Link copied!
Sign in / Sign up
58
Shares

ನಿಮ್ಮ ರಾಶಿಯ ಪ್ರಕಾರ ನೀವು ಏನನ್ನು ಬಯಸುವಿರಿ ಗೊತ್ತೇ?

ನಿಮ್ಮ ರಾಶಿಯು ಗ್ರಹಗಳ ಅನುಗುಣವಾಗಿ ನಿಮ್ಮ ಜೀವನದ ಹಣೆಬರಹದ ಬಗ್ಗೆ ಮಾತ್ರ ಹೇಳುವುದಿಲ್ಲ, ಅದು ಒಬ್ಬ ವ್ಯಕ್ತಿಯಾಗಿ ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಬಗ್ಗೆ ಹಲವು ವಿಷಯಗಳನ್ನು ತಿಳಿಸುತ್ತದೆ. ಈ ಲೇಖನದಲ್ಲಿ ನಿಮ್ಮ ರಾಶಿಯ ಪ್ರಕಾರ ನೀವು ಹೆಚ್ಚು ಏನನ್ನು ಬಯಸುವಿರಿ ಎಂದು ತಿಳಿದುಕೊಳ್ಳೋಣ ಬನ್ನಿ.

೧.ಮೇಷ ರಾಶಿ

ಈ ರಾಶಿ ಅವರು, ಶಕ್ತಿಯುತ ಉತ್ಸಾಹ ಭರಿತ, ಮತ್ತು ಇವರು ಚೈತನ್ಯದ ಆಲಯ ಆಗಿರುವರು. ಇವರು ಬಯಸಿದ್ದನ್ನು ಪಡೆಯಲು ತುಡಿಯುವ ಮತ್ತು ಹೆಚ್ಚು ಪ್ರಯಾಣಿಸುವ ವ್ಯಕ್ತಿಗಳು. ಇವರು ಕೆಲವು ನಿರ್ದಿಷ್ಟ ವ್ಯಕ್ತಿಗಳಂತೆ ಅಥವಾ ಅವರನ್ನು ಹಿಂಬಾಲಿಸುವರು. ಇವರ ಬಯಕೆ ಎಂದರೆ, ಎಲ್ಲದರಲ್ಲೂ ನನ್ನ ಮುನ್ನಡೆ ಇರಬೇಕು, ಮತ್ತು ಉಸ್ತುವಾರಿ ವಹಿಸಿಕೊಳ್ಳಬೇಕು ಎನ್ನುವುದು ಮತ್ತು ಖ್ಯಾತಿ ಅಥವಾ ಪ್ರಸಿದ್ದಿ ಆಗಬೇಕು ಎಂಬುದು.

೨.ವೃಷಭ ರಾಶಿ

ಇವರು ತುಂಬಾ ಪ್ರಾಮಾಣಿಕರು ಮತ್ತು ಅವಲಂಭಿತ ವ್ಯಕ್ತಿಗಳು, ಆದಾಗ್ಯೂ ಇವರು ಯಾವಾಗಲೂ ನಾಯಕತ್ವ ಹೊಂದಿರುವುದಿಲ್ಲ. ಇವರು ಗುಂಪಿನಲ್ಲಿ ಕೆಲಸ ಮಾಡಲು ಬಯಸುವರು ಆದರೆ ಗುಂಪಿನಲ್ಲಿ ಮುಂಚುಣಿ ಅಥವಾ ಪ್ರಧಾನ ಪಾತ್ರವನ್ನು ವಹಿಸಿಕೊಳ್ಳುವುದಿಲ್ಲ. ಇವರು ಎಚ್ಚರಿಕೆಯುಳ್ಳವರು ಮತ್ತು ಹಠವಾದಿಗಳು ಅಥವಾ ಮೊಂಡುತನ ಇರುವವರು. ರಕ್ಷಣೆಯಲ್ಲಿ ಇರುವುದು ಇವರ ಪ್ರಮುಖ ಬಯಕೆ.

೩.ಮಿಥುನ

ಈ ರಾಶಿಯವರು ಹೊಂದಿಕೊಳ್ಳುವ ಗುಣ ಹೊಂದಿದ್ದು, ಸ್ನೇಹ ಜೀವಿ ಆಗಿರುವರು. ಇವರು ತುಂಬಾ ಸ್ವಂತಂತ್ರ ವ್ಯಕ್ತಿಗಳು ಮತ್ತು ಸಹಾಯಕ್ಕಾಗಿ ಬೇರೆಯವರನ್ನು ಎಂದು ಕರೆಯುವುದಿಲ್ಲ. ಇವರ ಅತಿ ಬಯಕೆ ಎಂದರೆ, ಪ್ರಪಂಚವನ್ನು ಸುತ್ತಬೇಕು ಮತ್ತು ಹೊಸ ಸವಾಲುಗಳನ್ನು ದಿಟ್ಟತನದಿಂದ ಎದುರಿಸಬೇಕು ಎನ್ನುವುದು. ತಮ್ಮ ಸ್ವತಂತ್ರವನ್ನು ಇವರು ರಕ್ಷಿಸಿಕೊಳ್ಳುವರು.

೪.ಕಟಕ ರಾಶಿ

ಇವರನ್ನು ಹಿಡಿಯುವುದು ಕಷ್ಟ, ಆದರೆ ಇವರು ತುಂಬಾ ನಿಷ್ಠಾವಂತ ವ್ಯಕ್ತಿಗಳು. ಇವರು ನಾಚಿಕೆ ಪಡುವ ಸ್ವಭಾವದ ವ್ಯಕ್ತಿಗಳು, ಇವರು ಹಲವು ಸಮಯದಲ್ಲಿ ಅಸುರಕ್ಷಿತ ಮತ್ತು ತುಂಬಾ ಸೂಕ್ಹ್ಮ ವ್ಯಕ್ತಿಗಳಾಗುವರು. ಇವರು ಸ್ವತಂತ್ರವಾಗಿ ಮತ್ತು ಶಕ್ತಿಶಾಲಿಯಾಗಿ ಹೋಗಿ ಏನಾದರು ಮಾಡಿ ಅದರಿಂದ ಲಾಭ ಪಡೆಯುವುದನ್ನು ಹೆಚ್ಚು ಬಯಸುವರು.

೫.ಸಿಂಹ ರಾಶಿ

ಇವರು ಹೆಚ್ಚು ಕಾಳಜಿ ವಹಿಸುವ ವ್ಯಕ್ತಿಗಳು. ಇವರು ಸೂಕ್ಹ್ಮ ಮತ್ತು ದಯೆ ಹೃದಯವುಳ್ಳವರು, ಆದರೆ ಇವರು ಯಾವಾಗಲು ಬೇಡಿಕೆ ಅಲ್ಲಿರುವುದನ್ನು ಬಯಸುವರು. ಇವರ ಬಯಕೆ ಅಥವಾ ಆಸೆ ಎಂದರೆ, ಇವರು ಮಾಡುವ ಕೆಲಸಕ್ಕೆ ಮೆಚ್ಚುಗೆ ಮತ್ತು ಹೊಗಳಿಕೆಯನ್ನು ಬಯಸುವರು, ಕೆಲವೊಮ್ಮೆ ಇದು ಸಿಗಲಿಲ್ಲ ಎಂದರೆ ಇವರು ಬೇಸರ ಮಾಡಿಕೊಳ್ಳುವರು.

೬.ಕನ್ಯಾ ರಾಶಿ

ಇವರು ಅನುಕಂಪ ಮತ್ತು ಪ್ರೀತಿ ತುಂಬಿದ ಹೃದಯವಂತ ವ್ಯಕ್ತಿಗಳು. ಇವರು ವಿಶ್ವಾಸಾರ್ಹ ವ್ಯಕ್ತಿಗಳು ಮತ್ತು ಅವರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವರು. ಇವರು ಪ್ರೀತಿಗೆ ಗೌರವ ನೀಡುವರು ಮತ್ತು ಇವರ ಬಯಕೆ ಎಂದರೆ ಇವರು ಪ್ರೀತಿಸುವರು ಇವರಷ್ಟೇ ಇವರನ್ನು ಪ್ರೀತಿಸಬೇಕೆಂಬುದು. ಇವರು ಪ್ರೀತಿಯಲ್ಲಿ ಹತಾಶೆ ಕಾಣಬಹುದು ಆದರೆ ಅವರ ಪ್ರೀತಿಯನ್ನು ಯಾರು ಮುಟ್ಟಲು ಸಾಧ್ಯವಿಲ್ಲ.

೭.ತುಲಾ ರಾಶಿ

ಶಾಂತಿ, ಪ್ರೀತಿ ಮತ್ತು ರಾಜತಂತ್ರ ಗುಣ ಇರುವ ಇವರು ಎಲ್ಲವನು ಹತೋಟಿಯಲ್ಲಿ ಇರಿಸಿಕೊಳ್ಳಲು ಬಯಸುವರು. ಕೆಲವೊಮ್ಮೆ ನಿರ್ಣಯವನ್ನು ಮಾಡದೇ ಇದ್ದರೂ, ಎಲ್ಲಾ ಸಮಯದಲ್ಲೂ ಸಂಘರ್ಷವನ್ನು ತಪ್ಪಿಸುವರು. ಇವರ ಬಯಕೆ ಏನೆಂದರೆ ಎಲ್ಲ ವಿಷಯದಲ್ಲೂ ಸ್ಪಷ್ಟತೆ ಮತ್ತು ಸಮತೋಲನ ಇರುವುದು.

೮.ವೃಶ್ಚಿಕ ರಾಶಿ

ಯಾರಲ್ಲೂ ಕಾಣದ ಮಹತ್ವಾಕಾಂಕ್ಷೆಯನ್ನು ಹೊಂದಿರುವ ವ್ಯಕ್ತಿ ಇವರು. ಇವರು ತಮಗೆ ತಾವೇ ದೊಡ್ಡ ಗುರಿಯನ್ನು ನಿರ್ಮಿಸಿಕೊಳ್ಳುವರು ಮತ್ತು ಅದನ್ನು ಸಾದಿಸುವವರೆಗೆ ಪ್ರಯತ್ನಿಸುವರು. ಇವರು ಭಾವೋದ್ರಿಕ್ತ ಮತ್ತು ಸ್ವತಂತ್ರ ವ್ಯಕ್ತಿಗಳು. ಇವರ ಬಯಕೆ ಎಂದರೆ ಪ್ರಪಂಚವನ್ನು ಬದಲಿಸಬೇಕು ಎಂಬುದು,ಏಕೆಂದರೆ ಇವರು ಎಲ್ಲರ ಒಳಿತನ್ನು ಬಯಸುವರು, ಮತ್ತು ಇವರು ಇವರ ಸುತ್ತ ಇರುವವರ ಬಗ್ಗೆ ಕಾಳಜಿಯನ್ನು ತೋರಿಸುವರು.

೯.ಧನಸ್ಸು

ಇವರು ಕಟ್ಟುಗ ಮತ್ತು ಹೊಸತನು ಬಯಸುವವರು, ಮತ್ತು ಇವರು ಹೊಸತನವನ್ನು ಕಾರ್ಯರೂಪಕ್ಕೆ ತರಲು ಇಷ್ಟ ಪಡುವರು. ಇವರ ಬಯಕೆ ಎಂದರೆ, ಹೊಸ ವಿಷಯಗಳನ್ನು ಮಾಡುವುದು, ಸ್ವತಂತ್ರವಾಗಿ ಪ್ರಯಾಣಿಸುವುದು, ಸಾಹಸಮಯ ವಾಗಿರುವುದು, ಮತ್ತು ಗೊತ್ತಿಲ್ಲದನ್ನು ಅನ್ವೇಷಿಸುವುದು.

೧೦.ಮಕರ

ಇವರು ಪ್ರಾಮಾಣಿಕರು, ವಿಶ್ವಾಸಯುಳ್ಳವರು ಮತ್ತು ಇವರು ಕಾಳಜಿ ಮತ್ತು ಪ್ರೀತಿ ತೋರಿಸುವವರಿಗಾಗಿ ಎಂದು ಅವರ ಜೊತೆ ಇರುವರು. ಇವರ ಬಯಕೆ ಅಥವಾ ಆಸೆ ಎಂದರೆ ಇವರು ಪ್ರೀತಿಸುವವರ ಮತ್ತು ಕಾಳಜಿ ಇರುವವರ ಜೊತೆಯಲ್ಲಿ ಇವರೇ ಮೊದಲಿಗರು ಅಥವಾ ಇವರೇ ಮೇಲಿರಬೇಕು ಎನ್ನುವುದು. ಇದನ್ನು ಅವರು ಪಡೆಯಲಿಲ್ಲ ಎಂದರೆ ಬೇಸರ ಪಡುವರು ಮತ್ತು ಕೆಲವೊಮ್ಮೆ ಕೋಪಗೊಳ್ಳುವರು.

೧೧.ಕುಂಭ ರಾಶಿ

ಇವರು ಹಾಸ್ಯಮಯ, ಚತುರ ಮತ್ತು ಕ್ರಿಯಾತ್ಮಕ ವ್ಯಕ್ತಿಗಳು. ಇವರು ಯಾವಾಗಲು ತಮ್ಮ ಸ್ವಂತಿಕೆಯ ಬುದ್ದಿಯನ್ನು ಉಪಯೋಗಿಸಿ ಹೊಸತನದ ಫಲಿತಾಂಶವನ್ನು ನಿರೀಕ್ಷಿಸುವರು. ಇವರ ಆಸೆ ಎಂದರೆ ಇವರು ಯಾವಾಗಲು ಮುಂದೆ ಇರಬೇಕು ಮತ್ತು ನಾಯಕತ್ವ ವಹಿಸಬೇಕು ಎನ್ನುವುದು.

೧೨.ಮೀನ ರಾಶಿ

ಕಲ್ಪನಾತ್ಮಕ ಮತ್ತು ಹಗಲುಗನಸು ಕಾಣುವ ವ್ಯಕ್ತಿಗಳು ಇವರು. ಇವರು ಯಾವಾಗಲೂ ಅರ್ಥಗರ್ಭಿತ ಮತ್ತು ಕಲೆಯನ್ನು ಗೌರವಿಸುವ ವ್ಯಕ್ತಿಗಳಾಗಿದ್ದಾರೆ. ಇವರ ಬಯಕೆ ಎಂದರೆ ಇವರ ಸಾಮರ್ಥ್ಯ ಮತ್ತು ಕಲೆಗೆ ಇವರನ್ನು ಬೆಂಬಲಿಸುವುದು ಮತ್ತು ಗೌರವಿಸುವುದನ್ನು ಇವರು ಬಯಸುವರು. ಇವರನ್ನು ಅರ್ಥ ಮಾಡಿಕೊಳ್ಳುವರು ಇವರ ಬಳಿ ಇಲ್ಲದಿದ್ದರೆ ಅವರನ್ನು ಹೆಚ್ಚು ಮಾತನಾಡಿಸುವುದಿಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon