Link copied!
Sign in / Sign up
12
Shares

ನಿಮ್ಮ ಕಂದನಿಗೆ ಎಷ್ಟು ಸಲ ಉಣಿಸಬೇಕು?

ತನ್ನ ಪುಟ್ಟ ಕಂದನ ಹಸಿವನ್ನು ತಣಿಸುವ ಬಗ್ಗೆ ಎಲ್ಲಾ ತಾಯಿಯರೂ ವ್ಯಾಕುಲಕ್ಕೊಳಗಾಗುತ್ತಾರೆ. ನಾನು ಕೊಡುತ್ತಿರುವ ಆಹಾರ ಅವನಿಗೆ ಸಾಕಾಗುತ್ತಿರಲಿಕ್ಕಿಲ್ಲವೇ..? ನಾನು ಊಡಿಸುವುದು ಅಗತ್ಯಕ್ಕಿಂತಲೂ ಜಾಸ್ತಿಯಾಗುತ್ತಿದೆಯೇ..?.ಎಷ್ಟು ಸಲ ಮಗುವಿಗೆ ಉಣಿಸಬೇಕು...? ಹೀಗೆ ಹತ್ತು ಹಲವಾರು ಹುಳಗಳು ತಾಯಿಯನ್ನು ಕೊರೆಯುತ್ತಿರಬಹುದು.

ನಿಮ್ಮ ಆತಂಕ ಹಾಗೂ ಸಂಶಯಪರಿಹಾರಕ್ಕಾಗಿ, ಆಹಾರ ತಜ್ಞರ ಸಲಹೆಯಂತೆ ಸಿದ್ಧಗೊಳಿಸಿದ ಮಕ್ಕಳ ಆಹಾರ ಕ್ರಮಗಳು ಹೀಗಿವೆ ನೋಡಿ.

೧ನೇ ತಿಂಗಳು

ಜನಿಸಿದ ಮೊದಲ ದಿನ, ನಿಮ್ಮ ಕಂದನು ಕೇವಲ ಒಂದು ಅಥವಾ ಎರಡು ಸಲ ಮಾತ್ರವೇ ನಿಮ್ಮ ಮೊಲೆಹಾಲನ್ನು ಕುಡಿಯುವನು.

ಮೊದಲ ವಾರಗಳಲ್ಲಿ ದಿನಕ್ಕೆ ೬-೭ ಸಲ ಅಥವಾ ೬೦-೧೨೦ ಮಿ.ಲೀ. ಎದೆಹಾಲನ್ನು ಕುಡಿಸಬೇಕು. ಕೇವಲ ವಾರಗಳಷ್ಟೇ ಪ್ರಾಯವುಳ್ಳ ಕಂದಮ್ಮಗಳು ೪೦ ನಿಮಿಷಗಳ ಕಾಲ ಮೆಲ್ಲಮೆಲ್ಲನೇ ಹಾಲನ್ನು ಕುಡಿದರೆ, ದಿನಗಳೆದಂತೆ ೧೫-೨೦ ನಿಮಿಷಗಳಲ್ಲೇ ತನಗೆ ಅಗತ್ಯವಾದಷ್ಟು ಹಾಲನ್ನು ಹೀರಿಕೊಳ್ಳುವಷ್ಟು ಕ್ಷಮತೆಯನ್ನು ಪಡೆದುಕೊಳ್ಳುವರು. ಸಮಯ ಸಿಕ್ಕಾಗಲೆಲ್ಲಾ ಮಗುವಿಗೆ ಮೊಲೆಹಾಲನ್ನುಣಿಸುವುದು ಮಗುವಿನ ಆರೋಗ್ಯಕ್ಕೆ ಅತ್ಯುತ್ತಮ.

ಆದರೆ, ಮಗುವಿಗೆ ಹಸಿವಾಗಿದೆಯೇ ಇಲ್ಲವೇ ಎಂದು ನಾನು ಹೇಗೆ ತಿಳಿದುಕೊಳ್ಳುವುದು ? ತನಗೆ

ಹಸಿಯುತ್ತಿದೆಯೇ ಇಲ್ಲವೇ ಎಂದು ಮಗುವು ತನ್ನ ಶರೀರಭಾಷೆಯಿಂದಲೇ ವ್ಯಕ್ತಪಡಿಸುತ್ತದೆ. ತನ್ನ ಕೈ ಬೆರಳನ್ನು ಚೀಪಿಕೊಳ್ಳುತ್ತಿದ್ದರೆ, ರೂಟಿಂಗ್ ರಿಫ್ಲೆಕ್ಸ್( ಮುಖ, ತುಟಿ ಅಥವಾ ಗದ್ದವನ್ನು ಮುಟ್ಟಿದರೆ, ನಮ್ಮ ಬೆರಳನ್ನು ತನ್ನ ಬಾಯಿಗೆ ಎಳೆದುಕೊಳ್ಳುವ ಪ್ರಯತ್ನ) ತೋರಿಸುತ್ತಿದ್ದರೆ, ತಲೆಯನ್ನು ಅತ್ತಿತ್ತ ವಾಲಿಸುತ್ತಿದ್ದರೆ, ಅಳುತ್ತಿದ್ದರೆ ಮಗುವಿಗೆ ಹಸಿವಾಗಿದೆಯೆಂದು ಅರ್ಥಮಾಡಿಕೊಳ್ಳಬಹುದು. ನಿಮ್ಮ ಮಗುವಿಗೆ ಹೆಚ್ಚು ಹೆಚ್ಚು ಎದೆ ಹಾಲನ್ನು ಉಣಿಸುತ್ತಿದ್ದಂತೆ ಹೆಚ್ಚು ಹೆಚ್ಚು ಅಮೃತವೂ ಶರೀರದಲ್ಲಿ ಉತ್ಪಾದನೆಯಾಗುವುದು. ರಾತ್ರಿವೇಳೆಯಲ್ಲಿ ಮಗುವು ಆಗಾಗ ಎಚ್ಚರಗೊಂಡು ಹಾಲಿಗಾಗಿ ಅಳುವುದಂತೂ ಸರ್ವೇಸಾಮಾನ್ಯ.

೧-೪ ತಿಂಗಳುಗಳು

ಈ ಪ್ರಾಯದ ಕಂದಮ್ಮಗಳಿಗೆ ೨-೩ ಗಂಟೆಗಳಿಗೊಮ್ಮೆ ಹೊಟ್ಟೆ ತುಂಬಿಸಬೇಕಾಗುತ್ತದೆ.ಎಂದರೆ, ೧೨೦-೨೧೦ ಮಿ.ಲೀ.ಗಳಷ್ಟು ಎದೆಹಾಲನ್ನು ನೀಡಬೇಕು. ಪ್ರತೀ ೨-೩ ಗಂಟೆಗಳಿಗೊಮ್ಮೆ ೧೨೦ ರಿಂದ ೧೫೦ ರಷ್ಟು ಹಾಲನ್ನು ೧-೩ ತಿಂಗಳು ಪ್ರಾಯದ ಮಕ್ಕಳಿಗೆ ಅಗತ್ಯವಿರುತ್ತದೆ. ಇನ್ನು ೩-೪ ತಿಂಗಳುಗಳ ಮಕ್ಕಳಾದರೆ ಎರಡೂವರೆ ಮೂರುವರೆ ಗಂಟೆಗಳ ಅವಧಿಯಲ್ಲಿ ೧೫೦-೨೧೦ಮಿ.ಲಿ ಗಳಷ್ಟು ಹಾಲನ್ನು ಊಡಿಸಬೇಕು. ಇಷ್ಟು ಎಳೆಯ ಪ್ರಾಯದ ಮಕ್ಕಳ ಬಾಯಿ ಹಾಗೂ ಗಂಟಲು ಪೇಶಿಗಳು ಸರಿಯಾಗಿ ಬೆಳವಣಿಗೆ ಹೊಂದದ ಕಾರಣ ಮೊಲೆಹಾಲನ್ನಲ್ಲದೇ ಬೇರೆ ಗಟ್ಟಿ ಆಹಾರಗಳನ್ನು ನೀಡುವುದು ಉಚಿತವಲ್ಲ.

೪-೬ತಿಂಗಳುಗಳು

ನಿಮ್ಮ ಮಗುವಿಗೆ ೬ ತಿಂಗಳು ಪ್ರಾಯವಾದಾಗ ದಿವಸವೂ ಸರಾಸರಿ ೧ಲೀ.ಗಳಷ್ಟು ಹಾಲನ್ನು ನೀಡಬೇಕಾಗುತ್ತದೆ. ಈ ಸಮಯಗಳಲ್ಲಿ ಮಗುವಿಗೆ ಎದೆಹಾಲಿನೊಂದಿಗೇ ಇತರ ಮೃದು ಆಹಾರಗಳನ್ನೂ ಪರಿಚಯಿಸಬಹುದು. ಮೃದು ಆಹಾರವನ್ನು ನೀಡಬಹುದೆಂದರೆ, ಮೊಲೆಯೂಡಿಸುವುದನ್ನು ನಿಲ್ಲಿಸಬಹುದು ಎಂಬ ಅರ್ಥವೇನೂ ಇಲ್ಲ.ದಿನಕ್ಕೆ ಒಂದೆರಡು ಸಲ ಹಣ್ಣನ್ನು ಕಿವುಚಿ ಆಹಾರವಾಗಿ ನೀಡಬಹುದು. ಮಗುವು ಎಷ್ಟು ಬಾರಿ ತಿನ್ನುತ್ತಿದ್ದಾನೆಂಬುದರ ಮೇರೆಗೆ ಎಷ್ಟು ಸಲ ಮಗುವಿಗೆ ಪ್ಯೂರಿಯನ್ನು ನೀಡಬೇಕೆನ್ನುವುದನ್ನೂ ನಿರ್ಧರಿಸಬಹುದು. ಮಗುವು ಕೆಲವೊಮ್ಮೆ ೧ ಅಥವಾ ೩ ಟೇಬಲ್ ಚಮಚಗಳಷ್ಟು ಮೃದು ಆಹಾರಗಳನ್ನು ತಿಂದ ಮಗುವು ಆಹಾರವನ್ನು ಹೊರಗೆ ಉಗುಳುವುದು, ಮುಖತಿರುಗಿಸುವುದು, ಬಾಯಿ ತೆರೆಯದಿರುವುದು – ಹೀಗೆಲ್ಲಾ ಮಾಡಿದರೆ ಮಗುವಿಗೆ

ಹೊಟ್ಟೆತುಂಬಿದೆಯೆಂದರ್ಥ. ಇದರೊಂದಿಗೇ ಪ್ರತೀ ೨ರಿಂದ ೪ ಗಂಟೆಗಳಿಗೊಮ್ಮೆ ಎದೆಹಾಲನ್ನು ಉಣಿಸಬೇಕಾಗುತ್ತದೆ.

೬-೮ ತಿಂಗಳುಗಳು

ಈ ಪ್ರಾಯದ ಮಗುವಿಗೆ ಬಾಟಲೀ ಹಾಲನ್ನು ನೀಡಬಹುದು. ದಿನಕ್ಕೆ೨-೩ ಬಾರಿ ೫-೬ ದೊಡ್ಡ ಚಮಚಗಳಷ್ಟು ಹಣ್ಣುಗಳಿಂದ ತಯಾರಿಸಿದ ಪ್ಯೂರಿ, ಅನ್ನ, ರಾಗಿ, ಬಾರ್ಲಿಗಳಂತಹ ಗಟ್ಟಿ ಆಹಾರವನ್ನು ತಿನ್ನಿಸಬಹುದು. ಇದರೊಂದಿಗೇ ೩-೪ ಗಂಟೆಗಳಿಗೊಮ್ಮೆ ಮೊಲೆಯೂಡಿಸುವುದನ್ನೂ ಮರೆಯಬಾರದು.

೮-೧೦ ತಿಂಗಳುಗಳು

ಈ ಪ್ರಾಯದ ಮಕ್ಕಳಿಗೆ ಪ್ರೊಟಿನ್ ಯುಕ್ತ ಆಹಾರಗಳನ್ನು ದಿನಂಪ್ರತಿ ೩ ಬಾರಿ ನೀಡಬಹುದು. ಮಗುವಿಗೆ ಸಾಕಾಗುವಷ್ಟು ಪ್ರಮಾಣದ ಆಹಾರವನ್ನು ತಿನ್ನಿಸುವುದರಿಂದ ತೊಂದರೆಯೇನೂ ಇಲ್ಲ. ಆಹಾರದ ಸಮಯವನ್ನು ಕ್ರಮೀಕರಿಸಲು ದಿನವೂ ನಿಗದಿತ ವೇಳೆಗೇ ಮಗುವಿಗೆ ಉಣ್ಣಿಸುವುದೊಳ್ಳೆಯದು.

೧೦-೧೨ ತಿಂಗಳುಗಳು

ಈ ಪ್ರಾಯದ ಮಕ್ಕಳ ಹೊಟ್ಟೆ ತುಂಬುವಷ್ಟು ಆಹಾರವನ್ನು ದಿನಕ್ಕೆ ೩ ಬಾರಿ ನೀಡಬೇಕು. ಅದರೊಂದಿಗೆ ಪ್ರತೀ ೪-೫ ಗಂಟೆಗಳಾವರ್ತಿ ಎದೆಹಾಲನ್ನೂ ನೀಡಬೇಕು. 

ಸೂಚನೆ:

ನಿಮ್ಮ ಮಗುವಿನ ಹೊಟ್ಟೆ ತುಂಬುವಷ್ಟು ಆಹಾರ ಸಿಗವುದರ ಬಗ್ಗೆ ನಿಗಾವಹಿಸಬೇಕು. ಮೊದಲೆರಡು ದಿನಗಳಲ್ಲಿ ಮಗುವು ಕೇವಲ ೨-೩ ವಸ್ತ್ರಗಳಲ್ಲಿ ಮಾತ್ರವೇ ಮೂತ್ರ ಮಾಡಿದ್ದಿರಬಹುದು. ದಿನಗಳೆದಂತೆ ಮಗುವು ಕನಿಷ್ಟಪಕ್ಷ ೬ ಡಯಪರ್ ಗಳನ್ನಂತೂ ಉಪಯೋಗಿಸಿರಲೇಬೇಕು. ಮೂತ್ರವು ವಾಸನೆ ರಹಿತವಾಗಿದ್ದು, ತೆಳುಬಣ್ಣದಲ್ಲಿರಬೇಕು. ಮಲವು ಮೆಂತೆ ಹಳದಿ ಬಣ್ಣದ್ದಾಗಿರಬೇಕು.

ಮಗುವಿಗೆ ಸಾಕಾಗುವಷ್ಟು ಆಹಾರ ದೊರಕುತ್ತದೆಯೇ ಇಲ್ಲವೇ ಎಂದು ಪರೀಕ್ಷಿಸಲು ಇನ್ನೂ ಕೆಲವು ಮಾರ್ಗಗಳಿವೆ .

೨ ವಾರಗಳ ಬಳಿಕವೂ ಮಗುವಿನ ತೂಕ ಹೆಚ್ಚಾಗುತ್ತಿಲ್ಲವಾದರೆ ಮಗುವಿಗೆ ಸಾಕಷ್ಟು ಎದೆಹಾಲು ಸಿಗುತ್ತಿಲ್ಲವೆಂದರ್ಥ. ೬-೮ ಡಯಪರ್ ಗಳನ್ನು ಕೂಡಾ

ಉಪಯೊಗಿಸಬೇಕಾದ ಅಗತ್ಯ ಬರಲಿಲ್ಲವೆಂದರೂ ಅಥವಾ ೨-೩ ಕ್ಕಿಂತ ಕಡಿಮೆ ಬಾರಿ ಮಲವಿಸರ್ಜನೆಯಾಗಿದ್ದರೂ ಇಲ್ಲವೇ ಯಾವುದೇ ಚಟುವಟಿಕೆಯಿಲ್ಲದೇ ಸುಮ್ಮನೇ ಮಲಗಿಕೊಳ್ಳುತ್ತಿದ್ದರೂ ಅಪೌಷ್ಟಿಕತೆಯಿಂದ ಬಳಲುತ್ತಿದೆಯೆಂದು ತಿಳಿದುಕೊಳ್ಳಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon