ನಿಮಗೆ ಯಾವಾಗಲು ನೆನಪಾಗಿ ಕಾಡುವ ಮದುವೆಯ ಮೊದಲ ವರ್ಷದ ೭ ಅಂಶಗಳು
ಮದುವೆಯಾದ ನಂತರದ ಮೊದಲ ವರ್ಷವೂ ನಮ್ಮ ಜೀವನದ ಅವಿಸ್ಮರಣೀಯ ವರ್ಷವಾಗಿರುತ್ತದೆ. ಅದು ನೀವಿಬ್ಬರು ಒಟ್ಟಿಗೆ ತರಲೆ ಮಾಡುತ್ತಾ, ಸಣ್ಣ ಪುಟ್ಟ ತಪ್ಪುಗಳಾದರು ತಲೆ ಕೆಡಿಸಿಕೊಳ್ಳದೆ, ಅವುಗಳನ್ನು ಕೂಡಲೇ ಮರೆತು ಮತ್ತಷ್ಟು ಮೋಜಿನ ಕ್ಷಣಗಳು ಕಳೆಯುತ್ತಿದ್ದ ವರ್ಷ. ಆದರೂ, ಪ್ರತಿದಿನ ಬೆಳಗ್ಗೆ ನಿಮ್ಮ ಸಂಗಾತಿಯ ಪಕ್ಕದಲ್ಲೇ, ಸಂಗಾತಿಯ ಮುಖ ನೋಡಿಕೊಂಡು ಏಳುವುದರ ಸುಖವೇ ಬೇರೆ. ಆದರೆ ಕಾಲಕ್ರಮೇಣ ವಾಸ್ತವತೆ ನೆಲೆಯೂರಲು ಶುರು ಆದ ತಕ್ಷಣ, ಇವೆಲ್ಲವೂ ಮಾಸುತ್ತಾ ಹೋಗುತ್ತವೆ. ನಿಮಗೆ ತುಂಬಾ ನೆನಪಾಗಿ ಕಾಡುವ ಮದುವೆಯ ಮೊದಲ ವರ್ಷದ ೭ ಸಂಗತಿಗಳು ಇಲ್ಲಿವೆ :
೧. ನಿಮ್ಮ ಹನಿಮೂನ್
ದಂಪತಿಗಳ ಹನಿಮೂನ್ ಅಂದರೆ ಅವರ ಮಧುಚಂದ್ರವು, ಅವರ ಜೀವನದ ಎಂದು ಮರೆಯಲಾರದ ಅನುಭವ. ನೀವಿಬ್ಬರೇ ಒಟ್ಟಿಗೆ ಕೈಗೊಂಡ ಮೊದಲ ಪ್ರವಾಸ ಅದು. ಇದು ನೀವಿಬ್ಬರು ಮಿಸ್ಟರ್ ಹಾಗು ಮಿಸ್ಸುಸ್ ಆಗಿ ಕೈಗೊಂಡ ಮೊದಲ ಪ್ರವಾಸ ಆಗಿರುವುದರಿಂದ, ನಿಮ್ಮನ್ನು ಭೇಟಿ ಮಾಡಿದವರಿಗೆಲ್ಲ ಇದನ್ನು ಹೇಳುವುದೇ ಖುಷಿ. ನಿಮ್ಮದು ಅರೇಂಜ್ ಮದುವೆ ಆಗಿದ್ದರೆ ಈ ಪ್ರವಾಸವು ನಿಮ್ಮ ಮಧ್ಯೆ ಬಾಂಧವ್ಯ ಮೂಡಿಸಲು ಸಹಕಾರಿ ಆಗುತ್ತದೆ.
೨. ನಿಮ್ಮ ಹೊಸ ಶೀರ್ಷಿಕೆಗಳು
ಇದು ಗಂಡಸರಿಗಿಂತ ಹೆಚ್ಚು ಹೆಂಗಸರಿಗೆ ಅನ್ವಯಿಸುತ್ತದೆ. ಮದುವೆಯ ನಂತರ ನೀವು ಹೊಸ ಹೆಸರು, ಅಂದರೆ ಶ್ರೀಮತಿ ಅಥವ ಮಿಸ್ಸುಸ್ (ನಿಮ್ಮ ಪತಿಯ ಹೆಸರು) ಪದೆದುಕೊಳ್ಳುವಿರಿ. ಮದುವೆಯ ಮೊದಲ ವರ್ಷ ಯಾರಾದರು ನಿಮ್ಮ ಗಂಡನ ಕೊನೆ ಹೆಸರಿನಿಂದ ನಿಮ್ಮನ್ನು ಕರೆದರೆ ಏನೋ ಒಂಥರ ವಿಚಿತ್ರ ಭಾವನೆ. ನೀವು ಅದಕ್ಕೆ ಒಂದೊಂದು ಬಾರಿ ಉತ್ತರಿಸುವುದೇ ಮರೆಯುವಿರಿ! ಆದರೆ ಸ್ವಲ್ಪ ದಿನಗಳ ನಂತರ ಇದು ಅಭ್ಯಾಸವಾಗುತ್ತದೆ.
೩. ನಿಮ್ಮ ಅತ್ತೆ ಮಾವ
ಇದು ಎರಡೂ ಥರ ಆಗಬಹುದು. ನೀವು ನಿಮ್ಮ ಹೊಸ ತಂದೆ ತಾಯಿಯರೊಡನೆ ತುಂಬಾ ಅದ್ಭುತ ಸಮಯ ಕಳೆಯಬಹುದು ಅಥವಾ ತುಂಬಾ ಕೆಟ್ಟ ಸಮಯ ಕಳೆಯಬಹುದು. ಆದರೆ ಕಾಲ ಕಳೆದಂತೆ ನಿಮ್ಮ ಹಾಗು ನಿಮ್ಮ ಅತ್ತೆ ಮಾವರ ನಡುವಿನ ಸಂಬಂಧ ತಟಸ್ಥವಾಗುತ್ತದೆ ಹಾಗು ಏನೇ ಆದರೂ ನೀವು ನಿಮ್ಮ ಅತ್ತೆ ಮಾವರನ್ನು ಗೌರವಿಸಲು ಶುರು ಮಾಡುತ್ತೀರ.
೪. ಲೈಂಗಿಕ ಪ್ರಯೋಗಗಳು
ಹೊಸದಾಗಿ ಮದುವೆಯಾಗಿರುವ ದಂಪತಿಗಳಾದ ಕಾರಣಕ್ಕೆ, ಲೈಂಗಿಕ ಪ್ರಯೋಗಗಳಿಗೇನು ಕೊರತೆ ಇರುವುದಿಲ್ಲ! ಇದೇ ಸಮಯದಲ್ಲೇ ಬಹಳಷ್ಟು ದಂಪತಿಗಳು ತಮ್ಮ ಎಲ್ಲಾ ಕಲ್ಪನೆಗಳಿಗೂ ಜೀವ ತುಂಬುತ್ತಾರೆ. ಮದುವೆಯ ಮೊದಲ ವರ್ಷ ಆಗಿರುವ ಕಾರಣ ಇಬ್ಬರಿಗೂ ಎಲ್ಲವೂ ಹೊಸದಾಗಿರುತ್ತದೆ, ಆದರಿಂದ ಗೊತ್ತಿಲ್ಲದಿರುವ ವಿಷಯಗಳ ಬಗ್ಗೆ ಆರಾಮಾಗಿ ಮಾತಾಡಿ ತಿಳಿದುಕೊಳ್ಳಬಹುದು.
೫. “ಗಂಡ ಮತ್ತು ಹೆಂಡತಿ”
ಮದುವೆಯಾದ ಒಂದು ವಾರದವರೆಗೂ ಆಗಾಗೆ ನಿಮಗೆ “ನನಗೆ ನಿಜವಾಗಲು ಮದುವೆಯಾಗಿದೆಯ?” “ನಿಜವಾಗಲು ನನಗೆ ಈಗ ಒಬ್ಬ ಗಂಡ ಕೂಡ ಇದ್ದಾನ?” ಎಂಬ ಪ್ರಶ್ನೆಗಳು ನಿಮ್ಮ ತಲೆಯೊಳಗೆ ಸಿಡಿದೇಳುತ್ತಿರುವೆ. ನಿಮ್ಮ ಪತಿಯನ್ನು ಗಂಡ ಎಂದು ಕರೆಯಲು ನಿಮಗೆ ಏನೋ ಒಂಥರಾ ಭಾವನೆ. ನಾಚಿಕೆ, ಖುಷಿ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ. ಆದರೂ ಅವರನ್ನು ನನ್ನ “ಗಂಡ” ಎಂದು ಕರೆಯಲು ಏನೋ ಸಂತೋಷ. ಆದರೆ ನಿಮಗೆ ಇದರಿಂದ ಸಿಗುತ್ತಿದ್ದ ಉಲ್ಲಾಸ ಬರಬರುತ್ತಾ ಕಮ್ಮಿ ಆಗುತ್ತದೆ.
೬. ಮದುವೆಯ ಬಗ್ಗೆ ಮಾತುಗಳು
ಈ ಒಂದು ಕೆಲಸ ಎಲ್ಲಾ ನವದಂಪತಿಗಳು ಮಾಡುವರು. ನೀವು ಎಷ್ಟೇ ಬೇಡ ಅಂದುಕೊಂಡರು, ಯಾರಾದರು ಸಿಕ್ಕಿದರೆ ಸಾಕು ಅವರ ಬಳಿ ನಿಮ್ಮ ಮದುವೆಯ ಬಗ್ಗೆ ಕನಿಷ್ಟಪಕ್ಷ ೧೦ ನಿಮಿಷಗಳಾದರೂ ಹೇಳುವಿರಿ. ದುರದೃಷ್ಟವಶಾತ್ (ನಿಮ್ಮ ಬಳಿ ಸಿಕ್ಕಿ ತಲೆ ತಿನ್ನಿಸಿಕೊಳ್ಳುವವರ ಅದೃಷ್ಟಕ್ಕೆ ), ಇವು ಮದುವೆಯಾಗಿ ಒಂದು ವರ್ಷದೊಳಗೆ ನಿಂತು ಹೋಗುತ್ತದೆ. ಏಕೆಂದರೆ, ಆಗ ಮಾತಾಡಲು ನಿಮ್ಮ ಬಳಿ ಇನ್ನೂ ಬೇರೇ ಬೇರೇ ನೆನಪಗಳು ಸೃಷ್ಟಿಯಾಗಿರುತ್ತವೆ.
೭. ನಿಮ್ಮ ಮೊದಲ ವಿವಾಹ ವಾರ್ಷಿಕೋತ್ಸವ
ಈ ಸಂಭ್ರಮವು ನಿಮ್ಮ ಜೀವನದ ತುಂಬಾ ವಿಶೇಷವಾದ ಹಾಗು ಸ್ಮರಣೀಯವಾದ ಸಂಭ್ರಮ. ಇದಕ್ಕಾಗಿ ನೀವು ಎಲ್ಲಾ ದೊಡ್ಡ ದೊಡ್ಡ ಪ್ಲಾನ್ ಗಳನ್ನ ಮಾಡಿಕೊಂಡಿರುತ್ತೀರ ಹಾಗು ಯಾವ ವಾರ್ಷಿಕೋತ್ಸವವು ನಿಮ್ಮ ಹೃದಯಕ್ಕೆ ಇದರಷ್ಟು ಹತ್ತಿರವೆನಿಸೋಲ್ಲ.
