Link copied!
Sign in / Sign up
8
Shares

ನಿಮ್ಮ ಅತ್ತೆಯೊಂದಿಗೆ ತಪ್ಪಿಸಲಾಗದ 5 ಕದನಗಳು

ಮದುವೆ ಎಂಬುದು ಗೊಂದಲಮಯವಾಗಿರುತ್ತದೆ. ಹೌದು, ಏರಿಳಿತಗಳು ಅಗಾಧವಾಗಬಹುದು ಮತ್ತು ಕೆಲವೊಮ್ಮೆ ನೀವು ಆರಂಭದ ಸ್ಥಿತಿಯಲ್ಲಿ ಸುರುಳಿಯಾಗಿ ಮರೆಮಾಡಲು ಬಯಸುತ್ತೀರಿ; ಬಹಳಷ್ಟು ಬಾರಿ, ಇದಕ್ಕೆ ಕಾರಣವಾಗುವ ವ್ಯಕ್ತಿ ಮನೆಯ ಮಹಿಳೆ, ನಿಮ್ಮ ಅತ್ತೆಯೇ. ಒಂದು ನಿಮಿಷ ಅವಳು ದೊಡ್ಡ ನಗು ನೀಡುತ್ತಾಳೆ ಮತ್ತು ನಂತರ ದುರುಗುಟ್ಟಿ ನೋಡಿ ದೂರ ನಡೆಯುತ್ತಾಳೆ. ರಾಣಿ ಜೇನಿನ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದು ಅಭೇದ್ಯವಾದುದು.

ನಿಮಗೆ ಅನಿವಾರ್ಯವಾಗಿ ಅವಳೊಂದಿಗೆ ಎದುರಾಗುವ ಕೆಲವು ಜಗಳಗಳು ಇಲ್ಲಿವೆ:

೧. ಅಡುಗೆಯ ಬಗ್ಗೆ ಆಕೆಗೆ ಸರ್ವವೂ ಗೊತ್ತು!

 

ಇಲ್ಲಿಯವರೆಗಿನ ಪರಮಶ್ರೇಷ್ಠ ಅಡುಗೆ ಮಾಡುವವರೆಂದರೆ ನಿಮ್ಮ ಅತ್ತೆ ಎಂದು ನೀವು ಮನದಟ್ಟುಮಾಡಿಕೊಳ್ಳಬೇಕು,ಏಕೆಂದರೆ ಅವರು ಹಾಗೆ ನಂಬಿದ್ದಾರೆ. ಬಹುತೇಕ ಪ್ರತಿದಿನ, ನಿಮ್ಮ ಎಲ್ಲಾ ಅಡುಗೆಯನ್ನೂ ಟೀಕಿಸಲಾಗಿದೆ.ಉಪ್ಪು ಕಡಿಮೆ ಇಲ್ಲವೇ ಉಪ್ಪೇ ಇಲ್ಲ.ಈ ರೀತಿಯ ಅಡುಗೆ ಮಾಡಿ ಅವಳ ಮಗನನ್ನು ನೀವೆಂದೂ ಸಂತೋಷವಾಗಿರಿಸಲಾರಿರಿ!ನೀವು ಮಾಡಿದ ಅಡುಗೆ ಎಂದೆಂದಿಗೂ ನಿಮ್ಮ ಅತ್ತೆಯವರಿಗೆ ರುಚಿಸದು ಆದ್ದರಿಂದ ಅಡುಗೆಯ ವಿಷಯದಲ್ಲಿನ ಕದನಗಳಿಗೆ ತಯಾರಾಗೇ ಇರಿ.

೨. ಅವಳು ಸ್ವಚ್ಛತೆಯ ಗುರು

ಅವಳು ಶುಚಿತ್ವಕ್ಕೆ ಗುರು ಮತ್ತು ನಿಮಗಿಂತಲೂ  ತನ್ನ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುತ್ತಾಳೆ. ನೀವು ಎಲ್ಲೆಡೆಯ ಧೂಳು ತೆಗೆಯಲು ಶ್ರಮಿಸಬಹುದು, ಆಗಾಗ್ಗೆ ನೀವು ತಪ್ಪಿಹೋದ ಒಂದು ಸ್ಥಳವನ್ನು ಅವರು ಕಂಡುಕೊಳ್ಳುತ್ತಾರೆ ಮತ್ತು ಅದರ ಮೇಲೆ ನಿಮ್ಮನ್ನು ಗೇಲಿ ಮಾಡುತ್ತಾರೆ. ಇದು ನೀವು ಎಂದಿಗೂ ಗೆಲ್ಲಲು ಸಾಧ್ಯವಿಲ್ಲವಾದ ಹೋರಾಟ, ಎಂದಿಗೂ ಪ್ರಯತ್ನಿಸಬೇಡಿ

೩. ಅವಳು ಧಾರ್ಮಿಕ ರಾಣಿ

ಆದ್ದರಿಂದ, ಯಾರೋ ಅವಳಿಗೆ ಆಚರಣೆಗಳ ರಾಣಿ ಎಂದು ಕಿರೀಟ ನೀಡಿದ್ದಾರೆ ಮತ್ತು ಅವಳು ಆಚರಣೆಗಳಿಗೆ, ನ್ಯಾಯವನ್ನು ಮಾಡುವ ಏಕೈಕ ವ್ಯಕ್ತಿ. ನೀವು ಮತ್ತೊಂದೆಡೆ ನಿಮ್ಮ ಕೈಗಳನ್ನು ಹೇಗೆ ಸರಿಯಾದ ರೀತಿಯಲ್ಲಿ ಇರಿಸಿ ಪ್ರಾರ್ಥಿಸಬೇಕು ಎಂದು ತಿಳಿದಿಲ್ಲದವರು.ಇದೆ ಅವಳ ನಂಬಿಕೆ. ಮತ್ತು ನನ್ನನ್ನು ನಂಬಿ, ನೀವು ಅವರ ಮನವೊಲಿಸಲು ಮಾಡಬಹುದಾದ ದಾರಿಯೇ ಇಲ್ಲ.

೪. ಅವರು ಎಲ್ಲಾ ತಾಯಂದಿರ ತಾಯಿ

ಮಗುವನ್ನು ಬೆಳೆಸುವುದು ಹೇಗೆ ಎಂದು ನಿಮಗೆ ತಿಳಿದಿಲ್ಲ ಮತ್ತು ಅವಳು ಆ ವಿಷಯದಲ್ಲಿ ಪ್ರವೀಣೆ ಏಕೆಂದರೆ ಅವಳು ನಿಮ್ಮ  ಪತಿಯನ್ನು  ಬೆಳೆಸಿದ್ದಾಳೆ ಎಂದು ನಿಮಗೆ ಹೇಳುತ್ತಾಳೆ! ಅವಳ ಪ್ರಕಾರ, ನೀವು ನಿಮ್ಮ ಮಗುವನ್ನು ಹಾಳು ಮಾಡುತ್ತಿದ್ದೀರಿ ಮತ್ತು ಕೆಲವೊಮ್ಮೆ ಕಟ್ಟುನಿಟ್ಟಾಗಿ ಸಹ ಇರುತ್ತೀರಿ.ನೀವು ಅವಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಎಲ್ಲಾ!ಇದೆಲ್ಲ ಹೀಗೆ ಎಂದು ಅವಳು ತಿಳಿದಿರುತ್ತಾಳೆ ಹಾಗು ನಿಮ್ಮ ಸ್ವಂತ ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ನಿರಂತರವಾಗಿ ನಿಮಗೆ ಕಲಿಸುತ್ತಿರುತ್ತಾಳೆ.

೫. ಅವರು ಅತ್ಯುತ್ತಮ ತೀರ್ಪುಗಾರರು

ನಿಮ್ಮ ನಾದಿನಿ ಉತ್ತಮ ತಾಯಿ ಮತ್ತು ಉತ್ತಮ ಅಡುಗೆಯವಳು.ಅವಕಾಶ ಸಿಕ್ಕಾಗಲೆಲ್ಲಾ ಹಾಗು ನಿಮ್ಮಿಂದ ಏನಾದರೂ ತಪ್ಪು ನಡೆದಾಗಲೆಲ್ಲಾ ಈ ಮಾತನ್ನು ಅವಳು ಹೇಳುತ್ತಿರುತ್ತಾಳೆ. ನೀವು ವಿಶೇಷವಾಗಿ ಸಂತೋಷದಿಂದ ಇದ್ದಾಗ ಸಹಾ ಅವರು ನಿಮಗೆ ಇದನ್ನು ಹೇಳುತ್ತಾರೆ.ಈ ರೀತಿ ನೀವು ಯಾವಾಗಲೂ ಬೇಸರದಿಂದಿರಬೇಕು.

ನಿಮ್ಮ ಅತ್ತೆಯೂ ಸಹ ಒಬ್ಬ ಮನುಷ್ಯಳು ಅವಳನ್ನು ಕ್ಷಮಿಸಿ.ಸ್ನೇಹದಿಂದಿರಲು ಪ್ರಯತ್ನಿಸಿ ಅಥವಾ ಕೇವಲ ಶಾಂತಿಯ ಒಪ್ಪಂದ ಸ್ಥಾಪಿಸಿ. ತನ್ನ ಮಗನಿಗೆ ತಾನು ಇನ್ನು ಮುಂದೆ ಮುಖ್ಯವಲ್ಲವೆಂದು  ಮತ್ತು ಅವನನ್ನು ಹಂಚಿಕೊಳ್ಳಬೇಕಾದ ಬಗ್ಗೆ ಅಸುರಕ್ಷಿತ ಭಾವನೆ ಹೊಂದುತ್ತಾರೆ ಮತ್ತು ಇದು ಅವರ ಮಾತಿನಲ್ಲಿ ಹೆಚ್ಚಾಗಿ ಪ್ರತಿಬಿಂಬಿಸುತ್ತದೆ. ನಗುತ್ತಿರಿ, ನೀವು ಅತ್ಯುತ್ತಮವಾದದನ್ನು ಮಾಡುತ್ತಿದ್ದೀರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon