Link copied!
Sign in / Sign up
5
Shares

ನಿಮ್ಮ ಮಗು ಪ್ರೀತಿ ವ್ಯಕ್ತಪಡಿಸುವ ೧೦ ಮಾರ್ಗಗಳು

ನಮ್ಮ ಕೈಯಲ್ಲಿ ನಾವು ಹಿಡಿದಿರುವ ಈ ಶಿಶುಗಳ ಮನಸ್ಸಿನಲ್ಲಾಗುವ ವೇಗದ ಅಭಿವೃದ್ಧಿಶೀಲ ಬೆಳವಣಿಗೆಗಳು ನಮ್ಮನ್ನು ಆಗಾಗ್ಗೆ ಆಶ್ಚರ್ಯ ಪಡಿಸುತ್ತವೆ. ಬಹಳ ಸಾಮಾನ್ಯವಾಗಿ, ಅವರನ್ನು ನಾವು ತೋಳಿನಲ್ಲಿ ಎತ್ತಿಕೊಂಡಿರುವಾಗ ಅವರ ಆರಾಮದಯಕವಲ್ಲದ(ಅಥವಾ ಅಸಹಜತೆಯ) ಯಾವುದೇ ಚಿಹ್ನೆಗಳು, ಅವರಿಗೆ ನಾವು ಇಷ್ಟವಾಗದ ಕಾರಣ ನಮ್ಮಿಂದ ದೂರ ಹೋಗಲು ಅಥವಾ ಬೇರೊಬ್ಬರು ಎತ್ತಿಕೊಳ್ಳುವುದನ್ನು ಶಿಶುವು ಬಯಸುತ್ತಿದೆ ಎಂದು ನಾವು ಚಿಂತಿಸುತ್ತಿವಿ.

ನಾವು ಹೊಂದಿರುವ ಎಲ್ಲಾ ಗೊಂದಲ ಮತ್ತು ಪ್ರಶ್ನೆಗಳಿಗೆ, ಮಕ್ಕಳು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತವೆ ಎಂಬ ಕೆಲವು ವಿಷಯಗಳನ್ನು ಇಲ್ಲಿ ಬಿಚ್ಚಿಡಲಾಗಿದೆ: 

೧.ಕಣ್ಣಿನ ಸಂಪರ್ಕ(/ ಕಣ್ಣಿನಲ್ಲಿ ಸಂಭಾಷಣೆ)

ನಿಮ್ಮ ಮಗುವು ನಿಮ್ಮ ಮೇಲಿನ  ಆಕರ್ಷಣೆ/ಪ್ರೀತಿಯನ್ನು ಮೊದಲು ಕಣ್ಣಿನ ಮೂಲಕ ವ್ಯಕ್ತಪಡಿಸುತ್ತದೆ. ನಿಮ್ಮ ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡುವವರೆಗೂ ಅದು ನಿಮಗೆ ತಿಳಿಯದು. ಸಾಮಾನ್ಯವಾಗಿ, ಶಿಶು ಜನನವಾಗಿ ಕೆಲವು ವಾರಗಳು ಕಳೆದಂತೆ, ತಮ್ಮ ತಾಯಿಯ ಕಣ್ಣುಗಳಲ್ಲಿ  ದೀರ್ಘಕಾಲದವರೆಗೆ ಆಳವಾಗಿ ನೋಡಲು ಪ್ರಾರಂಭಿಸುತ್ತವೆ. ಇದು ನಿಮ್ಮ ಮಗು ನಿಮ್ಮೊಂದಿಗೆ ಆರಾಮದಾಯಕವಾಗಿದೆಯೆಂದು ತೋರಿಸುತ್ತದೆ ಮತ್ತು ನಿಮ್ಮನ್ನು ಇನ್ನಷ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಹಾಗೂ ಶಿಶುವು ನಿಮ್ಮನ್ನು ಆಳವಾಗಿ ಪ್ರೀತಿಸಲು ಶುರುಮಾಡಿದೆ. ಮತ್ತು ನಿಮ್ಮಿಂದ ಅದೇ ಪ್ರೀತಿಯ ನಿರೀಕ್ಷೆಯಲ್ಲಿದೆ.ಅವರು ನೇರ ನೋಟದಲ್ಲಿ ನಿಮ್ಮ ಮುಖವನ್ನು ಅಧ್ಯಯನ ಮಾಡುತ್ತಾರೆ. ಪ್ರೀತಿ, ಆರೈಕೆ ಮತ್ತು ಸೌಕರ್ಯವನ್ನು (ನೀವು) ಅವರಿಗೆ ಒದಗಿಸುವ ಈ ವಸ್ತುವಿನೊಂದಿಗೆ ತಮ್ಮನ್ನು ಪರಿಚಯಿಸುವ ಮಾರ್ಗವಾಗಿದೆ.

೨.ಮುಗುಳ್ನಗೆ

೬ ವಾರಗಳಿಂದ ೮ ವಾರಗಳವರೆಗೆ, ನಿಮ್ಮ ಮಗು ನಿಮ್ಮ ಬಳಿ ಕಿರುನಗೆಯನ್ನು ಆರಂಭಿಸುತ್ತದೆ, ಇದು ಸಾಮಾನ್ಯ ಪ್ರತಿಫಲಿತವಾಗಿಲ್ಲ, ಆದರೆ ಉದ್ದೇಶಪೂರ್ವಕವಾಗಿ ಮಗು ನಿಮ್ಮ ಬಳಿ ಏನನ್ನೋ ತಿಳಿಸಲು ಬಯಸುವ ನಗು.. ಈ ಹೃದಯ ಕರಗುವ ಮುಗುಳ್ನಗೆ ಶಿಶುವಿನ ಪ್ರೀತಿಯ ಅಗ್ರಗಣ್ಯ ಚಿಹ್ನೆಗಳಲ್ಲಿ ಒಂದಾಗಿದೆ. ಅವರು ನಿಮ್ಮನ್ನು ನೋಡಿ ಅಥವಾ ನಿಮ್ಮ ಧ್ವನಿಯನ್ನು ಕೇಳಿ ಕಿರುನಗೆ ಬಿರಿದರೆ, ಅವರು ನಿಮ್ಮಿಂದ ಅಥವಾ ನಿಮ್ಮ ಧ್ವನಿಯಿಂದ ಅವರಿಗೆ ನಿಜವಾಗಿಯೂ ಸಂತೋಷವಾಗುತ್ತಿದೆ, ಮತ್ತು ನಿಮ್ಮನ್ನು ಅವರು ಬಯಸುತ್ತಿದ್ದಾರೆ ಎಂಬರ್ಥ. ಅದೇ ರೀತಿ, ನಿಮ್ಮನ್ನು ನೋಡುವಾಗ ನಗುವುದು ಸಹ ನಿಮ್ಮ ಮೇಲಿನ ಪ್ರೀತಿಯನ್ನು ಸೂಚಿಸುತ್ತದೆ. ನೀವು ಶಿಶುವಿನ ಅತ್ಯಗತ್ಯಗಳನ್ನು ಖಂಡಿತವಾಗಿಯೂ ಪೂರೈಸುವಿರಿ ಎಂಬ ನಂಬಿಕೆಯಿಂದ ಅದು ಬೇರೆಯವರಿಗಿಂತ ನಿಮ್ಮ ಬಳಿ ಇರಲು ಇಚ್ಚಿಸುತ್ತದೆ. ನಿಮ್ಮನ್ನು ನೋಡಿದಾಗ ನಕ್ಕರೆ ಅದು ನಿಮ್ಮ ಬಳಿ ಬರಲು ಇಚ್ಚಿಸುತ್ತೇನೆ ಎಂಬ ಸೂಚನೆ ನೀಡಿದಂತೆ. ಈ ನಗು ಪದೆ ಪದೆ ತೋರುವುದರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ಬಾಂಧವ್ಯವು ಹೆಚ್ಚುತ್ತಾಹೊಗುತ್ತದೆ. 

೩.ಗುರುತಿಸುವಿಕೆ

ಕೆಲವೇ ವಾರಗಳಲ್ಲಿ, ಶಿಶುಗಳು ತಮ್ಮ ಪ್ರಾಥಮಿಕ ಪಾಲನೆದಾರರನ್ನು ಗುರುತಿಸಲು ಸಮರ್ಥರಾಗಿರುತ್ತಾರೆ, ಇದು ಹೆಚ್ಚಾಗಿ, ತಾಯಿ ಅಥವಾ ತಂದೆ ಆಗಿರಬಹುದು, ಮಗುವು ತಾಯಿಯನ್ನು ಹೆಚ್ಚು ಗುರುತಿಸಿಕೊಂಡಿರುವುದು ಸಂಶೋದನೆಯಿಂದ ದೃಡಪಟ್ಟಿದೆ. ಇದರ ಅರ್ಥ ನಿಮ್ಮ ಮಗುವು ನಿಮ್ಮ ಮುಖ ಮತ್ತು ಧ್ವನಿಯನ್ನು ಅನೇಕ ಜನರ ನಡುವೆಯೂ ಸುಲಭವಾಗಿ ಗುರುತಿಸಬಹುದು ಎಂದು. ಬೇರೊಬ್ಬರಿಗಿಂತಲೂ ನಿಮ್ಮ ಮಗುವು ನಿಮ್ಮ ಧ್ವನಿಗೆ ಹೆಚ್ಚು ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ನೀವು ನೋಡುತ್ತೀರಿ. ಉದಾಹರಣೆಗೆ, ಬೇರೊಬ್ಬರು ನಿಮ್ಮ ಮಗುವನ್ನು ಹಿಡಿದಿದ್ದರೆ(ಎತ್ತಿಕೊಂಡಿದ್ದರೆ) ಮತ್ತು ನೀವು ಆ ವ್ಯಕ್ತಿಯೊಂದಿಗೆ ಮಾತಾಡುತ್ತಿದ್ದರೆ, ಆ ವ್ಯಕ್ತಿಯ ಮಾತು ಅಥವಾ ಚಲನ ವಲನಗಳನ್ನು  ಲೆಕ್ಕಿಸದೇ ನೀವು ಮಾತನಾಡಿದಾಗ ಅಥವಾ ಮಗುವಿನ ಹತ್ತಿರ ಸಂಚರಿಸಿದಾಗ ಮಗುವಿನ ಕಣ್ಣುಗಳು ನಿಮ್ಮನ್ನೇ ನೋಡುವ ಸಾಧ್ಯತೆಯಿದೆ. ಏಕೆಂದರೆ ನಿಮ್ಮ ಮಗುವಿಗೆ ನೀವು ಅವನ/ಅವಳ ಕಾಳಜಿಯನ್ನು ವಹಿಸುವವರು ಎಂದು ಅವರು ಅರ್ಥಮಾಡಿಕೊಂಡಿರುತ್ತಾರೆ. ಮತ್ತು ಅವರು ಈಗಾಗಲೇ ನಿಮ್ಮೊಂದಿಗೆ ವಿಶೇಷ ಬಂಧವನ್ನುಬೆಳೆಸಿಕೊಂಡಿರುತ್ತಾರೆ.  

೪.ಬಾಂಧವ್ಯ

ನಿಮ್ಮ ಮಗುವಿನೊಂದಿಗೆ ನೀವು ಆರೋಗ್ಯಕರವಾದ ಬಂಧವನ್ನು ರಚಿಸಿಕೊಂಡಾಗ, ನಿಮ್ಮ ಮಗುವು ನಿಮ್ಮ ಮಾತಿಗೆ ಅದೇ ಬಂಧದಲ್ಲಿ ಪ್ರತಿಕ್ರಿಯಿಸುವುದು ಸ್ಪಷ್ಟವಾಗುತ್ತದೆ. ಆರೋಗ್ಯಕರ ಬಂಧದ ಒಂದು ಚಿಹ್ನೆಯೆಂದರೆ, ನೀವು ನಿಮ್ಮ ಮಗು ಇರುವ ಕೋಣೆಯನ್ನು ಪ್ರವೇಶಿಸಿದಾಗ ಮಗುವು ಅದರ ಜೊತೆಯಲ್ಲಿರುವವರನ್ನು ಬಿಟ್ಟು ನಿಮ್ಮ ಕಡೆ ಗಮನಿಸಿ ಕಿರುನಗುವುದು ಅಥವಾ ನಗು ಬೀರುವುದು. ಕೋಣೆಯಲ್ಲಿ ಬೆಳಕನ್ನು ಚೆಲ್ಲಿದಂತೆ ನಿಮ್ಮನ್ನು ಮಗುವು ನೋಡುತ್ತದೆ, ಮತ್ತು ಈ ನಗೆ ಖಂಡಿತವಾಗಿಯೂ ನಿಮ್ಮ ಹೃದಯವನ್ನು ಬೆಳಗಿಸುತ್ತದೆ!, ನಿಮ್ಮನ್ನು ನೋಡಿದ ಖುಷಿಯಲ್ಲಿ ಮಗುವು ಸಹ ಸಂತೋಷದಾಯಕ ಶಬ್ದಗಳನ್ನು ಮಾಡುತ್ತದೆ ಮತ್ತು ನೀವು ಹಿಂತಿರುಗಿದಾಗ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತದೆ. 

೫.ತಲುಪಲು

ಮಗುವಿನ ಅಕ್ಕರೆಯ ಮತ್ತೊಂದು ಚಿಹ್ನೆಯೆಂದರೆ, ಅದು ನಿಮ್ಮನ್ನು ನೋಡಿದ ತಕ್ಷಣ ನಿಮ್ಮ ಬಳಿ ಬರಲು ಪ್ರಯತ್ನಿಸುವುದು, ಅಥವಾ ನನ್ನನ್ನು ನಿನ್ನ ತೋಳಿನಲ್ಲಿ ಇರಿಸಿಕೋ (ಎತ್ತಿಕೋ) ಎಂದು ನಿಮ್ಮ ಬಳಿ ಕೈ ಚಾಚುವುದು. ಮಗುವು ಬೇರೆಯವರಿಗಿಂತಲೂ ನಿಮ್ಮ ಬಳಿ ಇರಲು ಇಚ್ಚಿಸುವುದು, ಮಗುವನ್ನು ಬೇರೆಯವರು ಕರೆದುಕೊಂಡ್ಡಿದ್ದು, ಅದು ನಿಮ್ಮ ಬಳಿ ಬರಲು ಸಾಧ್ಯವಾಗದಿದ್ದರೆ, ಅದು ಆ ಕೂಡಲೇ ಅಳಲು ಪ್ರಾರಂಬಿಸಬಹುದು. ಮಕ್ಕಳು ತಮ್ಮ ಪ್ರೀತಿಯನ್ನು ಅಥವಾ ಬಂಧವನ್ನು ಹಂಚಿಕೊಳ್ಳುವ ವ್ಯಕ್ತಿಯೊಂದಿಗೆ ದೈಹಿಕ ಸಾಮೀಪ್ಯವನ್ನು(ಯಾವಾಗಲು ಹತ್ತಿರವಿರಲು) ಬಯಸುತ್ತವೆ. 

೬. ಚರ್ಚೆ

ಶಿಶುಗಳು ತಮ್ಮ ಪ್ರೀತಿಪಾತ್ರರೊಂದಿಗೆ ತಮ್ಮ ಅಸ್ಪಷ್ಟ ಮಾತುಗಳನ್ನು/ ಬಯಕೆಗಳನ್ನು ಹಂಚಿಕೊಳ್ಳಲು ಶುರುಮಾಡುತ್ತವೆ. ಅವರನ್ನು ಪ್ರೀತಿಸುವ ಅಥವಾ ಖುಷಿಯಾಗಿ ಇಡುವ ವ್ಯಕ್ತಿಗಳ ಹತ್ತಿರ ಮಕ್ಕಳು ಹೆಚ್ಚು ತಮ್ಮ ಅಸ್ಪಷ್ಟ ಮಾತುಗಳನ್ನು ಮತ್ತು ನಗುವನ್ನು ಹಂಚಿಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಮಗುವು ನಿಮ್ಮ ಹತ್ತಿರ ಶಿಶುಮಾತುಗಳನ್ನು ಆಡಲು ಪ್ರಾರಂಬಿಸಿದರೆ, ಮಗುವು ನಿಮ್ಮನ್ನು ಪ್ರೀತಿಸುತ್ತಿದೆ, ಮತ್ತು ತನ್ನ ಬಳಿ ನಿಮ್ಮ ಇರುವಿಕೆಯನ್ನು ಬಯಸುತ್ತಿದೆ ಎಂಬ ಚಿಹ್ನೆಯಾಗಿರುತ್ತದೆ. 

೭.ಆತಂಕ

ಮಗು ಪೋಷಕರು ಅಥವಾ ಪಾಲನೆದಾರರಿಂದ ಬೇರ್ಪಟ್ಟಾಗ ಮಗುವಿನ ಮುಖದಲ್ಲಿ ಕಾಣುವ ನಾನು ಅವರಿಂದ ಬೇರ್ಪಡುತ್ತಿರುವೆ ಎಂಬ ಆತಂಕವು ನಿಮ್ಮ ಮೇಲಿನ ಪ್ರೀತಿಯ ಇನ್ನೊಂದು ಚಿಹ್ನೆ. ನೀವು ನಿಮ್ಮ ಮಗುವನ್ನು ಶಿಶುವಿವಾಹರದಲ್ಲಿ ಅಥವಾ ಅಂಗನವಾಡಿಗಳಲ್ಲಿ ಬಿಟ್ಟಾಗ ಅದು ನಿಮ್ಮಿಂದ ದೂರವಾಗುವೆ ಎಂದು ಅಳಲು ಆರಂಬಿಸಬಹುದು, ಬೇಜಾರು ಮಾಡಿಕೊಳ್ಳಬಹುದು. ನಿಮ್ಮ ಜೊತೆ ಇಲ್ಲದಿರುವುದು ಮಗುವಿಗೆ ಅಹಿತವಾಗಬಹುದು, ಮತ್ತು ಮಗುವು ಸದಾ ನಿಮ್ಮ ಇರುವಿಕೆಯನ್ನು ಬಯಸುತ್ತದೆ. 

೮. ಚುಂಬನ(ಮುತ್ತುಕೊಡುವುದು)

೨ ತಿಂಗಳು ಕಳೆದ ನಂತರ ಮಗುವು ಮುತ್ತಿಡುವುದನ್ನು ಕಲಿಯುತ್ತದೆ, ಮತ್ತು ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಪೋಷಕರಿಗೆ ಅಥವಾ ತನ್ನ ಪ್ರೀತಿಪಾತ್ರರಿಗೆ ಚುಂಬಿಸುತ್ತದೆ. ಮಗುವು ಮೊದಲು ತನ್ನ ಬಾಯಿಯನ್ನು ತೆರೆದು, ತನ್ನ ತೇವಾಂಶದ ಮುತ್ತನ್ನು ಕೊಡಲು ಪ್ರಾರಂಭಿಸಿ, ನಿಧಾನವಾಗಿ ಈ ಕ್ರಿಯೆಯಲ್ಲಿ ನೈಪುಣ್ಯತೆಯನ್ನು ಪಡೆಯುತ್ತದೆ. 

೯. ಅನುಕರಣೆ

ಮಗುವು ತಾನು ಇಷ್ಟಪಡುವವರನ್ನು ಗಮನಿಸಿ,  ಅವರಂತೆ ಅವರ ಭಾವಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಅನುಕರಿಸಲು ಪ್ರಾರಂಬಿಸುತ್ತದೆ. ಇದರಿಂದಾಗಿ ನಿಮ್ಮ ಮಗುವನ್ನು ಸಾಮಾಜಿಕ ಪರಿಸ್ಥಿತಿಯಲ್ಲಿ ಇರುವಂತೆ ನೀವು ಗಮನಿಸಿದರೆ, ಮಗುವು ನಿಮ್ಮನ್ನು ಪರಿಸ್ಥಿತಿಯ ವಾತಾವರಣದ ಸೂಚಕವಾಗಿ ಬಳಸುತ್ತದೆ. ಅಂದರೆ ನಿಮ್ಮನ್ನು ನೋಡಿ ಅದು ತನ್ನ ಹಾವಭಾವಗಳನ್ನು ಕಲಿಯುತ್ತಾ ಹೋಗುತ್ತದೆ.ಇದರಿಂದ ನಿಮ್ಮ ಅಭಿವ್ಯಕ್ತಿಯ ಪ್ರತಿಬಿಂಬವನ್ನು ನಿಮ್ಮ ಮಗುವಿನಲ್ಲಿ ನೋಡಬಹುದು. 

೧೦. ಸಾಮೀಪ್ಯ

ನಿಮ್ಮ ಮಗು ಅಂಬೆಗಾಲಿಡುವಷ್ಟು ಬೆಳೆದಿದ್ದರೆ, ಮಗುವು ನಿಮ್ಮನ್ನು ಅನ್ವೇಷಿಸಲು ಒಲವನ್ನು ತೋರುತ್ತಾರೆ. ಮಕ್ಕಳು ಕುತೂಹಲದಿಂದ ಕೂಡಿರುತ್ತವೆ, ಮತ್ತು ಅವು ಕಲಿಯಲು ಸಾಕಷ್ಟು ಉತ್ಸುಕರಾಗಿರುತ್ತಾರೆ. ನಿಮ್ಮ ಮಗು ತೆವಳಿಕೊಂಡು ಅಥವಾ ಅಂಬೆಗಾಲಿನಲ್ಲಿ ಸಾಕಷ್ಟು ದೂರ ಹೋಗಿದ್ದರೆ,ಸ್ವಲ್ಪ ಸಮಯದ ನಂತರ ಮತ್ತೆ ನಿಮ್ಮ ಬಳಿಗೆ ಬರುವುದನ್ನು ನೀವು ಗಮನಿಸಬಹುದು. ಮಗುವು  ನಿಮ್ಮೊಂದಿಗೆ ಹೆಚ್ಚು ಆರಾಮದಾಯಕವಾಗಿರುತ್ತದೆ, ಮತ್ತು ನಿಮಗಾಗಿ ಪ್ರೀತಿಯನ್ನು ಹೊಂದಿದ್ದು, ಹೊರಗಿನ ಪ್ರಪಂಚದ ಸಂಭವನೀಯ ಅಪಾಯಗಳಿಂದ ರಕ್ಷಿಸುವಂತಹ ಸುರಕ್ಷತಾ ವಲಯವಾಗಿ ನಿಮ್ಮನ್ನು ಕಾಣುತ್ತದೆ, ಮತ್ತು ಅದು ನಿಮ್ಮ ಕರ್ತವ್ಯ ಕೂಡ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon