Link copied!
Sign in / Sign up
0
Shares

ನಿಮ್ಮ ಆಹಾರಕ್ರಮದಲ್ಲಿ ಸೇರಿಸಬೇಕಾದ ೨೫ ಅತ್ಯುನ್ನತ ವಿಟಮಿನ್ ಇ ಸಮೃದ್ಧ ಆಹಾರ (Top 25 Vitamin E rich Foods You Need To Include In Your Diet in Kannada)

ವಿಟಮಿನ್ ಇ ಫ್ಯಾಟ್-ಸೊಲ್ಯೂಬಲ್ ವಿಟಮಿನ್ ಆಗಿದ್ದು, ನಿಮ್ಮ ದೇಹವನ್ನು ಆರೋಗ್ಯಕರವಾಗಿರಿಸಲು ಮತ್ತು ಅದರ ಕಾರ್ಯಾಚರಣೆ ಸರಾಗವಾಗಿ ಸಾಗಲು ಸಹಾಯ ಮಾಡುತ್ತದೆ. ಚರ್ಮ ಹಾಗೂ ಕೂದಲಿಗೆ ವಿಟಮಿನ್ ಇ ಇಂದ ಆಗುವ ಹಲವಾರು ಪ್ರಯೋಜನಗಳಿಂದಾಗಿ, ಇದನ್ನು ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ದಶಕಗಳಿಂದ ಬಳಸಲಾಗುತ್ತದೆ. ವಿಟಮಿನ್ ಇ ಯ ಸಂಪೂರ್ಣ ಲಾಭಗಳನ್ನು ಅನುಭವಿಸಲು, ನಮ್ಮ ದೈನಂದಿನ ಆಹಾರಕ್ರಮದಲ್ಲಿ ವಿಟಮಿನ್ ಇ ಸಮೃದ್ಧ ಆಹಾರವನ್ನು ಸೇರಿಸಬೇಕು. 

ನಮಗೆಲ್ಲರಿಗೂ ವಿಟಮಿನ್ ಇ ನಮ್ಮ ದೇಹಕ್ಕೆ ಯಾವ ರೀತಿ ಲಾಭಗಳನ್ನುಂಟು ಮಾಡುತ್ತದೆ ಮತ್ತು ಅದರ ಕೊರತೆಯಿಂದ ಯಾವ ರೀತಿಯ ತೊಂದರೆ ಉಂಟಾಗಬಹುದು ಎಂಬುದರ ಅರಿವು ಇದೆ. ಆದರೆ ನಿಮಗೆ ತಿಳಿದಿದೆಯೇ, ನಿಮಗೆ ಅರಿವೇ ಇಲ್ಲದಂತೆ ನೀವು ಹಲವಾರು ವಿಟಮಿನ್ ಇ ಸಮೃದ್ಧ ಆಹಾರವನ್ನು ಕಳೆದುಕೊಳ್ಳುತ್ತಿದ್ದೀರಿ? ಕಾಲಹರಣ ಮಾಡದೆ, ವಿಟಮಿನ್ ಇ ಅರೋಗ್ಯ ಪ್ರಯೋಜನಗಳು ಮತ್ತು ಯಾವ ವಿಟಮಿನ್ ಈ ಸಮೃದ್ಧ ಆಹಾರವನ್ನು ನೀವು ಸೇವಿಸಬೇಕು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. 

ಪರಿವಿಡಿ:

೧. ವಿಟಮಿನ್ ಇ ಏಕೆ ಪ್ರಮುಖವಾದದ್ದು? (Why Is Vitamin E Important? in Kannada)

೨. ಪ್ರಮುಖ ೨೫ ವಿಟಮಿನ್ ಇ ಸಮೃದ್ಧ ಆಹಾರ (Top 25 Vitamin E Rich Foods in Kannada)

೩. ವಿಟಮಿನ್ ಇ ಕೊರತೆ ಮತ್ತು ಅದರ ಗುಣಲಕ್ಷಣಗಳು (Vitamin E Deficiency And Its Symptoms in Kannada)

೪. ನಿರ್ಣಯ (Conclusion in Kannada)?

೧. ವಿಟಮಿನ್ ಇ ಏಕೆ ಪ್ರಮುಖವಾದದ್ದು? (Why Is Vitamin E Important? in Kannada)

ವಿಟಮಿನ್ ಇ ಮಾನವನ ದೇಹಕ್ಕೆ ಅನೇಕ ಕಾರಣಗಳಿನ ಮುಖ್ಯವಾಗಿದೆ. ಅದರಲ್ಲಿ ಪ್ರಮುಖ ಕಾರಣ ಅವುಗಳು ನಮ್ಮ ದೇಹಕ್ಕೆ ಅಗತ್ಯವಿರುವ ಆಂಟಿಆಕ್ಸಿಡೆಂಟ್ಸ್. ಆಂಟಿಆಕ್ಸಿಡೆಂಟ್ಸ್ ಹಾನಿ ಉಂಟುಮಾಡಬಹುದಾದ ಫ್ರೀ ರಾಡಿಕಲ್ಸ್ ಗಳನ್ನು ತೊಡೆದುಹಾಕಿ, ದೇಹದ ಅಂಗಾಂಶಗಳನ್ನು ಸಂರಕ್ಷಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ. 

[Back To Top]

೨. ಪ್ರಮುಖ ೨೫ ವಿಟಮಿನ್ ಇ ಸಮೃದ್ಧ ಆಹಾರ (Top 25 Vitamin E Rich Foods in Kannada):

ಅನೇಕರಿಗೆ ಯಾವ ಆಹಾರಗಳನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಬೇಕು ಎನ್ನುವುದರ ಬಗ್ಗೆ ತಿಳಿದಿರುವುದಿಲ್ಲ ಅಥವಾ ವಿಟಮಿನ್ ಇ ಸಮೃದ್ಧ ಆಹಾರಗಳ ಬಗ್ಗೆ ಅರಿವು ಇರುವುದಿಲ್ಲ. ಅಲ್ಲವೇ? ನಾವು ಈ ಭಾಗದಲ್ಲಿ ೨೫ ಪ್ರಮುಖ ವಿಟಮಿನ್ ಇ ಸಮೃದ್ಧ ಆಹಾರಗಳ ಬಗ್ಗೆ ತಿಳಿಸಿದ್ದೇವೆ. 

೧. ಸೂರ್ಯಕಾಂತಿ ಬೀಜಗಳು: 

ನಿಮ್ಮಲ್ಲಿ ಅನೇಕರು ಸೂರ್ಯಕಾಂತಿ ಬೀಜಗಳ ಬಗ್ಗೆ ತಿಳಿದಿರಬಹುದು ಆದರೆ ಅವುಗಳು ವಿಟಮಿನ್ ಇ ಸಮೃದ್ಧ ಮೂಲವೆಂದು ತಿಳಿದಿರುವುದಿಲ್ಲ. ಅದರಲ್ಲಿ ಪ್ರತಿ ೧೦೦ ಗ್ರಾಂ ಸೂರ್ಯಕಾಂತಿ ಬೀಜಗಳಲ್ಲಿ ೭೮% ವಿಟಮಿನ್ ಇ ಇರುತ್ತದೆ. ಇದು ಅತ್ಯಂತ ಆರ್ಥಿಕವಾದ ವಿಟಮಿನ್ ಇ ಪ್ರಯೋಜನಗಳಲ್ಲಿ ಒಂದು. ಸೂರ್ಯಕಾಂತಿ ಬೀಜಗಳನ್ನು ಹುರಿದು, ಅದನ್ನು ನುಣ್ಣಗೆ ಅರೆದು ನಿಮ್ಮ ಆಹಾರಪದ್ಧತಿಯಲ್ಲಿ ಸೇರಿಸಿದರೆ, ನಿಮ್ಮ ದೇಹಕ್ಕೆ ವಿಟಮಿನ್ ಇ ಲಾಭಗಳು ದೊರಕುತ್ತವೆ. 

೨. ಬಾದಾಮಿ: 

ನಮ್ಮ ದೈನಂದಿನ ಆಹಾರಪದ್ಧತಿಯಲ್ಲಿ ಅತ್ಯಂತ ಸಾಮಾನ್ಯವಾಗಿ ಅಕಂಡುಬರುವ ಆಹಾರ ಬಾದಾಮಿ. ಒಂದು ಕಪ್ ಬಾದಾಮಿನಲ್ಲಿ ೭೦% ಕ್ಕಿಂತ ಹೆಚ್ಚು ವಿಟಮಿನ್ ಇ ಇರುತ್ತದೆ. ಬಾದಾಮಿಯನ್ನು ನೀವು ನಿಮ್ಮ ಹಾಲಿನ ಲೋಟಕ್ಕೆ ಸೇರಿಸಬಹುದು ಅಥವಾ ಅದನ್ನು ಬಾದಾಮಿ ಎಣ್ಣೆಯಾಗಿಯೂ ಉಪಯೋಗಿಸಬಹುದು. ಇದುಅರಿಂದ ನಿಮ್ಮ ದೇಹಕ್ಕೆ ವಿಟಮಿನ್ ಇ ದೊರಕುತ್ತದೆ. 

೩. ಹ್ಯಾಝೆಲ್-ನಟ್ಸ್:

ಇದು ನಿಮ್ಮ ದೈನ್ನಾದಿನ ಆಹಾರದಲ್ಲಿ ಸಾಮಾನ್ಯವಾಗಿ ಕಂಡುಬರುವ ಆಹಾರವಾಗಿರದೆ ಇರಬಹುದು. ಅಲ್ಲವೇ? ಅದಕ್ಕೆ ಕಾರಣ ಅದು ದುಬಾರಿ ಮತ್ತು ಅದರ ಸುಲಭವಾಗಿ ದೊರಕದೇ ಇರುವ ಗುಣ. ಪ್ರತಿ ಕಪ್ ಹ್ಯಾಝೆಲ್-ನಟ್ಸ್ ನಲ್ಲಿ ೮೬% ವಿಟಮಿನ್ ಇ ಇದ್ದು, ಅದು ಮಾನವನ ದೈನಂದಿನ ಅಗತ್ಯತೆಯನ್ನು ನೀಗಿಸುತ್ತದೆ. ಅವುಗಳನ್ನು ನೀವು ಕತ್ತರಿಸಿ ಅಥವಾ ಪುಡಿ ಮಾಡಿ ಸೂಪ್ ಮೇಲೆ ಸಿಂಪಡಿಸಿ ಸೇವಿಸಬಹುದು ಅಥವಾ ಅದನ್ನು ಹಚ್ಚ ರೂಪದಲ್ಲಿಯಾದರೂ ಸೇವಿಸಬಹುದು. 

೪. ಪೈನ್ ನಟ್ಸ್: 

ಈ ಬೀಜಗಳು ಎಲ್ಲಾ ಬಗೆಯ ಆಹಾರದೊಂದಿಗೆ ರುಚಿಕರವೆನಿಸುತ್ತವೆ. ಇದನ್ನು ಹಲವು ಬಗೆಯ ಕ್ರೀಮ್ ಗಳಲ್ಲಿ ಮತ್ತು ಪೆಸ್ಟೊ ತಯಾರಿಸಲು ಸಹ ಬಳಸಲಾಗುತ್ತದೆ. ನಿಮ್ಮ ಮಧ್ಯಾಹ್ನದ ಸಲಾಡ್ ಅಥವಾ ಉಪಹಾರದೊಂದಿಗೆ ಸಹ ಇವುಗಳನ್ನು ಸೇವಿಸಬಹುದು. ಇವುಗಳು ವಿಟಮಿನ್ ಇ ಯನ್ನು ಸಮೃದ್ಧವಾಗಿ ಹೊಂದಿದೆ. 

೫. ಕಡಲೇಕಾಯಿ: 

ಪ್ರತಿ ೫ ಜನರಲ್ಲಿ ಒಬ್ಬರು ಕಡಲೆಕಾಯಿಯನ್ನು ಇಷ್ಟ ಪಡುತ್ತಾರೆ. ಅದು ಆಶ್ಚರ್ಯ ಉಂಟು ಮಾಡುವ ಸಂಗತಿಯೇನೂ ಅಲ್ಲ. ಕಡಲೇಕಾಯಿ ರುಚಿಕರವಾಗಿರುತ್ತದೆ ಮತ್ತು ವಿಟಮಿನ್ ಇ ಯನ್ನು ಸಮೃದ್ಧವಾಗಿ ಹೊಂದಿದೆ. ಹಾಗಾಗಿ ಅದು ಆರೋಗ್ಯಕರ ಮತ್ತು ರುಚಿಕರ. 

೬. ಬ್ರೆಝಿಲ್ ನಟ್ಸ್: 

ಪ್ರತಿ ಒಂದು ಬಟ್ಟಲು ಬ್ರೆಝಿಲ್ ನಟ್ಸ್ ನಲ್ಲಿ ನಿಮ್ಮ ದೇಹದ ದೈನಂದಿನ ವಿಟಮಿನ್ ಇ ಅಗತ್ಯತೆಯ ೩೮% ವಿಟಮಿನ್ ಇ ಇರುತ್ತದೆ. ಇದು ವಿಟಮಿನ್ ಇ ಸಮೃದ್ಧ ಆಹಾರಗಳಲ್ಲಿ ಒಂದು. ಹಾಗಾಗಿ, ಇದನ್ನು ನಿಯಮಿತವಾಗಿ ಉಪಯೋಗಿಸುವುದು ಒಳಿತು. 

[Back To Top]

೭. ದಾಂಡೇಲಿಯನ್ ಗ್ರೀನ್ಸ್: 

ಇದರ ಸ್ವಾದ ರಾಕೆಟ್ ನಂತೆ ಇದ್ದು, ಗ್ರೀನ್ ಸಲಾಡ್ ಗಳಲ್ಲಿ ರಾಕೆಟ್ ಗೆ ಅತ್ಯಂತ ಒಳ್ಳೆಯ ಪರ್ಯಾಯ ದಾಂಡೇಲಿಯನ್ ಗ್ರೀನ್ಸ್. ಇದನ್ನು ವಿಟಮಿನ್ ಇ ಎಣ್ಣೆಯನ್ನು ಉತ್ಪಾದಿಸಲು ಬಳಸಲಾಗುತ್ತದೆ. 

೮. ಕ್ವಿನೋ:

ಕ್ವಿನೋ ನಿಮ್ಮ ದೇಹಕ್ಕೆ ಅಗತ್ಯವಿರುವ ಹಲವಾರಿ ಪ್ರಮುಖ ವಿಟಮಿನ್ ಗಳು ಮತ್ತು ಮಿನರಲ್ ಗಳನ್ನು ನೀಡಬಲ್ಲದು. ಪ್ರತಿ ಒಂದು ಬಟ್ಟಲು ಕ್ವಿನೋ ನಿಮ್ಮ ದೈನಂದಿನ ವಿಟಮಿನ್ ಇ ಅಗತ್ಯತೆಯ ೬% ನಷ್ಟು ವಿಟಮಿನ್ ಇ ಯನ್ನು ನೀಡುತ್ತದೆ. ಕ್ವಿನೋ ಅತ್ಯಂತ ಆರೋಗ್ಯಕರ ವಿಟಮಿನ್ ಇ ಮೂಲ.

೯. ಪಿಸ್ಟಾಚಿಯೋ ನಟ್ಸ್:

ಪಿಸ್ಟಾಚಿಯೋ ನಟ್ಸ್ ಅತ್ಯಂತ ಸ್ವಾದಿಷ್ಟ ಲಘು ಉಪಹಾರಗಳಲ್ಲಿ ಒಂದು. ಅವುಗಳನ್ನು ಜೇನುತುಪ್ಪದೊಂದಿಗೆ ಕ್ಯಾರೆಮಲೈಸ್ ಮಾಡಬಹುದು ಮತ್ತು ಯೋಗರ್ಟ್ ನೊಂದಿಗೆ ಸೇವಿಸಬಹುದು. ಇದು ರುಚಿಕರ ಉಪಹಾರವಷ್ಟೇ ಅಲ್ಲದೆ, ವ್ಯಾಯಾಮದ ನಂತರ ಸೇವಿಸಬಹುದಾದ ಪೌಷ್ಟಿಕ ಆಹಾರ ಸಹ. 

೧೦. ರಾಡಿಚಿಯೊ:

ಆಳವಾದ ಕೆಂಪು ಬಣ್ಣವನ್ನು ಹೊಂದಿರುವ ರಾಡಿಚಿಯೊವನ್ನು ಯಾವುದೇ ಪಾಕವಿಧಾನದಲ್ಲಿ ಬಳಸಿದರೂ ಅದು ಅದ್ಭುತವಾಗಿರುತ್ತದೆ. ರಾಡಿಚಿಯೊ ದ ವಿಟಮಿನ್ ಇ ಲಾಭಗಳು ಹಲವರಿಗೆ ತಿಳಿದಿರುವುದಿಲ್ಲ. 

೧೧. ಕೊಲ್ಲಾರ್ಡ್ ಗ್ರೀನ್ಸ್:

ಅತ್ಯಂತ ಸ್ವಾದಿಷ್ಟವಾದ ಕೊಲ್ಲಾರ್ಡ್ ಗ್ರೀನ್ಸ್ ರುಚಿಕರವಾದ ಆಹಾರ (ಉದಾಹರೆಣೆಗೆ ಗೋಮಾಂಸ ಅಥವಾ ಬೇಕನ್) ಜೊತೆಗೆ ಸೇರಿಸಿದಾಗ ರುಚಿಕರವೆನಿಸುತ್ತದೆ. ಇದು ವಿಟಮಿನ್ ಇ ಪ್ರಮುಖ ಮೂಲ. 

[Back To Top]

೧೨. ಕುಂಬಳಕಾಯಿ ಬೀಜಗಳು: 

ಹುರಿದ ತಿನ್ನಬಹುದಾದ ಕುಂಬಳಕಾಯಿ ಬೀಜಗಳು ರುಚಿಕರವಾದ ಲಘು ವಹಾರವಾಗಿ ಉಪಯೋಗಿಸಬಹುದು ಅಥವಾ ಅವುಗಳನ್ನು ಮನೆಯಲ್ಲಿಯೇ ತಯಾರಿಸಿದ ಗ್ರಾನೊಲ ಮತ್ತು ಬ್ರೆಡ್ ನೊಂದಿಗೆ ಸೇವಿಸಬಹುದು. ಇದರ ಈ ವಿಟಮಿನ್ ಇ ಪ್ರಯೋಜನಗಳನ್ನು ಬಳಸಿಕೊಂಡು, ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ. 

೧೩. ಪಾಲಕ್ ಸೊಪ್ಪು:

ಪಾಲಕ್ ಸೊಪ್ಪಿನ ಸೌಮ್ಯ ಪರಿಮಳ ಮತ್ತು ಸ್ವಾದದ ಕಾರಣದಿಂದಾಗಿ ಅದನ್ನು ಹಲವು ಬಗೆಯ ಪಾಕವಿಧಾನಗಳಲ್ಲಿ ಬಳಸಬಹುದು. ಉದಾಹರಣೆಗೆ, ಗ್ರೀನ್ ಸ್ಮೋತ್ತೀಸ್, ಸಲಾಡ್ ಗಳಲ್ಲಿ, ಪಾಸ್ಟಾ ಅಥವಾ ಸೂಪ್ ಗಳಲ್ಲಿ. ಇದು ಅತ್ಯಂತ ಪ್ರಮುಖ ವಿಟಮಿನ್ ಇ ಮೂಲ. 

೧೪. ಮಸ್ಟರ್ಡ್ ಗ್ರೀನ್ಸ್: 

ಮಸ್ಟರ್ಡ್ ಗ್ರೀನ್ಸ್ ಅನ್ನು ಮಾಂಸ, ನಟ್ ಲೋಫ್ ಅಥವಾ ಆಮ್ಲೆಟ್ ಜೊತೆಗೆ ಸೈಡ್ ಡಿಶ್ ಆಗಿ ಸೇವಿಸಬಹುದು. ಅದನ್ನು ಸ್ವಲ್ಪ ಆಲಿವ್ ಎಣ್ಣೆ, ಬೆಳ್ಳುಳ್ಳಿ, ಉಪ್ಪು ಮತ್ತು ಮೆಣಸಿನ ಪುಡಿಯೊಂದಿಗೆ ಬೇಯಿಸಿ ಸೇವಿಸಿದರೆ ರುಚಿಕರವಾಗಿರುತ್ತದೆ. ಅದನ್ನು ಫ್ರೈಸ್, ಸೂಪ್ ಗಳ ಜೊತೆ ಸೇವಿಸಬಹುದಷ್ಟೆ ಅಲ್ಲದೇ, ಕಚ್ಚಾ ರೂಪದಲ್ಲಿಯೇ ಗ್ರೀನ್ ಸಲಾಡ್ ಜೊತೆ ಸಹ ಸೇವಿಸಬಹುದು. ಇದರಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಇ ಇರುತ್ತದೆ. 

೧೫. ಸ್ವಿಸ್ ಚರ್ಡ್: 

ಸ್ವಿಸ್ ಚರ್ಡ್ ಬಳ್ಳುಳ್ಳಿ ಮತ್ತು ನಿಂಬೆ ಯಂತಹ ಸ್ವಾದದೊಂದಿಗೆ ಅತ್ಯುತ್ತಮವಾಗಿ ಬೆರೆಯುತ್ತದೆ. ಇದು ಚರ್ಡ್, ಆಲೂಗಡ್ಡೆ ಮತ್ತು ಗೋಟ್ ಚೀಸ್ ಟಾರ್ಟ್ ಜೊತೆಗೆ ರುಚಿಕರವೆನಿಸುತ್ತದೆ. ಇದು ವಿಟಮಿನ್ ಈ ಸಮೃದ್ಧ ಆಹಾರದಲ್ಲಿ ಒಂದು. 

೧೬. ಆಲಿವ್:

ಆಲಿವ್ ಗಳು ವಿಟಮಿನ್ ಇ ಯ ಒಳ್ಳೆಯ ಮೂಲಗಳು. ನಿಮ್ಮ ದೇಹದ ದೈನಂದಿನ ವಿಟಮಿನ್ ಇ ಅಗತ್ಯತೆಯ 1/5 ರಷ್ಟು ವಿಟಮಿನ್ ಇ ಅನ್ನು ಪ್ರತಿ ೧೦೦ ಗ್ರಾಂ ಆಲಿವ್ ನೀಡುತ್ತದೆ. ಆಲಿವ್ ನ ಈ ಪ್ರಯೋಜನ ನಿಮ್ಮಲ್ಲಿ ಹಲವರಿಗೆ ತಿಳಿದಿರುತ್ತದೆ. 

೧೭. ಬ್ರೊಕೋಲಿ: 

ರಾಪಿನಿ ವಿಷದ ರುಚಿಯನ್ನು ಹೊಂದಿದ್ದರೂ ಅದು ಬಲಿಷ್ಠವಾದ ಸ್ವಾದವನ್ನು ಹೊಂದಿರುವ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯೊಂದಿಗೆ ಸೂಕ್ತವಾಗಿ ಬೆರೆಯುತ್ತದೆ. ಇದು ಸಹ ವಿಟಮಿನ್ ಇ ಸಮೃದ್ಧ ಆಹಾರದಲ್ಲಿ ಒಂದು. 

[Back To Top]

೧೮. ಕೇಲ್:

ಅತ್ಯುನ್ನತ ಸ್ವಾದವುಳ್ಳ ಕೇಲ್ ರುಚಿಕರವಾದ ಗೋಮಾಂಸದ ಕರ್ರಿ, ಬೇಯಿಸಿದ ತರಕಾರಿ ಮತ್ತು ಚಿಕನ್ ಮತ್ತು ಬೆಳ್ಳುಳ್ಳಿ ಸೂಪ್ ನ ರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಈ ಅತ್ಯಂತ ಪೌಷ್ಟಿಕ ತರಕಾರಿ ಅತ್ಯುನ್ನತ ವಿಟಮಿನ್ ಇ ಮೂಲವಾಗಿದೆ. 

೧೯. ಪ್ಯಾರಾಸ್ನಿಪ್: 

ಪ್ಯಾರಾಸ್ನಿಪ್ ಅನ್ನು ಕತ್ತರಿಸಿ, ಆಲಿವ್ ಎಣ್ಣೆಯನ್ನು ಸಿಂಪಡಿಸಿ, ಅದು ಗರಿಗರಿಯಾಗುವವರೆಗೂ ಬೇಯಿಸಿರಿ. ಅದು ಅದ್ಭುತವಾದ, ಆರೋಗ್ಯಕರ ಚಿಪ್ಸ್ ಆಗುತ್ತದೆ. ಇದು ಒಂದು ಆರ್ಥಿಕವಾದ ವಿಟಮಿನ್ ಇ ಮೂಲವಾಗಿದೆ. 

೨೦. ಕಿವಿ ಹಣ್ಣು:

ಇದು ಒಂದು ಬಗೆಯ ಹಣ್ಣಾಗಿರುವುದರಿಂದ, ಇದನ್ನು ಯಾವುದೇ ಹಣ್ಣಿನ ಸಲಾಡ್ ಗಳ ಜೊತೆಗೆ ಸೇವಿಸಬಹುದು. ಅಥವಾ ಸ್ಮೋತಿ ಗೂ ಸೇರಿಸಬಹುದು. ಆದರೆ, ಕಿವಿ ಹಣ್ಣು ರುಚಿಕರವಾದ ಸಾಲ್ಸಾ ತಯಾರಿಸಲು ಸಹ ಬಳಸಬಹುದು. ಇದರಿಂದ ವಿಟಮಿನ್ ಇ ಎಣ್ಣೆಯನ್ನು ಸಹ ತೆಗೆಯಬಹುದು. 

೨೧. ಪೀಕ್ಯಾನ್ಸ್: 

ರುಚಿಕರವಾದ, ಸ್ವಾದಿಷ್ಟಭರಿತ ಪೀಕ್ಯಾನ್ಸ್ ಅನ್ನು ಸಿಹಿಯಾದ ಅಡುಗೆಯಲ್ಲಿ ಬಳಸಬಹುದು. ಉದಾಹರಣೆಗೆ ಬ್ಲೂಬೆರ್ರಿ ಮತ್ತು ಪೆಕನ್ ಪ್ಯಾನ್-ಕೇಕ್. ಜನರ ಅಭಿಪ್ರಾಯದ ಪ್ರಕಾರ ಇದು ಅತ್ಯಂತ ರುಚಿಕರವಾದ ವಿಟಮಿನ್ ಇ ಆಹಾರಗಳಲ್ಲಿ ಒಂದು. 

[Back To Top]

೨೨. ಕ್ರೇನ್-ಬೆರ್ರೀಸ್:

ಕ್ರೇನ್-ಬೆರಿ ಅನ್ನು ಕೇವಲ ಜ್ಯೂಸ್ ಮಾಡುವುದಕ್ಕೆ ಅಥವಾ ಕ್ರೇನ್-ಬೆರಿ ಸಾಸ್ ಮಾಡುವುದಕ್ಕೆ ಬಳಸಬಹುದು ಎಂದು ಅನೇಕರು ಭಾವಿಸಿದ್ದರೂ, ಅದನ್ನು ಕ್ರೇನ್-ಬೆರಿ ಮತ್ತು ಜಾಲಪೆನೊ ಸಾಲ್ಸಾ ದಂತಹ ಹಲವಾರು ಅಡುಗೆಗೆಳಲ್ಲಿ ಈ ಹಣ್ಣನ್ನು ಬಳಸಬಹುದು. ಇದು ಸಹಜವಾಗಿಯೇ ಅತ್ಯಂತ ರುಚಿಕರವಾದ ವಿಟಮಿನ್ ಇ ಸಮೃದ್ಧ ಆಹಾರಗಳಲ್ಲಿ ಒಂದು. 

೨೩. ಬ್ಲಾಕ್-ಬೆರ್ರೀಸ್:

ನೈಸರ್ಗಿಕವಾಗಿ ಸಿಹಿಯಾದ ರುಚಿಯನ್ನು ಹೊಂದಿರುವ ಬ್ಲಾಕ್-ಬೆರ್ರೀಸ್ ಮನೆಯಲ್ಲಿ ಮಾಡುವ ಸ್ಮೋತಿ ಮತ್ತು ಜ್ಯೂಸ್ ಗಳಲ್ಲಿ ಉಪಯೋಗಿಸಬಹುದು. ನಾವೆಲ್ಲರೂ ಈ ಬೆರಿ ಅನ್ನು ಪ್ರೀತಿಸುತ್ತೇವೆ. ಮತ್ತು ಈ ಹಣ್ಣನ್ನು ದೂರವಿಡುವುದರಿಂದ ವಿಟಮಿನ್ ಇ ಕೊರತೆ ತಪ್ಪಿದ್ದಲ್ಲ. 

೨೪. ಕುಂಬಳಕಾಯಿ: 

ನೈಸರ್ಗಿಕವಾಗಿ ಸಿಹಿಯಾದ ರುಚಿ ಹೊಂದಿರುವ ಸಣ್ಣ ಕುಂಬಳಕಾಯಿ ಅವುಗಳನ್ನು ತರಕಾರಿಗಳ ಪಾಳ್ಯದಲ್ಲಿ ಉಪಯೋಗಿಸಲು ಅಥವಾ ತಿಂಡಿಗಾಗಿ ಮಫಿನ್ ನಲ್ಲಿ ಉಪಯೋಗಿಸಲು ಸೂಕ್ತ. ಕುಂಬಳಕಾಯಿಯ ಈ ಉಪಯೋಗಗಳ ಮೂಲಕ ನಿಮ್ಮ ದೇಹಕ್ಕೆ ವಿಟಮಿನ್ ಇ ದೊರೆಯುವುದು ಖಚಿತ. 

೨೫. ಮೊಟ್ಟೆಗಳು:

ಮೊಟ್ಟೆಗಳನ್ನು ವಿವಿಧ ರೀತಿಯಲ್ಲಿ ನಿಮ್ಮ ಬೆಳಗಿನ ಉಪಾಹಾರದಲ್ಲಿ, ಅಥವಾ ಮಧ್ಯಾಹ್ನದ ಆಹಾರದಲ್ಲಿ ಅಥವಾ ರಾತ್ರಿಯ ಊಟದಲ್ಲಿ ಸೇವಿಸಬಹುದು. ಇದು ನಿಮ್ಮ ಅಡುಗೆ ಮನೆಯಲ್ಲಿ ವಿವಿಧ ಪಾಕವಿಧಾನಗಳ ಮೂಲಕ ರುಚಿಯಾಗಿಸಿ ತಯಾರಿಸುವ ಆಹಾರ. ಇದರ ಇನ್ನೊಂದು ಅದ್ಭುತ ಗುಣವೆಂದರೆ, ಇದರ ಅರೋಗ್ಯ ಲಾಭಗಳಿಂದಾಗಿ ಯಾವಾಗಲೂ ನೀವು ಸೇವಿಸಬೇಕಾದ ಪ್ರಮುಖ ೫ ಆಹಾರಗಳಲ್ಲಿ ಇದು ಸಹ ಒಂದು. 

[Back To Top]

೩. ವಿಟಮಿನ್ ಇ ಕೊರತೆ ಮತ್ತು ಅದರ ಗುಣಲಕ್ಷಣಗಳು (Vitamin E Deficiency And Its Symptoms in Kannada):

ನಿಮ್ಮ ದೇಹ ಯಾವಾಗ ವಿಟಮಿನ್ ಇ ಕೊರತೆಯನ್ನು ಅನುಭವಿಸುತ್ತದೆ? ಅದರ ಗುಣಲಕ್ಷಣಗಳೇನು? ಇವುಗಳನ್ನು ತಿಳಿದುಕೊಳ್ಳಬೇಕೇ? ಹಾಗಿದ್ದರೆ ಓದಿರಿ!

* ದೃಷ್ಟಿಯಲ್ಲಿ ಅಡಚಣೆಗಳು: ನಿಮ್ಮ ಕಣ್ಣುಗಳಲ್ಲಿ ಆಗಾಗ್ಗೆ ನೀರು ತುಂಬಿಕೊಳ್ಳುವುದು ಅಥವಾ ಓದಲು ತೊಂದರೆ ಉಂಟಾಗುವುದಾದರೆ, ನಿಮ್ಮ ವೈದ್ಯರಿಂದ ಸಲಹೆ ಪಡೆಯಿರಿ. ಇದು ವಿಟಮಿನ್ ಇ ಕೊರತೆಯ ಗುಣಲಕ್ಷಣಗಳಲ್ಲಿ ಒಂದು. 

* ಸ್ನಾಯುಗಳ ನೋವು: ನೀವು ನಡೆದಾಡುವಾಗ ಅಥವಾ ಮಲಗಿಕೊಂಡಿರುವಾಗ, ಇದ್ದಕ್ಕಿದ್ದಂತೆ ಸ್ನಾಯುಗಳ ಸೆಳೆತ ಶುರುವಾದಲ್ಲಿ, ಅದಕ್ಕೆ ಕಾರಣ ವಿಟಮಿನ್ ಇ ಕೊರತೆಯಾಗಿರಬಹುದು. 

* ಸಾಮಾನ್ಯ ಅನಾರೋಗ್ಯ: ಪದೇ ಪದೇ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ನಿಮ್ಮ ವೈದ್ಯರನ್ನು ಭೇಟಿಯಾಗಿ. ಇದಕ್ಕೆ ಕಾರಣ ವಿಟಮಿನ್ ಎ ಕೊರತೆಯಾಗಿರಬಹುದು. 

[Back To Top]

೪. ನಿರ್ಣಯ (Conclusion in Kannada)

ಈಗಾಗಲೇ ವಿಟಮಿನ್ ಇ ಯ ಅನೇಕ ಅರೋಗ್ಯ ಲಾಭಗಳ ಬಗ್ಗೆ ನಿಮಗೆ ತಿಳಿದಿದೆ. ಹಾಗೂ ಈ ಲೇಖನದಲ್ಲಿ ತಿಳಿಸಿರುವಂತೆ ಈ ವಿಟಮಿನ್ ಇ ಸಮೃದ್ಧ ಆಹಾರವನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ನೀವು ಸೇರಿಸಲು ನಿಶ್ಚಯಿಸಿದ್ದೀರಿ. ಯಾವುದೇ ಕಾರಣದಿಂದಾಗಿಯೂ ವಿಟಮಿನ್ ಇ ಕೊರತೆಯ ಗುಣಲಕ್ಷಣಗಳನ್ನು ನಿರ್ಲಕ್ಷಿಸದಿರಿ. ಅದು ನಿಮ್ಮ ಭವಿಷ್ಯದಲ್ಲಿ ಅತಿ ದೊಡ್ಡ ತೊಂದರೆಯುಂಟು ಮಾಡಬಹುದು. ನಿಮ್ಮಲ್ಲಿ ವಿಟಮಿನ್ ಇ ಕುರಿತು ಯಾವುದಾದರೂ ಪ್ರಶ್ನೆ ಇದ್ದಲ್ಲಿ, ಕೆಳಗಿನ ಕಾಮೆಂಟ್ ಭಾಗದಲ್ಲಿ ಕೇಳಿರಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon