Link copied!
Sign in / Sign up
14
Shares

ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ನೀವು ಸೇರಿಸಬೇಕಾದ ೨೫ ಐರನ್ ಸಮೃದ್ಧ ಆಹಾರ (Top 25 Iron-rich Foods You Need To Include In Your Diet in Kannada)

ನಮ್ಮ ಬಾಲ್ಯದಲ್ಲಿ ನಮ್ಮ ತಂದೆತಾಯಂದಿರು ಮತ್ತು ಅಜ್ಜ ಅಜ್ಜಿಯಂದಿರು ಸಹಜವಾಗಿಯೇ ಕಬ್ಬಿಣ ಅಂಶದಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಲು ಒತ್ತಾಯಿಸುತ್ತಿದ್ದರು. ಅದು ಏಕೆ ಎನ್ನುವುದರ ಅರಿವು ನಿಮಗಿದೆಯೇ? ಐರನ್ ನಮ್ಮ ದೇಹದ ಅತ್ಯಂತ ಪ್ರಮುಖ ಮುಕ್ರೋನ್ಯೂಟ್ರಿಯೆಂಟ್ ಗಳಲ್ಲಿ ಒಂದು. ಅದು ನಮ್ಮ ದೇಹದ ಸರಿಯಾದ ಕಾರ್ಯಾಚರಣೆಗೆ ಅತ್ಯಗತ್ಯ. ನಮ್ಮ ದೇಹದಲ್ಲಿ ಐರನ್ ನ ಪ್ರಮುಖ ಕಾರ್ಯ ಕೇಪು ರಕ್ತಕಣಗಳ ಉತ್ಪಾದನೆ. ಇದರಿಂದ ದೇಹಕ್ಕೆ ಆಮ್ಲಜನಕದ ಸರಬರಾಜು ಆಗುತ್ತದೆ. ಐರನ್ ಹಿಮೋಗ್ಲೋಬಿನ್ ನಲ್ಲಿ ಸಹ ಮುಖ್ಯ ಅಂಶ. ಇದು ಆರೋಗ್ಯಕರ ಚಯಾಪಚಯ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಇದರಿಂದ ಸೂಕ್ತ ಬೆಳವಣಿಗೆ ಸಹ ಆಗುತ್ತದೆ. 

ಆದ್ದರಿಂದ, ನಾವು ಐರನ್ ಸಮೃದ್ಧ ಆಹಾರದ ಸೇವನೆ ಅತ್ಯಗತ್ಯ. ಅಂತಹ ಆಹಾರಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. 

ಪರಿವಿಡಿ:

೧. ಪ್ರತಿನಿತ್ಯ ಐರನ್ ಸೇವನೆ (Recommended Daily Intake Of Iron in Kannada)

೨. ಐರನ್ ಸಮೃದ್ಧ ಪ್ರಮುಖ ೨೫ ಆಹಾರಗಳು (Top 25 Iron Rich Foods in Kannada)

     ಅ. ಐರನ್ ಸಮೃದ್ಧ ತರಕಾರಿಗಳು (Iron Rich Vegetables in Kannada)

     ಬಿ. ಐರನ್ ಸಮೃದ್ಧ ಹಣ್ಣುಗಳು (Iron Rich Fruits in Kannada)

     ಸಿ. ಒಣ ಹಣ್ಣುಗಳು - ಐರನ್ ನ ಮೂಲ (Dry Fruits- Rich Sources of Iron in Kannada)

     ಡಿ. ಮಾಂಸ, ಸಮುದ್ರಾಹಾರ - ಐರನ್ ನ ಮೂಲ (Meat, Seafood- Great Source of Iron in Kannada)

೧. ಪ್ರತಿನಿತ್ಯ ಐರನ್ ಸೇವನೆ (Recommended Daily Intake Of Iron in Kannada):

ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ಹೆಲ್ತ್ ಅನುಸಾರ, ದೈನಂದಿನ ಐರನ್ ಅಂಶ ಸೇವನೆ ಮನುಷ್ಯನ ವಯಸ್ಸು, ಲಿಂಗ ಮತ್ತು ಅರೋಗ್ಯ ಪರಿಸ್ಥಿತಿಯ ಮೇಲೆ ಅವಲಂಬಿತ. ಅದರ ಪಟ್ಟಿ ಇಲ್ಲಿದೆ. 

೨. ಐರನ್ ಸಮೃದ್ಧ ಪ್ರಮುಖ ೨೫ ಆಹಾರಗಳು (Top 25 Iron Rich Foods in Kannada)

ಐರನ್ ನಿಮ್ಮ ದೇಹದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿ, ನಿಮ್ಮ ದೇಹವನ್ನು ದಿನಪೂರ್ತಿ ಚೈತನ್ಯಭರಿತವಾಗಿ ಇರಿಸಲು ಸಹಾಯ ಮಾಡುತ್ತದೆ. ಐರನ್ ಸಮೃದ್ಧ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಹಲವಾರು ಅರೋಗ್ಯ ಲಾಭಗಳು. 

ಅ. ಐರನ್ ಸಮೃದ್ಧ ತರಕಾರಿಗಳು (Iron Rich Vegetables in Kannada)

ಅನೇಕರು ಮಾಂಸ ಐರನ್ ನ ಏಕೈಕ ಮೂಲ ಎಂದು ಭಾವಿಸುತ್ತಾರೆ. ಆದರೆ ಐರನ್ ಸಮೃದ್ಧ ತರಕಾರಿಗಳು ಹಲವಾರು. ಇವುಗಳು ಸಸ್ಯಾಹಾರಿಗಳಿಗೆ ಆರೋಗ್ಯದಾಯಕ. 

೧. ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನಲ್ಲಿ ಅತೀ ಹೆಚ್ಚಾದ ಐರನ್ ಅಂಶವನ್ನು ಹೊಂದಿದೆ. ನೀವು ಐರನ್ ಕೊರತೆಯಿಂದ ಬಳಲುತ್ತಿದ್ದರೆ, ನಿಮ್ಮ ಸಸ್ಯಾಹಾರಿ ಆಹಾರದಲ್ಲಿ ಇದನ್ನು ಸೇರಿಸುವುದು ಅತೀಯಾದ ಒಳಿತನ್ನು ಮಾಡುತ್ತದೆ. 

೨. ಬ್ರಾಕಲಿ: ಬ್ರಾಕಲಿ ಸಕ್ರುಸಿಫೆರೇಸ್ ತರಕಾರಿ ಗುಂಪಿಗೆ ಸೇರಿದೆ. ಇದು ಐರನ್ ಅಂಶದ ಅತೀ ಒಳ್ಳೆಯ ಮೂಲ. ಅದರೊಂದಿಗೆ, ಈ ತರಕಾರಿ ವಿಟಮಿನ್ ಎ ಮತ್ತಿ ಸಿ, ಮೆಗ್ನೀಷಿಯಂ ಹೊಂದಿದೆ. ಹಾಗಾಗಿ, ನಿಮ್ಮ ಆಹಾರಕ್ರಮದಲ್ಲಿ ಬ್ರಾಕಲಿ ಸೇರಿಸುವುದು ಅತ್ಯಂತ ಲಾಭದಾಯಕ. 

೩. ಆಲೂಗಡ್ಡೆ: ಆಲೂಗಡ್ಡೆ ಐರನ್ ಸಮೃದ್ಧ ಆಹಾರಗಳಲ್ಲಿ ಒಂದು. ಇದನ್ನು ಹಲವಾರು ಭಾರತೀಯ ಆಹಾರದಲ್ಲಿ ಬಳಸಲಾಗುತ್ತದೆ. ಆಲೂಗಡ್ಡೆಯನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯದಾಯಕ. 

೪. ಬೀಟ್ರೂಟ್: ಬೀಟ್ರೂಟ್ ಐರನ್ ಮತ್ತು ಫೋಲೇಟ್ ನ ಸಮೃದ್ಧ ಮೂಲ. ಹಾಗಾಗಿ, ಐರನ್ ಕೊರತೆ ನೀಗಿಸಲು ಬೀಟ್ರೂಟ್ ಸೂಕ್ತ ಆಯ್ಕೆ. ಬೀಟ್ರೂಟ್ ಹಿಮೋಗ್ಲೋಬಿನ್ ಕೊರತೆಯನ್ನು ಸಹ ನೀಗಿಸುತ್ತದೆ. 

೫. ಕಾಳುಗಳು: ಕಡಲೇಕಾಯಿ, ಬೀನ್ಸ್, ಬೆಳೆಗಳು, ಸೋಯಾಬೀನ್ಸ್ ನಂತಹ ಕಾಳುಗಳು ಐರನ್ ಮೂಲಗಳಾಗಿದ್ದು, ಹಲವಾರು ಲಾಭಗಳನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ. ಕಾಳುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗುತ್ತದೆ. 

೬. ಅಣಬೆ: ಅಣಬೆ ಮತ್ತೊಂದು ಆರೋಗ್ಯಕರ ಮತ್ತು ಐರನ್ ಸಮೃದ್ಧ ತರಕಾರಿಗಳಲ್ಲಿ ಒಂದು. ಇವುಗಳಲ್ಲಿ ಕೇವಲ ಐರನ್ ಸಮೃದ್ಧತೆ ಅಷ್ಟೇ ಅಲ್ಲದೇ, ಅದರಲ್ಲಿ ಉರಿಯೂತ ವಿರೋಧಿ ಗುಣ ಸಹ ಇರುತ್ತದೆ. ಇದರಿಂದಾಗಿ ಮಾರಕ ರೋಗಗಳಾದ ಕ್ಯಾನ್ಸರ್ ನನ್ನೂ ತಡೆಗಟ್ಟುವ ಗುಣವನ್ನು ಹೊಂದಿದೆ. 

೭. ಸ್ವಿಸ್ ಚರ್ಡ್: ಸ್ವಿಸ್ ಚರ್ಡ್ ಒಂದು ಬಗೆಯ ಹಸಿರು ಸೊಪ್ಪು. ಇದರಲ್ಲಿ ಹೆಚ್ಚಿನ ಮಟ್ಟದ ಐರನ್ ಇರುತ್ತದೆ. ಹಾಗಾಗಿ, ಸ್ವಿಸ್ ಚರ್ಡ್ ಅನ್ನು ನಿಮ್ಮ ಆಹಾರಕ್ರಮದಲ್ಲಿ ನಿಯಮಿತವಾಗಿ ಸೇರಿಸಿ, ಆರೋಗ್ಯಕರವಾದ ಜೀವನಶೈಲಿಯನ್ನು ನಿಮ್ಮದಾಗಿಸಿ. 

[Back To Top]

ಬಿ. ಐರನ್ ಸಮೃದ್ಧ ಹಣ್ಣುಗಳು (Iron Rich Fruits in Kannada):

ಕೇವಲ ತರಕಾರಿಗಳಷ್ಟೇ ಅಲ್ಲದೇ, ಐರನ್ ಸಮೃದ್ಧ ಹಲವಾರು ಹಣ್ಣುಗಳು ಹಲವಾರು. ಅವುಗಳನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಒಳಿತು. ಮತ್ತು ಅವುಗಳಲ್ಲಿ ಹೆಚ್ಚಿನ ಮಟ್ಟದ ಐರನ್ ಇರುವಾಗ ಅವು ಆರೋಗ್ಯಕರ ಸಹ. 

೮. ಕಲ್ಲಂಗಡಿ ಹಣ್ಣು: ಬೇಸಿಗೆಯ ಬೇಗೆಯಲ್ಲಿ ಮುದ ನೀಡುವ ಹಣ್ಣು, ಕಲ್ಲಂಗಡಿ. ಅದರೊಂದಿಗೆ ಅದು ಅತ್ಯಂತ ಆರೋಗ್ಯಕಾರಿ ಸಹ. ಈ ಆಹಾರದಲ್ಲಿ ಹೆಚ್ಚಿನ ಮಟ್ಟದ ಐರನ್ ಇರುವುದಷ್ಟೇ ಅಲ್ಲದೇ, ಅದರಲ್ಲಿ ವಿಟಮಿನ್ಸ್ನ್ ಸಹ ಇದ್ದು, ಅದು ಐರನ್ ಹಿಮೋಗ್ಲೋಬಿನ್ ಆಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. 

೯. ಸ್ಟ್ರಾಬೆರ್ರಿ: ಸ್ಟ್ರಾಬೆರ್ರಿ ಐರನ್ ಸಮೃದ್ಧ ಹಣ್ಣು. ಅವುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿರುತ್ತದೆ. ನೀವು ಇಂತಹ ಆಹಾರಗಳ ಹುಡುಕಾಟದಲ್ಲಿ ಇದ್ದರೆ, ಸ್ಟ್ರಾಬೆರ್ರಿ ಅತ್ಯುತ್ತಮ ಆಯ್ಕೆ. 

೧೦. ದಾಳಿಂಬೆ ಹಣ್ಣು: ದಾಳಿಂಬೆ ಹಣ್ಣು ಐರನ್ ನ ಸಮೃದ್ಧ ಮೂಲ. ದಾಳಿಂಬೆ ಹಣ್ಣಿನಲ್ಲಿ ಐರನ್ ನೊಂದಿಗೆ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಇತ್ಯಾದಿ ಸಹ ಇರುತ್ತದೆ. ಹಾಗಾಗಿ, ಹೋಮೇಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರಿಗೆ ಇದು ಸೂಕ್ತ ಆಹಾರ. 

೧೧. ಆಲಿವ್: ಆಲಿವ್ ಗಳಲ್ಲಿ ಹೆಚ್ಚಿನ ಮಟ್ಟದ ಐರನ್ ಅಂಶವಿದ್ದು, ಅವುಗಳು ಆಂಟಿಆಕ್ಸಿಡೆಂಟ್ಸ್ ಗಳನ್ನೂ ಹೊಂದಿಗೆ. ಇದರಿಂದಾಗಿ ಅದು ಕ್ಯಾನ್ಸರ್ ನಂತಹ ಅರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ, ಆಲಿವ್ ಗಳನ್ನು ನಿಮ್ಮ ಆಹಾರಕ್ರಮದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳಿ. 

೧೨. ಮಲ್ಬೆರ್ರಿಸ್: ಮಲ್ಬೆರ್ರಿಸ್ ಕೇವಲ ಐರನ್ ಸಮೃದ್ಧ ಅಷ್ಟೇ ಅಲ್ಲದೇ,ಅದರಲ್ಲಿ ಹಲವಾರು ಬಗೆಯ ಫೈಬರ್ ಗಳಿದ್ದು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಅವುಗಳು ಕೊಲೊರೆಕ್ಟಲ್ ಕ್ಯಾನ್ಸರ್ ಸಹ ತಡೆಗಟ್ಟುತ್ತದೆ. ಮಲ್ಬೆರ್ರಿಸ್ ಹೆಚ್ಚಿನ ಐರನ್ ಅಂಶ ಹೊಂದಿರುವ ಅತ್ಯಂತ ಒಳ್ಳೆಯ ಆಹಾರ. 

೧೩. ಖರ್ಜೂರ: ಖರ್ಜೂರ ಐರನ್ ಅನ್ನು ಸಮೃದ್ಧವಾಗಿ ಹೊಂದಿದೆ. ಅವುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆಯ ಮೂಲ. ಹಾಗಾಗಿ, ಖರ್ಜೂರದಿಂದ ಹಲವಾರು ಅರೋಗ್ಯ ಲಾಭಗಳಿವೆ. 

[Back To Top]

ಸಿ. ಒಣ ಹಣ್ಣುಗಳು - ಐರನ್ ನ ಮೂಲ (Dry Fruits- Rich Sources of Iron in Kannada):

ಅನೇಕರಿಗೆ ಒಣ ಹಣ್ಣುಗಳು ಐರನ್ ನ ಸಮೃದ್ಧ ಮೂಲ ಎನ್ನುವುದರ ಅರಿವು ಇರುವುದಿಲ್ಲ. ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಐರನ್ ಅಂಶ ದೊರಕುತ್ತದೆ. 

೧೪. ಒಣ ದ್ರಾಕ್ಷಿ: ಒಳ ದ್ರಾಕ್ಷಿ ಐರನ್ ಸಮೃದ್ಧ ಆಹಾರ. ನಿಮ್ಮ ದೇಹದ ಆರೋಗ್ಯವನ್ನು ನಿಯಂತ್ರಿಸಲು ಪ್ರತಿನಿತ್ಯ ಒಣದ್ರಾಕ್ಷಿ ಸೇವಿಸುವುದು ಅತ್ಯಗತ್ಯ. 

೧೫. ಪ್ರುನ್ಸ್: ಪ್ರುನ್ಸ್ ಅಂದರೆ ಒಣಗಿದ ಪ್ಲಮ್ ಹಣ್ಣು. ಇವುಗಳು ಹೆಚ್ಚಿನ ಐರನ್ ಅಂಶವನ್ನು ಹೊಂದಿರುತ್ತವೆ. ಅದರೊಂದಿಗೆ, ಇವುಗಳಲ್ಲಿ ವಿಟಮಿನ್ ಎ ಮತ್ತಿ ಆಂಟಿಆಕ್ಸಿಡೆಂಟ್ಸ್ ಗಳು ಸಹ ಇರುತ್ತವೆ. ನಿಮ್ಮ ದೇಹದ ಐರನ್ ಕೊರತೆ ನೀಗಿಸಲು ಈ ಆಹಾರವನ್ನು ನಿಯಮಿತವಾಗಿ ಸೇವಿಸಿ. 

೧೬. ಪಿಸ್ತಾ: ಪಿಸ್ತಾವನ್ನು ಸಾಮಾನ್ಯವಾಗಿ ಸಿಹಿ ತಿನಿಸು ಅಥವಾ ಐಸ್ ಕ್ರೀಮ್ ಮತ್ತು ಕೇಕ್ ಗಳೊಂದಿಗೆ ಸೇವಿಸುತ್ತಾರೆ. ಅವುಗಳಲ್ಲಿ ಐರನ್ ಅಂಶ ಸಮೃದ್ಧವಾಗಿದ್ದು, ಅದು ನಿಮ್ಮ ದೇಹದ ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ. ಅವುಗಳನ್ನು ನೇರವಾಗಿ, ಕಚ್ಚಾ ರೂಪದಲ್ಲಿ ಸಹ ಸೇವಿಸಬಹುದು ಅಥವಾ ಅವುಗಳನ್ನು ಲಘು ಉಪಹಾರದ ರೂಪದಲ್ಲಿ ಸೇವಿಸಬಹುದು. 

೧೭. ಅಪ್ರಿಕೋಟ್ಸ್: ಆಪ್ರಿಕಾಟ್ ನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿದ್ದು, ರುಚಿಕರವಾಗಿಯೂ ಇರುತ್ತದೆ. ಇವುಗಳಿಂದ ಹಲವಾರು ಅರೋಗ್ಯ ಲಾಭಗಳಿವೆ. ಅವುಗಳಿ ಐರನ್ ನ ಸಮೃದ್ಧ ಮೂಲವಾಗಿದೆ. ಮತ್ತು ಅದನ್ನು ನಿಮ್ಮ ಸಲಾಡ್ ಗಳೊಂದಿಗೆ ನಿಯಮಿತವಾಗಿ ಸೇವಿಸುವುದರಿಂದ ನೀವು ಆರೋಗ್ಯಕರವಾಗಿ ಇರುತ್ತೀರಿ. 

[Back To Top]

ಡಿ. ಮಾಂಸ, ಸಮುದ್ರಾಹಾರ - ಐರನ್ ನ ಮೂಲ (Meat, Seafood- Great Source of Iron in Kannada):

ಮಾಂಸ ಸಹಜವಾಗಿಯೇ ಐರನ್ ಸಮೃದ್ಧ ಆಹಾರ. ಇದರಲ್ಲಿ ಅಗತ್ಯವಿರುವ ಎಲ್ಲಾ ಪೌಷ್ಠಿಕತೆಗಳಿರುತ್ತವೆ. ಮಾಂಸಗಳಲ್ಲಿ ಮತ್ತು ಸಮುದ್ರಾಹಾರದಲ್ಲಿ ಹಲವು ಬಗೆಗಳು. ಅವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. 

೧೮. ಅರೆದ ಗೋಮಾಂಸ ಅಥವಾ ಕೆಂಪು ಮಾಂಸ: ನೀವು ಸಸ್ಯಾಹಾರಿಗಳಾದಲ್ಲಿ, ಅರೆದ ಮಾಂಸವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಇದು ಅತ್ಯಂತ ಒಳ್ಳೆಯ ಮಾಂಸಾಹಾರ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದ ಐರನ್ ಅಂಶವನ್ನು ಹೆಚ್ಚಿಸಬಹುದು. 

೧೯. ಕೋಳಿ ಎದೆ: ನೀವು ಚಿಕನ್ ಇಷ್ಟ ಪಡುವವರಾಗಿದ್ದರೆ, ಚಿಕನ್ ಬ್ರೆಸ್ಟ್ ಸೂಕ್ತ ಆಯ್ಕೆ. ಸಾಮಾನ್ಯವಾಗಿ, ಚಿಕನ್ ಅನ್ನು ನಿಯಮಿತವಾಗಿ ಸೇವಿಸಲ್ಪಡುತ್ತವೆ. ಆದರೆ ನೀವು ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಚಿಕನ್ ಎಲ್ಲಾ ಭಾಗಗಳಿಗಿಂತ ಚಿಕನ್ ಎದೆಯನ್ನು ಹೆಚ್ಚಾಗಿ ಸೇವಿಸಬೇಕು. 

೨೦. ಯಕೃತ್ತು: ಚಿಕನ್ ಅಥವಾ ಮಟನ್ ನ ಯಕೃತ್ತನ್ನು ನಿಮ್ಮ ನಿತ್ಯ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದು ಐರನ್ ಅಂಶವನ್ನು ಹೆಚ್ಚಾಗಿ ಹೊಂದಿದೆ. ಇದನ್ನು ಸ್ವಲ್ಪ ಮಟ್ಟದಲ್ಲಿ ಸೇವಿಸಿದರೂ, ನಿಮ್ಮ ದೇಹಕ್ಕೆ ದಿನನಿತ್ಯ ಅಗತ್ಯವಿರುವ ಐರನ್ ಅಂಶವನ್ನು ನೀಡುತ್ತದೆ. 

೨೧. ಮೊಟ್ಟೆಗಳು: ಎಲ್ಲರಿಗೂ ತಿಳಿದಿರುವಂತೆ ಮೊಟ್ಟೆಗಳಲ್ಲಿ ಪ್ರೋಟೀನ್ ಗಳಿರುತ್ತವೆ. ಅನೇಕರು ಐರನ್ ಸಮೃದ್ಧ ಆಹಾರವನ್ನು ಕೇವಲ ಮೊಟ್ಟೆ ನಿಯಮಿತವಾಗಿ ಸೇವಿಸುವುದರಿಂದ ಪಡೆಯುತ್ತಾರೆ. ಮೊಟ್ಟೆಗಳು ಒಳ್ಳೆಯ ಕೊಲೆಸ್ಟರಾಲ್ ಮಟ್ಟವನ್ನು ನಿಮ್ಮ ದೇಹದಲ್ಲಿ ಹೆಚ್ಚಿಸುತ್ತದೆ. ಮತ್ತು ನಿಮ್ಮ ಹೃದಯವನ್ನು ಹಲವಾರು ಅರೋಗ್ಯ ಸಮಸ್ಯೆಗಳಿಂದ ಸಂರಕ್ಷಿಸುತ್ತದೆ. 

೨೨. ಕ್ಲಾಮ್ಸ್: ನೀವು ಮುದ್ರಾಹಾರವನ್ನು ಬಯಸುವವರಾಗಿದ್ದರೆ, ಕ್ಲಾಮ್ಸ್ ಅಂದರೆ ನಿಮಗೆ ಸಹಜವಾಗಿಯೇ ಇಷ್ಟವಾಗುತ್ತದೆ. ಇವುಗಳಲ್ಲಿ ಅತೀ ಹೆಚ್ಚಿನ ಮಟ್ಟದ ಐರನ್ ಅಂಶವಿರುತ್ತದೆ. ಅವುಗಳಲ್ಲಿ ವಿಟಮಿನ್ ಬಿ೧೨ ಮತ್ತು ವಿಟಮಿನ್ ಸಿ ಸಹ ಇರುತ್ತದೆ. ಹಾಗಾಗಿ, ಅವುಗಳನ್ನು ನಿಮ್ಮ ನಿತ್ಯ ಆಹಾರಪದ್ಧತಿಯಲ್ಲಿ ಸೇರಿಸಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. 

೨೩. ವೊಯ್ಸ್ಟರ್ಸ್: ಅವುಗಳು ಐರನ್ ಸ್ಮಶವನ್ನು ಹೊಂದಿವೆ. ಒಂದು ಬಟ್ಟಲು ವೊಯ್ಸ್ಟರ್ಸ್ ಸೇವಿಸುವುದರಿಂದ ನಿಮ್ಮ ಸೇಹದ ೯೮% ಐರನ್ ಅಗತ್ಯತೆ ನೀಗುತ್ತದೆ. ಇವುಗಳಲ್ಲಿ ಒಮೇಗಾ-೩ ಫ್ಯಾಟಿ ಆಸಿಡ್ಸ್ ಸಹ ಹೆಚ್ಚಿನ ಮಟ್ಟದಲ್ಲಿರುತ್ತವೆ. 

೨೪. ಸಿಗಡಿ: ಸಿಗಡಿ ಐರನ್ ಸಮೃದ್ಧ ಆಹಾರ ಅಷ್ಟೇ ಅಲ್ಲದೇ, ರುಚಿಕರ ಕೂಡಾ. ಅದನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಅದು ನಿಮ್ಮ ದೇಹಕ್ಕೆ ಅಗತ್ಯವಿರುವ ಐರನ್ ಅಂಶವನ್ನು ನೀಡುತ್ತದೆ. 

೨೫. ಮೀನುಗಳು: ಎಲ್ಲರಿಗೂ ತಿಳಿದಿರುವಂತೆ ಮೀನುಗಳಲ್ಲಿ ಹೆಚ್ಚಿನ ಮಟ್ಟದ ಒಮೇಗಾ-೩ ಫ್ಯಾಟಿ ಆಸಿಡ್ಸ್ ಗಳಿರುತ್ತವೆ. ಆದರೆ, ಮೀನುಗಳು ಕೇವಲ ಇವುಗಳನ್ನಷ್ಟೇ ಅಲ್ಲದೇ, ಐರನ್ ಅನ್ನು ಸಹ ಸಮೃದ್ಧವಾಗಿ ಹೊಂದಿದೆ. ಯಾವುದೇ ಬಗೆಯ ಅರೋಗ್ಯ ಸಮಸ್ಯೆಗಳಿಂದ ನಿಮ್ಮನ್ನು ಸಂರಕ್ಷಿಸಲು ಇದನ್ನು ನಿಯಮಿತವಾಗಿ ಸೇವಿಸಿರಿ. 

ಇವುಗಳೇ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ಐರನ್ ಅಂಶವನ್ನು ನೀಡುವ ಆಹಾರಗಳು. ಈ ಆಹಾರಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸಿ. 

[Back To Top]

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon