Link copied!
Sign in / Sign up
51
Shares

ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಇವುಗಳನ್ನು ನೀಡಿ!

ಆಧುನಿಕ ಜೀವನ ಶೈಲಿ, ಒತ್ತಡ, ಅಥವಾ ಮುಂತಾದ ಕಾರಣಗಳಿಂದ ಮೆದುಳಿಗೆ ಆಯಾಸ ಆಗಬಹುದು, ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಮೆದುಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಸರಿಯಾಗಿ ನಿದ್ರೆ ಮಾಡುವುದಿಲ್ಲ, ಹೆಚ್ಚು ಮೊಬೈಲ್ ಅನ್ನು ಬಳಸುವರು ಇದರಿಂದ ಮೆದುಳಿಗೆ ಮತಷ್ಟು ಆಯಾಸ ಆಗಬಹುದು.

ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಈ ಕೆಳಗಿನ ಆಹಾರಗಳನ್ನು ನೀಡಿ.

೧.ಒಣಹಣ್ಣುಗಳು

ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ, ಖರ್ಜೂರ, ವಾಲ್ನಟ್ ನಂತಹ ಒಣ ಹಣ್ಣುಗಳನ್ನು ಸೇವಿಸುವುದರಿಂದ ಮಗುವಿನ ಸ್ಮರಣೆ ಶಕ್ತಿಯನ್ನು ಹೆಚ್ಚಿಸಬಹುದು. ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮಗುವಿನ ಮೆದುಳು ಚುರುಕಾಗಿರುವಂತೆ ಮಾಡಲು ಸಹಾಯ ಮಾಡುತ್ತದೆ.


೨.ಪುದೀನ

ಪುದೀನ ಸುವಾಸನೆ ಮೆದುಳಿನ ಗ್ರಹಿಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಮೆದುಳು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಇದರ ಚಹಾವನ್ನು ಕುಡಿಯುವುದರಿಂದ ಹಲವು ಲಾಭಗಳನ್ನು ನೀವು ನಿಮ್ಮ ಮಗುವಿಗೆ ನೀಡಬಹುದು.

ಚಹಾ ತಯಾರಿಸುವ ವಿಧಾನ

ಕುದಿಯುತ್ತಿರುವ ನೀರಿಗೆ ಸ್ವಲ್ಪ ಒಣ ಪುದೀನ ಎಲೆಗಳನ್ನು ಸೇರಿಸಿ ಸುಮಾರು 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ಇದಕ್ಕೆ ಸ್ವಲ್ಪ ನಿಂಬೆರಸ ಮತ್ತು ಸಕ್ಕರೆಯನ್ನು ಸೇರಿಸಿ ಕುಡಿಯಿಸಿ.


೩.ಕೊಬ್ಬರಿ ಎಣ್ಣೆ

ನಿಮ್ಮ ಆಹಾರದಲ್ಲಿ ಇತರೆ ರಾಸಾಯನಿಕಯುಕ್ತ ಎಣ್ಣೆಯನ್ನು ಬಳಸುವ ಬದಲು ನೈಸರ್ಗಿಕ ಕೋಬ್ಬರಿ ಎಣ್ಣೆಯನ್ನು ಬಳಸುವುದರಿಂದ ಹಲವು ಲಾಭಗಳನ್ನು ಪಡೆಯಬಹುದು. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಇದ್ದು ಇದು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ.


೪.ಬಸಳೆ ಸೊಪ್ಪು ಮತ್ತು ಪಾಲಕ್ ಸೊಪ್ಪುಗಳು

ಇವೆರಡರಲ್ಲೂ ಏಕಾಗ್ರತೆಯನ್ನು ಹೆಚ್ಚಿಸುವ ಪೋಷಕಾಂಶಗಳು ಇದ್ದು, ಮೆದುಳಿನ ಕಾರ್ಯವನ್ನು ಹೆಚ್ಚಿಸುವ ಹಲವು ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿವೆ.


೫.ಕುಂಬಳಕಾಯಿ ಬೀಜ

ಇವುಗಳಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಮೆದುಳಿನ ನರಗಳು ಚಟುವಟಿಕೆಯಿಂದ ಸರಿಯಾಗಿ ಕೆಲಸ ಮಾಡುವಂತೆ ಮಾಡಲು ಸಹಾಯ ಮಾಡುತ್ತದೆ. ಇದು ಆತಂಕ ಕಡಿಮೆ ಮಾಡಲು ನೆರವಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon