Link copied!
Sign in / Sign up
28
Shares

ನಿಮ್ಮ ಮಗು ತನ್ನ ಹೆಬ್ಬೆರಳನ್ನ ಅತಿಯಾಗಿ ಚೀಪುತ್ತಿದಿಯೇ?

ಶಿಶುವು ಅದರ ಹೆಬ್ಬೆರಳನ್ನು ಚೀಪಲು ನಿಮ್ಮ ಗರ್ಭದಲ್ಲಿ ಇರುವಾಗಿನಿಂದಲೇ ಪ್ರಾರಂಭಿಸುತ್ತದೆ. ಈ ಲಕ್ಷಣ ಮಗು ಜನಿಸಿದ ನಂತರವೂ ಸ್ವಲ್ಪ ಸಮಯದ ತನಕ ಮುಂದುವರೆಸುತ್ತದೆ. ತನ್ನ ವಿವಿಧ ಬಗೆಯ ಭಾವನೆಗಳನ್ನು ಮಗುವು ತನ್ನ ಹೆಬ್ಬೆರಳನ್ನ ಚೀಪುವ ಮೂಲಕ ವ್ಯಕ್ತಪಡಿಸುತ್ತದೆ. ನಿಮ್ಮ ಶಿಶು ಹೆದರಿದಾಗ, ಗಾಬರಿಗೊಂಡಾಗ, ಹಸಿವಾದಾಗ ಮತ್ತು ಅದಕ್ಕೆ ನಿದ್ದೆ ಬಂದಾಗ ಅದು ತನ್ನ ಬೆರಳನ್ನು ಚೀಪುವುದು ಅದರ ಗುಣ ಲಕ್ಷಣವಾಗಿದೆ. ಆರಂಭಿಕ ಹಂತದಲ್ಲಿ, ಪ್ರತಿ ಶಿಶುವಿಗೂ ತನ್ನ ಬೆರಳನ್ನು ಚೀಪುವ ಪ್ರವೃತ್ತಿ ಇರುತ್ತದೆ. ನಿಮ್ಮ ಮಗುವು ಅದನ್ನು ಮಾಡುವಾಗ ಅಥವಾ ಅದನ್ನೇ ಪುನಾರವರ್ತಿಸಿದರೆ ಶಿಶು ಬೆರಳು ಚೀಪುವುದನ್ನು ತಡೆಯಬೇಡಿ, ಇದು ಆ ಸಮಯದಲ್ಲಿ  ಅವರನ್ನು ರಕ್ಷಿಸುವಂತೆ ಮಾಡುತ್ತದೆ.

ಅವರಿಗೆ ಆರಾಮದಾಯಕವಾಗಿರುವುದನ್ನು ಕಲಿಯಲು ಹೆಬ್ಬೆರಳು ಚೀಪುವುದು ತುಂಬಾ ಸಹಕಾರಿಯಾಗುತ್ತದೆ. ನೀವು ಅವರಿಗೆ ಬೆರಳು ಚೀಪುವುದನ್ನು ನಿಲ್ಲಿಸಲು ಒತ್ತಾಯಿಸುವ ಕ್ಷಣ, ಅವರು ಅದರ ಬಗ್ಗೆ ಹೆಚ್ಚು ಕುತೂಹಲಗೊಳ್ಳುವಂತೆ ಮಾಡಬಹುದು ಅಥವಾ ಅದರ ಬಗ್ಗೆ ಹೆಚ್ಚು ಆಸಕ್ತಿ ಮೂಡಿ ಅದನ್ನು ಇನ್ನಷ್ಟು ಮಾಡಲು ಪ್ರಾರಂಭಿಸುತ್ತಾರೆ. ಅವರನ್ನು ಯಾವುದಾದರೂ ವಿಷಯದ ಬಗ್ಗೆ ಬಲವಂತ ಪಡಿಸುವುದು, ಅವರನ್ನು ಚಿಕ್ಕ ವಯಸ್ಸಿನಿಂದಲೇ ಬಂಡರನ್ನಾಗಿಸಲು ಪೂರಕವಾಗುತ್ತದೆ.

ಬದಲಾಗಿ, ನಿಮ್ಮ ಮಗುವು ತನ್ನ ಹೆಬ್ಬೆರಳನ್ನು ಅವರ ಬಾಯಿಗೆ ಇರಿಸುವ ಕ್ಷಣಗಳನ್ನು ಗಮನಿಸಿ. ಅವರು ಯಾವ ಸಮಯದಲ್ಲಿ ದಿನನಿತ್ಯ ಬೆರಳು ಚೀಪುವುದನ್ನು ಮಾಡುತ್ತಾರೆ, ಮತ್ತು ಆ ಸಮಯದಲ್ಲಿ ಅವರಿಗೆ ಏನು ಬೇಕು ಎಂಬುದನ್ನು ನೀವು ಗಮನಿಸಿದರೆ, ನಿಧಾನವಾಗಿ ಅವರ ಈ ಅಭ್ಯಾಸವನ್ನು ತಡೆಯಬಹುದು. ಅವರು ತಮ್ಮ ಬೆರಳನ್ನು ಬಾಯಿಗೆ ಇರಿಸಿದಾಗ, ಅವರ ಗಮನವನ್ನು ಬೇರೆಕಡೆ ಸೆಳೆಯಲು ಪ್ರಯತ್ನಿಸಿ. ಶಿಶುವು ದೂರದರ್ಶನ(ಟಿವಿ)ವನ್ನು ನೋಡುತ್ತಿದ್ದಾಗ, ಅವರ ಬೆರಳು ಚೀಪುವುದನ್ನು ನಿಲ್ಲಿಸಲು ಅವರ ಬೆರಳುಗಳು ಕಾರ್ಯನಿರತವಾಗಿರುವಂತೆ ನೋಡಿಕೊಳ್ಳಿ ಅಥವಾ ಶಿಶುವಿಗೆ ಒಂದು ಚೆಂಡನ್ನು ನೀಡಿ ಅದರ ಬೆರಳನ್ನು ಬಾಯಿಗೆ ಇರಿಸುವುದರಿಂದ ಅದರ ಗಮನ ಬೇರೆಡೆ ಸೆಳೆಯುವಂತೆ ಮಾಡಿ.ಶಿಶುವು ಮಲಗುವ ಮೊದಲು ಹೆಬ್ಬೆರಳನ್ನು ಚಿಪುತ್ತಿದ್ದರೆ, ಅವರಿಗೆ  ಹಾಡನ್ನು ಅಥವಾ ಕಥೆಯನ್ನು ಹೇಳುವ ಮೂಲಕ ನಿದ್ದೆ ಮಾಡಲು ಸಹಾಯ ಮಾಡುವುದು.

ನಿಮ್ಮ ಮಗು ಹೆಬ್ಬೆರಳನ್ನು ಚೀಪುತ್ತಿರುವ ಬಗ್ಗೆ ಚಿಂತಿಸುವುದರ ಬದಲು, ನಿಮ್ಮ ಮಗು ತನ್ನ ಹೆಬ್ಬೆರಳನ್ನು ಚೀಪುವ ತೀವ್ರತೆಯನ್ನು ಗಮನಿಸಿ. ಆರಂಭಿಕ ಹಂತದಲ್ಲಿ, ಶಿಶುಗಳು ಅದನ್ನು ಲಘುವಾಗಿ ಮಾಡುತ್ತಾರೆ, ಆದರೆ ಕಾಲ ಕಳೆದಂತೆ, ಅವರು ತಮ್ಮ ನಾಲಿಗೆ ಮತ್ತು ಹಲ್ಲಿನ ಚಲನೆಗಳನ್ನು ತೀವ್ರಗೊಳಿಸಲು ಪ್ರಾರಂಭಿಸುತ್ತಾರೆ. ನಿಮ್ಮ ಮಗುವಿನ ಬೆರಳಿನ ಚಲನೆಯ ಬಗ್ಗೆ ಗಮನ ಇಟ್ಟುಕೊಂಡಿರಿ. ತೀವ್ರತೆಯು ತೀರಾ ಗಟ್ಟಿಯಾಗಿರುವುದನ್ನು ಅಥವಾ ಹೆಚ್ಚಿರುವುದನ್ನು ನೀವು ಗಮನಿಸಿದರೆ, ನಿಮ್ಮ ಮಗುವಿಗೆ ೩ ವರ್ಷ ತುಂಬುವುದರೊಳಗೆ ಅಭ್ಯಾಸವನ್ನು ಬಿಡಿಸಲು ಪ್ರಯತ್ನಿಸಿ.

ಒಮ್ಮೆ ಶಾಶ್ವತ ಹಲ್ಲುಗಳು ಬೆಳೆಯಲು ಪ್ರಾರಂಭಿಸಿದಾಗ, ನಿಮ್ಮ ಮಗುವಿನ ಹಲ್ಲು ಮತ್ತು ದವಡೆಯ ಆಕಾರವು ಇದರಿಂದ(ಬೆರಳು ಚೀಪುವುದರಿಂದ)  ಹಾನಿಯಾಗಬಹುದು ಅಥವಾ ವಿಕಾರಗೊಳ್ಳಬಹುದು. ಅವರು ೫ ವರ್ಷಗಳ ವಯಸ್ಸನ್ನು ಮುಟ್ಟುವ ಮೊದಲು ಈ ಅಭ್ಯಾಸವನ್ನು ಬಿಡಿಸಲು ಪ್ರೋತ್ಸಾಹಿಸಿ. ನಿಮ್ಮ ಮಗು ಅಭ್ಯಾಸವನ್ನು ಮುಂದುವರೆಸಲು ನಿರ್ಧರಿಸಿದರೂ, ಅದನ್ನು ತಡೆಯಲು ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಿ.

ನಿಮ್ಮ ಮಗು ತನ್ನ ಬೆರಳನ್ನು ಬಾಯಿಗೆ ಇರಿಸುವ ಸಮಯದಲ್ಲಿ, ಅದರ ಗಮನವನ್ನು ಬೇರೆಡೆ ಸೆಳೆಯಿರಿ. ಮಗುವಿಗೆ ಶಾಶ್ವತ ಹಲ್ಲು ಬೆಳೆಯಲು ಪ್ರಾರಂಭಿಸುವ ಮೊದಲು ನೀವು ಮಗುವಿನ ಈ ಅಭ್ಯಾಸವನ್ನು ಬಿಡಿಸಬೇಕು. ನೆನಪಿನಲ್ಲಿಡಿ, ನಿಮ್ಮ ಮಗುವಿನ ಈ ಅಭ್ಯಾಸವನ್ನು ಬಿಡಿಸಲು ಯಾವುದೇ ಕಠಿಣ ವಿಧಾನಗಳನ್ನು ಎಂದಿಗೂ ಬಳಸಬಾರದು, ಏಕೆಂದರೆ ಅದರಿಂದ ಮತ್ತಷ್ಟು ಕೆಟ್ಟ ಪರಿಣಾಮಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon