Link copied!
Sign in / Sign up
31
Shares

ಯಾವುದೇ ಪೌಡರ್, ಮಾತ್ರೆ ಇಲ್ಲದೆ ಮಕ್ಕಳು ಶರವೇಗದಲ್ಲಿ ಎತ್ತರ ಬೆಳೆಯಲು ಇವುಗಳನ್ನು ಮಾಡಿ!

ಮಕ್ಕಳು ಪ್ರೌಢಾವಸ್ಥೆಗೆ ಬರುವವರೆಗೆ ವರ್ಷಕ್ಕೆ ೨ ಇಂಚು ಉದ್ದ ಎತ್ತರವಾಗಿ ಬೆಳೆಯುತ್ತಾರೆ. ಅವರು ಪ್ರೌಢಾವಸ್ಥೆಗೆ ತಲುಪಿದ ನಂತರ ವರ್ಷಕ್ಕೆ ೨.೫-೫ ಇಂಚು ಉದ್ದ ಎತ್ತರವಾಗಿ ಬೆಳೆಯಲು ಪ್ರಾರಂಭಿಸುತ್ತಾರೆ. ಇದು ಎಲ್ಲರಿಗು ತಿಳಿದಿರುವ ವಿಷಯ, ಬೆಳೆಯುತ್ತಿರುವ ಮಕ್ಕಳು ದಿನಕ್ಕೆ ೨ ಲೋಟ ಹಾಲು ಕುಡಿಯುದರಿಂದ ಅವರ ಬೆಳವಣಿಗೆಗೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ(D)ಯ ಬೇಡಿಕೆಯನ್ನು ಪೂರೈಸಬಹುದು. ಅವರು ಸೂರ್ಯನ ಕಿರಣಗಳ ಕೆಳಗೆ ಆಟವಾಡುವುದು ಕೂಡ ವಿಟಮಿನ್ ಡಿ ಯನ್ನು ಹೊಂದಲು ಸಹಾಯವಾಗುತ್ತದೆ.

ನಿಮ್ಮ ಮಗು ತನ್ನ ಎತ್ತರವನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮಗಳಿವೆ. ಕೆಲವನ್ನು ನಾವು ಇಲ್ಲಿ ವಿವರಿಸಿದ್ದೇವೆ.

೧.ಯೋಗ

ಕೆಲವು ಯೋಗ ಆಸನಗಳನ್ನು ಮಾಡುವುದರಿಂದ ಮಗುವಿನ ಎತ್ತರ ಹೆಚ್ಚಿಸಲು ಸಹಾಯವಾಗುತ್ತದೆ. ಚಿತ್ರದಲ್ಲಿ ತೋರಿಸಿರುವ ಆಸನಗಳು ಸ್ನಾಯು ಬೆಳವಣಿಗೆ ಮತ್ತು ದೇಹ ಪುಷ್ಟಿಗೆ ಸಹಾಯವಾಗುತ್ತದೆ.

೨.ನೇತಾಡುವುದು

ಈ ವಿಧಾನವು ನಿಮ್ಮ ಸುತ್ತ ಮೊದಲಿನಿಂದಲೂ ಇದೆ ಇದನ್ನು ನೀವು ಮಾಡದೇ ಇರುವಂತಿಲ್ಲ, ಇದನ್ನು ಮಾಡುವುದರಿಂದ ನಿಮ್ಮ ಕೈಗಳ ಸ್ನಾಯುಗಳು ಉತ್ತಮವಾಗುತ್ತವೆ.

ನೀವು ಮಾಡಬೇಕಾದದು, ಸಂಪೂರ್ಣ ನೆಲದಿಂದ ಮೇಲಕ್ಕೆ ಇರುವ ಒಂದು ಕೊಂಬೆ ಅಥವಾ ಕೋಲಿಗೆ ನೇತಾಕಿಕೊಳ್ಳುವುದು. ನೀವು ನೇತಾಕಿಕೊಂಡಿರುವಾಗ ೧೦ ಬಾರಿ ದೇಹವನ್ನು ಮೇಲಕ್ಕೆ ಎತ್ತಿ ಕೆಳಗಡೆ ಬಿಡುವುದು(ಪುಶ್ ಅಪ್ಸ್ ) ಮಾಡುವುದು ಕೈಗಳಿಗೆ ಬಲ ನೀಡುತ್ತದೆ.

೩.ಹಿಗ್ಗುವುದು

ನಿಮ್ಮ ಮಗುವಿನ ದೇಹವನ್ನು ಬಳುಕುವಂತೆ ಮತ್ತು ಸ್ನಾಯು ಅಥವಾ ದೇಹ ನೋವು ಬರದಂತೆ ಇರಿಸಲು ಇದು ತುಂಬಾ ಸಹಾಯಕಾರಿ. ನಿಮ್ಮ ಎತ್ತರವನ್ನು ಹೆಚ್ಚಿಸಲು ವ್ಯಾಯಾಮ ಮಾಡುವಾಗ ಇದನ್ನು ಮಾಡುವುದು ಅತ್ಯಗತ್ಯ.

ಈ ವ್ಯಾಯಾಮವನ್ನು ಪ್ರತಿದಿನ ಮಾಡಬೇಕು.

೪.ತಿವಿತ(Lunges)

ಇವು ಚಿಕ್ಕ ಸ್ನಾಯುಗಳನ್ನು ಹಿಗ್ಗಿಸಲು ಮತ್ತು ಸ್ನಾಯು ಗುಂಪುಗಳಿಗೆ ಶಕ್ತಿ ನೀಡಲು ಸಹಾಯ ಮಾಡುತ್ತವೆ. ನಿಮ್ಮ ಮಗುವು ಈ ವ್ಯಾಯಾಮವನ್ನು ಪ್ರತಿದಿನ ಮಾಡಬಹುದು.

ನಿಮ್ಮ ದೇಹವನ್ನು ನೇರವಾಗಿ ಇರಿಸಿಕೊಂಡು, ನಿಮ್ಮ ತೋಳುಗಳನ್ನು ನೇರವಾಗಿ ಒಂದೇ ಎತ್ತರಕ್ಕೆ ಸಮನಾಗಿರಿಸಿ ಮುಖವನ್ನು ನೇರವಾಗಿ ಮಾಡುವುದು, ಒಂದು ಕಾಲನ್ನು ಮುಂದೆ ಇರಿಸುವುದು, ಮೊಣಕಾಲು ೯೦ಡಿಗ್ರಿ ಆಗುವ ವರೆಗೆ ನಡುವನ್ನು ಕೆಳಗೆ ತರುವುದು, ಮತ್ತು ೫ ಸೆಕೆಂಡ್ ಹಾಗೆ ಇರಿ ಮತ್ತು ಕಾಲುಗಳನ್ನು ಅಡಲುಬದಲು ಮಾಡಿ, ಹೀಗೆ ೧೫ ಬಾರಿ ಪುನಾರಾವರ್ತಿಸಿ.

೫.ಕಾಲು ಬೆರಳನ್ನು ಮುಟ್ಟಿ

ಈ ವ್ಯಾಯಾಮ ನಿಮ್ಮ ಬೆನ್ನು ಮತ್ತು ತೋಳು ಸ್ನಾಯುಗಳಿಗೆ ಶಕ್ತಿಯನ್ನು ನೀಡುತ್ತದೆ.

ಇದನ್ನು ಮಾಡಲು ೨ ವಿಧಾನಗಳಿವೆ. ನೀವು ನೇರವಾಗಿ ನಿಂತುಕೊಂಡು ನಿಮ್ಮ ಕೈ ಬೆರಳಿನಿಂದ ಕಾಲು ಬೆರಳುಗಳನ್ನು ಒಟ್ಟಿಗೆ ಮುಟ್ಟಿ. ಸ್ವಲ್ಪ ಕಾಲನ್ನು ಅಗಲಮಾಡಿ ನೇರವಾಗಿ ನಿಂತುಕೊಂಡು, ನಿಮ್ಮ ಎಡ ಕೈ ಬೆರಳಿನಿಂದ ಬಲ ಕಾಲು ಬೆರಳನ್ನು ಮುಟ್ಟಿ ಮತ್ತು ಬಲ ಕೈ ಬೆರಳಿಂದ ಎಡ ಕಾಲು ಬೆರಳನ್ನು ಮುಟ್ಟಿ. ದಿನಕ್ಕೆ ೧೫ ಬಾರಿ ಅಭ್ಯಸಿಸಿ, ಮತ್ತು ಪ್ರತಿದಿನ ಮಾಡಿ.

೬.ನೆಗೆಯುವುದು

ದಿನನಿತ್ಯ ನೆಗೆಯುದರಿಂದ ಕೈ ಕಾಲುಗಳು ಹೊಂದಿಕೊಳ್ಳುತ್ತವೆ ಮತ್ತು ಕಾಲುಗಳಿಗೆ ದೇಹವು ಹೆಚ್ಚು ಬಾರವಾಗುವುದಿಲ್ಲ. ಇದು ದೇಹದ ಆರೋಗ್ಯದ ಜೊತೆಗೆ ಮಗುವು ಎತ್ತರಕ್ಕೆ ಬೆಳೆಯಲು ಸಹಾಯ ಮಾಡುತ್ತದೆ.

೭.ಸ್ಕಿಪ್ಪಿಂಗ್(ಜಿಗಿಯುವುದು)

ನೀವು ಹಗ್ಗವನ್ನು ಜಿಗಿದಾಗ, ನಿಮ್ಮ ದೇಹದ ಸ್ನಾಯುಗಳು ಹಿಗ್ಗುತ್ತವೆ. ಇದು ನಿಮ್ಮ ಮಗುವಿನ ಕಾಲಿನ ತೆಳು ಸ್ನಾಯುವನ್ನು ಬಲ ಪಡಿಸಲು ಸಹಾಯಮಾಡುತ್ತದೆ. ಇದರಿಂದ ಹೃದಯಕ್ಕೂ ಒಳ್ಳೆಯದು, ಆದ್ದರಿಂದ ನಿಮ್ಮ ಮಗುವಿಗೆ ಇದನ್ನು ಮಾಡಲು ಪ್ರೋತ್ಸಾಹಿಸಿ ಮತ್ತು ದಿನಕ್ಕೆ ೨೦ ನಿಮಿಷ ಮತ್ತು ವಾರಕ್ಕೆ ೩ ದಿನವಾದರೂ ಮಾಡಲು ಹೇಳಿ.

೮.ಬೈಸೈಕಲ್ ಓಡಿಸುವುದು

ನಿಮ್ಮ ಮಗುವು ನಿಯಮಿತವಾಗಿ ಸೈಕಲ್ ಓಡಿಸುವುದಕ್ಕೆ ಪ್ರೋತ್ಸಾಹಿಸಿ, ಇದು ಕಾಲಿನ ಸ್ನಾಯುಗಳು ಬಲಗೊಳ್ಳಲು ತುಂಬಾ ಉಪಯುಕ್ತ. ನಿಮ್ಮ ಮಗುವು ಸೈಕಲ್ ಓಡಿಸುವ ಮೊದಲು ಮತ್ತು ನಂತರ ಮೈ ಕೈಗಳನ್ನು ಹಿಗ್ಗಿಸುವ ಪ್ರಕ್ರಿಯೆ ಮಾಡಿಸಿ ಇದರಿಂದ ಹೆಚ್ಚು ಲಾಭಗಳನ್ನು ಪಡೆಯಬಹುದು.

ಈ ಲೇಖನ ನಿಮಗೆ ಉಪಯೋಗವಾಯಿತು ಎಂದು ನಾವು ಭಾವಿಸುತ್ತೇವೆ. ಇದನ್ನು ಇತರರೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon