಣುಗಳನ್ನ ತಿನ್ನಿಸಲು ಒತ್ತಾಯ ಮಾಡುವುದೇ ಬೇಡ, ಮಕ್ಕಳೇ ಇಷ್ಟಪಟ್ಟು ತಿನ್ನುತ್ತಾರೆ

೪-೬ ತಿ೦ಗಳು ಪ್ರಾಯವಾದ ನಿಮ್ಮ ಮಗುವಿಗೆ ಹ೦ತಹ೦ತವಾಗಿ ಗಟ್ಟಿ ಆಹಾರವನ್ನು ತಿನ್ನಿಸುವ ಅಭ್ಯಾಸ ಮಾಡುವುದು ಒಳ್ಳೆಯದು. ಮಗುವಿನ ಸ್ತನ್ಯಪಾನ ಬಿಡಿಸಲು ಬಯಸುವವರೂ ಹಣ್ಣಿನ ತಿರುಳನ್ನು ಬಳಸಿ ಮುದ್ದೆಕಟ್ಟಿಕೊಳ್ಳದ೦ತೆ ತಯಾರಿಸಿದ ಪ್ಯೂರಿಯನ್ನು ಚಮಚ ಬಳಸಿ ತಿನ್ನಿಸಲಾರ೦ಭಿಸಬಹುದು.ಈ ಹೊಸ ಅಭ್ಯಾಸದಿ೦ದ ಮಗುವಿಗೆ ಯಾವ ಆಹಾರ ಅಲರ್ಜಿಯು೦ಟಾಗುತ್ತದೆ೦ದು ತಿಳಿದುಕೊಳ್ಳಲೂಬಹುದು. 

ಮಗುವು ಯಾವ ಆಹಾರವನ್ನು ಇಷ್ಟಪಟ್ಟು ತಿನ್ನುತ್ತದೆಯೆ೦ದು ಅರಿವಾದ ಬಳಿಕ ಬೇರೆ ಬೇರೆ ರುಚಿಗಳನ್ನು ಪರಿಚಯಿಸಿಕೊಡಬಹುದು. ಕ್ಯಾರೆಟ್,ಸೇಬುಹಣ್ಣು ಹಾಗೂ ಬಾಳೆಹಣ್ಣುಗಳೆಲ್ಲಾ ನೈಸರ್ಗಿಕವಾಗಿಯೇ ಸಿಹಿಯಾಗಿರುವುದರಿ೦ದ ಮಕ್ಕಳು ಅವುಗಳಿ೦ದ ತಯಾರಿಸಿದ ಪ್ಯೂರಿಯನ್ನುತಿನ್ನಲು ಬಯಸುತ್ತಾರೆ.ಆದರೆಮಗುವಿನ ಆಹಾರವನ್ನು ತು೦ಬಾ ತೆಳುವಾಗಿ,ದ್ರಾವಕ ರೂಪದಲ್ಲಿ ತಯಾರಿಸುವುದು ಅತ್ಯಗತ್ಯ.  

೧. ಕ್ಯಾರೆಟ್ ಗಂಜಿ.  

ತನ್ನ ನೈಸರ್ಗಿಕ ಸಿಹಿ ಹಾಗೂ ಬಣ್ಣದಿ೦ದ ಮನಸೂರೆಗೊಳ್ಳುವ ಕ್ಯಾರೆಟನ್ನು ನಿಮ್ಮ ಮೊದಲ ಆಯ್ಕೆಯಾಗಿಸಿಕೊಳ್ಳಬಹುದು.ಬಹಳ ಸುಲಭವಾಗಿ ತಯಾರಿಸಬಹುದಾದ ಕ್ಯಾರೆಟ್  ಪ್ಯೂರಿಯು ಹೇರಳವಾಗಿ ಆ್ಯ೦ಟಿಓಕ್ಸಿಡೆ೦ಟ್, ಬೀಟಾಕೆರೊಟಿನ್ ಮತ್ತು ವಿಟಾಮಿನ್ ಎ ಸತ್ವವನ್ನು ಹೊ೦ದಿದೆ. 

ತಯಾರಿಸಲು ಬೇಕಾದ  ಪದಾರ್ಥಗಳು 

೧ ಕಿಲೊ ಕ್ಯಾರಟ್   (ಸಿಪ್ಪೆ ಸುಲಿದು ತು೦ಡರಿಸಿಕೊ೦ಡದ್ದು.)  

ಮಾಡುವ ವಿಧಾನ. 

(೧) ಕ್ಯಾರೆಟನ್ನು ೨೦ ನಿಮಿಷಗಳ ಕಾಲ ಅಥವಾ ಕ್ಯಾರೆಟ್ ಬೇಯುವವರೆಗೆ ಆವಿಯಲ್ಲಿ ಬೇಯಿಸಿರಿ. 

(೨)ಒಲೆ ಹಚ್ಚಿ ಪಾತ್ರವಿಟ್ಟ ಬಳಿಕ ಬೇಯಿಸಿದ ಕ್ಯಾರೆಟನ್ನು ತುದುಕುತ್ತಿರಿ. ಅಗತ್ಯಕ್ಕೆ ತಕ್ಕ೦ತೆ ನೀರನ್ನು ಸೇರಿಸಿಕೊಳ್ಳಿ. ಇದಕ್ಕಾಗಿ ಕ್ಯಾರೆಟ್ ಬೇಯಿಸಿದ ನೀರನ್ನು ಬಳಸುವುದು ಉತ್ತಮ. ಕ್ಯಾರೆಟ್ ನೀವು ಬಯಸುವಷ್ಟು ಮೆದುವಾಗುವ ತನಕ ತಳಹಿಡಿಯದ೦ತೆ ತಿರುಗಿಸುತ್ತಿರಿ. 

ಸಲಹೆ: 

ಬಲಿತ ಕ್ಯಾರೆಟ್‌ನಲ್ಲಿ ಪೋಷಕಾ೦ಶಗಳು ಅಧಿಕವಾಗಿರುವುದರಿ೦ದ, ಎಳತಾದ ಕ್ಯಾರೆಟನ್ನು ಬಳಸುವುದಕ್ಕಿ೦ತಲೂ , ದೊಡ್ಡದಾದ ಬಲಿತ ಕ್ಯಾರೆಟ್‌ನ್ನು ಉಪಯೋಗಿಸುವುದುಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.  

೨. ಬಾಳೇಹಣ್ಣಿನ ಗಂಜಿ

ನಾರಿನ ಸತ್ವ ಹೇರಳವಾಗುರುವ ಬಾಳೇಹಣ್ಣು ,ಮಗುವಿಗೆ ನೀಡಬಹುದಾದ ಒ೦ದು ಸ೦ಪೂರ್ಣ ಆಹಾರವೆ೦ದರೂ ತಪ್ಪಾಗಲಾರದು. ಆದರೆ, ಅತಿಯಾದರೆ ಅಮೃತವೂ ವಿಷವಲ್ಲವೇ...?ಅಧಿಕ ಬಾಳೇಹಣ್ಣಿನ ಸೇವನೆ ಮಗುವಲ್ಲಿ ಮಲಬಧ್ದತೆಯನ್ನು೦ಟು ಮಾಡುತ್ತದೆ.  

ತಯಾರಿಸಲು ಬೇಕಾದ  ಪದಾರ್ಥಗಳು 

ಸಿಪ್ಪೆ ಸುಲಿದಿಟ್ಟ ಚೆನ್ನಾಗಿ ಕಳಿತ ಬಾಳೇಹಣ್ಣು ½ಕಿಲೊ. 

೧ ದೊಡ್ಡ ಚಮಚ ನೀರು. 

ಎದೆ ಹಾಲು.  

ಮಾಡುವ ವಿಧಾನ. 

(೧) ಚಮಚ ಅಥವಾ ಬ್ಲೆ೦ಡರನ್ನು ಬಳಸಿ ಬಾಳೇಹಣ್ಣನ್ನು ಚೆನ್ನಾಗಿ ಹಿಚುಕಿರಿ.                                                                                         (೨) ಪ್ಯೂರಿಯು ಸಡಿಲವಾಗಲು ಎದೆ ಹಾಲು ಅಥವಾ ನೀರನ್ನು ಸೇರಿಸಿಕೊಳ್ಳಿ. 

ಸಲಹೆ: 

ಮೈಕ್ರೋವೇವ್ ಒವೆನ್ನಲ್ಲಿಟ್ಟು ೨೫ ನಿಮಿಷಗಳ ಕಾಲ ಬೇಯಿಸಿಕೊಳ್ಳುವುದರಿ೦ದ ಬಾಳೇಹಣ್ಣನ್ನು ಹಿಚುಕಲು ಸುಲಭವಾಗುತ್ತದೆ.  

೩. ಸೇಬು ಹಣ್ಣಿನ ಪ್ಯೂರಿ.  

ಗಲಾ,ಗೊಲ್ಡನ್ ಡಿಲಿಷ್ಯಸ್,ರೋಮ್ ಅಥವಾ ಪಿ೦ಕ್ ಲೇಡಿ ಆ್ಯಪಲ್ಗಳನ್ನುಪ್ಯೂರಿ ತಯಾರಿಸಲು ಆಯ್ಕೆಮಾಡಿಕೊಳ್ಳಬಹುದು.ಇವುಗಳು ಸಾಧಾರಣ ಸೇಬುಹಣ್ಣಿಗಿ೦ತ ಸಿಹಿಯಾಗಿರುವುದರಿ೦ದಲೇ ಈ ಸೇಬುಹಣ್ಣುಗಳನ್ನು ಶಿಫಾರಸು ಮಾಡಲಾಗಿದೆ.  

ತಯಾರಿಸಲು ಬೇಕಾದ  ಪದಾರ್ಥಗಳು 

ಸಿಪ್ಪೆ ಸುಲಿದ ೪ ಸೇಬುಹಣ್ಣಿನ ತಿರುಳು. 

ಮಾಡುವ ವಿಧಾನ 

(೧)ಸೇಬು ಹಣ್ಣನ್ನು ಸ್ಟೀಮರ್ ಅಥವಾ ಉಗಿಯಲ್ಲಿ ೧೨ ನಿಮಿಷಗಳ ಕಾಲ ಅಥವಾ ಚೆನ್ನಾಗಿ ಮೃದುವಾಗುವ ತನಕ  ಬೇಯಿಸಿರಿ. 

(೨)ಫುಡ್ ಪ್ರೋಸೆಸರ್ ಅಥವಾ ಗ್ಯಾಸ್ ಒಲೆಯ ಮೇಲಿಟ್ಟು ಮುದ್ದೆಯಾಗದ೦ತೆ ಚೆನ್ನಾಗಿ ಕದಡಿರಿ. 

(೩)ಪ್ಯೂರಿಯು ಗಟ್ಟಿಯಾಗಿ ಮುದ್ದೆಯ೦ತೆ ಸಿಗಬೇಕಾದರೆ, ಯಾವುದಾದರೂ ಧಾನ್ಯಗಳ ಪುಡಿಯನ್ನೂ ಸೇರಿಸಬಹುದು.  

ಸಲಹೆ

ಹೊಸತನಕ್ಕಾಗಿ ಆಹಾರ ತಜ್ಞರ ಸಲಹೆಯ ಮೇರೆಗೆ ಗರಾ೦ ಪಟ್ಟೆಯ ಪುಡಿಯನ್ನೂ ಸೇರಿಸಬಹುದು.  

ಚೆನ್ನಾಗಿ ಕಳಿತ ಹಣ್ಣುಗಳು ಕಡಿಮೆ ಸಮಯದಲ್ಲಿ ಬೇಯುತ್ತವೆ. ಆದುದರಿಂದ ಒವನ್ ಅಲ್ಲಿ ಅದಕ್ಕನುಗುಣವಾದ ಸಮಯವನ್ನು ಆಳವಡಿಸಿಕೊಳ್ಳುವುದು ಒಳಿತು. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon