Link copied!
Sign in / Sign up
6
Shares

ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಸೇರಿಸಲೇಬೇಕಾದ ೨೫ ವಿಟಮಿನ್ ಡಿ ಸಮೃದ್ಧ ಆಹಾರಗಳು (Top 25 Vitamin D rich Foods You Need To Include In Your Diet in Kannada)

ಹಾರ್ಮೋನ್ ಎಂದೂ ಕರೆಯಲಾಗುವ ಪ್ರಮುಖ ಪೌಷ್ಟಿಕವಾದ ವಿಟಮಿನ್ ಡಿ ನಿಮ್ಮ ಆರೋಗ್ಯದ ಸರ್ವಾಂಗ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಉಪಯೋಗಕಾರಿ. ನಮ್ಮ ದೇಹ ಈ ವಿಟಮಿನ್ ಅನ್ನು ತಾನಾಗಿಯೇ ತಯಾರಿಸಲಾಗುವುದಿಲ್ಲ. ಹಾಗೆ ತಯಾರಿಸಲು ಅದಕ್ಕೆ ಸೂರ್ಯನ ಕಿರಣಗಳ ಅಗತ್ಯತೆ ಇದೆ. ನಮ್ಮ ಆಧುನಿಕ ಜೀವನಶೈಲಿಯ ಕಾರಣ ನಾವು ಪ್ರತಿನಿತ್ಯ ಸೂರ್ಯನ ಕಿರಣಗಳನ್ನು ಅನುಭವಿಸಲಾಗದಿರಬಹುದು. ಹಾಗಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧ ಆಹಾರವನ್ನು ಸೇರಿಸುವುದು ಅನಿವಾರ್ಯ. ನಾವು ಈ ಲೇಖನದಲ್ಲಿ ೨೫ ಪ್ರಮುಖ ವಿಟಮಿನ್ ಡಿ ಸಮೃದ್ಧ ಆಹಾರಗಳ ಬಗ್ಗೆ ತಿಳಿದುಕೊಳ್ಳಬಹುದು. 

ಪರಿವಿಡಿ:

೧. ವಿಟಮಿನ್ ಡಿ ಎಂದರೇನು? (What Is Vitamin D? in Kannada)

೨. ವಿಟಮಿನ್ ಡಿ ಕಾರ್ಯಗಳು (Functions Of Vitamin D in Kannada)

೩. ವಿಟಮಿನ್ ಡಿ ಕೊರತೆಯ ಲಕ್ಷಣಗಳು (Symptoms Of Vitamin D Deficiency in Kannada)

೪. ಶಿಫಾರಸ್ಸು ಮಾಡುವ ವಿಟಮಿನ್ ಡಿ ಮಟ್ಟ (Recommended Amount Of Vitamin D in Kannada)

೫. ವಿಟಮಿನ್ ಡಿ ಯನ್ನು ಹೇಗೆ ಪಡೆಯಬೇಕು? (How To Get Vitamin D? in Kannada) 

೬. ವಿಟಮಿನ್ ಡಿ ಸಮೃದ್ಧ ಆಹಾರಗಳು (Vitamin D Rich Foods in Kannada)

೭. ವಿಟಮಿನ್ ಡಿ ಹೊಂದಿರುವ ತರಕಾರಿಗಳ ಮತ್ತು ಹಣ್ಣುಗಳ ಸಂಕ್ಷಿಪ್ತ ಮಾಹಿತಿ (A Quick Look At The Vitamin D Fruits And Vegetable List in Kannada)

೮. ನಿರ್ಣಯ (Conclusion in Kannada)

೧. ವಿಟಮಿನ್ ಡಿ ಎಂದರೇನು? (What Is Vitamin D? in Kannada)

ನಮ್ಮ ದೇಹ ಆರೋಗ್ಯಕರವಾಗಿರಲು ವಿಟಮಿನ್ ಡಿ ಅಗತ್ಯವಿರುವ ಪೌಷ್ಠಿಕತೆಗಳಲ್ಲಿ ಒಂದು. ವಿಟಮಿನ್ ಡಿ ಯನ್ನು ನಿಮ್ಮ ದೇಹ ಉತ್ಪಾದಿಸಲಾಗದೆ ಇರುವುದರಿಂದ ಅದನ್ನು ನೀವು ಆಹಾರಗಳ ಮೂಲಕಸೇವಿಸುವುದು ಅಗತ್ಯ. ನಿಮ್ಮ ದೇಹ ಈ ವಿಟಮಿನ್ ಅನ್ನು ಉತ್ಪಾದಿಸದೆ ಇದ್ದರೂ, ನಿಮ್ಮ ದೇಹವನ್ನು ಸೂರ್ಯನ ಕಿರಣಗಳಿಗೆ ಒಡ್ಡಿದಾಗ, ಅದು  ಈ ಕಿರಣಗಳ ಸಹಾಯದಿಂದ ನೈಸರ್ಗಿಕವಾಗಿ ಉತ್ಪಾದಿಸಬಹುದು. ಇದೆ ಕಾರಣದಿಂದ ಈ ವಿಟಮಿನ್ ಅನ್ನು "ಸನ್-ಶೈನ್ ವಿಟಮಿನ್" ಎಂದು ಸಹ ಕರೆಯುತ್ತಾರೆ. ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಗೆ ವಾರದಲ್ಲಿ ೨ ರಿಂದ ೩ ಬಾರಿ ೫ ರಿಂದ ೧೦ ನಿಮಿಷ ಒಡ್ಡಿದರೆ, ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ. 

೨. ವಿಟಮಿನ್ ಡಿ ಕಾರ್ಯಗಳು (Functions Of Vitamin D in Kannada):

ನಿಮ್ಮ ದೇಹದ ವಿಟಮಿನ್ ಡಿ ಕ್ಯಾಲ್ಸಿಯಂ ಹೀರಲು ವಿಟಮಿನ್ ಡಿ ಅತ್ಯಗತ್ಯ. ಇದು ವಿಟಮಿನ್ ಡಿ ಯ ಅತ್ಯಮೂಲ್ಯ ಪ್ರಯೋಜನಗಳಲ್ಲಿ ಒಂದು. ವಿಟಮಿನ್ ಡಿ ಕೊರತೆ ಮೂಳೆಗಳು ಮೃದುವಾಗುವಂತೆ ಮಾಡಿ, ಮಕ್ಕಳಲ್ಲಿ ರಿಕೆಟ್ಸ್  ತೊಂದರೆ ಉಂಟು ಮಾಡುತ್ತದೆ. ದೊಡ್ಡವರಲ್ಲಿ ಒಸ್ಟಿಯೊಮ್ಯಾಲ್ಸಿಯ ಉಂಟುಮಾಡಬಹುದು. ವಿಟಮಿನ್ ಡಿ ಪ್ರಮುಖ ದೈಹಿಕ ಕಾರ್ಯಗಳು ಇಲ್ಲಿವೆ:

* ಆರೋಗ್ಯಕರ ಮೂಳೆ ಮತ್ತು ಹಲ್ಲುಗಳು 

* ನಿಮ್ಮ ದೇಹದ ರೋಗನಿರೋಧಕ ಕಾರ್ಯಾಚರಣೆಯನ್ನು ಉತ್ತಮಗೊಳಿಸಲು ವಿಟಮಿನ್ ಡಿ ಸಹಾಯ ಮಾಡುತ್ತದೆ. 

* ವಿವಿಧ ಬಗೆಯ ಕ್ಯಾನ್ಸರ್ ಗಳನ್ನೂ ತಡೆಗಟ್ಟುತ್ತದೆ. 

* ರಕ್ತದೊತ್ತಡವನ್ನು ಮತ್ತು ಹೃದಯ ಸಂಬಂಧಿತ ಅರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. 

[Back To Top]

೩. ವಿಟಮಿನ್ ಡಿ ಕೊರತೆಯ ಲಕ್ಷಣಗಳು (Symptoms Of Vitamin D Deficiency in Kannada):

ವಿಟಮಿನ್ ಡಿ ಕೊರತೆಯ ಲಕ್ಷಣಗಳು ಕೆಳಗಿನಂತಿವೆ:

* ಅಸ್ಥಿರಂಧ್ರತೆ 

* ನರಗಳ ದೌರ್ಬಲ್ಯ 

* ಅತಿಯಾದ ರಕ್ತದೊತ್ತಡ 

* ದಣಿವು ಮತ್ತು ಸುಸ್ತು 

* ಕರುಳಿನ ಸಮಸ್ಯೆ 

* ಕೂದಲುದುರುವಿಕೆ 

* ಮಾನಸಿಕ ಒತ್ತಡ ಮತ್ತು ಖಿನ್ನತೆ 

೪. ಶಿಫಾರಸ್ಸು ಮಾಡುವ ವಿಟಮಿನ್ ಡಿ ಮಟ್ಟ (Recommended Amount Of Vitamin D in Kannada):

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಶಿಫಾರಸ್ಸು ಮಾಡುವ ಪ್ರಕಾರ ವಿವಿಧ ಜೀವನ ಜನರು ವಿವಿಧ ಜೀವನ ಹಂತಗಳಲ್ಲಿ ವಿಟಮಿನ್ ಡಿ ಸೇವಿಸಬೇಕಾದ ಪ್ರಮಾಣ ಇಲ್ಲಿದೆ. 

೫. ವಿಟಮಿನ್ ಡಿ ಯನ್ನು ಹೇಗೆ ಪಡೆಯಬೇಕು? (How To Get Vitamin D? in Kannada) 

ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಯನ್ನು ನಮ್ಮ ದೇಹ ಪಡೆಯಬಹುದಾದರೂ, ನಮ್ಮ ಆಧುನಿಕ್ ಜೀವನಶೈಲಿ ಇದನ್ನು ಕಷ್ಟವಾಗಿಸುತ್ತದೆ. ನಾವು ದಿನದ ಸುಮಾರು ಹೊತ್ತು ಮನೆಯ ಒಳಗಡೆ ಅಥವಾ ಆಫೀಸ್ ಗಳಲ್ಲಿ ಕಳೆಯುತ್ತವೆ. ನಾವು ಹೊರಗೆ ಹೋದಾಗಲೂ ಸಹ ಸನ್-ಸ್ಕ್ರೀನ್ ಹಚ್ಚಿಕೊಳ್ಳುತ್ತೇವೆ. ಇದರ ಕಾರಣದಿಂದ ಅಗತ್ಯವಿರುವ ಸೂರ್ಯನ ಕಿರಣಗಳು ನಿಮ್ಮ ದೇಹಕ್ಕೆ ದೊರಕುವುದಿಲ್ಲ. ವಾತಾವರಣ ಬದಲಾವಣೆಯಿಂದಲೂ ಸಹ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ದೊರಕದೇ ಇರಬಹುದು. ಹಾಗಾಗಿ, ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರ ಸೇವಿಸುವುದು ಅತ್ಯಗತ್ಯ. ಅಂತಹ ೨೫ ಪ್ರಮುಖ ಆಹಾರಗಳ ಪಟ್ಟಿ ಇಲ್ಲಿದೆ. 

[Back To Top]

೬. ವಿಟಮಿನ್ ಡಿ ಸಮೃದ್ಧ ಆಹಾರಗಳು (Vitamin D Rich Foods in Kannada):

೧. ಫೋರ್ಟಿಫೈಡ್ ಯೋಗರ್ಟ್: ಯೋಗರ್ಟ್ ಕೇವಲ ಕರುಳಿನ ಆರೋಗ್ಯಕ್ಕೆ ಒಳಿತಷ್ಟೆ ಅಲ್ಲದೇ ವಿಟಮಿನ್ ಡಿ ಯ ಒಳ್ಳೆಯ ಮೂಲವಾಗಿದೆ. ಅದು ನಿಮ್ಮ ದೇಹದ ಪ್ರತಿನಿತ್ಯದ ವಿಟಮಿನ್ ಡಿ ಅಗತ್ಯತೆಯ ೧೦ ರಿಂದ ೨೦ ಶೇಕಡದಷ್ಟು ಫೋರ್ಟಿಫೈಡ್ ಯೋಗರ್ಟ್ ನೀಡುತ್ತದೆ. 

೨. ಕಿತ್ತಳೆ ಹಣ್ಣಿನ ರಸ: ಒಂದು ಲೋಟ ಕಿತ್ತಳೆ ಹಣ್ಣಿನ ರಸ ಉತ್ತಮ ಮಟ್ಟದ ವಿಟಮಿನ್ ಡಿ ನೀಡುತ್ತದೆ. ಕೆಲವು ಬ್ರಾಂಡ್ ಗಳ ಕಿತ್ತಳೆ ರಸ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಹಾಗಾಗಿ, ಮಧುಮೇಹದಿಂದ ಬಳಲುತ್ತಿರುವವರು ವಿಟಮಿನ್ ಡಿ ಪಡೆಯಲು ಕಿತ್ತಳೆ ರಸ ಸೇವಿಸುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. 

೩. ಓಟ್ ಮೀಲ್: ಓಟ್ ಮೀಲ್ ಸಹ ಇತರ ಧಾನ್ಯಗಳಂತೆ ವಿಟಮಿನ್ ಡಿ ಅನ್ನು ಹೊಂದಿದೆ. ಒಂದು ಪ್ಯಾಕೆಟ್ ಫೋರ್ಟಿಫೈಡ್ ಓಟ್ ಮೀಲ್, ನಿಮ್ಮ ಪ್ರತಿನಿತ್ಯದ ವಿಟಮಿನ್ ಡಿ ಅಗತ್ಯತೆಯ ೨೬% ಅಷ್ಟು ನೀಡುತ್ತದೆ. 

೪. ಸಿರಿಯಲ್ಸ್: ಕೆಅಲ್ವು ಸೇರಿಯಲ್ಸ್ ಹೆಚ್ಚಿನ ಮಟ್ಟದ ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಹಾಗಾಗಿ, ಸೀರಿಯಲ್ ಗಳನ್ನು ಖರೀದಿಸುವ ಮುನ್ನ ಅದರ ಮೇಲಿರುವ ಚೀಟಿಯನ್ನು ಓದುವುದು ಒಳಿತು. 

೫. ಸೋಯಾ ಹಾಲು: ನಿಮ್ಮ ದೈನಂದಿನ ಕ್ಯಾಲ್ಸಿಯಂ ಅಗತ್ಯತೆಯ ೬% ಅನ್ನು ಸೋಯಾ ಹಾಲು ನೀಡುವುದಷ್ಟೇ ಅಲ್ಲದೇ, ವಿಟಮಿನ್ ಡಿ ಯನ್ನು ಸಹ ಇದು ನೀಡುತ್ತದೆ. ನಿಮ್ಮ ದೈನಂದಿನ ಅಗತ್ಯತೆಯ ೧೪% ರಷ್ಟು ಇದು ನೀಡುತ್ತದೆ. 

೬. ತೊಫು: ತೊಫು ವಿಟಮಿನ್ ಡಿ ಯ ಪ್ರಮುಖ ಮೂಲವಾಗಿದ್ದು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅನ್ನು ಸಹ ಹೊಂದಿದೆ. 

[Back To Top]

೭. ಅಣಬೆ: ಅಣಬೆ ಬೆಳೆಯುವಾಗ ಸೂರ್ಯನ ಕಿರಣಗಳಿಗೆ ಒಡ್ಡಲಾಗುತ್ತದೆ. ಇದರಿಂದಾಗಿ ಅದರಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಡಿ ಅಂಶ ಇರುತ್ತದೆ. ಎಲ್ಲಾ ವಿಧಧ ಅಣಬೆಗಳಲ್ಲಿ ಬಟನ್ ಅಣಬೆಗಳು ಹೆಚ್ಚಿನ ವಿಟಮಿನ್ ಡಿ ಹೊಂದಿರುತ್ತದೆ. ಅಣಬೆಯನ್ನು ಸೇವಿಸುವ ಮುನ್ನ ಒಂದು ತಾಸು ಸೂರ್ಯನ ಕಿರಣಗಳಿಗೆ ಒಡ್ಡಿದರೆ, ಅದು ಇನ್ನು ಹೆಚ್ಚು ವಿಟಮಿನ್ ಡಿ ನಿಮ್ಮ ದೇಹಕ್ಕೆ ನೀಡುತ್ತದೆ. 

೮. ಹಾಲು: ಫೋರ್ಟಿಫೈಡ್ ಹಾಲು ನಿಮ್ಮ ದೈನಂದಿನ ೨೧% ವಿಟಮಿನ್ ಡಿ ಅಗತ್ಯತೆಯನ್ನು ಪೂರೈಸುತ್ತದೆ. 

೯. ಚೀಸ್: ಗೋಟ್, ರಿಕೋಟಾ, ಸ್ವಿಜ್ ಚೀಸ್ ವಿಟಮಿನ್ ಡಿ ಯನ್ನು ಹೊಂದಿರುವ ಆಹಾರವಾಗಿದೆ. ಸ್ಯಾಂಡ್ವಿಚ್ ಅಥವಾ ಪಾಸ್ತಾಗೆ ಚೀಸ್ ತೂರಿ ಸೇರಿಸುವುದರಿಂದ ವಿಟಮಿನ್ ಡಿ ಯನ್ನು ನಿಮ್ಮ ದೇಹದಲ್ಲಿ ಹೆಚ್ಚಿಸಬಹುದು. 

೧೦. ಬೆಣ್ಣೆ: ಬೆಣ್ಣೆಯನ್ನು ಮಿತಿಯಾಗಿ ಸೇವಿಸುವುದರಿಂದ ವಿಟಮಿನ್ ಡಿ ಯನ್ನು ಪಡೆಯಬಹುದು. 

೧೧. ಹುಳಿಯಾದ ಕೆನೆ: ಪೊಟ್ಯಾಸಿಯಂ, ಕ್ಯಾಲ್ಸಿಯಂ ಗಳನ್ನು ನೀಡುವುದರೊಂದಿಗೆ, ಹುಳಿಯಾದ ಕೆನೆ ವಿಟಮಿನ್ ಡಿ ಯನ್ನು ಸಹ ಹೊಂದಿರುತ್ತದೆ. 

೧೨. ಬಾದಾಮ್ ಹಾಲು: ವಿಟಮಿನ್ ಡಿ ಯನ್ನು ಹೊಂದಿರುವ ಬಾದಾಮ್ ಹಾಲು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. 

೧೩. ಚಾಕಲೇಟ್ ಹಾಲು: ಚಾಕಲೇಟ್ ಹಾಲು ವಿಟಮಿನ್ ಡಿ ಹೊಂದಿರುವ ಉತ್ತಮ ಆಹಾರ. ಆದರೆ ಇದನ್ನು ಮಿತಿಯಾಗಿ ಸೇವಿಸುವುದು ಒಳಿತು. ಅದು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಗಳನ್ನು ಸಹ ಹೊಂದಿದೆ. 

[Back To Top]

೧೪. ಸಾಲ್ಮನ್ ಮೀನು: ವಿಟಮಿನ್ ಡಿ ಸಮೃದ್ಧ ಆಹಾರಗಳಲ್ಲಿ ಸಾಲ್ಮನ್ ಮೀನು ಕೂಡ ಒಂದು. ನಿಮ್ಮ ದೈನಂದಿನ ವಿಟಮಿನ್ ಡಿ ಅಗತ್ಯತೆಯ ೬೦ ರಿಂದ ೧೦೦% ರವರೆಗೆ ಸಲ್ಮಾನ್ ಮೀನು ನೀಡಬಲ್ಲದು. 

೧೫. ಮ್ಯಾಕೆರೆಲ್ಸ್: ಮ್ಯಾಕೆರೆಲ್ಸ್ ಅತ್ಯುತ್ತಮ ವಿಟಮಿನ್ ಡಿ ಮತ್ತು ಒಮೇಗಾ ೩ ಮೂಲವಾಗಿದೆ. ಅದು ಪ್ರತಿ ೩.೫ ಔನ್ಸ್ ನಲ್ಲಿ ಶೇಕಡಾ ೯೦% ರಷ್ಟು ನಿಮ್ಮ ದೈನಂದಿನ ವಿಟಮಿನ್ ಡಿ ಅಗತ್ಯತೆಯನ್ನು  ನಿವಾರಿಸಬಲ್ಲದು. 

೧೬. ಹೆರ್ರಿಂಗ್ ಈ ಮೀನುಗಳು ವಿಟಮಿನ್ ಡಿ ಸಮೃದ್ಧ ಪ್ಲಾಂಕ್ಟನ್ ಸೇವಿಸುವುದರಿಂದ ಅವವುಗಳು ಸ್ವತಃ ವಿಟಮಿನ್ ಡಿ ಯ ಸಮೃದ್ಧ ಮೂಲವಾಗುತ್ತವೆ. 

೧೭. ಕಾಡ್ ಲಿವರ್ ಎಣ್ಣೆ: ಕಾಡ್ ಲಿವರ್ ಎಣ್ಣೆ ಒಮೇಗಾ ೩, ವಿಟಮಿನ್ ಎ ಮತ್ತು ವಿಟಮಿನ್ ಡಿ ಅನ್ನು ಹೊಂದಿದೆ. 

೧೮. ಸಾರ್ಡಿನ್ಸ್: ಸಾರ್ಡಿನ್ಸ್ ಸಹ ಅತ್ಯುತ್ತಮ ಮಟ್ಟದ ವಿಟಮಿನ್ ಡಿ ಹೊಂದಿದೆ. ಅವುಗಳು ನಿಮ್ಮ ದೇಹದ ದೈನಂದಿನ ವಿಟಮಿನ್ ಡಿ ಅಗತ್ಯತೆಯ ೭೦% ವಿಟಮಿನ್ ಡಿ ಅನ್ನು ನೀಡುತ್ತದೆ. 

೧೯. ಕ್ಯಾನ್ಡ್ ಟ್ಯೂನಾ: ಲೈಟ್ ಟ್ಯೂನಾ ಬಿಳಿ ಟ್ಯೂನಾ ಗಿಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ.  ಅವುಗಳು ನಿಮ್ಮ ದೇಹದ ದೈನಂದಿನ ವಿಟಮಿನ್ ಡಿ ಅಗತ್ಯತೆಯ ೪೦% ವಿಟಮಿನ್ ಡಿ ಅನ್ನು ನೀಡುತ್ತದೆ.

೨೦. ಮೊಟ್ಟೆಗಳು: ಮೊಟ್ಟೆಗಳಲ್ಲಿ ಗಮನಾರ್ಹ ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುತ್ತದೆ.  ಅವುಗಳು ನಿಮ್ಮ ದೇಹದ ದೈನಂದಿನ ವಿಟಮಿನ್ ಡಿ ಅಗತ್ಯತೆಯ ೧೦% ವಿಟಮಿನ್ ಡಿ ಅನ್ನು ನೀಡುತ್ತದೆ.

೨೧. ಸಿಂಪಿ: ವಿಟಮಿನ್ ಡಿ ಯೊಂದಿಗೆ ವಿಟಮಿನ್ ಬಿ೧೨, ಐರನ್, ಕಾಪರ್, ಜಿಂಕ್ ಗಳನ್ನೂ ಇದು ಹೊಂದಿದೆ. 

೨೨. ಸೀಗಡಿ ಮೀನು: ಒಮೇಗಾ ೩, ಆಂಟಿಆಕ್ಸಿಡೆಂಟ್ಸ್ ಮತ್ತು ಪ್ರೋಟೀನ್ಸ್ ಗಳನ್ನು ಸೀಗಡಿ ಮೀನುಗಳು ಹೊಂದಿರುತ್ತವೆ. ಪ್ರತಿ ೧೦೦ ಗ್ರಾಂ ನಲ್ಲಿ ೫ IU ವಿಟಮಿನ್ ಡಿ ಹೊಂದಿರುತ್ತದೆ. 

೨೩. ಬೀಫ್ ಲಿವರ್: ವಿಟಮಿನ್ ಡಿ ಯ ಮೂಲವಾಗಿರುವ ಇದು, ದೈನಂದಿನ ವಿಟಮಿನ್ ಡಿ ಅಗತ್ಯತೆಯ ೧% ಅನ್ನು ಇದು ನೀಡುತ್ತದೆ. 

೨೪. ಪೋರ್ಕ್ ಟೆಂಡರ್ ಲೊಯ್ನ್: ಕಡಿಮೆ ಕೊಬ್ಬನ್ನು ಹೊಂದಿದ್ದು, ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಇದು ೧೧೭ IU ಅಷ್ಟು ವಿಟಮಿನ್ ಡಿ ನೀಡುತ್ತದೆ. 

೨೫. ಕೇವಿಯರ್: ಮೀನುಗಳ ಮೊಟ್ಟೆ ಅಥವಾ ಕೇವಿಯರ್ ಹೆಚ್ಚಿನ ವಿಟಮಿನ್, ಮಿನರಲ್ ಮತ್ತು ಅಗತ್ಯವಿರುವ ಫಾಟ್ಸ್ ಗಳನ್ನು ಹೊಂದಿದೆ. 

[Back To Top]

೭. ವಿಟಮಿನ್ ಡಿ ಹೊಂದಿರುವ ತರಕಾರಿಗಳ ಮತ್ತು ಹಣ್ಣುಗಳ ಸಂಕ್ಷಿಪ್ತ ಮಾಹಿತಿ (A Quick Look At The Vitamin D Fruits And Vegetable List in Kannada):

ಆಶ್ಚರ್ಯ ಉಂಟು ಮಾಡಿದರೂ, ಸತ್ಯವೆಂದರೆ ಯಾವುದೇ ಹಣ್ಣುಗಳು ವಿಟಮಿನ್ ಡಿ ಹೊಂದಿರುವುದುದಿಲ್ಲ.ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಹಣ್ಣಿನ ರಸಗಳಲ್ಲಿ ವಿಟಮಿನ್ ಡಿ ಫೋರ್ಟಿಫೈಡ್ ಎಂದು ತಿಳಿಸಿದ್ದರೂ ಅವುಗಳು ವಿಟಮಿನ್ ಡಿ ಯನ್ನು ನೈಸರ್ಗಿಕವಾಗಿ ಹೊಂದಿರುವುದಿಲ್ಲ. ತರಕಾರಿಗಳು ಮತ್ತು ಧಾನ್ಯಾಳಲ್ಲಿ ವಿಟಮಿನ್ ಡಿ ಇದ್ದರೂ, ಅತಿ ಕಡಿಮೆ ಮಟ್ಟದಲ್ಲಿ ಇರುತ್ತದೆ. 

 ಕೆನಡಾದ ಡಯೆಟಿಯನ್ಸ್ ಪ್ರಕಾರ ಕೆಲವು ಸಾಮಾನ್ಯ ಆಹಾರದ ವಿಟಮಿನ್ ಡಿ ಅಂಶ:

[Back To Top]

೮. ನಿರ್ಣಯ (Conclusion in Kannada)

ವಿಟಮಿನ್ ಡಿ ನಿಮ್ಮ ದೇಹಕ್ಕೆ ಅತ್ಯಗತ್ಯವಿರುವ ಪೌಷ್ಟಿಕಾಂಶ. ವಿಟಮಿನ್ ಡಿ ಕೊರತೆ ಹಲವಾರು ಅರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ವಿಟಮಿನ್ ಡಿ ಸಮೃದ್ಧ ಆಹಾರವನ್ನು ಸೇವಿಸುವುದು ಅಗತ್ಯ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon