Link copied!
Sign in / Sign up
1
Shares

ನಿಮ್ಮ ಮನೆಯ ನೆಲಕ್ಕೆ ಬಳಸುವ ಫ್ಲೋರ್ ಕ್ಲೀನರ್ ಇಂದ ನಿಮ್ಮ ಮಕ್ಕಳ ಮೇಲಾಗುವ ಪರಿಣಾಮಗಳು

ಈ ಯುಗದಲ್ಲಿ ಮಾರಾಟಗಾರರು ನಮಗೆ ನಾವು ಎಲ್ಲದರಲ್ಲೂ ಅತ್ಯಂತ ಶ್ರೇಷ್ಠವಾಗಿ ಕಾರ್ಯನಿರ್ವಹಿಸುವ ಉತ್ಪನ್ನಗಳನ್ನೇ ಖರೀದಿಸುವಂತೆ ತರಬೇತಿ ನೀಡಿದ್ದಾರೆ. ನಾವು ಬಳಸುವ ಒಂದು ಸಾಮಾನ್ಯ ಫ್ಲೋರ್ ಕ್ಲೀನರ್ ಕೂಡ ಈ ವಿಷಯಕ್ಕೆಹೊರತಾಗಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಎಲ್ಲಾ ಫ್ಲೋರ್ ಕ್ಲೀನರ್ಗಳು ತಾವು ಬಹಳ ಸುರಕ್ಷಿತವೆಂದು ಮತ್ತು ಅತ್ಯುತ್ತಮ ಸಾಮರ್ಥ್ಯವುಳ್ಳ ಕ್ಲೀನರ್ಗಳು ಎಂದು ಹೇಳಿಕೊಳ್ಳುತ್ತವೆ. ಆದರೆ ನಿಜಕ್ಕೂ ಈ ರಾಸಾಯನಿಕಗಳಿಂದ ತಯಾರಾದ ಕ್ಲೀನರ್ಗಳು ಎಷ್ಟು ಸುರಕ್ಷಿತ? ಕೇವಲ ನಾವು ಟಿವಿ ಅಲ್ಲಿ ಬರುವ ಜಾಹಿರಾತುಗಳನ್ನ ನೋಡಿ ಮಾರು ಹೋಗುತ್ತಿದ್ದೀವಾ?

ಸತ್ಯಂಶ ಏನು ಎಂದರೆ ನಾವು ಸುರಕ್ಷಿತವೆಂದುಕೊಂಡು ಮನೆಯಲ್ಲಿ ಬಳಸುವ ಎಷ್ಟೊಂದು ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಮತ್ತು ಇತರೆ ಪದಾರ್ಥಗಳು ಇರುತ್ತವೆ. ತೊಂದರೆ ಏನು ಎಂದರೆ, ಬಹುತೇಕ ಜನರಿಗೆ ಇದರಿಂದ ಆಗುವ ತೊಂದರೆಗಳ ಬಗ್ಗೆ ತಿಳಿದಿಲ್ಲ. ಮುಖ್ಯವಾಗಿ ನಾವು ಮನೆಯ ನೆಲವನ್ನ ಒರೆಸಲು ಬಳಸುವ ಫ್ಲೋರ್ ಕ್ಲೀನರ್.


ಅಪಾಯ ಯಾರಿಗೆ?


ನೀವು ಬಹಳಷ್ಟು ಕ್ಲೀನಿಂಗ್ ಉತ್ಪನ್ನಗಳ ಮೇಲೆ ನೋಡುವ ಒಂದು ಸಾಮಾನ್ಯ ಲೇಬಲ್ ಎಂದರೆ ಅದು “ಮಕ್ಕಳಿಂದ ದೂರವಿಡಿ” ಎಂಬುವುದು. ನಾವು ಮಕ್ಕಳು ಇವುಗಳನ್ನ ಬಾಯಿಂದ ಸೇವಿಸಿದರೆ ಮಾತ್ರ ಅಪಾಯ ಎಂದು ತಪ್ಪು ತಿಳಿದುಕೊಂಡು ಬಿಡುತ್ತೇವೆ. ಆದರೆ ಬಹುತೇಕವಾಗಿ ಈ ಉತ್ಪನ್ನಗಳು ಅವರ ದೇಹ ಸೇರುವುದು ಚರ್ಮ ಮತ್ತು ಉಸಿರಾಟದ ನಾಳದ ಮೂಲಕ. ಮಕ್ಕಳು, ಅದರಲ್ಲೂ ನಡೆಯಲು ಕಲಿತಿರುವ ಮಕ್ಕಳಂತೂ ತಮ್ಮ ಕೈಗಳನ್ನ ಯಾವಾಗಲೂ ಬಾಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಇವರು ರಾಸಾಯನಿಕ ಪದಾರ್ಥಗಳಿಗೆ ತೆರೆದುಕೊಳ್ಳುವ ಸಾಧ್ಯತೆಗಳನ್ನ ಹೆಚ್ಚಿಸುತ್ತದೆ.

ಮಕ್ಕಳ ದೇಹವು ಚಿಕ್ಕದಾಗಿರುವ ಕಾರಣ, ಸ್ವಲ್ಪ ಪ್ರಮಾಣದ ರಾಸಾಯನಿಕ ಕೂಡ ಅವರ ದೇಹದಲ್ಲಿ ಬಹಳ ಕಾನ್ಸಂಟ್ರೇಶನ್ ಉಳ್ಳದ್ದಾಗುತ್ತದೆ. ಅಲ್ಲದೆ ಮಕ್ಕಳ ಇಮ್ಮ್ಯೂನಿಟಿ (ಪ್ರತಿರಕ್ಷಣಾ ವ್ಯವಸ್ಥೆ) ಆಗಷ್ಟೇ ಇನ್ನು ಬೆಳವಣಿಗೆ ಹೊಂದುತ್ತಿರುವ ಕಾರಣ, ಇದು ಅವರಿಗೆ ಇನ್ನಷ್ಟು ಮಾರಕ ಆಗಬಹುದು. ಹೀಗಾಗಿ ಇಂತಹ ರಾಸಾಯನಿಕಗಳನ್ನ ಒಳಗೊಂಡ ಕ್ಲೀನಿಂಗ್ ಉತ್ಪನ್ನಗಳಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುವುದು ಮಕ್ಕಳಿಗೇನೇ.


ನಿಮ್ಮ ಮನೆಯ ಫ್ಲೋರ್ ಕ್ಲೀನರ್ ಅಲ್ಲಿ ಯಾವ ರಾಸಾಯನಿಕಗಳು ಇರುತ್ತವೆ?


ಈ ಕ್ಲೀನಿಂಗ್ ಉತ್ಪನ್ನಗಳಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ವಸ್ತು ಎಂದರೆ ಅದು APEಗಳು. ಈ APEಗಳು ಕ್ಲೀನರ್ಗಳ ಸರ್ಫೇಸ್ ಟೆನ್ಶನ್ (ಮೇಲ್ಮೈ ಒತ್ತಡ) ಕಡಿಮೆ ಮಾಡಿ, ಇವುಗಳು ಹೆಚ್ಚಿನ ಪ್ರದೇಶಗಳಿಗೆ ವಿಸ್ತಾರಗೊಳ್ಳಲು ಸಹಾಯ ಮಾಡುತ್ತವೆ.

ಇನ್ನೊಂದು ರಾಸಾಯನಿಕ ಎಂದರೆ ಅದು ಮೊನೊಎಥನಾಲ್ಅಮೈನ್. ಇದು ಕೂಡ ಒಂದು ರೀತಿಯ APEನೇ. ಇದು ಚರ್ಮದ ಮೇಲೆ ಸುಡುವಂತ ಕಾರ್ಯವನ್ನ ಮಾಡುತ್ತದೆ. ಕೆಲವೊಮ್ಮೆ ಇದಕ್ಕೆ ತೆರೆದುಕೊಂಡು ಚರ್ಮದ ಭಾಗದಲ್ಲಿ ರಕ್ತಸ್ರಾವ ಆಗುವಷ್ಟು. ಇದನ್ನ ಒಳಗೊಂಡ ಗಾಳಿಯನ್ನ ಉಸಿರಾಡಿದರೆ ಅಸ್ತಮಾ ಅಥವಾ ಶ್ವಾಸಕೋಶ, ಉಸಿರಾಟದ ನಾಳಕ್ಕೆ ಹಾನಿ ಉಂಟಾಗುತ್ತದೆ. ಅಲ್ಲದೆ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಇದು ಲಿವರ್ ಮತ್ತು ಕಿಡ್ನಿ ಮೇಲೆಯೂ ದಾಳಿ ಮಾಡುತ್ತದೆ ಎಂಬುದು ತಿಳಿದುಬಂದಿದೆ.

ಹೀಗಾಗಿ ನೀವು ಮುಂದಿನ ಬಾರಿ ಫ್ಲೋರ್ ಕ್ಲೀನರ್ ಖರೀದಿಸುವಾಗ ನೈಸರ್ಗಿಕವಾದ ಫ್ಲೋರ್ ಕ್ಲೀನರ್ಗಳನ್ನೇ ಖರೀದಿಸಿ.  

 

ನಮ್ಮ ಬೆಂಗಳೂರಿನ ಅಮ್ಮಂದಿರಿಗೆ ಒಂದು ಸ್ವೀಟ್ ಸುದ್ದಿ ಇದೆ! ಅದೇನೆಂದರೆ, ಟೈನಿಸ್ಟೆಪ್ ನಿಮ್ಮ ಮಗುವಿನ, ನಿಮ್ಮ ಕುಟುಂಬದ ಸುರಕ್ಷತೆಯನ್ನ ಗಮನದಲ್ಲಿ ಇಟ್ಟುಕೊಂಡು ಒಂದು ಸಂಪೂರ್ಣ-ನೈಸರ್ಗಿಕ ಫ್ಲೋರ್ ಕ್ಲೀನರ್ ಹೊರತರುತ್ತಿದೆ. ಇವತ್ತೇ ಕೀಟಾಣುಗಳೊಂದಿಗೆ ಕೆಮಿಕಲ್ಸ್ ಗಳಿಗೂ ವಿದಾಯ ಹೇಳಿಬಿಡಿ! ನಿಮಗೆಂದೇ ನಾವು ಈಗ ಪ್ರಿ-ಲಾಂಚ್ ಆಫರ್ ಅಲ್ಲಿ ತುಂಬಾ ಅಗ್ಗದ ಬೆಲೆಗೆ ಫ್ಲೋರ್ ಕ್ಲೀನರ್ ನೀಡುತ್ತಿದ್ದೇವೆ! ಇದನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ : http://bit.ly/tinystep-blogs
Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon