Link copied!
Sign in / Sign up
4
Shares

ಬಹಳ ದಿನಗಳ ನಂತರ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುತ್ತಿದ್ದರೆ, ಈ 5 ವಿಷಯಗಳನ್ನ ನೆನಪಲ್ಲಿಡಿ

ಇದನ್ನು ಯಾರೂ ಕೂಡ ಬಾಯಿ ಬಿಟ್ಟು ಹೇಳದಿದ್ದರೂ, ಪ್ರತಿಯೊಬ್ಬರೂ ಒಂದಲ್ಲ ಒಂದು ಘಟ್ಟದಲ್ಲಿ ಸೆಕ್ಸ್ ಇಲ್ಲದ ಬರಡು ಅವಧಿಯನ್ನು ಅನುಭವಿಸಿರುತ್ತಾರೆ. ಅದಕ್ಕೆ ಕಾರಣ ನಿಮ್ಮ ಸಂಗಾತಿಯು ಕೆಲಸದ ಮೇಲೆ ಬೇರೆ ಊರಿನಲ್ಲಿ ಇರುವುದು ಆಗಿರಬಹುದು ಅಥವಾ ನಿಮ್ಮ ಸಂಗಾತಿಯೊಂದಿಗಿನ ಮನಸ್ತಾಪಗಳು ಇರಬಹುದು ಅಥವಾ ಇನ್ನೇನಾದರೂ ಇರಬಹುದು. ಆದರೆ ಒಂದು ಖುಷಿಯ ವಿಷಯ ಏನೆಂದರೆ ನಿಮ್ಮ ಲೈಂಗಿಕ ಜೀವನವನ್ನು ಪುನರಾರಂಭಿಸಲಿಕ್ಕೆ ಹಲವಾರು ದಾರಿಗಳಿವೆ. ನಾವು ತಜ್ಞರ ಬಳಿ ಈ ಬಗ್ಗೆ ಚರ್ಚಿಸಿ, ಪುನಃ ಸೆಕ್ಸ್ ಅಲ್ಲಿ ಖುಷಿಯಿಂದ ತೊಡಗಿಸಿಕೊಳ್ಳಲು ಸೂಕ್ತವಾದ ವಿಧಾನಗಳು ಏನು ಎಂಬ ಮಾಹಿತಿ ಕಲೆ ಹಾಕಿದ್ದೇವೆ ಓದಿ.

೧. ಒಂದೇ ಸಲ “ಮುಖ್ಯ ಕಾರ್ಯಕ್ಕೆ” ನುಗ್ಗಬೇಡಿ

ಫೋರ್-ಪ್ಲೇ (ಮುಂಕೇಳಿ) ಅಥವಾ ಮೌಖಿಕ ಲೈಂಗಿಕತೆ ತುಂಬಾನೇ ಮುಖ್ಯ ಎನ್ನುತ್ತಾರೆ ತಜ್ಞರು. ಈ ಮುಂಕೇಳಿ ಇಂದ ಹೆಣ್ಣಿನ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಆಗುತ್ತದೆ ಮತ್ತು ಈ ಹಾರ್ಮೋನ್ ಆಕೆಯಲ್ಲಿ ನಂಬಿಕೆಯ ಮತ್ತು ಬಾಂಧವ್ಯದ ಭಾವನೆ ಮೂಡಿಸುತ್ತದೆ. ಮುಂಕೇಳಿ ನೀವು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಲು ನಿಮ್ಮನ್ನು ಒಳ್ಳೆಯ ಮೂಡಿಗೆ ತರಿಸುತ್ತದೆ ಮತ್ತು ಮುಖ್ಯವಾಗಿ, ಬಹಳ ದಿನಗಳಿಂದ ಕಳೆದು ಹೋಗಿದ್ದ ಆ ಭಾವನಾತ್ಮಕ ಬೆಸುಗೆಯನ್ನು ಮಾರುತರುತ್ತದೆ.


೨. ವಿಶ್ರಾಂತಿ ಪಡೆಯಿರಿ ಆರಾಮಾಗಿ

ಹೌದು ನೀವು ಬಹಳ ದಿನಗಳ ನಂತರ ಮತ್ತೆ ನಿಮ್ಮ ಸಂಗಾತಿಯೊಂದಿಗೆ ಸೇರುತ್ತಿದ್ದಿರಾ ಎಂದರೆ, ಸ್ವಲ್ಪ ಆತಂಕ ಉಂಟಾಗಬಹುದು. ಸೆಕ್ಸ್ ಅನ್ನುವುದು ಎಲ್ಲಾ ಅಚ್ಚುಕಟ್ಟಾಗಿ ಇರಬೇಕಿಲ್ಲ ಮತ್ತು ಕೆಲವೊಮ್ಮೆ ಅದು ಗೊಂದಲಮಯವಾಗಿ ಇದ್ದರೂ ತೊಂದರೆ ಇಲ್ಲ. ವಾಸ್ತವದಲ್ಲಿ, ನೀವು ಆತಂಕ ಪಟ್ಟುಕೊಂಡಷ್ಟು ನಿಮ್ಮ ಲೈಂಗಿಕ ಆಸಕ್ತಿ ಕ್ಷೀಣಿಸುತ್ತದೆ. ಹೀಗಾಗಿ ನೀವು ಆ ಕ್ಷಣದಲ್ಲಿ ಮಗ್ನರಾಗಿ ಕೇವಲ ಸುಖ ನೀಡುವುದರ ಮತ್ತು ಪಡೆಯುವುದರ ಮೇಲೆ ಗಮನ ಹರಿಸಬೇಕು. ಎಷ್ಟು ಚೆನ್ನಾಗಿ ನಾನು ಪ್ರದರ್ಶನ ನೀಡುತ್ತಿದ್ದೇನೆ ಎನ್ನುವುದರ ಯೋಚನೆ ಬಿಡಿ, ಆಗ ಎಲ್ಲವೂ ತಾವಾಗಿಯೇ ಚೆನ್ನಾಗಿ ಆಗುತ್ತವೆ.


೩. ಚೆನ್ನಾಗಿ ಸಿದ್ದರಾಗಿ

ನೀವು “ಮೇಕ್ ಓವರ್” ಬಗ್ಗೆ ಕೇಳಿರುತ್ತೀರಾ ಅಲ್ಲವಾ? ಇದು ಒಂದು ರೀತಿಯಲ್ಲಿ ಹಾಗೆಯೆ. ನೀವು ಶೇವ್ ಮಾಡಲು ಇಷ್ಟಪಡುವಿರೋ, ವ್ಯಾಕ್ಸ್ ಮಾಡಲು ಇಷ್ಟಪಡುತ್ತಿರೋ ಅದನ್ನ ಮಾಡಿಕೊಳ್ಳಿ. ಸ್ನಾನ ಮಾಡಿ ಫ್ರೆಶ್ ಆಗಿ. ನಿಮ್ಮ ಒಳಉಡುಪುಗಳು ಕೂಡ ಮೂಡಿಗೆ ತಕ್ಕಂತೆ ಇರಲಿ. ಇದರ ಹಿಂದೆ ಇರುವ ಉದ್ದೇಶ ಏನು ಎಂದರೆ, ನೀವು ಹೆಚ್ಚು ಆತ್ಮವಿಶ್ವಾಸ ಹೊಂದಬೇಕೆಂದು ಅಷ್ಟೇ. ಬಾಹ್ಯದಿಂದ ಸೆಕ್ಸಿ ಆಗಿ ಕಂಡರೆ, ಮನಸ್ಸಿನಲ್ಲೂ ಸೆಕ್ಸಿ ಅನಿಸುತ್ತದೆ. ಇದರೊಂದಿಗೆ ಬೇಕಿದ್ದರೆ, ಮಂದ ಬೆಳಕು ಇರುವಂತೆ ಕ್ಯಾಂಡಲ್ ಹಚ್ಚಿಡಿ ಮತ್ತು ಒಗೆದ, ತಾಜಾ ಹೊದಿಕೆಗಳನ್ನು ಹಾಸಿರಿ.


೪. ಹಸ್ತಮೈಥುನ ಮಾಡಿಕೊಳ್ಳಿ

ನಿಮ್ಮ ದೇಹದ ಬಗ್ಗೆ ತಿಳಿದುಕೊಳ್ಳಲು ಅತ್ಯುತ್ತಮ ದಾರಿ ಎಂದರೆ ಅದು ಹಸ್ತಮೈಥುನದಲ್ಲಿ ತೊಡಗುವುದು. ಬಹಳಷ್ಟು ಹೆಂಗಸರಿಗೆ ಅವರ ದೇಹದ ಬಗ್ಗೆಯೇ ತಿಳಿದಿರುವುದಿಲ್ಲ. ನಿಜ ಹೇಳಬೇಕೆಂದರೆ ಬಹಳಷ್ಟು ಹೆಂಗಸರು ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸಮ್) ಅನ್ನೇ ಹೊಂದಿರುವುದಿಲ್ಲ. ಹೀಗಾಗಿ ನೀವು ಹಸ್ತಮೈಥುನ ಮಾಡಿಕೊಂಡು ನಿಮ್ಮ ದೇಹಕ್ಕೆ ಯಾವುದು ಹೆಚ್ಚು ಸುಖ ನೀಡುತ್ತದೆ, ಏನು ಮಾಡಿದರೆ ಹೆಚ್ಚು ಸುಖ ಸಿಗುತ್ತದೆ ಎಂದು ಸುಲಭವಾಗಿ ತಿಳಿಯಬಹುದು. ಒಮ್ಮೆ ಇದನ್ನು ನೀವು ಅರಿತರೆ, ಅದನ್ನು ನಿಮ್ಮ ಸಂಗಾತಿಗೆ ತಿಳಿಸಿ, ಅವರು ನಿಮಗೆ ಲೈಂಗಿಕ ತೃಪ್ತಿ ನೀಡುವಂತೆ ಮಾಡಬಹುದು. ಹೀಗೆ ಮಾಡಿದಾಗ ಎಲ್ಲವೂ ಚೆಂದ ಎನಿಸುವುದು.


೫. ಮುಂದಾಳತ್ವ ವಹಿಸಿ

ಬರಡು ಅವಧಿಯು ನಮ್ಮಲ್ಲಿ ಇನ್ನಷ್ಟು ಬಯಕೆ ಉಂಟು ಮಾಡುತ್ತದೆ. ಹಾಗಿದ್ದರೆ, ಪತಿಗೆ ಕೇಳಲು ಹಿಂಜರಿಕೆ ಏಕೆ? ತಜ್ಞರ ಪ್ರಕಾರ ಹೆಂಗಸರೇ ಲೈಂಗಿಕ ಕ್ರಿಯೆಯ ಮೊದಲ ಹೆಜ್ಜೆ ಇಟ್ಟರೆ ಗಂಡಸರು ಖುಷಿಯಾಗುತ್ತಾರೆ. ಯಾವಾಗಲು ಗಂಡಸರೇ ಕೇಳಬೇಕು ಮತ್ತು ಹೆಂಗಸರನ್ನ ಓಲೈಸಬೇಕು ಎಂಬುದೇ ಎಲ್ಲರ ಗ್ರಹಿಕೆ ಆಗಿದೆ. ಒಂದು ವೇಳೆ ನೀವೇ ಮೊದಲು ಕೇಳಿ, ಅವರನ್ನು ತೃಪ್ತಿಪಡಿಸುವುದಕ್ಕೆ ನೀವು ಹೆಚ್ಚು ಒತ್ತು ಕೊಟ್ಟರೆ, ನೀವು ಅವರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಾ ಎಂಬುದು ಅವರಿಗೆ ಮನವರಿಕೆ ಆಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon