Link copied!
Sign in / Sign up
1
Shares

ನಿಮ್ಮ ಚರ್ಮ ಮತ್ತು ಕೇಶಕ್ಕೆ ಬಾದಾಮಿನ ಪ್ರಯೋಜನಗಳು (Benefits Of Almonds For Your Skin And Hair in Kannada)

ಬಾದಾಮಿ ಅತ್ಯಂತ ಆರೋಗ್ಯಕರ ಬೀಜಗಳಲ್ಲಿ ಒಂದು. ನಮ್ಮ ತಾಯಂದಿರು ಹಾಗೂ ಅಜ್ಜಿಯಂದಿರು ಒತ್ತಾಯವಾಗಿ ಬಾದಾಮಿಯನ್ನು ತಿನ್ನಿಸಿರುತ್ತಾರೆ. ಅದಕ್ಕೆ ಕಾರಣ ಬಾದಾಮಿನ ಅರೋಗ್ಯ ಪ್ರಯೋಜನಗಳು. ಅದರಲ್ಲಿ ಹಲವಾರು ಪೌಷ್ಟಿಕಾಂಶದೊಂದಿಗೆ, ವಿಟಮಿನ್ಗಳು ಸಹ ಇವೆ. ಅದರಲ್ಲಿರುವ ಖನಿಜಗಳ ಸಂಖ್ಯೆಯೂ ಹೆಚ್ಚಿದೆ. ಬಾದಾಮಿನ ಪ್ರಯೋಜನಗಳಲ್ಲಿ ಕೆಲವು: ಹೃದಯದ ಆರೋಗ್ಯವನ್ನು ನಿರ್ವಹಿಸುವುದು, ಮಧುಮೇಹವನ್ನು ತಡೆಗಟ್ಟುವುದು, ಏಕಾಗ್ರತೆಯನ್ನು ಹೆಚ್ಚಿಸುವುದು, ಇತ್ಯಾದಿ. ಬಾದಾಮಿನಿಂದ ಕೂದಲು ಮತ್ತು ಚರ್ಮಕ್ಕೆ ಆಗುವ  ಲೇಖನದಲ್ಲಿ ವಿವರಿಸಲಾಗಿದೆ.

ಪರಿವಿಡಿ:

೧. ಬಾದಾಮ್ ಸೇವಿಸುವುದರಿಂದ ಆಗುವ ಪ್ರಯೋಜನಗಳು (What Are The Benefits Of Eating Almonds? in Kannada)

೨. ಚರ್ಮಕ್ಕೆ ಬಾದಾಮಿನಿಂದ ಆಗುವ ಲಾಭಗಳು  (Benefits Of Almonds For Skin in Kannada)

೩. ಬಾದಾಮನ್ನು ರಾತ್ರಿಯಿಡಿ ನೆನಿಸಿಟ್ಟು ಸೇವಿಸುವುದರಿಂದ ಚರ್ಮಕ್ಕಾಗುವ ಉಪಯೋಗ  (What Are The Benefits Of Almonds For Skin, When Soaked Overnight? in Kannada)

೪. ಬಾದಾಮ್ ಎಣ್ಣೆಯಿಂದ  ಲಾಭಗಳು  (Benefits Of Almond Oil For Skin In Kannada)

೫. ಬಾದಾಮನ್ನು ರಾತ್ರಿಯಿಡಿ ನೆನೆಸಿಟ್ಟು ಸೇವಿಸುವುದರಿಂದ ಕೂದಲಿಗಾಗುವ ಉಪಯೋಗ (What Are The Benefits Of Almonds For Hair, When Soaked Overnight? In Kannada)

೬. ಬಾದಾಮ್ ಎಣ್ಣೆಯಿಂದ ಕೂದಲಿಗಾಗುವ ಉಪಯೋಗ (Benefits Of Almond Oil For Hair In Kannada)

೧. ಬಾದಾಮ್ ಸೇವಿಸುವುದರಿಂದ ಆಗುವ ಪ್ರಯೋಜನಗಳು (What Are The Benefits Of Eating Almonds? in Kannada):

ಬಾದಾಮ್ ನಲ್ಲಿ ಫಾಟ್ಸ್ ಹಲವಾರು ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಕಗಳಿರುವುದರಿಂದ ಬಾದಾಮ್ ಆರೋಗ್ಯಕ್ಕೆ ತುಂಬಾ ಸಹಕಾರಿ. ಆದ್ದರಿಂದ ಪ್ರತಿ ದಿನ ಕೆಲವು ಬಾದಾಮ್ ಸೇವಿಸುವುದು ಒಳಿತು. ಬಾದಾಮಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ಗಳು, ಫೈಬರ್ ಅಂಶ ಮತ್ತು ಫಾಟ್ಸ್ ಗಳಿವೆ. ಇವುಗಳು ನಿಮ್ಮ ದೇಹಕ್ಕೆ ತುಂಬಾ ಆರೋಗ್ಯಕಾರಿ. ಬಾದಾಮ್ ಆಂಟಿಆಕ್ಸಿಡೆಂಟ್ ಗಳಿಂದಲೂ ತುಂಬಿಕೊಂಡಿದೆ.  ಹಾಗಾಗಿ, ಕ್ಯಾನ್ಸರ್ ಮತ್ತು ಮುಪ್ಪನ್ನು ಮುಂದೂಡುವಲ್ಲಿ ಸಹಾಯ ಮಾಡುತ್ತದೆ. ಹಲವಾರು ವಿಟಮಿನ್ ಗಳನ್ನೂ ಹೊಂದಿರುವ ಬಾದಾಮ್, ವಿಟಮಿನ್ ಈ ಯ ಅತ್ಯುತ್ತಮ ಮೂಲವಾಗಿದೆ. ಬಾದಾಮ್ ಲಾಭಗಳಲ್ಲಿ ಕೆಲವು ಇಂತಿವೆ: ದೇಹದ ಕೊಬ್ಬಿನಂಶವನ್ನು ತಡೆಗಟ್ಟುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ರಕ್ತದ ಸಕ್ಕರೆ ಅಂಶವನ್ನೂ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಬಾದಾಮ್ ನ ಲಾಭಗಳ ಪಟ್ಟಿ ಅಂತ್ಯವಿಲ್ಲದ್ದು. ಬಾದಾಮ್ ಕೇವಲ ಕಚ್ಚಾ ರೂಪದಲ್ಲಿ ಲಾಭದಾಯಕವಷ್ಟೇ ಅಲ್ಲದೆ, ಅದರ ಇನ್ನಿತರ ಉತ್ಪನ್ನಗಳಿಂದಲೂ ಅಷ್ಟೇ ಲಾಭವನ್ನು ಪಡೆಯಬಹುದು. ಇದರಿಂದಾಗಿಯೇ ಬಾದಾಮ್ ಹೆಚ್ಚಿನ ಜನಪ್ರಿಯತಯನ್ನು ಪಡೆದಿದೆ. 

೨. ಚರ್ಮಕ್ಕೆ ಬಾದಾಮಿನಿಂದ ಆಗುವ ಲಾಭಗಳು (Benefits Of Almonds For Skin in Kannada):

ಬಾದಾಮ್ ನಿಮ್ಮ ಸೌಂದರ್ಯವನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಹುದು. ಅದರಲ್ಲಿರುವ ವಿಟಮಿನ್ ಇ, ಕ್ಯಾಲ್ಸಿಯಂ, ಫೈಬರ್, ಪೊಟ್ಯಾಸಿಯಂ ಬಾದಾಮ್ ನ ಲಾಭಗಳಿಗೆ ಕಾರಣ. ಬಾದಾಮ್ ಕಲೆಯಿಲ್ಲದ,  ಸ್ವಚ್ಛಂದ ಚರ್ಮವನ್ನು ನಿಮ್ಮದಾಗಿಸಬಹುದು.

[Back To Top]

೩. ಬಾದಾಮನ್ನು ರಾತ್ರಿಯಿಡಿ ನೆನಿಸಿಟ್ಟು ಸೇವಿಸುವುದರಿಂದ ಚರ್ಮಕ್ಕಾಗುವ ಉಪಯೋಗ (What Are The Benefits Of Almonds For Skin, When Soaked Overnight? in Kannada):

* ಪ್ರತಿ ದಿನ ಬೆಳಿಗ್ಗೆ ೬-೮ ಬಾದಾಮ್ (ಸಿಪ್ಪೆ ಸುಲಿದು ಅಥವಾ ಸಿಪ್ಪೆ ಸುಳಿಯದೆ ಇರುವ) ಸೇವಿಸಿರಿ. ಬಾದಾಮ್ ನಲ್ಲಿರುವ ವಿಟಮಿನ್ ಗಳು ನಿಮ್ಮ ದೇಹವನ್ನು ನಿರ್ವಿಷೀಕರಕಗೊಳಿಸಿ, ಮೊಡವೆ-ಮುಕ್ತ ತ್ವಚೆಯನ್ನು ನೀಡುತ್ತದೆ. 

* ರಾತ್ರಿಯಿಡಿ ನೆನೆಯಿಟ್ಟ ಬಾದಾಮ್ ಅನ್ನು ಕಿವುಚಿ, ನಿಮ್ಮ ಚರ್ಮಕ್ಕೆ ಲೇಪಿಸಿದರೆ, ಅದು ನೈಸರ್ಗಿಕವಾದ ಸ್ಕ್ರಬ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ನಿಮ್ಮ ದೇಹದ ರಕ್ತ ಸಂಚಲನ ಹೆಚ್ಚುತ್ತದೆ. 

* ನೆನೆಸಿಟ್ಟ ಬಾದಾಮ್ ನಿಂದ ಕಣಕವನ್ನು  ತಯಾರಿಸಿ, ನಿಮ್ಮ ತುಟಿಗೆ ಹಚ್ಚಿಕೊಂಡರೆ, ನೆವೆಯಿಂದ ಮುಕ್ತಿಗೊಂಡು, ಮೃದುವಾದ ತುಟಿ ಮತ್ತು ಚರ್ಮವನ್ನು ಪಡೆಯುತ್ತೀರಿ. 

[Back To Top]

೪. ಬಾದಾಮ್ ಎಣ್ಣೆಯಿಂದ ಚರ್ಮಕ್ಕಾಗುವ ಲಾಭಗಳು (Benefits Of Almond Oil For Skin In Kannada):

ಚರ್ಮಕ್ಕೆ ಬಾದಾಮ್ ಎಣ್ಣೆಯ ಲಾಭಗಳು ಹಲವಾರು. ಅದು ನಿಮ್ಮ ದೇಹದ ಮೇಲೆ ಬಗೆಬಗೆಯ ರೀತಿಯಲ್ಲಿ ಈ ಎಣ್ಣೆ ಪರಿಣಾಮ ಬೀರುತ್ತದೆ. ಇದರಿಂದ ನೀವು ಆರೋಗ್ಯಕರವಾಗಿ ಇರಬಹುದು. 

* ಮೊಡವೆಗಳನ್ನು ಚಿಕಿತ್ಸಿಸುವಲ್ಲಿ ಬಾದಾಮ್ ಎಣ್ಣೆ:

ಉಪಯುಕ್ತ ಉಪದೇಶ - ಬಾದಾಮ್ ಎಣ್ಣೆ ಹಗುರವಾಗಿ ಇದ್ದರೂ ಬಹಳ ಪರಿಣಾಮಕಾರಿ. ಚರ್ಮ ಈ ಎಣ್ಣೆಯನ್ನು ಸರಾಗವಾಗಿ ಹೀರಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ಚರ್ಮ ದೇಹದ ನಿರ್ವಿಷೀಕರಣ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತದೆ. ಇದರಿಂದ ಮೊಡವೆಗಳನ್ನು ತಡೆಗಟ್ಟಬಹುದು. 

* ಕಣ್ಣಿನ ಸುತ್ತದ ಕಪ್ಪು ವಲಯಗಳನ್ನು ಚಿಕಿತ್ಸುವುದು: 

ಬಾದಾಮ್ ಎಣ್ಣೆಯನ್ನು ನಿಮ್ಮ ಮುಖಕ್ಕೆ ಉಪಯೋಗಿಸಲು ಇನ್ನೊಂದು ಸಲಹೆ: ಕೆಲವು ಹನಿ ಬಾದಾಮ್ ಎಣ್ಣೆಯನ್ನು ನಿಮ್ಮ ಕಣ್ಣಿನ ಸುತ್ತದ ಕಪ್ಪು ವಲಯದ ಮೇಲೆ ನೇರವಾಗಿ ಲೇಪಿಸಿರಿ. ಹಾಗೆ ಲೇಪಿಸಿರುವ ಎಣ್ಣೆಯನ್ನು ಇಡೀ ರಾತ್ರಿ ಬಿಟ್ಟರೆ, ನೀವು ಕೆಲವೇ ದಿನಗಳಲ್ಲಿ ಪರಿಣಾಮವನ್ನು ನೋಡಬಹುದು. 

* ಸೂರ್ಯನ ಕಿರಣಗಳಿಂದಾಗಿರುವ ಚರ್ಮದ ಕಂಡುಬಣ್ಣವನ್ನು ನಿವಾರಿಸುವುದು 

ಕೆಲವು ಹನಿ ಬಾದಾಮ್ ಎಣ್ಣೆ, ಆಸ್ಥೆ ಪ್ರಮಾಣದ ನಿಂಬೆ ಹಣ್ಣಿನ ರಸ, ಕಂಡಾಗಿರುವ ನಿಮ್ಮ ಚರ್ಮಕ್ಕೆ ಹಚ್ಚಿ, ಕೆಲವು ನಿಮಿಷಗಳು ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. 

* ಮುಪ್ಪಿನ ಚಿಹ್ನೆಗಳನ್ನೂ ಕಡಿಮೆಗೊಳಿಸುತ್ತದೆ:

ಸೂರ್ಯನ ಕಿರಣಗಳು, ಧೂಳು ಮತ್ತು ಹೊಗೆಯ ಕಾರಣಗಳಿಂದ ಅಕಾಲಿಕ ಮುಪ್ಪಡರುವುದನ್ನು ತಪ್ಪಿಸುತ್ತದೆ. ಸ್ವಲ್ಪ ವಿಟಮಿನ್ ಇ ಸಾರವನ್ನು, ಕೆಲವು ಹನಿ ಬಾರಾಮ್ ಎಣ್ಣೆಯೊಂದಿಗೆ ಸೇರಿಸಿ, ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ. ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ. ಈ ಪದ್ಧತಿಯನ್ನು ವಾರದಲ್ಲಿ ಎರಡು ಬಾರಿ ಮಾಡುವುದು ಸೂಕ್ತ. 

* ಕಲೆ-ಮುಕ್ತ ಚರ್ಮಕ್ಕೆ ಬಾದಾಮ್ ಎಣ್ಣೆ: 

ಇನ್ನೊಂದು ಸಲಹೆ: ಒಂದು ಚಮಚದಷ್ಟು ಬಾದಾಮ್ ಎಣ್ಣೆಯನ್ನು ಬೆಚ್ಚಗಾಗಿಸಿ, ಕೆಲವು ಹನಿ ಟೀ ಟ್ರೀ ಎಣ್ಣೆಯೊಂದಿಗೆ ಕೂಡಿಸಿ, ನಿಮ್ಮ ಮುಖಕ್ಕೆ ಲೇಪಿಸಿಕೊಂಡು, ೧೫-೨೦ ನಿಮಿಷಗಳವರೆಗೆ ಮಸಾಜ್ ಮಾಡಿಕೊಳ್ಳಿ. ನಂತರ ಹತ್ತಿ ಉಂಡೆಯಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. 

* ಸ್ಟ್ರೆಚ್ ಮಾರ್ಕ ಮಂದವಾಗುವಂತೆ ಮಾಡುವಲ್ಲಿ ಬಾದಾಮ್ ಎಣ್ಣೆ: 

ಬಾದಾಮ್ ಎಣ್ಣೆಯಲ್ಲಿ ವಿಟಮಿನ್ ಇ ಅಧಿಕವಾಗಿದ್ದು, ಅದನ್ನು ನಿಯತವಾಗಿ ಬಳಸಿದರೆ ನಿಮ್ಮ ಸ್ಟ್ರೆಚ್ ಮಾರ್ಕ್ಸ್ ಗಳನ್ನೂ ಕ್ರಮೇಣವಾಗಿ ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. 

* ಹೊಳೆಯುವ ಚರ್ಮಕ್ಕಾಗಿ ಬಾದಾಮ್ ಎಣ್ಣೆ: 

ನಿಮ್ಮ ಸ್ವಚ್ಛ ಕೈ ಮೇಲೆ ಕೆಲವು ಹನಿ ಬಾದಾಮ್ ಎಣ್ಣೆ ಹಾಕಿಕೊಂಡು, ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಿ. 

* ಮೇಕಪ್ ಅಳಿಸುವಲ್ಲಿ ಬಾದಾಮ್ ಎಣ್ಣೆ:

ಹತ್ತಿಯ ಉಂಡೆಯಿಂದ ನಿಮ್ಮ ಮುಖಕ್ಕೆ ಕೆಲವು ಹನಿ ಬಾದಾಮ್ ಎಣ್ಣೆಯನ್ನು ಹಚ್ಚಿಕೊಂಡರೆ, ನಿಮ್ಮ ಮೇಕಪ್ ಅನ್ನು ನೈಸರ್ಗಿಕವಾಗಿ ಅಳಿಸಬಹುದು. 

[Back To Top]

೫. ಬಾದಾಮನ್ನು ರಾತ್ರಿಯಿಡಿ ನೆನೆಸಿಟ್ಟು ಸೇವಿಸುವುದರಿಂದ ಕೂದಲಿಗಾಗುವ ಉಪಯೋಗ (What Are The Benefits Of Almonds For Hair, When Soaked Overnight?)

* ಕಿವುಚಿದ ಹಸಿ ಬಾದಾಮ್ ನಿಂದ ನಿಮ್ಮ ಕೂದಲಿಗೆ ಹಚ್ಚಬಹುದಾದ ಕಣಕವನ್ನು ತಯಾರಿಸಿಕೊಳ್ಳಿ. ಇದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಂಡರೆ, ನಿಮ್ಮ ಕೂದಲಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗುತ್ತದೆ. 

* ನೀವು ಕೂದಲುದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಒಂದು ಚಮಚದಷ್ಟು ಬಾದಾಮ್ ಕಣಕವನ್ನು ಆಲಿವ್ ಎಣ್ಣೆಯಲ್ಲಿ ಸೇರಿಸಿ, ನಿಮ್ಮ ನೆತ್ತಿಗೆ ಮಸಾಜ್ ಮಾಡಿಕೊಳ್ಳಿ. ಇಡೀ ರಾತ್ರಿ ಇದನ್ನು ಬಿಟ್ಟರೆ, ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ. 

* ಪ್ರತಿದಿನ ನೆನೆಸಿಟ್ಟ ಬಾದಾಮ್ ತಿಂದರೆ, ಅದರಿಂದ ನಿಮ್ಮ ಕೂದಲು ಹೊಳೆಯುವಂತಾಗುತ್ತದೆ. ಜೊತೆಗೆ, ನಿಮ್ಮ ಕೂದಲಿನ ಬೇರುಗಳೂ ಗಟ್ಟಿಗೊಳ್ಳುತ್ತವೆ. 

೬. ಬಾದಾಮ್ ಎಣ್ಣೆಯಿಂದ ಕೂದಲಿಗಾಗುವ ಉಪಯೋಗ (The Benefits Of Almond Oil For Hair in Kannada):

ಬಾದಾಮ್ ಎಣ್ಣೆಯ ಲಾಭಗಳು ಅಪಾರ. ಇಲ್ಲಿದೆ ಅದರ ಕೆಲವು ಲಾಭಗಳ ಪಟ್ಟಿ.

* ಆರೋಗ್ಯಕರ ನೆತ್ತಿಗೆ: ಬಾದಾಮ್ ಎಣ್ಣೆಯನ್ನು ಪ್ರತಿನಿತ್ಯ ನಿಮ್ಮ ನೆತ್ತಿಗೆ ಲೇಪಿಸಿಕೊಂಡು ಮಸಾಜ್ ಮಾಡಿಕೊಂಡರೆ, ನಿಮ್ಮ ಕೇಶ ಸೌಂದರ್ಯ ಹೆಚ್ಚುತ್ತದೆ. ಇಡೀ ರಾತ್ರಿ ಆ ಎಣ್ಣೆಯನ್ನು ಕೂದಲಲ್ಲಿ ಬಿಡಲಾಗದಿದ್ದರೆ, ಕನಿಷ್ಠ ಪಕ್ಷ ಒಂದು ಗಂಟೆಯಾದರೂ ಎಣ್ಣೆ ನಿಮ್ಮ ಕೂದಲಲ್ಲಿ ಇರಲಿ. 

* ನೈಸರ್ಗಿಕ ಕಂಡೀಷನರ್: ನೀವು ಬಾದಾಮ್ ಎಣ್ಣೆಯನ್ನು ಬಳಸಿದರೆ, ನಿಮಗೆ ಕಂಡೀಷನರ್ ನ ಅಗತ್ಯತೆ ಇರುವುದಿಲ್ಲ. ಎಣ್ಣೆಯನ್ನು ನಿಮ್ಮ ನೆತ್ತಿ ಸರಿಯಾಗಿ ಹೀರಿಕೊಳ್ಳಲು, ನಿಮ್ಮ ತಲೆಯ ಸುತ್ತ ಒಂದು ಬೆಚ್ಚಗಿನ ಬಟ್ಟೆಯನ್ನು ಸುತ್ತಿಕೊಳ್ಳಿ. 

* ಹೊಟ್ಟಿನ ಚಿಕಿತ್ಸೆ: 

ಹೊಟ್ಟಿನಿಂದ ಮುಕ್ತಿ ಪಡೆಯಲು, ಸ್ವಲ್ಪ ನೆಲ್ಲಿಕಾಯಿ ಪುಡಿಯನ್ನು ಬಾದಾಮ್ ಎಣ್ಣೆಯಲ್ಲಿ ಕಳಿಸಿ, ನಿಮ್ಮ ಕೂದಲಿಗೆ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ಶ್ಯಾಂಪೂವಿನಿಂದ ತೊಳೆದುಕೊಳ್ಳಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಒಳಿತು. 

* ಕೂದಲುದುರುವಿಕೆಯನ್ನು ಕಡಿಮೆಗೊಳಿಸುತ್ತದೆ:

ಬಾದಾಮ್ ಎಣ್ಣೆಯನ್ನು ನಿಮ್ಮ ಕೂದಲಿಗೆ ದಿನನಿತ್ಯ ಬಳಸುವುದರಿಂದ ನಿಮ್ಮ ಕೂದಲು ಬೇರಿನಿಂದಲೇ ಬಲಿಷ್ಠವಾಗುತ್ತವೆ. ಹಾಗಾಗಿ ನಿಮ್ಮ ಕೂದಲುದುರುವಿಕೆಯ ಸಮಸ್ಯೆ ನಿಯಂತ್ರಣಗೊಳ್ಳುತ್ತದೆ. 

*  ಹೊಳೆಯುವ ಕೂದಲಿಗೆ ಬಾದಾಮ್ ಎಣ್ಣೆ: 

ನಿಮ್ಮ ಕೂದಲು ಆರೋಗ್ಯಕರವಾಗಿದ್ದರೆ, ಅವುಗಳು ಹೊಳೆಯುತ್ತವೆ. ಹಾಗಾಗಿ, ಸ್ವಲ್ಪ ಪ್ರಮಾಣದ ಬಾದಾಮ್ ಎಣ್ಣೆಯನ್ನು ಮತ್ತು ಆಲಿವ್ ಎಣ್ಣೆಯನ್ನು ಕುಡಿಸಿ, ನಿಮ್ಮ ಕೂದಲಿಗೆ ಮಸಾಜ್ ಮಾಡಿ. 

* ಒರಟಾದ ಕೂದಲಿಗೆ ಪರಿಹಾರ: ನಿಮ್ಮ ರಾಸಾಯನಗಳಿಂದ ಒರಟಾಗಿದ್ದರೆ ಬಾದಾಮ್ ಎಣ್ಣೆ ನಿಮಗೆ ಪರಿಹಾರ ನೀಡಬಲ್ಲದು. ಈ ಎಣ್ಣೆಯಿಂದ ವಾರದಲ್ಲಿ ಎರಡು ಬಾರಿ ಮಸಾಜ್ ಮಾಡಿಕೊಂಡರೆ ಒಳಿತು. 

ನೀವು ನಿಮ್ಮ ಚರ್ಮ ಸೌಂದರ್ಯಕ್ಕೆ ಮತ್ತು ಕೇಶ ಸೌಂದರ್ಯಕ್ಕಾಗಿ ದುಬಾರಿ ಸೌಂದರ್ಯವರ್ಧಕಗಳಲ್ಲಿ ನಿಮ್ಮ ಹಣವನ್ನು ತೊಡಗಿಸುತ್ತಿದ್ದರೆ, ಬಾದಾಮ್ ಅನ್ನು ಪ್ರಯೋಗಿಸಿ ನೋಡುವುದು ಸೂಕ್ತ. ಏಕೆಂದರೆ ಬಾದಾಮ್ ಹಾಗೂ ಬಾದಾಮ್ ಎಣ್ಣೆ ಚರ್ಮ ಸೌಂದರ್ಯ ಹಾಗೂ ಕೇಶ ಸೌಂದರ್ಯಕ್ಕೆ ತುಂಬಾ ಪ್ರಯೋಜನಾಕಾರಿ. ಇವುಗಳು ಶೇಕಡಾ ನೂರರಷ್ಟು ನೈಸರ್ಗಿಕವಾಗಿದ್ದು, ದೀರ್ಘಾವಧಿಯಲ್ಲಿಯೂ ನಿಮ್ಮ ಆರೋಗ್ಯಕ್ಕೆ ಲಾಭದಾಯಕವಾಗಿದೆ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon