Link copied!
Sign in / Sign up
8
Shares

ನಿಮ್ಮ ಗಂಡನು ತಂದೆಯಾಗಲು ಹೆದರುವ ೭ ಸಂದರ್ಭಗಳು

ಮಗುವು ಕುಡಿಲಿಡೆಯುವುದೂ, ಬೆಳೆದು ದೊಡ್ಡವನಾಗುವುದೂ ತಾಯಿಯ ಉದರದಲ್ಲಾಗಿರಬಹುದಾದರೂ, ತಂದೆತಾಯಂದಿರಿಬ್ಬರೂ ಈ ೮ ತಿಂಗಳುಗಳೂ ಗರ್ಭಿಣಿಗಳನುಭವಿಸುವ ಅದೇ ಉದ್ವೇಗವನ್ನನುಭವಿಸುತ್ತಾರೆ. ಪರಸ್ಪರ ಪೂರಕವಾಗಿದ್ದು ಒಬ್ಬರಿಗೊಬ್ಬರು ಬೆಂಬಲವನ್ನು ನೀಡಬೇಕಾದ ಸಮಯವಿದು. ಮೊದಲನೆಯ ಬಾರಿಗೆ ಗರ್ಭಿಣಿಯರಾಗುವ ಪಾಲಕರು ಹಲವು ಕಾರಣಗಳಿಂದ ಆತಂಕಕ್ಕೊಳಗಾಗುತ್ತಾರೆ.

೧. ಹೊಸ ಜನರ ಆಗಮನದಿಂದ ಬದಲಾಗುವ ಜೀವನ

ಮನೆಯ ೪ ಗೋಡೆಗಳೊಂದಿಗಿನ ಸಮವಾಕ್ಯವು ಹೊಸ ಜನರ ಆಗಮನದೊಂದಿಗೆ ಸಂಪೂರ್ಣವಾಗಿ ಬದಲಾಗುವುದು. ಹೊಸ ಯೋಜನೆಗಳು, ಹೊಸವೇಳಾಪಟ್ಟಿ, ಹೊಸ ವ್ಯವಹಾರಗಳು, ಹವ್ಯಾಸಾಗಳು... ಕೊನೆಗೆ ಜೀವನ ಶೈಲಿಯೆ ಬದಲಾಗುವುದು. ಬದಲಾವಣೆಯು ಅನಿವಾರ್ಯವಾದರೂ ಬದಲಾವಣೆಯ ಬಗೆಗಿನ ಆಲೋಚನೆಯು ಚಿಂತೆಗೀಡು ಮಾಡುವುದು.

೨. ಮಗುವಿನ ಆವಶ್ಯಕಗಳನ್ನು ನಾನು ಪೂರೈಸಬಲ್ಲೆನೇ?

ಮಕ್ಕಳು ತನ್ನ ಪ್ರತಿಯೊಂದು ಕಾರ್ಯಕ್ಕೂ ತಾಯಿಯನ್ನೇ ಅವಲಂಬಿಸುತ್ತಾರೆ.ತಾಯಿಯ ಗಮನ ಮಗುವಿನತ್ತಲೇ ಕೇಂದ್ರೀಕರಿಸಲ್ಪಡುವುದರಿಂದ ಸಹಜವಾಗಿಯೇ ಹೊರಗಿನ ಬಾಕಿ ಎಲ್ಲಾ ಜವಾಬ್ದಾರಿಗಳು ತಂದೆಯ ಹೆಗಲ ಮೇಲೆ ಬೀಳುವುದು. ಮಗುವು ತಂದೆ ತಾಯಿಯರಿಬ್ಬರಿಗೂ ಮುದ್ದಿನ ಕಣ್ಮಣಿ. ತಂದೆ ತಾಯಿಯರಿಬ್ಬರೂ ಜವಾಬ್ದಾರಿಯನ್ನು ಹಂಚಿಕೊಳ್ಳುವುದು ಮಕ್ಕಳ ಮೇಲಿನ ಪ್ರೀತಿಯ ದ್ಯೋತಕ.

೩. ಅಯ್ಯೋ ಇನ್ನು ಜೀವನದಲ್ಲಿ ಮೋಜೇ ಇಲ್ಲವೆ..?

ಮಗುವಿನ ಜನನದ ಮೊದಲು ಜೀವನವೇ ಬೇರೆ ರೀತಿಯದ್ದಾಗಿತ್ತು.ಆ ಕೊನೇ ಗಳಿಗೆಯ ತೀರ್ಮಾನ, ದೂರ ಪ್ರಯಾಣ, ಪ್ರಣಯದ ಹುಚ್ಚಾಟ...ಹೀಗೆ ಏನೇನೆಲ್ಲಾ ಪ್ರಯೋಗವನ್ನು ನಡೆಸಬಹುದಾಗಿತ್ತು. ಇನ್ನು ಮಗು ಜನಿಸಿದರೆ, ತನ್ನೆಲ್ಲಾ ವೈಯುಕ್ತಿಕ ಸಂತೋಷಗಳು ಇನ್ನಿಲ್ಲವಾಗುವುದೇನೋ ಎಂಬ ಭಯ ಕಾಡುವುದೂ ಸಹಜ. ಆದರೆ, ಮಗುವು ಜನಿಸಿದ ಬಳಿಕ ಜೀವನದ ಪ್ರತಿಯೊಂದು ಗಳಿಗೆಯೂ ಹೇಗೆ ಅರ್ಥ ಪೂರ್ಣವಾಗಿ ಬದಲಾಗುವುದೆಂದು ನಿಮಗೆ ಅರಿವಾಗುವುದು.

೪. ನಾನು ನನ್ನ ಜವಾಬ್ದಾರಿಗಳನ್ನು ನಿಭಾಯಿಸಬಲ್ಲೆನೇ..?

ಮಗುವಿನ ಆಗಮನಕ್ಕಾಗಿ ದಿವಸಗಳೆಣಿಸುತ್ತಿರುವ ತಂದೆತಾಯಿಗಳ ಮನಗಳಲ್ಲಿ ಉದಯವಾಗುವ ಶಂಕೆಯಿದು. ತನ್ನ ಶಕ್ತಿಮೀರಿ ಮಗುವಿನ ಅಗತ್ಯಗಳನ್ನು ಪೂರೈಸಬೇಕೆಂದು ಬಯಸುವ ಪೋಷಕರು ತನ್ನ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದೆಂದು ಆಲೋಚಿಸುತ್ತಾರೆ. ಕೊನೆಗೂ ಮಕ್ಕಳಿಗೆ ಪ್ರೇರಣೆ ಅವರ ತಂದೆ ತಾಯಂದಿರೇ ಅಲ್ಲವೇ..?

೫. ಮಗುವಿನ ಜನನವು ನಮ್ಮಲ್ಲಿ ಅಂತರ ಮೂಡಿಸುವುದೇ...?

ತಮ್ಮಿಬ್ಬರ ನಡುವಿನ ಪ್ರೇಮದಲ್ಲಿ ಮಗುವು ಪ್ರತಿಸ್ಪರ್ಧಿಯಾಗಿ ನಿಲ್ಲುವುದೇ ಎ೦ದು ದಂಪತಿಗಳು ಅನಗತ್ಯ ಚಿಂತೆಗೊಳಗಾಗುವುದುಂಟು.ಮಗುವಿನ ಜನನವು ನಿಮ್ಮ ಪರಸ್ಪರ ಪ್ರೇಮವನ್ನೂ, ದಾಂಪತ್ಯ ಮಧುರವನ್ನೂ ದುಪ್ಪಟ್ಟುಗೊಳಿಸುವುದು ಎಂದು ನೀವು ಆಮೇಲೆ ಅರ್ಥೈಸಿಕೊಳ್ಳುವಿರಿ.

೬. ಆಯವ್ಯಯಗಳ ಬಗೆಗಿನ ವ್ಯಾಕುಲತೆ

ಎಷ್ಟರ ಮಟ್ಟಿಗೆ ಮಗುವಿಗೆ ಗಮನ ಹಾಗೂ ಆರೈಕೆ ನೀಡಲು ಬಯಸುವಿರೋ ಅಷ್ಟರ ಮಟ್ಟಿಗೆ ಮಗುವಿಗಾಗಿ ಉಳಿತಾಯವನ್ನೂ ಮಾಡಬೇಕಾಗಿದೆ. ಯಾಕೆಂದರೆ ನಿಮ್ಮ ನಿರ್ಮಲವಾದ ಪ್ರೀತಿಯೊಂದನ್ನು ಬಿಟ್ಟು ಯಾವುದೂ ಈ ಲೋಕದಲ್ಲಿ ಪುಕ್ಕಟೆಯಾಗಿ ದೊರೆಯುವುದಿಲ್ಲ.ಉದ್ಯೋಗದಲ್ಲಿ ಉತ್ತಮ ಮಟ್ಟದಲ್ಲಿರುವ ಪಾಲಕರು ಕೂಡಾ ಈ ಮಗುವಿನ ಭವಿಷ್ಯದ ಚಿಂತೆಯಿಂದ ಹೊರತಾಗಿಲ್ಲ.

೭. ಅಯ್ಯೋ ದೇವರೇ...ನಾನು ಹೇಗೆ ಈ ಪುಟ್ಟ ಮಗುವನ್ನು ಸಂಭಾಳಿಸಲಿ..?

ಎತ್ತಿಕೊಂಡಿರುವಾಗ ಮಗುವು ನನ್ನ ಕೈಜಾರಿ ಬಿದ್ದರೆ ? ನನ್ನ ಮಡಿಲಲ್ಲಿ ಕುಳಿತಾಗ ಮಗುವು ಅಳು ನಿಲ್ಲಿಸದಿದ್ದರೆ ? ಮಗುವಿನ ಎಲ್ಲಾ ಅಗತ್ಯಗಳನ್ನು ಪೂರೈಸಲು ನನ್ನ ಕೈಲಾಗದಿದ್ದರೆ ? ಮಗುವಿಗೆ ಉತ್ತಮ ಮಾರ್ಗದರ್ಶಕನಾಗಲು ಸಾಧ್ಯವಾಗದಿದ್ದರೆ ? ಖಂಡಿತವಾಗೂ ಪ್ರಾಮಾಣಿಕವಾದ ಆತಂಕವೇ ಹೌದು. ಆದರೆ, ಪಾಲಕರೇ ನಮ ಮಾತನ್ನು ನಂಬಿರಿ. ನೀವು ಒಬ್ಬ ಉತ್ತಮ ಪಾಲಕರಾಗುವುದರಲ್ಲಿ ಸಂಶಯವೇ ಇಲ್ಲ. !

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon