Link copied!
Sign in / Sign up
0
Shares

ನಿಮಗೆ ತಿಳಿಯದೇ ಇರುವ ಕಬ್ಬಿನಹಾಲಿನ ೧೦ ಪ್ರಯೋಜನಗಳು (Top 10 Benefits of Sugarcane Juice You Did Not Know in Kannada)

ಬೇಸಿಗೆಯಲ್ಲಿ ಸಂತೃಪ್ತಿ ನೀಡುವ ಪದಾರ್ಥಗಳ ಬಗ್ಗೆ ಯೋಚಿಸುವಾಗ ಕಬ್ಬಿನಹಾಲು ಅತ್ಯುತ್ತಮವಾದದ್ದು. ಇದು ಕೇವಲ ರುಚಿಯಾಗಿರುವ ರಸವಷ್ಟೇ ಅಲ್ಲದೆ, ಇಅದರ ಅಸಂಖ್ಯಾತ ಅರೋಗ್ಯ ಪ್ರಯೋಜನಗಳು ಇದನ್ನು ಉನ್ನತ ಬಗೆಯ ಬೇಸಿಗೆ ಪಾನೀಯ ಎಂದು ಸಾಬೀತು ಪಡಿಸುತ್ತದೆ. ಇದು ಭಾರತದ ಬೇಸಿಗೆ ಧಗೆಯಲ್ಲಿ ಸಹ ನಿಮ್ಮ ದೇಹದ ನೈಸರ್ಗಿಕ ಗ್ಲುಕೋಸ್ ಮಟ್ಟವನ್ನೂ ನಿಯಂತ್ರಿಸುತ್ತದೆ. 

ಪರಿವಿಡಿ:

೧. ಕಬ್ಬಿನಹಾಲು - ಬೇಸಿಗೆಗೆ ಸೂಕ್ತ ಆಯ್ಕೆ (Sugarcane Juice – A Great Choice For The Summers in Kannada)

೨. ಕಬ್ಬಿನಹಾಲಿನ ಪೌಷ್ಟಿಕ ಮೌಲ್ಯ (Nutrition Value Of Sugarcane Juice in Kannada)

೩. ಕಬ್ಬಿನಹಾಲಿನ ಅರೋಗ್ಯ ಪ್ರಯೋಜನಗಳು (Health Benefits Of Sugarcane Juice in Kannada)

೪. ಕಬ್ಬಿನಹಾಲಿನ ಅಡ್ಡಪರಿಣಾಮಗಳು (Side-effects Of Sugarcane Juice in Kannada)

೫. ನಾವು ಪಾಲಿಸಬೇಕಾದ ಮುನ್ನೆಚ್ಚರಿಕೆಗಳಿವೆಯೇ? (Are there any precautions to follow? in Kannada)

೧. ಕಬ್ಬಿನಹಾಲು - ಬೇಸಿಗೆಗೆ ಸೂಕ್ತ ಆಯ್ಕೆ (Sugarcane Juice – A Great Choice For The Summers in Kannada)

ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆ ಮತ್ತು ದೇಹದ ನಿರ್ಜಲೀಕರಣವನ್ನು ತಡೆಗಟ್ಟಲು, ನೀವು ಕುಡಿಯುವ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋದರೂ ಉಷ್ಣಾಘಾತದಿಂದ ಸುರಕ್ಷಿತವಾಗಿರಲಾರಿರಿ. ಹೆಚ್ಚಿನ ತಾಪಮಾನ ಮತ್ತು ಉರಿಗಾಲಿಯಿಂದ ನಿಮ್ಮ ದೇಹವನ್ನು ಸಂರಕ್ಷಿಸಲು, ನಿಮ್ಮ ದೇಹಕ್ಕೆ ಇನ್ನು ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ. ಕಬ್ಬಿನಹಾಲು ಮಾದರಿ ಬೇಸಿಗೆಯ ಪಾನೀಯ ಆಗಿರುವುದರೊಂದಿಗೆ, ಅದು ನಿಮ್ಮ ದೇಹದ ಗ್ಲುಕೋಸ್ ಮಟ್ಟವನ್ನು ನಿರ್ವಹಿಸಿ, ಬಿಸಿಲಿನ ಶಾಖದಿಂದ ನಿಮ್ಮ ದೇಹವನ್ನು ಸಂರಕ್ಷಿಸುತ್ತದೆ. 

೨. ಕಬ್ಬಿನಹಾಲಿನ ಪೌಷ್ಟಿಕ ಮೌಲ್ಯ (Nutrition Value Of Sugarcane Juice in Kannada):

ನಿಮಗೆ ತಿಳಿದಿದೆಯೇ ಪ್ರತಿ ೧೦೦ ಗ್ರಾಂ ಕಬ್ಬಿನಹಾಲಿಯಲ್ಲಿ ಸಾಕಷ್ಟು ಪೌಷ್ಟಿಕಾಂಶಗಳಿವೆ ಎಂದು?

ಕಾರ್ಬೋಹೈಡ್ರೇಟ್ಸ್ - ೨೪%

ಐರನ್ - ೧೯%

ಸೋಡಿಯಂ - ೨%

ಮ್ಯಾಗ್ನೇಸಿಯಂಸ್ - ೨%

ಪೊಟ್ಯಾಸಿಯಂ - ೧%

ಕ್ಯಾಲ್ಸಿಯಂ - ೧% 

ಎಲ್ಲಕ್ಕಿಂತ ಹೆಚ್ಚಾಗಿ, ಅದು ಪ್ರತಿ ಸರ್ವಿಂಗ್ ನಲ್ಲಿ ೨೭೦ ಕ್ಯಾಲೋರಿಗಳನ್ನು ಹೊಂದಿದ್ದು, ಕೊಲೆಸ್ಟರಾಲ್ ಮತ್ತು ಸ್ಯಾಚುರೇಟೆಡ್ ಮತ್ತು ಅನ್ಸ್ಯಾಚುರೇಟೆಡ್ ಕೊಬ್ಬಿನಿಂದ ಮುಕ್ತವಾಗಿದೆ. 

[Back To Top]

೩. ಕಬ್ಬಿನಹಾಲಿನ ಅರೋಗ್ಯ ಪ್ರಯೋಜನಗಳು (Health Benefits Of Sugarcane Juice in Kannada):

ಕಬ್ಬಿನಹಾಲು ಅಥವಾ ಗಣ್ಣೆ ಕಾ ಜ್ಯೂಸು ಅತಿಯಾದ ಜನಪ್ರಿಯತೆಯನ್ನು ಪಡೆದಿದೆ. ಅದಕ್ಕೆ ಕಾರಣ ಹಲವಾರು. ಅದರಲ್ಲಿ ಪ್ರಮುಖ ಕಾರಣ ಅದರ ವಿವಿಧ ಬಗೆಯ ಆರೋಗ್ಯ ಪ್ರಯೋಜನಗಳು. ಅದು ಮನಸ್ಸು ಮತ್ತು ದೇಹವನ್ನು ತಣ್ಣಗಾಗಿಸುವುದಷ್ಟೇ ಅಲ್ಲದೇ, ಬೇಸಿಗೆಯಲ್ಲಿ ನಿಮ್ಮ ದೇಹ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಬೇರೆ ಯಾವುದೇ ಪದಾರ್ಥಗಳನ್ನು ಸೇರಿಸದೆ, ಇದನ್ನು ನೈಸರ್ಗಿಕವಾಗಿ ಮತ್ತು ತಾಜಾ ರೀತಿಯಲ್ಲಿ ಸೇವಿಸಬಹುದು. 

ಎಲ್ಲರಿಗಯೂ ತಿಳಿಯದೆ ಇರುವ ಕಬ್ಬಿನಹಾಲಿನ ೧೦ ಒರಮುಖ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. 

೧. ತೂಕ ಇಳಿಸಲು ಬಯಸುವವರಿಗೆ ಸೂಕ್ತ ಪಾನೀಯ: ತೂಕ ಇಳಿಸಲು ಬಯಸುವ ಪ್ರತಿಯೊಬ್ಬರೂ ಅವಲಂಬಿಸಬಹುದಾದ ಪಾನೀಯವೆಂದರೆ ಕಬ್ಬಿನಹಾಲು ಕಬ್ಬಿಣ ಹಾಲಿನಲ್ಲಿ ನಾರಿನಂಶ ಮತ್ತು ನೈಸರ್ಗಿಕ ಸಕ್ಕರೆ ಇದ್ದು, ಕೃತಕ ಸಿಹಿಕಾರಕಗಳು ಮತ್ತು ಕೊಬ್ಬಿನ ಆಹಾರ ಪದಾರ್ಥಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಕಬ್ಬಿನಹಾಲು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಿ, ಹೆಚ್ಚಿನ ಕೊಬ್ಬಿನಂಶವನ್ನು ಸುಡುವಂತೆ ಮಾಡು, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇವುಗಳ ಸಹಜವಾಗಿ ನಿಮ್ಮ ದೇಹದ ತೂಕವನ್ನು ನೈಸರ್ಗಿಕವಾಗಿ ಮತ್ತು ಸುರಕ್ಷಿತವಾಗಿ ಇಳಿಸುವಲ್ಲಿ ಸಹಾಯ ಮಾಡುತ್ತದೆ. 

ಆದ್ದರಿಂದ ಕ್ರ್ಯಾಶ್ ಡಯಟ್ ಅಥವಾ ಹಾನಿಕಾರಕ ತೂಕ ಇಳಿಸುವ ಪದಾರ್ಥಗಳನ್ನು ಸೇವಿಸುವುದಕ್ಕಿಂತ, ಕಬ್ಬಿನಹಾಲಿನ ಮೇಲೆ ಅವಲಂಬಿಸುವುದು ಸೂಕ್ತ. 

೨. ಕ್ಯಾನ್ಸರ್ ರೋಗವನ್ನು ದೂರವಿಡಬಹುದು:

ನಮಗೆಲ್ಲರಿಗೂ ತಿಳಿದಿರುವಂತೆ ದೇಹದ ಆಮ್ಲತೆ ಹೆಚ್ಚಿದರೇ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯಾಗುತ್ತದೆ. ಹಾಗಾಗಿ, ಕ್ಷಾರೀಯ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ರೋಗಿಯ ಅರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಬಹುದು. ಕಬ್ಬಿನಹಾಲು ಹೆಚ್ಚು ಕ್ಷಾರೀಯವಾಗಿದ್ದು, ಕಬ್ಬಿನಹಾಳನ್ನು ನಿಯಮಿತವಾಗಿ ಸೇವಿಸುವುದರಿಂದ ನೈಸರ್ಗಿಕವಾಗಿ, ಕ್ಯಾನ್ಸರ್ ಜೀವಕೋಶಗಳನ್ನು ಕಡಿಮೆಗೊಳಿಸಬಹುದು. 

ಯಾರಾದರೂ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆ, ಅವರು ವೈದ್ಯರ ಸಲಹೆ ಪಡೆದು ಕಬ್ಬಿನಹಾಲನ್ನು ಸೇವಿಸುವುದರಿಂದ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಬಹುದು. ವೈದ್ಯರ ಸಲಹೆ ಪಡೆಯುವುದರಿಂದ ಕಬ್ಬಿನಹಾಲಿನ ಸಂಭವನೀಯ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು. 

[Back To Top]

೩. ಮೂತ್ರಪಿಂಡದ ಸೂಕ್ತ ಕಾರ್ಯನಿರ್ವಹಣೆಗೆ ಕಬ್ಬಿನಹಾಲು: 

ಕಬ್ಬಿನಹಾಲು ಅತ್ಯುತ್ತಮ ನಿರ್ವೀಷೀಕಾರಕ. ಕಬ್ಬಿನಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರದ ಸೋಂಕುಗಳನ್ನು ತಡೆಗಟ್ಟಬಹುದು. ಕಬ್ಬಿನಹಾಲಿನ ಮೂತ್ರವರ್ಧಕ ಗುಣದಿಂದಾಗಿ, ಮೂತ್ರಪಿಂಡ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿ, ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ಮತ್ತು ಬೆಳವಣಿಗೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. 

ಹಾಗಾಗಿ, ನಿಮಗೆ ಮೂತ್ರಪಿಂಡ ಅಥವಾ ಮೂತ್ರ ಸಂಬಂಧಿತ ಯಾವುದಾದರೂ ಸೋಂಕುಗಳಾಗಿದ್ದರೆ, ಕಬ್ಬಿನಹಾಲನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕರ. 

೪. ಸುಂದರ ಚರ್ಮಕ್ಕಾಗಿ: 

ಅಲ್ಫಾ ಹೈಡ್ರಾಕ್ಸಿ ಆಮ್ಲಗಳ ಕೆಲವೇ ನೈಸರ್ಗಿಕ ಮೂಲಗಳಲ್ಲಿ ಕಬ್ಬಿನಹಾಲು ಸಹ ಒಂದು. ಮೊಡವೆ, ಚರ್ಮದ ಕಲೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಕಬ್ಬಿನಹಾಲು ಪರಿಣಾಮಕಾರಿಯಾಗಿದೆ. ಹಾಗಾಗಿ, ಇದು ನಿಮ್ಮ ಚರ್ಮಕ್ಕೆ ಹಾನಿಯುಂಟಾ ಮಾಡಬಹುದಾದ ರಾಸಾಯನಿಕ ಉತ್ಪನ್ನಗಳಿಗೆ ಉನ್ನತ ಪರ್ಯಾಯವಾಗಿದೆ. ಇದನ್ನು ಬೇಸಿಗೆ ಕಾಲದಲ್ಲಿ ನಿಯಮಿತವಾಗಿ ಕುಡಿಯುವುದಷ್ಟೇ ಅಲ್ಲದೆ, ಇದನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಂಡರೆ, ನಿಮ್ಮ ಚರ್ಮ ಸುಂದರವಾಗಿ, ಮೊಡವೆ ಮತ್ತು ಕಲೆಗಳಿಂದ ಮುಕ್ತಿಪಡೆಯುತ್ತದೆ. 

ಇದು ನಿಮ್ಮ ಚರ್ಮವನ್ನು ಪುನರ್ಜಳೀಕರಿಸಿ, ನಿಮ್ಮ ಮುಖ ಚೈತನ್ಯಭರಿತವಾಗಿ ಕಾಣುವಂತ್ ಮಾಡುತ್ತದೆ. ಹಾಗಾಗಿ, ನಿಮ್ಮ ಮುಖಕ್ಕೆ ರಾಸಾಯನಿಕ ಉತ್ಪನ್ನಗಳನ್ನು ಬಳಸುವ ಬದಲಿಗೆ, ನೈಸರ್ಗಿಕವಾದ ಕಬ್ಬಿನಹಾಳನ್ನು ಬಳಸಿ, ನಿಮ್ಮ ಚರ್ಮಕ್ಕೆ ಸಂಬಂಧಿತ ಎಲ್ಲ ತೊಂದರೆಗಳಿಂದ ಮುಕ್ತಿ ಪಡೆಯಿರಿ. 

೫. ಕಾಮಾಲೆ ರೋಗಕ್ಕೆ ಶಿಫಾರಸ್ಸು ಮಾಡಿರುವ ಔಷಧಿ:

ಕಾಮಾಲೆ ರೋಗಕ್ಕೆ ಪ್ರಮುಖ ಕಾರಣ ಯಕೃತ್ತುವಿನ ಕಳಪೆ ಕಾರ್ಯನಿರ್ವಹಣೆ. ಪ್ರಾಚೀನ ಭಾರತೀಯ ವೈದ್ಯಕೀಯ ಸಿದ್ಧಾಂತಗಳು ಮತ್ತು ಆಧುನಿಕ ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಕಬ್ಬಿನರಸ ಮತ್ತು ಕಬ್ಬಿನಹಾಲು ಯಕೃತ್ತುವಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ರೋಗದಿಂದ ಬಳಲುತ್ತಿರುವಾಗ ಕಳೆದುಹೋದ ಪ್ರೋಟೀನ್ ಮತ್ತು ಪೌಷ್ಟಿಕಾಂಶಕಗಳನ್ನು ಪುನಃ ಪಡೆಯುವಂತೆ ಮಾಡಿ, ನಿಮ್ಮ ದೇಹ ಮೊದಲಿನ ಸ್ಥಿತಿಗೆ ಬರುವಂತೆ ಮಾಡುತ್ತದೆ. 

೬. ಜೀರ್ಣಾಂಗಗಳ ಸಂಬಂಧಿತ ರೋಗಗಳಿಂದ ಮುಕ್ತಿ ನೀಡಿ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ: 

ಕಬ್ಬಿನಹಾಲಿನ ಕ್ಷಾರೀಯ ಗುಣದಿಂದಾಗಿ, ನಿಮ್ಮ ದೇಹದ ಆಮ್ಲೀಯತೆ ಮತ್ತು ಇತರ ಜೀರ್ಣಕ್ರಿಯೆಗೆ ಸಂಬಂಧಿತ ಸಮಸ್ಯೆಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಬ್ಬಿನಹಾಲಿನಲ್ಲಿರುವ ನಾರಿನಂಶ ನಿಮ್ಮ ಜೀರ್ಣಕ್ರಿಯೆಯನ್ನು ತೀವ್ರವಾಗಿ ಸುಧಾರಿಸುತ್ತದೆ. 

ಕಬ್ಬಿನಹಾಲು ಮಲಬದ್ಧತೆ ಮತ್ತು ಉರಿಯೂತವನ್ನು ನಿವಾರಿಸುತ್ತದೆ. 

೭. ಹಲ್ಲಿನ ಕುಳಿಗಳ ವಿರುದ್ಧ ಹೋರಾಡಿ, ಹಲ್ಲುಗಳ ಆರೋಗ್ಯ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. 

ಕಬ್ಬಿನಹಾಲಿನ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಅದು ಹಲ್ಲುಗಳ ಕುಳಿಗಳ ವಿರುದ್ಧ ಹೋರಾಡಿ, ಹಲ್ಲುಗಳ ಆರೋಗ್ಯ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಕಬ್ಬಿನಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಗಳ ಮಟ್ಟ ಹೆಚ್ಚಿದ್ದು, ನಿಮ್ಮ ಹಲ್ಲಿನ ಕುಳಿಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಒಸಡು ಸುರಕ್ಷಿತವಾಗಿರುತ್ತದೆ.

೮. ಒತ್ತಡ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆ: 

ಕಬ್ಬಿನಹಾಲಿನಲ್ಲಿರುವ ಅಮೈನೊ ಆಮ್ಲ, ಟ್ರಿಪ್ಟಾಫಾನ್, ಮೆಗ್ನೀಷಿಯಂ ದೇಹದ ಒತ್ತಡವನ್ನು ನಿವಾರಿಸಿ, ನಿಮ್ಮ ನಿದ್ರೆ ಸುಧಾರಿಸುವಂತೆ ಮಾಡುತ್ತದೆ. ಮಸಾಲೆಯುಕ್ತ ಆಹಾರದ ಸೇವನೆಯಿಂದ ಎದೆಯುರಿತ ಅಥವಾ ಆಮ್ಲೀಯತೆಯಂತಹ ಸಮಸ್ಯೆ ನಿಮಗೆ ಕಾಡುತ್ತಿದ್ದರೆ, ಕಬ್ಬಿನಹಾಲು ಅದರಿಂದ ನಿಮಗೆ ಮುಕ್ತಿ ದೊರೆಯುವಂತೆ ಮಾಡುತ್ತದೆ. ಹಾಗಾಗಿ, ಪ್ರತಿರಾತ್ರಿ ನೀವು ಮಲಗುವ ಮುನ್ನ ಒಂದು ಲೋಟ ಕಬ್ಬಿನಹಾಲು ಸೇವಿಸುವುದು ಆರೋಗ್ಯಕರ. 

೯. ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ: 

ಕಬ್ಬಿನಹಾಲಿನಲ್ಲಿ ವಿಟಮಿನ್ ಸಿ ಮತ್ತು ಇತರ ಮಿನರಲ್ಸ್ ಗಳಿದ್ದು, ಅದೇ ಕಾರಣದಿಂದ ಹಲವಾರು ಅರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನೂ ಬಲಿಷ್ಠಗೊಳಿಸಬಹುದು. 

೧೦. ರಕ್ತದೊತ್ತಡವನ್ನು ನಿವಾರಿಸುತ್ತದೆ: ಕಬ್ಬಿನಹಾಲಿನಲ್ಲಿರುವ ಪೊಟ್ಯಾಸಿಯಂ ನಿಮ್ಮ ದೇಹದಲ್ಲಿ ರಕ್ತ ಸಾಮಾನ್ಯವಾಗಿ ಹರಿಯುವಂತೆ ಮಾಡಿ, ಅಭಿಧಮನಿ ಮತ್ತು ರಕ್ತನಾಳಗಳ ಮೇಲಿನ ಹೆಚ್ಚಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದರಿಂದ ನಿಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. 

[Back To Top]

೪. ಕಬ್ಬಿನಹಾಲಿನ ಅಡ್ಡಪರಿಣಾಮಗಳು (Side-effects Of Sugarcane Juice in Kannada):

ಕಬ್ಬಿನಹಾಲಿನ ಹಲವಾರು ಅರೋಗ್ಯ ಲಾಭಗಳೊಂದಿಗೆ, ಈ ದ್ರವವೂ ಕೆಲವು ಅಡ್ಡಪರಿಣಾಮಗಳನ್ನು ಹೊಂದಿದೆ. ಅವುಗಳಲ್ಲಿನ ಕೆಲವು ಇಲ್ಲಿವೆ:

‣ ಅತ್ಯಂತ ಹೆಚ್ಚಿನ ಸಕ್ಕರೆ ಮತ್ತು ಕ್ಯಾಲೊರಿ ಅಂಶ

‣ ಕೊಬ್ಬಿನ ಅಂಶವನ್ನು ಹೆಚ್ಚಿಸುತ್ತದೆ

‣ ಕಡಿಮೆ ಶೆಲ್ಫ್-ಲೈಫ್ - ಸುಲಭವಾಗಿ ಉತ್ಕರ್ಷಣಕ್ಕೊಳಗಾಗಿ, ೧೫-೨೦ ನಿಮಿಷದೊಳಗೆ ವಿಷವಾಗಿ ಪರಿವರ್ತನೆಯಾಗಬಹುದು. 

‣ ಕಬ್ಬಿನಹಾಲಿನಲ್ಲಿರುವ ಪೊಲಿಕೋಸಾನೋಲ್ ಸಂಯುಕ್ತ ತಲೆತಿರುಗುವಿಕೆ, ರಕ್ತವನ್ನು ತೆಳುವಾಗಿಸುವುದು, ಭೇದಿ, ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. 

[Back To Top]

೫. ನಾವು ಪಾಲಿಸಬೇಕಾದ ಮುನ್ನೆಚ್ಚರಿಕೆಗಳಿವೆಯೇ? (Are there any precautions to follow? in Kannada)

ಅನೇಕರು ಗರ್ಭಾವಸ್ಥೆಯಲ್ಲಿ ಕಬ್ಬಿನಹಾಲು ಸೇವಿಸುವುದು ಸೂಕ್ತವೇ ಎಂದು ಯೋಚಿಸುವುದು ಸಾಮಾನ್ಯ. 

ಅಗತ್ಯವಾಗಿ ಕಬ್ಬಿನಹಾಲನ್ನು ಗರ್ಭಾವಸ್ಥೆಯಲ್ಲಿ ಸೇವಿಸಬಹುದು. ಅದರಲ್ಲಿ ಒಳ್ಳೆಯ ಮಟ್ಟದ ಆಂಟಿಓಕ್ಸಿಡೆಂಟ್ಸ್ ಮತ್ತು ವಿಟಮಿನ್ ಗಳಿದ್ದು, ಅವುಗಳು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಕಬ್ಬಿನಹಾಲಿನಲ್ಲಿರುವ ವಿಟಮಿನ್ ಮತ್ತು ಪ್ರೋಟೀನ್ ಗಳು ನಿಮ್ಮ ಹೊಟ್ಟೆಯಲ್ಲಿ ನಿಮ್ಮ ಮಗು ಸೂಕ್ತ ರೀತಿಯಲ್ಲಿ ಬೆಳವಣಿಗೆಯಾಗಲು ಸಹಾಯ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ವಾಕರಿಕೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಪುಡಿ ಮಾಡಿದ ಶುಂಠಿಯೊಂದಿಗೆ ಕಬ್ಬಿನಹಾಲನ್ನು ಸೇವಿಸುವುದರಿಂದ ನಿಮ್ಮ ಸಮಸ್ಯೆಗೆ ಮುಕ್ತಿದೊರಕುತ್ತದೆ. 

ಕಬ್ಬಿನಹಾಲಿನಲ್ಲಿ ಅತಿಯಾದ ನೈಸರ್ಗಿಕ ಸಕ್ಕರೆ ಇರುವುದರಿಂದ, ನೀವು ಗರ್ಭಿಣಿಯಾಗಿರುವಾಗ ಕಬ್ಬಿನಹಾಲನ್ನು ಸೇವಿಸುವುದು ಮಿತಿಯಲ್ಲಿರುವುದು ಒಳಿತು. ಸುರಕ್ಷಿತವಾಗಿರಲು, ಎಷ್ಟು ಕಬ್ಬಿನಹಾಳನ್ನು ನೀವು ಸೇವಿಸಬಹುದು ಎಂದು ತಿಳಿದುಕೊಳ್ಳಲು ನಿಮ್ಮ ವೈದ್ಯರ ಬಳಿ ಚರ್ಚಿಸಿ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon