ನಿಮ್ಮ ಸಂಬಂಧದಲ್ಲಿ ಮತ್ತೆ ಪ್ರೀತಿ ಚಿಗುರಿಸಲು ಈ ಸಣ್ಣ 10 ಉಪಾಯಗಳು!
ಪ್ರೀತಿ, ಈ ಎರೆಡಕ್ಷರದ ಪದವು ಒಮ್ಮೆ ಮಗುವಾದ ನಂತರ ಅಷ್ಟೊಂದು ಚಾಲ್ತಿಯಲ್ಲಿ ಇರುವುದಿಲ್ಲ. ನಿಮಗಾಗಿ ಆಗಲಿ ಅಥವಾ ನಿಮ್ಮ ಸಂಗಾತಿಗೆಂದು ಆಗಲಿ ಕೊಡಲು ನಿಮ್ಮ ಬಳಿ ಸಮಯವಿಲ್ಲ. ಹಾಗೆಂದ ಮಾತ್ರಕ್ಕೆ ನೀವು ಅನುರಾಗವನ್ನು ಮಾಸಲು ಬಿಡುವಿರ? ನೆನಪಲ್ಲಿ ಇಡಬೇಕಾದ ಒಂದು ವಿಷಯ ಎಂದರೆ, ಪ್ರೀತಿಯು ಚಿಕ್ಕ ಚಿಕ್ಕ ವಿಷಯಗಳ ಮೇಲೆ ನಿಂತಿರುತ್ತದೆ ಹೊರತು ದೊಡ್ಡ ದೊಡ್ಡ ಕಾರ್ಯಗಳ ಮೇಲೆ ಅಲ್ಲ. ಈ ಚಿಕ್ಕ ಚಿಕ್ಕ ವಿಷಯಗಳು ಯಾವ ರೂಪದಲ್ಲಿ ಆದರೂ ಬರಬಹುದು ಹಾಗು ನಿಮ್ಮ ಸಂಬಂಧಕ್ಕೆ ಅಪಾರ ಶಕ್ತಿ ತಂದುಕೊಡಬಹುದು.
ನಿಮ್ಮ ಸಂಗಾತಿಯೊಡನೆ ನೀವು ಮಾಡಬೇಕಾದ ಅಂತಹ ಪುಟ್ಟ ಕೆಲಸಗಳ ಪಟ್ಟಿ :
೧. ಒಟ್ಟಿಗೆ ಅಡುಗೆ ಮಾಡಿ
ಒಟ್ಟಿಗೆ ಕೂಡಿ ಅಡುಗೆ ಮಾಡುವುದರಲ್ಲಿ ಏನೋ ಜಾದು ಇದೆ. ನೀವೇನು ಬಿರಿಯಾನಿ ಮಾಡಬೇಕಿಲ್ಲ, ಸುಮ್ಮನೆ ಒಂದು ಈರುಳ್ಳಿ, ೪ ಮೆಣೆಸಿನಕಾಯಿ ಕತ್ತರಿಸಿ ಹಾಕಿ ಚಿತ್ರಾನ್ನ ಮಾಡಿ. ಒಬ್ಬರ ಸಾನಿಧ್ಯದಲ್ಲಿ ಇನ್ನೊಬ್ಬರು ಖುಷಿಯಿಂದ ಕಾಲ ಕಳೆಯುವುದು ಇದರ ಹಿಂದಿರುವ ಮುಖ್ಯ ಅಂಶ. ಎಲ್ಲವೂ ಅಚ್ಚುಕಟ್ಟಾಗಿ ಮಾಡಲು ನಿಮ್ಮ ಮೇಲೆ ನೀವೇ ಒತ್ತಡ ಹೇರಿಕೊಳ್ಳಬೇಡಿ. ಒಂದು ಮೊಂಬತ್ತಿಯ ಬೆಳಕಿನಲ್ಲಿ ಕೂತು, ಅಡುಗೆಯನ್ನು ಸವಿದು ನಿದ್ರೆಗೆ ಜಾರಿ.
೨. ಮೆಸೇಜ್ ಮಾಡಿ
ಯಾವುದನ್ನು ಹೇಳುವುದು ಮರೆಯಬೇಡಿ. ನಿಮ್ಮ ಒಂದು ಸಾಲಿನ ಸಂದೇಶ ಇರಲಿ ಅಥವಾ ಪುರಾಣವೇ ಇರಲಿ, ಅದು ನಿಮ್ಮ ಪತಿಯ ಮುಖದ ಮೇಲೆ ನಗು ಮೂಡಿಸುತ್ತದೆ. ಒಬ್ಬರಿಗೆ ಒಬ್ಬರು ಕಾಲೇಜ್ ಹುಡುಗರಂತೆ ಹಿಂದೆ ಮುಂದೆ ಸಂದೇಶ ಕಳಿಸುತ್ತಲೇ ಇರಿ, ಆಮೇಲೆ ನೋಡಿ ನಿಮ್ಮ ಸಂಬಂಧದಲ್ಲಿ ಪ್ರೀತಿ ಹೇಗೆ ಕುಣಿದುಕೊಂಡು ಬರುವುದೆಂದು.
೩. ಒಟ್ಟಿಗೆ ಸಿನಿಮಾ ನೋಡಿ
ನೀವು ಸೋಫಾ ಮೇಲೆ ಆರಾಮಾಗಿ ಕೂತು ಸಿನಿಮಾ ನೋಡುವಿರೋ ಅಥವಾ ಚೆನ್ನಾಗಿ ಬಟ್ಟೆ ಧರಿಸಿಕೊಂಡು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವಿರೋ, ಸಿನಿಮಾ ಎಲ್ಲವನ್ನೂ ಬದಲಾಯಿಸುತ್ತದೆ. ಚಿತ್ರವೂ ರೋಮ್ಯಾಂಟಿಕ್ ಆಗಿ ಇದ್ದಾರೆ ನಿಮಗೆ ಹೆಚ್ಚು ಉಪಯೋಗ ! ಆದರೆ ದೆವ್ವದ ಚಿತ್ರ ಆಗಿದ್ದರೆ ನಿಮ್ಮ ಕೆಲಸ ಸರಾಗವಾಗುತ್ತದೆ.
೪. ಜೋಡಿ ಮಸಾಜ್
ಹೌದು, ನಿಮಗೆ ಇದು ಸ್ಪಾ ಗೆ ಹೋದರೂ ನಿಮಗೆ ಇದು ಸಿಗುತ್ತದೆ. ಆದರೆ ಇದೊಂದು ಬಾರಿ ನಿಮ್ಮ ಪತಿಯನ್ನು ನಿಮ್ಮೊಡನೆ ಕರೆದುಕೊಂಡು ಹೋಗಿ. ಅವರಿಗೆ ಖಂಡಿತ ನಿರಾಸೆ ಆಗುವುದಿಲ್ಲ. ಮುಂಚಿತವಾಗಿಯೇ ಇದನ್ನು ಯೋಜಿಸಿ ಹಾಗು ನಿಮ್ಮ ಪತಿಯನ್ನು ಚಕಿತಗೊಳಿಸಿ.
೫. ಒಂದು ದೀರ್ಘ ವಾಯುವಿಹಾರ
ಪ್ರತಿ ರಾತ್ರಿಯೂ ನಿಮ್ಮ ಪತಿಯೊಂದಿಗೆ ಸ್ವಲ್ಪ ದೂರದವರೆಗೆ ಕೈ ಕೈ ಹಿಡಿದು ನಡೆಯಿರಿ. ನೀವು ಮಾತಾಡಬಹುದು, ನಿಮ್ಮ ನೆಚ್ಚಿನ ಹಾಡು ಗುಣಗುಟ್ಟಬಹುದು ಅಥವಾ ಹಾಗೆಯೇ ನಿಶಬ್ದವಾಗಿ ಕಾಲ ಕಳೆಯಿರಿ. ವಾಕಿಂಗ್ ಆದಮೇಲೆ ಮನೆಗೆ ಹೋಗಿ ಇಬ್ಬರು ಕೂಡಿ ಐಸ್ ಕ್ರೀಂ ಹಂಚಿಕೊಂಡು ತಿಂದು ಮಲಗಿ.
೬. ಅಡುಗೆಗೆ ವಿರಾಮ
ಪಿಜ್ಜಾ ಆರ್ಡರ್ ಮಾಡಿ ಬೇಡವ ಭಾರತೀಯ ಆಹಾರವನ್ನೇ ಆರ್ಡರ್ ಮಾಡಿ. ಆರಾಮಾಗಿ ಮನೆಯಲ್ಲೇ ಕೂತು ಮನೆಯ ಪ್ರಶಾಂತತೆಯನ್ನು ಆನಂದಿಸಿ. ಮನೆಯೆಲ್ಲಾ ಕುನಿದಾಡಿರಿ ಅಥವಾ ಒಬ್ಬರ ಕಣ್ಣಲ್ಲಿ ಒಬ್ಬರು ಕಣ್ಣಿಟ್ಟು ನೋಡುತ್ತಾ ಕುಳಿತುಕೊಳ್ಳಿ. ಹಿಂದೆ ಕೇವಲ ನೀವು ಇಬ್ಬರು ಮಾತ್ರವೇ ಇದ್ದಾಗ ಕಳೆದಂತಹ ಸುಂದರ ಕ್ಷಣಗಳ ಮೆಲಕು ಹಾಕಿ.
೭. ಒಟ್ಟಿಗೆ ವ್ಯಾಯಾಮ ಮಾಡಿ
ಜೊತೆಯಲ್ಲಿ ಓಡುವುದು ಅಥವಾ ಜೊತೆಯಲ್ಲಿ ಕಾರ್ಡಿಯೋ ವ್ಯಾಯಾಮ ಮಾಡುವುದು ಕೇಳುವುದಕ್ಕೆ ನೀರಸ ಅನ್ನಿಸಬಹುದು ಆದರೆ ಇದು ಕೂಡ ನೀವು ಒಟ್ಟಿಗೆ ಒಬ್ಬರಿಗೊಬ್ಬರು ವರಗಿಕೊಂಡು ಮಲಗುವಾಗ ಬರುವ ಅನುರಾಗವನ್ನೇ ತರುತ್ತವೆ. ಒಟ್ಟಿಗೆ ತೂಕ ಇಳಿಸುವುದು ಅಥವಾ ಒಟ್ಟಿಗೆ ನಿಮ್ಮ ಶೇಪ್ ಮಾಡಿಕೊಳ್ಳುವುದು ನಿಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ಮಾಡಬಹುದು.
೮. ಕ್ರೀಡೆಯೇ ನಿಮ್ಮ ಪತಿಯ ಹೃದಯಕ್ಕೆ ದಾರಿ
ಅವರಿಗೆ ಕ್ರೀಡೆಗಳನ್ನೂ ಟಿವಿ ಅಲ್ಲಿ ನೋಡುವುದಕ್ಕೆ ಬಿಡಿ ಅಷ್ಟೇ ! ಕ್ರಿಕೆಟ್ ಇರಲಿ ಅಥವ ಫುಟ್ಬಾಲ್ ಇರಲಿ ಅಥವಾ ಮತ್ತೇನೆ ಇರಲಿ, ಅವರಿಗೆ ಇಷ್ಟವಾಗುವಂತದ್ದು ಹಾಗು ನಿಮಗೆ ಇಷ್ಟವಾಗದಂತದ್ದು. ನಿಮ್ಮ ಸಾಯದಂತಹ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಮಾಡಬೇಕಾದ್ದು ಒಂದೇ ಕೆಲಸ. ಅವರ ಪಕ್ಕದಲ್ಲಿ ಕೂತುಕೊಳ್ಳುವುದು. ಹೌದು! ಕ್ರೀಡೆಯನ್ನ ನೋಡಿ ಹಾಗು ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಈ ಪ್ರಯತ್ನವನ್ನು ಅವರು ಖಂಡಿತವಾಗಿಯೂ ಶ್ಲಾಘಿಸುತ್ತಾರೆ.
