Link copied!
Sign in / Sign up
3
Shares

ನಿಮ್ಮ ಮಗುವು ಸರಿಯಾಗಿ ನಿದ್ರಿಸುತ್ತಿದೆ ಎಂಬುವುದನ್ನು ಖಚಿತ ಪಡಿಸಿಕೊಳ್ಳಲು 5 ರೀತಿಗಳು

ಒಬ್ಬ ವ್ಯಕ್ತಿಯ ದಿನದ ಅತ್ಯಂತ ಪ್ರಮುಖ ಭಾಗಗಳಲ್ಲಿ ನಿದ್ರೆಯು ಒಂದಾಗಿದೆ.ನಮ್ಮ ಮೆದುಳಿಗೆ ವಿಶ್ರಮಿಸಲು ಮತ್ತು ಮುಂದಿನ ದಿನಕ್ಕೆ ತಯಾರಿ ನಡೆಸಲು ಕೆಲ ಸಮಯದ ಅವಶ್ಯಕತೆಯಿದೆ .ಮತ್ತು ಅಲ್ಲಿಂದ ನಿದ್ರೆಯು ಶುರುವಾಗುತ್ತದೆ . ಅದು ನಮ್ಮ ಮೆದುಳಿಗೆ ಮಾತ್ರವಲ್ಲ ಜೊತೆಗೆ ನಮ್ಮ ಸಂಪೂರ್ಣ ದೇಹ ಮತ್ತು ಇತರ ಅಂಗಗಳಿಗೂ ಸಹ ವಿಶ್ರಾಂತಿಯನ್ನು ನೀಡುತ್ತದೆ. ಒಂದು ಮಗು ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ಆದರೆ, ಶಿಶುಗಳು ಯಾವಾಗಲೂ ರಾತ್ರಿಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಆದ್ದರಿಂದ ಅವರು ಕೆಲವೊಮ್ಮೆ ಇಡೀ ದಿನ ನಿದ್ರೆ ಮಾಡುತ್ತಾರೆ ಮತ್ತು ಇಡೀ ರಾತ್ರಿ ಅಳುವುದರಲ್ಲಿ  ಕೊನೆಗೊಳ್ಳುತ್ತದೆ. ಆದರೆ,ಅವರಿಗೆ ಸರಿಯಾದ ವಿಶ್ರಾಂತಿ ಪಡೆಯಲು ಸಹಾಯ ಮಾಡಲು ನೀವು ಬಳಸಬಹುದಾದ ಕೆಲವು ಮಾರ್ಗಗಳಿವೆ.

೧.ಜೊತೆಗೆ ಮಲಗುವುದು

ಅಧ್ಯಯನಗಳು ತಮ್ಮ ಹೆತ್ತವರ ಜೊತೆಗೆ ಮಲಗುವ ಮಕ್ಕಳು ಹೆಚ್ಚಿನ ಸ್ವಾಭಿಮಾನ ಮತ್ತು ಕಡಿಮೆ ಆತಂಕದೊಂದಿಗೆ ಬೆಳೆಯುತ್ತಾರೆ ಎಂದು ತೋರಿಸುತ್ತದೆ. ಸಹ-ನಿದ್ರಾವಸ್ಥೆಯಿಂದ  ಮಗುವಿಗೆ ಸುಲಭವಾಗಿ ಸಮಾಧಾನವಾಗುತ್ತದೆ ಮತ್ತು ತಾಯಿ ಸುರಕ್ಷಿತ ಮತ್ತು ಬೆಚ್ಚಗಿನ ಮಲಗುವ ಜಾಗವನ್ನು ಒದಗಿಸುವುದರಿಂದ  ಕಡಿಮೆ ಹೆದರುತ್ತಾರೆ.ಜೊತೆಗೆ ಮಲಗುವುದು ತನ್ನ ಮಗುವಿನ ಮೇಲೆ ನಿಕಟ ಕಣ್ಣಿಡಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಅವನು / ಅವಳಿಗೆ  ಏನಾದರೂ ಅಗತ್ಯವಿದ್ದರೆ  ಸಹಾಯ ಮಾಡಲು ಸುಲಭವಾಗುತ್ತದೆ .

೨.ನಿದ್ರೆಯ ಮೊದಲು ಬೆಚ್ಚಗಿನ ನೀರಿನ ಸ್ನಾನ

ಮಗುವಿಗೆ ಉಗುರು  ಬೆಚ್ಚಗಿನ ನೀರಿನ ಸ್ನಾನವನ್ನು ನೀಡುವ ಮೂಲಕ ಅವರನ್ನು ವಿಶ್ರಾಂತಿಗೊಳಪಡಿಸಬಹುದು  ಎಂದು ಸಂಶೋಧನೆ ಕಂಡುಹಿಡಿದಿದೆ.ಈ ವಿಶ್ರಾಂತಿ, ಸರಿಯಾದ ಸಮಯದಲ್ಲಿ ನಿದ್ರೆ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.ನಿಮ್ಮ ಪುಟ್ಟ ಮಗುವಿಗೆ ಸರಿಯಾದ ನಿದ್ರೆಯನ್ನು ನೀಡುವ ಮೂಲಕ ನೀವು ತುಂಬಾ ನೀವು ಬಯಸುತ್ತಿರುವ ನಿಮಗೆ ಹೆಚ್ಚು ಅಗತ್ಯವಿರುವ ನಿದ್ರೆಯ ಸಮಯವನ್ನು ನೀವೇ ನೀಡಲು ಸಾಧ್ಯವಾಗುತ್ತದೆ.

೩.ಅವರಿಗೆ  ಆರಾಮದಾಯಕವಾದ ಬಟ್ಟೆಗಳನ್ನು ತೊಡಿಸಿ

ಮಲಗುವ ಮೊದಲು ರಾತ್ರಿಯಲ್ಲಿ ಆರಾಮದಾಯಕವಾದ ಬಟ್ಟೆಗಳನ್ನು ನೀವು  ಇಷ್ಟಪಡುವಂತೆಯೇ, ನಿಮ್ಮ ಚಿಕ್ಕವರಿಗೆ ಉಡುಪುಗಳ ಬದಲಾವಣೆ ಬೇಕು.ಕ್ರಮೇಣ, ನೀವು ನಿರ್ದಿಷ್ಟ ಸಮಯದಲ್ಲಿ ವಿವಿಧ ಉಡುಪುಗಳ ಹಾಕುವಿಕೆಯನ್ನು ಪ್ರಾರಂಭಿಸಿದಾಗ, ಅವರು ಅದನ್ನು ನಿದ್ರೆಯ ಸಮಯವೆಂದು ಗುರುತಿಸುತ್ತಾರೆ ಮತ್ತು ನಿಮ್ಮದೇ ಸಮಯದೊಂದಿಗೆ  ತಮ್ಮದೇ ಆದ ವೇಳಾಪಟ್ಟಿಯನ್ನು ತಯಾರಿಸಲು ಪ್ರಾರಂಭಿಸುತ್ತಾರೆ.ಅಲ್ಲದೆ, ನಿದ್ರೆ ಮಾಡಲು ಆರಾಮದಾಯಕ ಬಟ್ಟೆಗಳು ಅವರಿಗೆ  ಸರಿಯಾದ ನಿದ್ರೆ ನೀಡುತ್ತವೆ.

೪.ದೀಪಗಳನ್ನು ಆರಿಸಿ

ಮಕ್ಕಳು ದೀಪಗಳು ಉರಿಯುವುದನ್ನು ಹಗಲಿನೊಂದಿಗೆ ಸಂಯೋಜಿಸಿಕೊಳ್ಳಲು ಒಲವು ತೋರುತ್ತಾರೆ .ಹಾಗಾಗಿ ನೀವು ದೀಪಗಳನ್ನು ಅವರ ಕೊಠಡಿಯಲ್ಲಿ ಉರಿಸಿದ್ದಾಗ ಅಥವಾ ನೀವು ಅವರನ್ನು ಯಾವುದೇ ಸಮಯದಲ್ಲಿ ನಿದ್ರೆ ಮಾಡಲು ಬಯಸಿದರೆ ಅದು ಹೆಚ್ಚು ಕಷ್ಟವಾಗುತ್ತದೆ.ಹೀಗಾಗಿ, ಅವರು ಯಾವುದೇ ಅಡಚಣೆಯಿಲ್ಲದೆ ಸರಿಯಾದ ನಿದ್ರೆ ಹೊಂದಬೇಕೆಂದು ನೀವು ಬಯಸಿದರೆ ತಮ್ಮ ಕೋಣೆಯಲ್ಲಿ ದೀಪಗಳನ್ನು ಆರಿಸಬೇಕೆಂದು  ಸೂಚಿಸಲಾಗುತ್ತದೆ.

೫.ಮಗುವನ್ನು ತೂಗುವುದು

ಮಗುವನ್ನು ಅವರ ಚಾದರಗಳಲ್ಲಿ ತೂಗಾಡಿಸುವುದರ ಮೂಲಕ ನಿಮ್ಮ ತೋಳುಗಳಲ್ಲಿ ಅವರನ್ನು ಹಿಡಿದಿಟ್ಟುಕೊಂಡಿದ್ದೀರಿ ಎಂಬ ಭ್ರಮೆಯನ್ನು ನೀವು ಸೃಷ್ಟಿಸುತ್ತೀರಿ .ಅಲ್ಲದೆ, ಮಗುವನ್ನು  ಎಲ್ಲಾ ಬದಿಗಳಿಂದ ಮುಚ್ಚಿ ಮತ್ತು ಬಿಗಿಯಾಗಿ ಹಿಡಿದಾಗ ಅವರಿಗೆ ತಮ್ಮ ತಾಯಿಯ ಗರ್ಭ ರಕ್ಷಣೆಯಲ್ಲಿ ಇದ್ದೇವೆ ಎಂಬ ಭಾವನೆಯನ್ನು ನೀಡುತ್ತದೆ ಮತ್ತು ಆದ್ದರಿಂದ ಆರಾಮದಾಯಕವನ್ನು ಅನುಭವಿಸಬಹುದು .ಅವರು ಅದನ್ನು ಅರಿತುಕೊಳ್ಳದೆ ರಾತ್ರಿಯಿಡೀ ಉತ್ತಮ ನಿದ್ರೆ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon