Link copied!
Sign in / Sign up
9
Shares

ನಿಮಗೆ ತಿಳಿದಿರದ ಗ್ರೀನ್ ಟೀಯ ೧೪ ಪ್ರಮುಖ ಅಡ್ಡಪರಿಣಾಮಗಳು (14 Important Side-effects Of Green Tea You Need To Know in Kannada)

ಅರೋಗ್ಯ-ಪ್ರಜ್ಞೆ ಇರುವ ಜಗತ್ತಿನಲ್ಲಿ, ಗ್ರೀನ್ ಟೀ ಸಹಜವಾಗಿಯೇ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿಸುತ್ತದೆ. ಗ್ರೀನ್ ಟೀ ಹಲವು ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳನ್ನು ಕೂಡಾ ಹೊಂದಿದೆ. ಅದು ನಿಮ್ಮ ದೇಹವನ್ನು ತೆಳು ಮಾಡುವುದರಿಂದ ಹಿಡಿದು, ಸುಖಕರ ನಿದ್ದೆಯವರೆಗೂ ಸಹಾಯ ಮಾಡುತ್ತದೆ.ಆದರೆ ಗ್ರೀನ್ ಟೀ ಹಲವು ಅಡ್ಡಪರಿಣಾಮಗಳನ್ನೂ ಬೀರಬಹುದು ಎನ್ನುವುದರ ಬಗ್ಗೆ ಎಂದಾದರೂ ಆಲೋಚಿಸಿದ್ದೀರಾ? ಅಂತಹ ಹಲವು ಗ್ರೀನ್ ಟೀ ಅಡ್ಡಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಪರಿವಿಡಿ:

೧. ಗ್ರೀನ್ ಟೀ ಎಂದರೇನು? (What Is Green Tea? in Kannada)

೨. ಗ್ರೀನ್ ಟೀ ಅರೋಗ್ಯ ಪ್ರಯೋಜನಗಳು (Health Benefits Of Green Tea in Kannada)

೩. ಗ್ರೀನ್ ಟೀ ೧೪ ಅಡ್ಡಪರಿಣಾಮಗಳು (14 Important Side-effects Of Green Tea in Kannada)

೪. ಗ್ರೀನ್ ಟೀಯನ್ನು ಹೇಗೆ ಸೇವಿಸಬೇಕು? (How To Consume Green Tea in Kannada)

೫. ನಿರ್ಣಯ (Conclusion in Kannada)

೧. ಗ್ರೀನ್ ಟೀ ಎಂದರೇನು? (What Is Green Tea? in Kannada):

ಯಾವುದೇ ಉತ್ಕರ್ಷಣಾ ಪ್ರಕ್ರಿಯೆಗೆ ಒಳಗಾಗದ ಚಹಾಗೆ ಗ್ರೀನ್ ಟೀ ಎಂದು ಕರೆಯುತ್ತಾರೆ. ಇದು ಆವಿಯಾಡಿಸಿ, ಒಣಗಿಸಿದ ಕೆಮೆಲ್ಲಿಯಾ ಎಲೆಗಳಿಂದ ಮಾಡಲಾಗಿರುತ್ತದೆ. ಗ್ರೀನ್ ಟೀ ಕೆಫೀನ್ ಸಹಜವಾಗಿಯೇ ಎಲ್ಲರನ್ನು ತನ್ನೆಡೆ ಸೆಳೆಯುತ್ತದೆ. ಗ್ರೀನ್ ಟೀ ಲಾಭಗಳು ಹಲವು. ಅದರಲ್ಲಿರುವ ಒಮೇಗಾ-೬ ನಿಮ್ಮ ಚರ್ಮವನ್ನು ಅರ್ಧ್ರೀಕರಿಸುತ್ತದೆ.

[Back To Top]

೨. ಗ್ರೀನ್ ಟೀ ಅರೋಗ್ಯ ಪ್ರಯೋಜನಗಳು (Health Benefits Of Green Tea in Kannada):

ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಅವಶ್ಯಕತೆಯಾಗಿರದಿದ್ದರೂ, ಅರೋಗ್ಯ ಮತ್ತು ಫಿಟ್ನೆಸ್ ಅನುಸರಿಸುವ ಜನರಲ್ಲಿ ಅಗತ್ಯವಾಗಿದೆ. ಗ್ರೀನ್ ಟೀ ಲಾಭಗಳಿಂದಾಗಿ ಅದು ಜನಪ್ರಿಯತೆಯನ್ನು ಪಡೆಯುತ್ತಿದೆ. ಅಂತಹ ಹಲವಾರು ಅರೋಗ್ಯ ಪ್ರಯೋಜನಗಳ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಮತ್ತು ಉತ್ತಮವಾಗಿ ವಿಂಗಡಿಸಲಾದ ಎಲೆಗಳಿಂದ ತಯಾರಿಸಲ್ಪಟ್ಟ ಈ ಚಹಾ, ಹಲವಾರು ಅನುಕೂಲಗಳಿಂದ ಪ್ರತಿದಿನ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತದೆ ಮತ್ತು ಅವರು ಇದನ್ನು ದಿನಕ್ಕೆ ಒಮ್ಮೆಯಾದರೂ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಮೊಟ್ಟಮೊದಲೆನೆಯದಾಗಿ ಈ ಚಹಾ ದೇಹವನ್ನು ಶುದ್ಧಿಕರೀಸುತ್ತದೆ. ಇದರಿಂದ ದೇಹದಲ್ಲಿರುವ ಎಲ್ಲಾ . ಎಲ್ಲಾ ವಿಷಕಾರಿ ತ್ಯಾಜ್ಯವನ್ನು ತೆಗೆದುಹಾಕಲು ಮತ್ತು ಸಂಪೂರ್ಣ ದೇಹದ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಇದು ಸಹಾಯ ಮಾಡುತ್ತದೆ.

ಗ್ರೀನ್ ಟೀ ಚಯಾಪಚಯ ಪ್ರಕ್ರಿಯೆಯಲ್ಲಿ ಸಹಾಯ ಮಾಡಿ, ಆರೋಗ್ಯದ ಸಮಸ್ಯೆಗೆಳನ್ನು ಕಡಿಮೆಗೊಳಿಸುತ್ತದೆ. ಅದಕ್ಕೆ ಕಾರಣ ಗ್ರೀನ್ ಟೀ ಅಲ್ಲಿರುವ ಜೈವಿಕವಾಗಿ ಸಕ್ರಿಯವಾಗಿರುವ ಘಟಕಗಳು. ಗ್ರೀನ್ ಟೀ ನೀವು ಚಾಣಾಕ್ಷರಾಗಲು ಸಹಾಯ ಮಾಡುತ್ತದೆ. ಈ ಟೀಯಲ್ಲಿರುವ ಕೆಫೀನ್ ನಿಮ್ಮ ಮೆದುಳಿನ ಜೀವಕೋಶಗಳನ್ನು ಪ್ರಚೋದಿಸಿ, ಕಾರ್ಯದ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ. ಇದು ನಿಮ್ಮ ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸಿ, ನಿಮ್ಮ ಮನಃಸ್ಥಿತಿ ಸುಧಾರಿಸುವಂತೆ ಮಾಡುತ್ತದೆ.

[Back To Top]

೩. ಗ್ರೀನ್ ಟೀ ೧೪ ಅಡ್ಡಪರಿಣಾಮಗಳು (14 Important Side-effects Of Green Tea in Kannada):

ಉತ್ತಮವಾಗಿ ಕಾಣಿಸುವುದೆಲ್ಲಾ ಪರಿಪೂರ್ಣವಲ್ಲ. ಪ್ರತಿ ಆಹಾರ ಮತ್ತು ದ್ರವ್ಯಕ್ಕೂ ತನ್ನದೇ ಆದ ದೋಷಗಳಿರುತ್ತವೆ. ಗ್ರೀನ್ ಟೀ ಹಲವಾರು ಅರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಅವುಗಳು ಕೆಲವು ಅಡ್ಡಪರಿಣಾಮಗಳನ್ನು ಸಹ ಹೊಂದಿದೆ. ಅವುಗಳಲ್ಲಿ ಕಳವು ಇಲ್ಲಿವೆ.

೧. ಗ್ರೀನ್ ಟೀ ಪ್ರತಿಯೊಬ್ಬರಿಗೂ ಹೊಂದುವಂತದ್ದಲ್ಲ. ಕೆಲವರಲ್ಲಿ ಈ ಚಹಾ ಮಲಬದ್ಧತೆ ಮತ್ತು ಹೊಟ್ಟೆಯ ಸೋಂಕನ್ನು ಉಂಟು ಮಾಡಬಹುದು. ಕೆಲವರಿಗೆ ಇದು ಯಕೃತ್ತು ಮತ್ತು ಮೂತ್ರಪಿಂಡ ಸಂಬಂಧಿತ ತೊಂದರೆಗಳನ್ನು ಉಂಟುಮಾಡಬಹುದು.

೨. ಉತ್ತಮ ಗುಣಮಟ್ಟದ ಗ್ರೀನ್ ಟೀ ಸೇವಿಸುವುದರಿಂದ, ಅರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿರುಅ ಕೆಫೀನ್ ಎಲ್ಲರನ್ನು ಆಕರ್ಷಿಸಿದರೂ, ಹಾನಿಕಾರಕವಾಗಿರಬಹುದು.

೩. ಗ್ರೀನ್ ಟೀಯನ್ನು ಅಧಿಕವಾಗಿ ಸೇವಿಸಿದರೆ, ಇದರಿಂದ ನಿಮ್ಮ ದೇಹದ ವಿಷಾದ ಮಟ್ಟ ಹೆಚ್ಚಬಹುದು.

೪. ಊಟ ಮಾಡುವಾಗ ಗ್ರೀನ್ ಟೀ ಸೇವಿಸದೇ ಇರುವುದು ಉತ್ತಮ. ಏಕೆಂದರೆ ನಿಮ್ಮ ಆಹಾರದಲ್ಲಿರುವ ಕಬ್ಬಿಣ ಅಂಶವನ್ನು ಹೇರಿಕೊಳ್ಳುವಲ್ಲಿ ಗ್ರೀನ್ ಟೀ ಅಡ್ಡಿಯುಂಟು ಮಾಡಬಹುದು.

೫. ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಗ್ರೀನ್ ಟೀ ಸೂಕ್ತವಲ್ಲ. ಏಕೆಂದರೆ ಅವರ ದೇಹ ಗ್ರೀನ್ ಟೀ ಉತ್ಪನ್ನದ ಘಟಕಾಂಶಗಳನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವುದಿಲ್ಲ.

೬. ಗ್ರೀನ್ ಟೀಯ ಇನ್ನೊಂದು ಅಡ್ಡಪರಿಣಾಮವೆಂದರೆ ಅದು ನಿಮ್ಮ ದೇಹದಿಂದ ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಅನೀಮಿಯಾ ಉಂಟುಮಾಡಬಹುದು. ಮತ್ತು ರಕ್ತಸ್ರಾವ ಸಂಬಂಧಿತ ಅರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

೭. ಗ್ರೀನ್ ಟೀ ಅಧಿಕವಾಗಿ ಸೇವಿಸಿದರೆ ನಿಮ್ಮ ದೇಹದ ಒತ್ತಡ ಹೆಚ್ಚಿಸಿ, ನಿಮ್ಮ ಹೃದಯದ ಬಡಿತವನ್ನು ಅನಿಯಮಿತಗೊಳಿಸಬಹುದು.

೮. ಗ್ರೀನ್ ಟೀಯ ಸಂಭವನೀಯ ಅಡ್ಡಪರಿಣಾಮವೆಂದರೆ ಅದು ಮಧುಮೇಹ, ಭೇದಿ ಉಂಟುಮಾಡಬಹುದು.

೯. ಗ್ಲ್ಯೂಕೋಮ ಅಥವಾ ಕಣ್ಣಿನಲ್ಲಿ ಒತ್ತಡ ಹೆಚ್ಚುವುದು, ಗ್ರೀನ್ ಟೀಯ ಅಧಿಕ ಸೇವನೆಯಿಂದ ಉಂಟಾಗಬಹುದು.

೧೦. ಗ್ರೀನ್ ಟೀಯಲ್ಲಿರುವ ಕೆಫೀನ್ ನೀವು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ರಕ್ತದೊತ್ತಡವನ್ನು ಇನ್ನೂ ಅಧಿಕಗೊಳಿಸಬಹುದು. ರಕ್ತದೊತ್ತಡದಿಂದ ಬಳಲದೆ ಇರುವವರಿಗೆ ಗ್ರೀನ್ ಟೀ ಇಂದ ಯಾವುದೇ ತೊಂದರೆ ಆಗುವುದಿಲ್ಲ.

೧೧. ಗ್ರೀನ್ ಟೀ ಪ್ರಾಯಶಃ ಯಕೃತ್ತಿನ ಖಾಯಿಲೆಗೂ ಕಾರಣವಾಗಬಹುದು. ಹಾನಿಗೊಳಗಾದ ಯಕೃತ್ತಿನ ಚಿಹ್ನೆಗಳು ಹಳದಿ ಚರ್ಮ, ಕಡುಬಣ್ಣದ ಮೂತ್ರ ಅಥವಾ ಹೊಟ್ಟೆ ನೋವು.

೧೨. ಗ್ರೀನ್ ಟೀ ಅಸ್ಥಿರಂಧ್ರತೆಯನ್ನು ಉಂಟುಮಾಡಬಹುದು. ಇದಕ್ಕೆ ಕಾರಣ ಗ್ರೀನ್ ಟೀ ಮೂತ್ರದಲ್ಲಿ ಹೋಗಬಹುದಾದಂತಹ ಕ್ಯಾಲ್ಸಿಯಂ ಅಂಶವನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದೇಹದಲ್ಲಿರುವ ಕ್ಯಾಲ್ಸಿಯಂ ಅಂಶ ಕಡಿಮೆಗೊಂಡು, ಅಸ್ಥಿರಂಧ್ರತೆಗೆ ಕಾರಣವಾಗುತ್ತದೆ.

೧೩. ಗರ್ಭಾವಸ್ಥೆಯಲ್ಲಿ ಪ್ರತಿದಿನ ೨ ಕಪ್ ಗ್ರೀನ್ ಟೀ ಕುಡಿಯುವುದು ಸುರಕ್ಷಿತ. ಅದಕ್ಕಿಂತ ಹೆಚ್ಚಾದಲ್ಲಿ ಅದು ನಿಮ್ಮ ಮಗುವಿನ ಆರೋಗ್ಯಕ್ಕೆ ತೊಂದರೆಯುಂಟು ಮಾಡಬಹುದು. ಅಥವಾ ಗರ್ಭಪಾತಕ್ಕೂ ಕಾರಣವಾಗಬಹುದು. ಮಗುವಿನ ಜನನದ ನಂತರವೂ ದೇಹದಲ್ಲಿ ಫೋಲಿಕ್ ಆಮ್ಲದ ಅಂಶ ಕಡಿಮೆಯಿರುವುದರಿಂದ ನಿಮ್ಮ ಮಗುವಿನ ಆರೋಗ್ಯಕ್ಕೆ ತೊಂದರೆಯುಂಟಾಗಬಹುದು.

೧೪. ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸುವ ಸಮಯದಲ್ಲಿ ಗ್ರೀನ್ ಟೀ ಸೇವಿಸುವುದು ಹಾನಿಕಾರಕ. ಏಕೆಂದರೆ ಗ್ರೀನ್ ಟೀ ಅಂಶ ನಿಮ್ಮ ಎದೆಹಾಲಿನಲ್ಲಿ ಬೆರೆತು ನಿಮ್ಮ ಮಗುವಿನ ಮೇಲೆ ಅಡ್ಡಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ. ಇದರಿಂದ ನಿಮ್ಮ ಮಗು ಸ್ಪೈನ ಬೈಫೀಡ ದಂತಹ ಸಮಸ್ಯೆಗಳಿಂದ ಬಳಲುವಂತೆ ಆಗಬಹುದು.

[Back To Top]

೪. ಗ್ರೀನ್ ಟೀಯನ್ನು ಹೇಗೆ ಸೇವಿಸಬೇಕು? (How To Consume Green Tea in Kannada)

ಒಂದಲ್ಲ ಹಲವು ವಿಧಾನದಿಂದ ಗ್ರೀನ್ ಟೀ ಸೇವಿಸಬಹುದು. ಆದರೆ ಯಾವುದೇ ದ್ರವ್ಯವನ್ನು ಸೇವಿಸುವ ಮುನ್ನ, ಅದರ ಬಗ್ಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುವುದು ಒಳಿತು. ಇಲ್ಲಿ ಗ್ರೇನ್ ಟೀ ಸೇವಿಸಲು ಅತ್ಯುತ್ತಮ ವಿಧಾನಗಳು ಮತ್ತು ಅದರಿಂದಾಗಬಹುದಾದ ಪರಿಣಾಮಗಳನ್ನು ಕೊಟ್ಟಿದ್ದೇವೆ -

೧. ಗ್ರೀನ್ ಟೀ ಕೆಫಿನ್ ಅಂಶದ ಬಗ್ಗೆ ತಿಳಿದುಕೊಳ್ಳಿ: ನೀವು ಎಷ್ಟು ಗ್ರೀನ್ ಟೀ ಸೇವಿಸಬೇಕು ಎಂದು ನಿಶ್ಚಯಿಸುವ ಮುನ್ನ, ಅದರಲ್ಲಿರುವ ಕೆಫೀನ್ ಅಂಶದ ಬಗ್ಗೆ ತಿಳಿದುಕೊಳ್ಳಿ. ಅದು ಅಧಿಕವಾಗಿದ್ದರೆ ನಿಮ್ಮ ಅರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು.

೨. ನಿಮ್ಮ ದೇಹದೊಳಗೆ ಆಗಬಹುದಾದ ವಿಷಯವನ್ನು ತಿಳಿದುಕೊಳ್ಳಿ: ಗ್ರೀನ್ ಟೀ ಸೇವಿಸುವ ಅಭ್ಯಾಸವನ್ನು ಶುರುಮಾಡುವ ಮುನ್ನ, ಅದರಲ್ಲಿರುವ ಘಟಕಾಂಶಗಳು ಮತ್ತು ಅದರ ಪ್ರಮಾಣವನ್ನು ತಿಳಿದುಕೊಳ್ಳಿ.

೩. ಮಿತಿಯ ಬಗ್ಗೆ ಗಮನವಿರಲಿ: ಗ್ರೀನ್ ಟೀ ಅಧಿಕವಾದಲ್ಲಿ ನಿಮ್ಮ ದೇಹ ತೊಂದರೆಗೀಡಾಗಬಹುದು. ಗ್ರೀನ್ ಟೀ ಮಿತವಾಗಿ ನಿಮ್ಮ ದೇಹಕ್ಕೆ ಸಹಿಸಿಕೊಳ್ಳುವಷ್ಟೇ ಸೇವಿಸಿದರೆ, ನಿಮಗೆ ಒಳಿತಾಗುತ್ತದೆ.

೪. ಗರ್ಭಾವಸ್ಥೆಯಲ್ಲಿ ೨ ಕಪ್ ಗಿಂತ ಹೆಚ್ಚು ಅನಾರೋಗ್ಯಕರ: ಗರ್ಭಾವಸ್ಥೆಯಲ್ಲಿ ೨ ಕಪ್ ಕ್ಕಿಂತ ಅಧಿಕ ಗ್ರೀನ್ ಟೀ ನಿಮಗೆ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟುಮಾಡಬಹುದು.

೫. ಹೊಟ್ಟೆ ತೊಂದರೆ ಇದ್ದರೆ, ಗ್ರೀನ್ ಟೀ ಬೇಡ: ಹೊಟ್ಟೆ ನೋವು ಅಥವಾ ಹೊಟ್ಟೆಯಲ್ಲಿ ಸೋಂಕಿದ್ದರೆ, ಗ್ರೀನ್ ಟೀ ಸೇವಿಸದೇ ಇರುವುದು ಸೂಕ್ತ.

[Back To Top]

೫. ನಿರ್ಣಯ (Conclusion in Kannada):

ನಿಮ್ಮ ದೇಹಕ್ಕೆ ಒಳಿತಾಗಿರುವುದನ್ನು ಸೇವಿಸಿ, ಆದರೆ ಮಿತವಾಗಿ ಸೇವಿಸಿ. ಅದು ಅಧಿಕವಾದಲ್ಲಿ, ನೀವು ನಿರಂತರವಾಗಿ ನೋವಿನಿಂದ ಬಳಲುವಂತೆ ಆಗಬಹುದು. ಗ್ರೀನ್ ಟೀ ಮಾರುಕಟ್ಟೆಯಿಂದ ಖರೀದಿಸುವ ಮೊದಲು, ಅದು ಶ್ರೇಷ್ಠ ದರ್ಜೆಯ ಚಹಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಳಪೆ ಉತ್ಪನ್ನಗಳು ಅಧಿಕ ಫ್ಲೋರೈಡ್ ಅಂಶವನ್ನು ಹೊಂದಿದ್ದು, ನಿಮ್ಮ ದೇಹದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon