Link copied!
Sign in / Sign up
7
Shares

ನಿಮ್ಮ ಅತ್ತೆ ಮಾವ ಏಕೆ ಅತ್ಯುತ್ತಮರು ಎನ್ನುವುದಕ್ಕೆ ಈ ೫ ಕಾರಣಗಳು!

ನಿಮ್ಮ ಅತ್ತೆ ಮಾವಂದಿರು ನಿಮ್ಮ ಬಾಳ ಸಂಗಾತಿಯನ್ನು ಬೆಳೆಸಿದ ಅದ್ಭುತ ಮನುಷ್ಯರು, ಮತ್ತು ಅವರು ನಿಮ್ಮ ಜೀವನದ ಅತ್ಯುತ್ತಮ ಭಾಗವಾಗಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ,

೧. ತಾಯಿ ಮತ್ತು ತಂದೆ

ಅತ್ತೆ ಮಾವಂದಿರು ನಿಮ್ಮ ಜೀವನದ ಎರಡನೇ ತಂದೆ ತಾಯಿಗಳು. ನೀವು ಮದುವೆ ಮಾಡಿಕೊಂಡು ನಿಮ್ಮ ಪತಿಯೋಡನೆ ಬಂದಾಗ ನಿಮ್ಮ ತಂದೆ ತಾಯಿ ಸ್ಥಾನವನ್ನು ತುಂಬುವರು. ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಬೆಂಬಲಕ್ಕೆ ನಿಲ್ಲುವುದಕ್ಕೆ ಇನ್ನು ಇಬ್ಬರೂ ವ್ಯಕ್ತಿಗಳು ನಿಮ್ಮ ಪಟ್ಟಿಯಲ್ಲಿ ಸೇರುವವರು. ನಿಮ್ಮ ಮನಸ್ಸಿನ ಭಾವನೆಗಳನ್ನು ಯಾವುದೇ ಮುಜುಗರವಿಲ್ಲದೆ ಹಂಚಿಕೊಳ್ಳಲು ನಿಮಗೆ ಬೇಕೆಂದಾಗ ಸಿಗುವವರು. ಕೆಲವರು ನಿಮ್ಮನ್ನು ರಾಣಿಯಂತೆ ನೋಡಿಕೊಳ್ಳುವವರು.

೨. ಬೇಕೆಂದಾಗ ಬರುವ ದಾದಿ

ನಿಮ್ಮ ಅತ್ತೆ ಮಾವರ ಉತ್ತಮ ಬಾಗವೆಂದರೆ ನಿಮ್ಮ ಮಗುವನ್ನು ಅವರು ಪ್ರೀತಿಸುವುದು ಮತ್ತು ಅವರ ಕೈಯಲ್ಲಿ ಸಾಧ್ಯವಾದಷ್ಟು ಯಾವುದೇ ರೀತಿಯಲ್ಲಿ, ಮತ್ತು ಯಾವುದೇ ಸಮಯದಲ್ಲಿ ನಿಮಗೆ ಸಹಾಯ ಮಾಡುವ ಭಾವನೆ. ಇದರ ಅರ್ಥ ನಿಮಗೆ ಬೇಕೆಂದಾಗಲೆಲ್ಲಾ ನಿಮ್ಮ ಮಗುವಿನ ರಕ್ಷಣೆಗೆ ಬರುವ ಏಕೈಕ ಸಂಬಧಿಗಳು. ಅವರಿಗೆ ಬೇರೆ ಏನೇ ಯೋಜನೆಗಳಿದ್ದರೂ, ಅವರ ಮೊಮ್ಮಕ್ಕಳನ್ನು ಆಡಿಸುವ ಕೆಲಸವೇ ಅವರಿಗೆ ತುಂಬಾ ಮುಖ್ಯ. ಅವರು ನಿಮ್ಮ ಮಕ್ಕಳ ಜೊತೆ ಕಾಲ ಕಳೆಯಲು ತುಂಬಾ ಉತ್ಸುಕರಾಗಿರುತ್ತಾರೆ.

೩. ಉಚಿತ ಸಲಹೆ

ಪೋಷಕರು ಅತ್ಯುತ್ತಮರು, ಆದರೆ ಕೆಲವು ವಿಷಯಗಳನ್ನು ಅವರ ಬಳಿ ಮಾತನಾಡಲು ಆಗುವುದಿಲ್ಲ. ಅಂತಹ ವಿಷಯಗಳನ್ನು ನಿಮ್ಮ ಅತ್ತೆಯ ಹತ್ತಿರ ಯಾವುದೇ ಮುಜುಗರವಿಲ್ಲದೆ ಕೇಳಬಹುದು/ಮಾತನಾಡಬಹುದು. ಜೊತೆಗೆ ಅವರು ಅನುಭವಿಗಳು ಆಗಿರುವುದರಿಂದ ಹಲವು ವಿಷಯಗಳ ಬಗ್ಗೆ ಅವರಲ್ಲಿ ಸಲಹೆ ಮತ್ತು ಅವರ ಅಭಿಪ್ರಾಯಗಳನ್ನು ಪಡೆಯಬಹುದು.

೪. ನಿಮ್ಮ ಸಂಗಾತಿ ೨.೦

ಅವರು ಬುದ್ದಿವಂತರಾಗಿದ್ದು, ನಿಮ್ಮ ಪ್ರಮುಖವಾದ ಮೊದಲ ಆವೃತ್ತಿಗಳು. ನಿಮ್ಮ ಗಮನಾರ್ಹ ಇತರರು(ಅತ್ತೆ ಮಾವ) ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಮತ್ತು ಅದನ್ನು ಸಮಯ ಬಂದಾಗ ಮಾತ್ರ ನಿಮ್ಮ ಮುಂದೆ ವ್ಯಕ್ತಪಡಿಸುತ್ತಾರೆ,  ಅದು ನೀವು ಅವರನ್ನು ಇನ್ನಷ್ಟು ಪ್ರೀತಿಸುವಂತೆ ಮಾಡುತ್ತದೆ. ನಿಮ್ಮ ಮಗು ಬೆಳೆಯುತ್ತಿದ್ದಂತೆ ಅವನ ಅವಶ್ಯಕಗಳು ಹೇಗಿರುತ್ತವೆ, ಮತ್ತು ಅವನನ್ನು ನೀವು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಾರೆ.

೫. ಬಾಲ್ಯದ ನೆನಪುಗಳು

ನಿಮ್ಮ ಬಾಳ ಸಂಗಾತಿಯ ಚಿಕ್ಕ ವಯಸ್ಸಿನ ಬಾವಚಿತ್ರವನ್ನು ನೋಡಿ ನಿಮ್ಮ ಕುಟುಂಬದವರು ಬಿಟ್ಟರೆ ಬೇರೆ ಯಾರು ನಗುವುದಿಲ್ಲ. ತಮ್ಮ ಜೀವನದಲ್ಲಿ ನಡೆದ ಎಲ್ಲ ಮುಜುಗರದ ಕಥೆಗಳು ಮತ್ತು ಘಟನೆಗಳ ಪೂರ್ಣ ವಿವರವನ್ನು ನೀವು ನಿಮ್ಮ ಮಗುವಿನ ಆಟಗಳನ್ನು ನೋಡಿ ನಿಮ್ಮ ಅತ್ತೆ ಮಾವ ನೊಡನೆ ಅಥವಾ ಪತಿಯೋಡನೆ ಹಂಚಿಕೊಳ್ಳುತ್ತಿರಿ. ನಿಮ್ಮ ಪತಿಯ ಸೋದರ ಅಥವಾ ಸೋದರಿ ಇದ್ದರೆ ನಿಮ್ಮ ಪತಿಯ ಚಿಕ್ಕ ವಯಸ್ಸಿನ ಎಲ್ಲಾ ತುಂಟ ತರಲೆ ವಿಷಯಗಳನ್ನು ನಿಮ್ಮೊಡನೆ ವಿವರಿಸುವರು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon