Link copied!
Sign in / Sign up
17
Shares

ನಿಮ್ಮ ಮಗುವು ತನ್ನ ಜೀವನ ಪೂರ್ತಿ ಖುಷಿಯಾಗಿರುವಂತೆ ಬೆಳೆಸುವುದು ಹೇಗೆ ?

ತಾಯ್ತನದ ಜೀವನದ ಅತಿಹೆಚ್ಚು ಸಂಭ್ರಮದ ಭಾಗವೆಂದರೆ ಅದು ನಮ್ಮ ಮಕ್ಕಳು ಖುಷಿಯಾಗಿರುವುದನ್ನು ಹಾಗು ಅವರು ಮಾಡಬೇಕೆಂದಿದ್ದನ್ನು ಸಾಧಿಸುವುದನ್ನು ನೋಡುವುದು. ಆದರೆ ಪೋಷಕರು ತಮ್ಮ ಮಕ್ಕಳು ಕೆಲವೊಮ್ಮೆ ಜೀವನದ ಬಗ್ಗೆ ಬೇಸರ ಹಾಗು ನಕಾರಾತ್ಮಕತೆ ಹೊಂದಿರುವುದನ್ನು ಕಾಣುತ್ತಾರೆ. ನಿಮ್ಮ ಸ್ವಂತ ಮಗುವು ತನ್ನ ಸುತ್ತಲಿನ ಜಗತ್ತಿನಿಂದ ಹಾಗು ಜನರಿಂದ ಏನು ಒಳ್ಳೆಯದನ್ನು ಅಪೇಕ್ಷೆ ಮಾಡುತ್ತಿಲ್ಲ ಎನ್ನುವುದನ್ನು ನೋಡಲು ಪೋಷಕರಾಗಿ ತುಂಬಾ ದುಃಖವಾಗುತ್ತದೆ. ಇದು ನಿಮ್ಮ ಮಗುವಿಗೂ ಆಗದಂತೆ ಹೇಗೆ ತಡೆಯುತ್ತೀರಿ? ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಮಾಡುವಂತಹ ಕೆಲಸಗಳು, ನಿಮ್ಮ ಮಗುವು ಜಗತ್ತನ್ನು ನೋಡುವ ರೀತಿಯ ಮೇಲೆಯೇ ಪ್ರಭಾವ ಬೀರುತ್ತವೆ.

ಹಾಗಾಗಿಯೂ, ನೀವು ನಿಮ್ಮ ಕೈಲಾದಷ್ಟು ಮಟ್ಟಿಗೆ ನಿಮ್ಮ ಮಗುವಿಗೆ ಜಗತ್ತಿನ ಬಗ್ಗೆ ಒಳ್ಳೆಯ, ಸಕಾರಾತ್ಮಕ ಅಭಿಪ್ರಾಯ ಬೆಳೆಯುವಂತೆ ಮಾಡಲು ಕೆಲವೊಂದು ಕೆಲಸಗಳನ್ನು ಮಾಡಬೇಕು :

೧. ಬೆಳ್ಳಿ ರೇಖೆಗಳು

ಪ್ರತಿ ಕಪ್ಪು ಮೋಡದ ಅಂಚಿನಲ್ಲಿ ಬೆಳ್ಳಿ ರೇಖೆಯೊಂದು ಇದ್ದೇ ಇರುತ್ತದೆ. ಯಾವಾಗಲು ನಿಮ್ಮ ಮಗುವಿಗೆ ಅಥವಾ ನಿಮಗೆ ಏನಾದರು ಕೆಟ್ಟದ್ದು ಆದಲ್ಲಿ, ಅದರಲ್ಲಿ ಬೆಳ್ಳಿ ರೇಖೆಗಳನ್ನು ಹುಡುಕಿ. ಇದು ನಿಮ್ಮ ಪುಟ್ಟ ಮಗುವಿಗೆ ತಾನಿರುವ ಪರಿಸ್ಥಿತಿಯಲ್ಲಿ ಒಳ್ಳೆಯದನ್ನು ಹುಡುಕುವುದು ಕಲಿಸುತ್ತದೆ. ನೀವು ಸಕಾರಾತ್ಮಕವಾಗಿ ಇರುವುದನ್ನು ನೋಡಿ, ನಿಮ್ಮ ಮಕ್ಕಳು ನಿಮ್ಮನ್ನು ಪ್ರೇರಣೆ ಆಗಿ ತೆಗೆದುಕೊಳ್ಳುತ್ತಾರೆ. ಪರಿಸ್ಥಿತಿ ಎಷ್ಟೇ ಕೆಟ್ಟದಿದ್ದರೂ, ಅದರಲ್ಲಿ ಒಳ್ಳೆಯದನ್ನು ಹುಡುಕುವುದನ್ನು ಮಕ್ಕಳಿಗೆ ಹೇಳಿಕೊಡಿ. ಇದು ಮುಂದೆ ಅವರಿಗೆ ತಮ್ಮ ತೊಂದರೆಗಳನ್ನು ಸಮರ್ಥವಾಗಿ ಎದುರಿಸಲು ತಯಾರು ಮಾಡುತ್ತದೆ ಹಾಗು ಸದಾಕಾಲ ಆಶಾಭಾವನೆ ಹೊಂದುವಂತೆ ಮಾಡುತ್ತದೆ. ಉದಾಹರಣೆಗೆ, ನಿಮ್ಮ ಮಗು ಆಟವಾಡಬೇಕೆಂದು ಅಂದುಕೊಂಡಿದ್ದು, ಅದೇ ಸಮಯದಲ್ಲಿ ಮಳೆ ಬಂದರೆ, ನಿಮ್ಮ ಮಗುವಿಗೆ ಮಳೆ ಬಂದ ಕಾರಣ ಅವನು/ಅವಳು ಹೇಗೆ ನೀರಿನಲ್ಲಿ ಆಟವಾಡಬಹುದು ಹಾಗು ನಿಂತ ನೀರಿನಲ್ಲಿ ಹೇಗೆ ಪೇಪರ್ ದೋಣಿ ಬಿಡಬಹುದು ಎಂಬುದು ತಿಳಿಸಿ.

೨. ಎಂದಿಗೂ ದೂರಬೇಡಿ

ನಿಮ್ಮ ಮಕ್ಕಳು ಎದುರು ನೀವು ಗೊಣಗುವುದನ್ನು ಅಥವಾ ದೂರುವುದನ್ನು ಮಾಡಬೇಡಿ. ಕೇವಲ ದೂರುವುದಷ್ಟೇ ಸಾಕು ನಕಾರಾತ್ಮಕತೆ ಪಸರಿಸಲು. ನೀವು ಯಾವುದಾದರು ವಿಷಯದ ಬಗ್ಗೆ ದೂರುವುದನ್ನು ನೋಡಿದರೆ, ನಿಮ್ಮ ಮಗುವಿನ ದೃಷ್ಟಿಯಲ್ಲಿ ಆ ಸಂದರ್ಭವು ಇನ್ನಷ್ಟು ನೀರಸ ಹಾಗು ಕೆಟ್ಟದಾಗುತ್ತದೆ. ಇದಲ್ಲದೇ, ಮಗುವು ಇದನ್ನೇ ಗುಣವಾಗಿಸಿಕೊಂಡು ಮುಂದೆ ಎಲ್ಲಾ ವಿಷಯಗಳಲ್ಲೂ ಒಳ್ಳೆಯದನ್ನೆಲ್ಲಾ ಬಿಟ್ಟು ಕೇವಲ ಕೆಟ್ಟದರ ಮೇಲೆ ಮಾತ್ರ ಗಮನ ಹರಿಸಿ ದೂರುವಂತೆ ಮಾಡುತ್ತದೆ.

೩ . ಯಶಸ್ಸು

ನಿಮ್ಮ ಮಕ್ಕಳಿಗೆ ಅವರಿಗೆ ಸ್ವಲ್ಪ ಕಷ್ಟವಾದರೂ ಅವರು ಮಾಡಿ ಮುಗಿಸಬಹುದಾದಂತ ಸಣ್ಣಪುಟ್ಟ ಕೆಲಸಗಳನ್ನು ನೀಡಿ. ಇದು ಅವರಿಗೆ ಏನೋ ಸಾಧಿಸಿದ ಭಾವನೆ ನೀಡುತ್ತದೆ. ನೀವು ಇದನ್ನು ಪ್ರಶಂಸೆ ಮಾಡಿದ್ದಲ್ಲಿ, ಆ ಭಾವನೆ ದ್ವಿಗುಣವಾಗುತ್ತದೆ. ತಮ್ಮ ಸಾಧನೆಗಳ ಬಗ್ಗೆ ಅವರಲ್ಲಿ ಖುಷಿ ಉಂಟಾಗುವಂತೆ ಮಾಡಿ. ಇದು ಅವರನ್ನು ಇನ್ನು ಹೆಚ್ಚು ಕೆಲಸಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತೆ ಹಾಗು ಅವರಲ್ಲಿ ಉತ್ಸಾಹ ಕುಂದದಂತೆ ನೋಡಿಕೊಳ್ಳುತ್ತದೆ. ಹೊಗಳಿಕೆಗಳು ಅವರಿಗೆ ದಕ್ಕ ಬಹುಮಾನದಂತೆ, ಇದು ಅವರಿಂದ ಇನ್ನಷ್ಟು ಉತ್ತಮ ಪ್ರತಿಕ್ರಿಯೆಗಳು ಬರುವಂತೆ ಮಾಡುತ್ತವೆ.

೪. ವಿಶ್ವಾಸ

ನಿಮ್ಮ ಮಕ್ಕಳನ್ನು ಅವರ ಪಾಡಿಗೆ ಅವರು ಆಟ ಆಡಲು ಅಥವಾ ಕೆಲಸಗಳಲ್ಲಿ ತೊಡಗಿಕೊಳ್ಳಲು ಬಿಡಿ. ಇದು ಅವರಲ್ಲಿ ಸೃಜನಶೀಲತೆ ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಈ ಸ್ವಾಂತಂತ್ರ್ಯವನ್ನು ನೀವು ಅವರಿಗೆ ನೀದದ್ದಲ್ಲಿ, ಮುಂದೆ ಅವರು ಹೆಚ್ಚು ಹೆಚ್ಚು ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವಂತೆ ಮಾಡುತ್ತದೆ, ಅದರಲ್ಲೂ ಅವರಿಗೆ ಹಿತಕರ ಹಾಗು ಅನುಕೂಲಕರ ಫಲ ಸಿಗುವಂತ್ತಿದವುಗಳಲ್ಲಿ. ಅವರ ಆಟವನ್ನು ಪ್ರೋತ್ಸಾಹಿಸುವುದು ಮಕ್ಕಳಲ್ಲಿ ಸಾಧನೆಯ ಮನೋಭಾವ ಬೆಳೆಸಲು ಮಾಡಲು ಒಂದು ದಾರಿ. ಇದರಿಂದ ಅವರ ಆತ್ಮಸ್ಥೈರ್ಯ ಹೆಚ್ಚುತ್ತದೆ ಹಾಗು ಅವರು ಹೆಚ್ಚು ಸಕಾರಾತ್ಮಕವಾಗಿ ಇರುವಂತೆ ಆಗುತ್ತದೆ.

೫. ಒತ್ತಡವನ್ನು ದೂರವಿಡಿ

ಕಾರಣವಿಲ್ಲದೆ ಒತ್ತಡ ಹೇರುವಂತ ವಿಷಯಗಳಿಂದ ನಿಮ್ಮ ಮಕ್ಕಳನ್ನು ದೂರವಿಡಿ. ನಿಮ್ಮ ಮಕ್ಕಳು ಬೆಳೆದು ಅವುಗಳನ್ನು ಎದುರಿಸುವಂತೆ ಆಗುವವರೆಗು. ಉದಾಹರಣೆಗೆ ಆರ್ಥಿಕ ಅಥವಾ ವೈದ್ಯಕೀಯ ತೊಂದರೆಗಳು. ಈ ಸಮಸ್ಯೆಗಳೆಲ್ಲ ಅವರಿಗೆ ಚಿಕ್ಕ ವಯಸ್ಸಿನಲ್ಲೇ, ಏನು ಅರಿಯದಂತಹ ಹಾಗು ಏನು ಮಾಡಬೇಕೆಂದು ತಿಳಿಯದಂತಹ ವಯಸ್ಸಿನಲ್ಲೇ ಎದುರಾದರೆ, ಅವರು ಜಗತ್ತನ್ನು ಒಳ್ಳೆಯ ದೃಷ್ಟಿ ಇಂದ ನೋಡುವುದಿಲ್ಲ. ಇಂತಹ ಯೋಚನೆಗಳನ್ನು ಮಕ್ಕಳಿಂದ ದೂರವಿಡುವುದರಿಂದ, ಅವರಿಗೆ ಇಂತಹ ನಕಾರಾತ್ಮಕ ಯೋಚನೆಗಳು ಬರುವುದಿಲ್ಲ.

೬. ತೊಂದರೆಗಳು

ನಿಮ್ಮ ಪುಟ್ಟ ಮಗುವು ಯಾವಾಗಲಾದರೂ ತನ್ನ ತೊಂದರೆಯನ್ನು ನಿಮ್ಮ ಬಳಿ ಹೇಳುತ್ತಿದ್ದರೆ, ಅದನ್ನು ಪರಾನುಭೂತಿ ಇಂದ ಕೇಳಿಸಿಕೊಳ್ಳಿ ಹಾಗು ಅವರಿಗೆ ಪರಿಹಾರಗಳನ್ನು ತಿಳಿಸಿ. ಇದು ಮಕ್ಕಳಿಗೆ ಸಮಸ್ಯೆ ಎಷ್ಟೇ ದೊಡ್ದದೆನಿಸಿದರು, ಅವುಗಳನ್ನು ಬಗೆಹರಿಸಬಹುದು ಎಂಬುದನ್ನು ಅವರಿಗೆ ತೋರಿಸಿಕೊಡುತ್ತದೆ. ಅವರಿಗೆ ಇರುವ ತೊಂದರೆಯ ಬಗೆಗಿನ ಅವರ ದೃಷ್ಟಿಕೋನ ಬದಲಾಯಿಸಿ. ಅಕಸ್ಮಾತ್ ಅವರು ಇದು ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿದರೆ, ಸತತ ಪ್ರಯತ್ನ ಹಾಗು ಅಭ್ಯಾಸದೊಂದಿಗೆ ಅದನ್ನು ಸಾಧಿಸಬಹುದು ಎಂದು ಮನವರಿಕೆ ಮಾಡಿಕೊಡಿ. ನಿಮ್ಮ ಮಗುವಿಗೆ ಯಾವುದೇ ಸಂದರ್ಭದಲ್ಲೂ ಸ್ಥೈರ್ಯ ಕಳೆದುಕೊಳ್ಳದಿರಲು ಹೇಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon