Link copied!
Sign in / Sign up
3
Shares

ನೀವು ತಿಳಿದಿರಬೇಕಾದ ದಾಳಿಂಬೆ ಹಣ್ಣಿನ ೨೦ ಅದ್ಭುತ ಪ್ರಯೋಜನಗಳು (20 Amazing Health Benefits Of Pomegranate You Need To Know in Kannada)

ಈ ಹಣ್ಣನ್ನು ರಾಜಮನೆತನದ ಹಣ್ಣು ಎಂದಾದರೂ ಕರೆಯಿರಿ ಅಥವಾ ದೈವಿಕ ಹಣ್ಣು ಎಂದಾದರೂ ಕರೆಯಿರಿ, ಈ ಸ್ವಾದಿಷ್ಟಭರಿತ, ಶಕ್ತಿಯುತ ದಾಳಿಂಬೆ ಹಣ್ಣು ಮನುಷ್ಯನಿಗೆ ಗೊತ್ತಿರುವ ಆರೋಗ್ಯಕರ ಹಣ್ಣುಗಳಲ್ಲಿ ಒಂದು. ಅದನ್ನುರಸದ ರೂಪದಲ್ಲಿ ಸೇವಿಸಬಹುದು ಅಥವಾ ಕಚ್ಚಾ ಹಣ್ಣನ್ನು ಸೇವಿಸಬಹುದು, ಯಾವುದಾದರೂ ಸಲಾಡ್ ನೊಂದಿಗೆ ಸೇರಿಸಿ ತಿನ್ನಬಹುದು ಅಥವಾ ಸಿಹಿಯಾದ ಮೇಲೋಗರದಂತೆ ಸೇವಿಸಬಹುದು - ಇದನ್ನು ಯಾವುದೇ ವಿಧದಲ್ಲಿ ಸೇವಿಸಿದರೂ ನಿಮ್ಮ ನಿಮ್ಮ ಆರೋಗ್ಯಕ್ಕೆ ಒಳಿತೇ ಮಾಡುವುದು. ಈ ಲೇಖನದಲ್ಲಿ ಅಂತಹ ೨೦ ಆರೋಗ್ಯಕರ ಲಾಭಗಳ ಬೆಗ್ಗೆ ವಿಶ್ಲೇಷಿಸಲಾಗಿದೆ. 

ಪರಿವಿಡಿ:

೧. ದಾಳಿಂಬೆ ಎಂದರೇನು? (What Is Pomegranate? in Kannada)

೨. ದಾಳಿಂಬೆ ಪೌಷ್ಟಿಕ ಬದಿನೋಟ: ಪೌಷ್ಟಿಕ ಮೌಲ್ಯ ಮತ್ತು ಪೌಷ್ಟಿಕ ಸತ್ಯಂಶ (Pomegranate Nutritional Profile: Nutritional Value And Nutritional Facts in Kannada)

೩. ದಾಳಿಂಬೆ/ಅನಾರ್ ಹಣ್ಣಿನ ೨೦ ಅರೋಗ್ಯ ಪ್ರಯೋಜನಗಳು (20 Health Benefits Of Pomegranate/ Anar in Kannada)

     * ಬಲಿಷ್ಠವಾದ ದಾಳಿಂಬೆ: ದಾಳಿಂಬೆ ಬೀಜದ ಅರೋಗ್ಯ ಪ್ರಯೋಜನಗಳು (Powerful Pomegranate: Health Benefits Of Pomegranate Seed in Kannada)

     * ತೂಕ ಇಳಿಕೆಗೆ ದಾಳಿಂಬೆ ಹಣ್ಣಿನ ಪ್ರಯೋಜನಗಳು (Pomegranate Benefits For Weight Loss in Kannada)

     * ಸುಂದರ ಚರ್ಮಕ್ಕೆ ದಾಳಿಂಬೆ ಹಣ್ಣಿನ ಲಾಭಗಳು (Pomegranate Benefits For Beautiful Skin in Kannada)

     * ಕೂದಲಿಗೆ ದಾಳಿಂಬೆ ಹಣ್ಣಿನ ಪ್ರಯೋಜನಗಳು (Pomegranate Benefits For Hair in Kannada)

     * ದಾಳಿಂಬೆ ರಸದ ಲಾಭಗಳು (Pomegranate Juice Benefits in Kannada)

೪. ದಾಳಿಂಬೆ ಹಣ್ಣು ಮತ್ತು ದಾಳಿಂಬೆ ರಸದ ಅಡ್ಡಪರಿಣಾಮಗಳು (Side Effects Of Pomegranate Fruit And Pomegranate Juice in Kannada)

೫. ನಿರ್ಣಯ (Conclusion in Kannada)

೧. ದಾಳಿಂಬೆ ಎಂದರೇನು? (What Is Pomegranate? in Kannada)

ದಾಳಿಂಬೆ ಅಥವಾ ಅನಾರ್ ಹಣ್ಣು ಅಥವಾ ರೋಮನ್ ಪ್ರಕಾರ ಪುಣಿಕ್ ಆಪಲ್ ಒಂದು ಸಣ್ಣ ಪೊದೆ ಸಸ್ಯದಿಂದ ಬರುವ ಕೆಂಪು ಹಣ್ಣು. ಇದು ಲಿಥಿರೇಷ್ಯಾ ಕುಟುಂಬಕ್ಕೆ ಸೇರಿರುವುದಾಗಿದೆ. ವೈಜ್ಞಾನಿಕವಾಗಿ ಪುನಿಕಾ ಗ್ರನಾಟಂ ಎಂದು ಈ ಹಣ್ಣನ್ನು ಕರೆಯಲಾಗುತ್ತದೆ. ಈ ಹಣ್ಣಿನ ಮೂಲ ಸ್ಥಳ ಇನ್ನು ತಿಳಿದುಬಂದಿಲ್ಲ. ಸಿದ್ಧಾಂತಗಳ ಅನುಸಾರ ಈ ಹಣ್ಣು ಪರ್ಷಿಯಾ ಮತ್ತು ಇರಾನ್ ಪ್ರದೇಶದಲ್ಲಿ ಬೆಳೆಸಲಾಗಿದ್ದು, ನಂತರ ಚೀನಾ ಪ್ರದೇಶಕ್ಕೆ ಇದರ ಆಗಮನವಾಯಿತು.  

೨. ದಾಳಿಂಬೆ ಪೌಷ್ಟಿಕ ಬದಿನೋಟ: ಪೌಷ್ಟಿಕ ಮೌಲ್ಯ ಮತ್ತು ಪೌಷ್ಟಿಕ ಸತ್ಯಂಶ (Pomegranate Nutritional Profile: Nutritional Value And Nutritional Facts in Kannada)

ದಾಳಿಂಬೆ ಹಣ್ಣು ಆಂಟಿಓಕ್ಸಿಡಾಂಟ್ಸ್ ಗಳಿಂದ ತುಂಬಿದ್ದು, ಹಲವಾರು ವಿಟಮಿನ್ ಹಾಗೂ ಖನಿಜಶಗಳನ್ನೂ ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ ಸಂಯೋಜಕಗಳೂ ಇವೆ. ವಿಟಮಿನ್ ಕೆ ಮತ್ತು ಫೋಲೇಟ್ ಗಳು ಸಹ ಈ ಹಣ್ಣಿನಲ್ಲಿ ಇದೆ. ಅದರೊಂದಿಗೆ ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮ್ಯಾಂಗನೀಸ್ ಗಳಿದ್ದು, ಹೆಚ್ಚಿನ ಮಟ್ಟದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕಡಿಮೆ ಮಟ್ಟದಲ್ಲಿ ಕೊಬ್ಬಿನಂಶವಿದೆ. 

ಅರ್ಧ ಕಪ್ ದಾಳಿಂಬೆ ಬೀಜದಲ್ಲಿ ಈ ಕೆಳಗಿನವುಗಳಿರುತ್ತವೆ:

ಕ್ಯಾಲೋರಿ ಅಂಶ: ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್ ಪ್ರತಿ ಆಹಾರದ ಕ್ಯಾಲೋರಿಯನ್ನು ಸಂಯೋಜಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿ (.ಪ್ರತಿ ಅರ್ಧ ಕಪ್) ಈ ಕ್ಯಾಲೊರಿಗಳು ೭೨ ಇರುತ್ತವೆ.

೩. ದಾಳಿಂಬೆ/ಅನಾರ್ ಹಣ್ಣಿನ ೨೦ ಅರೋಗ್ಯ ಪ್ರಯೋಜನಗಳು (20 Health Benefits Of Pomegranate/ Anar in Kannada):

ದಾಳಿಂಬೆ ಹಣ್ಣಿನ ರಸ ಅಥವಾ ಅದರ ಬೀಜ ಅಥವಾ ಅದರ ಸಿಪ್ಪೆ - ಪ್ರತಿ ಭಾಗ ಅತದ್ಭುತ ಲಾಭಗಳನ್ನು ಹೊಂದಿದೆ. ಅವುಗಳನ್ನು ಭಾಗಗಳಾಗಿ ವಿಂಗಡಿಸಿ, ಇಲ್ಲಿ ತಿಳಿದುಕೊಳ್ಳೋಣ:

[Back To Top]

* ಬಲಿಷ್ಠವಾದ ದಾಳಿಂಬೆ: ದಾಳಿಂಬೆ ಬೀಜದ ಅರೋಗ್ಯ ಪ್ರಯೋಜನಗಳು (Powerful Pomegranate: Health Benefits Of Pomegranate Seed in Kannada)

ದಾಳಿಂಬೆ ಹಣ್ಣಿನೊಳಗಿರುವ ಬೀಜಗಳಿಗೆ ದಾಳಿಂಬೆ ಬೀಜ ಎನ್ನುತ್ತಾರೆ. ಅವುಗಳು ರಸವತ್ತಾಗಿ, ಕೆಂಪು ಬಣ್ಣದಿಂದ ಕೂಡಿರುತ್ತವೆ. ಈ ಕೆಂಪು ತಿರುಳು ಒಳಗಿರುವ ಬಿಳಿ ಬೀಜವನ್ನು ಆವರಿಸಿಕೊಂಡಿರುತ್ತದೆ. ಈ ಸಂಪೂರ್ಣ ಬೀಜವನ್ನು ದಾಳಿಂಬೆ ಬೀಜ ಎಂದು ಕರೆಯುತ್ತಾರೆ.

೧. ಹೃದಯಕ್ಕೆ ಒಳಿತು: ದಾಳಿಂಬೆ ಹಣ್ಣು ರಕ್ತವನ್ನು ತೆಳುವಾಗಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಅನಗತ್ಯ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟುತ್ತದೆ. ಇದರಿಂದ ಹೃದಯ ಸೂಕ್ತ ರೀತಿಯಲ್ಲಿ ಕಾರ್ಯಾಚರಣೆ ಮಾಡುವಂತೆ ಉತ್ತೇಜಿಸುತ್ತದೆ. 

೨. ಸಂಧಿವಾತ ತಡೆಯುತ್ತದೆ: ಅನಾರ್ ಹಣ್ಣು ಸೇವಿಸುವುದರಿಂದ ಸಂಧಿವಾತವನ್ನು ತಡೆಗಟ್ಟಬಹುದು. ಅದಕ್ಕೆ ಕಾರಣ ಈ ಹಣ್ಣಿನಲ್ಲಿರುವ ಉರಿಯೂತದ ವಿರೋಧಿ ಲಕ್ಷಣಗಳು. ಈ ಹಣ್ಣು ಮರ್ದ್ವಸ್ಥಿಯನ್ನು ಹಾನಿ ಮಾಡುವ ಕಿಣ್ವಗಳ ವಿರುದ್ಧವೂ ಹೋರಾಡುತ್ತದೆ. 

೩. ಟೈಪ್ ೨ ಮಧುಮೇಹವನ್ನು ತಡೆಗಟ್ಟುತ್ತದೆ: ಅಧ್ಯಯನದ ಅನುಸಾರ ದಾಳಿಂಬೆ ಹಣ್ಣಿನಲ್ಲಿ  ಪುನಿಕಾಳಜಿನ್, ಎಲ್ಲಾಜಿಕ್, ಗ್ಯಾಲಿಕ್, ಒಲಿಯನೋಲಿಕ್, ಉರ್ಸೋಲಿಕ್, ಉಅಲ್ಲಿಕ್ ಆಮ್ಲಗಳಿವೆ. ಈ ಆಮ್ಲಗಳು ಮಧುಮೇಹದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಅದರೊಂದಿಗೆ, ಈ ಹಣ್ಣಿನಲ್ಲಿರುವ ಸಕ್ಕರೆ ಅಂಶ ಅದ್ವೀತಿಯ ಸಂಯೋಜಕಗಳನ್ನು ಹೊಂದಿದೆ. ಇದು ಟೈಪ್ ೨ ಮಾಢಿಮೆಹವನ್ನು ಸಿನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. 

೪. ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ: ದಾಳಿಂಬೆ ಹಣ್ಣಿನಲ್ಲಿರುವ ಪುಣಿಕ್  ಆಮ್ಲ ನಿಮ್ಮ ದೇಹದಲ್ಲಿರುವ ಟ್ರೈಗ್ಲಿಸರೈಡ್ಸ್ ಮತ್ತು  ಕಡಿಮೆಗೊಳಿಸುತ್ತದೆ. ಇದರಿಂದಾಗಿ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಗೊಳಿಸಬಹುದು. 

೫. ಹಲವು ರೋಗಗಳ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ: ದಾಳಿಂಬೆ ಹಣ್ಣಿನಲ್ಲಿರುವ ಆಂಟಿಓಕ್ಸಿಡಾಂಟ್ಸ್ ಹಲವಾರು ಅರೋಗ್ಯ  ಕಾರಣವಾಗುತ್ತದೆ. ದಾಳಿಂಬೆ ಹಣ್ಣನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ರೋಗಗಳನ್ನು ತಡೆಗಟ್ಟಬಹುದು. 

[Back To Top]

* ತೂಕ ಇಳಿಕೆಗೆ ದಾಳಿಂಬೆ ಹಣ್ಣಿನ ಪ್ರಯೋಜನಗಳು (Pomegranate Benefits For Weight Loss in Kannada):

೬. ಹೊಟ್ಟೆ ತುಂಬಿಸುತ್ತದೆ: ದಾಳಿಂಬೆ ಹಣ್ಣಿನಲ್ಲಿ ಆಹಾರದ ನಾರಿನಂಶ ಹೆಚ್ಚಿರುತ್ತದೆ. ಇದರಿಂದ ಈ ಹಣ್ಣನ್ನು ಸೇವಿಸಿದರೆ ಹೊಟ್ಟೆ ಹಸಿವು ತಣಿದು, ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. 

೭. ಜೀರ್ಣಕ್ರಿಯೆಯನ್ನು ನಿಧಾನಿಸುತ್ತದೆ: ನಾರಿನಂಶ ಜೀರ್ಣಕ್ರಿಯೆಯನ್ನು ನಿಧಾನಿಸುವುದರೊಂದಿಗೆ, ಕರುಳಿನಲ್ಲಿ ಆಹಾರ ಹೀರುವಿಕೆಯನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ಇದು ಅನಗತ್ಯ ಆಹಾರ ಸೇವನೆಯನ್ನು ತಡೆಗಟ್ಟುತ್ತದೆ. ಇದು ತೂಕ ನಿಭಾಯಿಸುವವರಿಗೆ ಸೂಕ್ತವಾದ ಹಣ್ಣು. 

೮. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ದಾಳಿಂಬೆ ಹಣ್ಣಿನಲ್ಲಿ ಆಂಟಿಓಕ್ಸಿಡಾಂಟ್ಸ್  ಹೆಚ್ಚಾಗಿದ್ದು,ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಇದು ಎಲ್ಲಾ ಬಗೆಯ ವೈರಸ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. 

೯. ಮೌಖಿಕ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ:  ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಮತ್ತು ಶಿಲಿಂಧಗಳ ವಿರುದ್ಧ ಹೋರಾಡುವ ಗುಣದಿಂದಾಗಿ ನಿಮ್ಮ ಬಾಯಿಯಲ್ಲಿ ಆಗಬಹುದಾದ ಎಲ್ಲಾ ಸೋಂಕುಗಳನ್ನು ತಡೆಗಟ್ಟಿ, ನಿಮ್ಮ ಹಲ್ಲು ಮತ್ತು ಬಾಯಿಯ ಯೋಗಕ್ಷೇಮವನ್ನು ನಿಭಾಯಿಸುತ್ತದೆ. 

* ಸುಂದರ ಚರ್ಮಕ್ಕೆ ದಾಳಿಂಬೆ ಹಣ್ಣಿನ ಲಾಭಗಳು (Pomegranate Benefits For Beautiful Skin in Kannada)

೧೦. ಮುಪ್ಪಡರದಂತೆ ಮಾಡುವ ಗುಣ: ಅನಾರ್ ಹಣ್ಣು ಮುಪ್ಪಿನ ಸೂಚನೆಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಹಾಗಾಗಿ ಸುಕ್ಕುಗಳನ್ನು ತಡೆಗಟ್ಟುತ್ತದೆ. ಅದರೊಂದಿಗೆ ಜೀವಕೋಶಗಳನ್ನು ಪುರುತ್ಪಾದಿಸಿ, ನಿಮ್ಮ ಚರ್ಮ ಯಉವ್ವಬಾಭರಿತವಾಗುವಂತೆ ಮಾಡುತ್ತದೆ. 

೧೧. ಮೊಡವೆಗಳನ್ನು ನಿವಾರಿಸುತ್ತದೆ: ಉರಿಯೂತದ ವಿರೋಧಿ ಗುಣದಿಂದ ದಾಳಿಂಬೆ ಮೊಡವೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ಅರಿಶಿನದೊಂದಿಗೆ ಪುಡಿಮಾಡಿ ಮೊಡವೆಗಳಾಗಿರುವ ಸ್ಥಳಕ್ಕೆ ಲೇಪಿಸಿರಿ. 

೧೨. ಅಪಾಯಕಾರಿ ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ: ದಾಳಿಂಬೆ ಬೀಜಗಳು ಅಥವಾ ದಾಳಿಂಬೆ ಹಣ್ಣಿನ ರಸ ಪ್ರಯೋಜನಕಾರಿ ಅಷ್ಟೇ ಅಲ್ಲದೆ, ಅದರ ಸಿಪ್ಪೆಯು ಅತ್ಯಂತ ಉಪಕಾರಿ. ದಾಳಿಂಬೆ ಹಣ್ಣಿನ ಸಿಪ್ಪೆ ಒಳ್ಳೆಯ ಸ್ಕ್ರಬ್ಬಿಂಗ್ ಫೇಸ್ ಪ್ಯಾಕ್ ಮತ್ತು ಎಸ್ಪೋಲಿಆನ್ಟ್ ಆಗಿ ಉಪಯೋಗಿಸಬಹುದು. ಇದು ನಿಮ್ಮ ಚರ್ಮವನ್ನು ಸೂರ್ಯನ ಅಪಾಯಕಾರಿ ಕಿರಣಗಳಿಂದ ರಕ್ಷಿಸುತ್ತದೆ. 

[Back To Top]

* ಕೂದಲಿಗೆ ದಾಳಿಂಬೆ ಹಣ್ಣಿನ ಪ್ರಯೋಜನಗಳು (Pomegranate Benefits For Hair in Kannada)

೧೩. ರಕ್ತ ಸಂಚಲನವನ್ನು ಸುಧಾರಿಸುತ್ತದೆ: ದಾಳಿಂಬೆಯಲ್ಲಿರುವ ಪುಣಿಕ್ ಆಮ್ಲ ನಿಮ್ಮ ನೆತ್ತಿಗೆ ರಕ್ತ ಸಂಚಲನವನ್ನು ಸುಧಾರಿಸುತ್ತದೆ. ಇದರಿಂದ ನಿಮ್ಮ ಕೂದಲಿನ ಕಿರುಚೀಲಗಳು ಬಲಷ್ಠವಾಗಿ, ನಿಮ್ಮ ಕೂದಲ ಬೆಳವಣಿಗೆ ಉತ್ತಮಗೊಳ್ಳುತ್ತದೆ. 

* ದಾಳಿಂಬೆ ರಸದ ಲಾಭಗಳು (Pomegranate Juice Benefits in Kannada)

೧೪. ಪ್ರೊಸ್ಟೇಟ್ ಕ್ಯಾನ್ಸರ್ ತಡೆಗಟ್ಟುತ್ತದೆ: ಸಂಶೋಧನೆಯ ಅನುಸಾರ ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಬೆಳವಣಿಗೆಯನ್ನು ನಿಧಾನಿಸಬಹುದು. ಲ್ಯಾಬ್ ಪರೀಕ್ಷೆಗಳ ಅನುಸಾರ ದಾಳಿಂಬೆ ಹಣ್ಣಿನಲ್ಲಿರುವ ಕೆಲವು ಅಂಶಗಳು ಆಂಟಿಟ್ಯುಮೊರೊಜನಿಕ್ ಪರಿಣಾಮವನ್ನು ಬೀರುತ್ತದೆ. ಇದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಬೆಳವಣಿಗೆಯನ್ನು ಕ್ಷೀಣಿಸುತ್ತದೆ. 

೧೫. ಅಲ್ಜಿಮರ್ಸ್ ರೋಗ ತಡೆಯುತ್ತದೆ:ಅನರ್ ಅಸದಲ್ಲಿರುವ ಆಂಟಿಓಕ್ಸಿಡಾಂಟ್ಸ್ ನಿಮ್ಮ ನೆನಪಿನ ಶಕ್ತಿಯನ್ನು ಹಚ್ಚಿಸಿ, ಅರಿವನ್ನುಪ್ರಚೋದಿಸಿ, ಸುಧಾರಿಸುತ್ತದೆ. ಇದರಿಂದ ಅಲ್ಜೀಮರ್ಸ್ ರೋಗವನ್ನು ತಡೆಗಟ್ಟಬಹುದು. 

೧೬. ಉತ್ಕರ್ಷಣಶೀಲ ಒತ್ತಡವನ್ನು ತಡೆಗಟ್ಟಬಹುದು: ಉತ್ಕರ್ಷಣಶೀಲ ಒತ್ತಡ ಎಂದರೆ ನಿಮ್ಮ ದೇಹದಲ್ಲಿ ಅಗತ್ಯವಿರುವ ಆಂಟಿಓಕ್ಸಿಡಾಂಟ್ಸ್ ಇಲ್ಲದೆ ಇರುವ ಕಾರಣ ನಿಮ್ಮ ದೇಹ ಫ್ರೀ ರಾಡಿಕಲ್ಸ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕುಗ್ಗಿಸಿಕೊಂಡಿರುತ್ತದೆ. ಅನರ್ ರಸ ಆಂಟಿಓಕ್ಸಿಡಾಂಟ್ಸ್ ಗಳನ್ನು ಹೊಂದಿದೆ. ಇದರಿಂದಾಗಿ ಅದು ಉತ್ಕರ್ಷಣಶೀಲ ಒತ್ತಡವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. 

೧೭. ನೆನಪಿನ ಶಕ್ತಿಯನ್ನು ವರ್ಧಿಸುತ್ತದೆ: ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ನೆನಪಿನ ಶಕ್ತಿಯನ್ನು ವರ್ಧಿಸಿ, ಕಲಿಕೆಯ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. 

೧೮. ಮೂತ್ರಪಿಂಡದ ಅರೋಗ್ಯ ಸುಧಾರಿಸುತ್ತದೆ: ದಾಳಿಂಬೆ ಹಣ್ಣು ಲೂತ್ರದಲ್ಲಿರುವ ಆಮ್ಲತೆಯನ್ನು ಕಡಿಮೆಗೊಳಿಸಿ, ನಿಮ್ಮ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯುತ್ತದೆ. ಅದರೊಂದಿಗೆ ನಿಮ್ಮ ದೇಹವನ್ನು ನಿರ್ವಿಷಗೊಳಿಸುವಲ್ಲಿ ಸಹಾಯ ಮಾಡುತ್ತದೆ. 

೧೯. ಯಕೃತ್ತಿನ ಕೊಬ್ಬನ್ನು ತಡೆಗಟ್ಟುತ್ತದೆ: ಇಲಿಗಳ ಮೇಲೆ ನಡೆಸಿದ ಅಧ್ಯಯನದ ಫಲಿತಾಂಶದ ರೀತಿಯೇ ಅದು ಮಾನವನ ಮೇಲೂ ಪ್ರಭಾವ ಬೀರುತ್ತದೆ. ದಾಳಿಂಬೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕೊಬ್ಬಿದ ಯಕೃತ್ತನ್ನು ತಡೆಗಟ್ಟಬಹುದು. 

೨೦. ಫಲವತ್ತತೆ ಹೆಚ್ಚಿಸುತ್ತದೆ: ದಾಳಿಂಬೆ ಹಣ್ಣಿನ ರಸ ಹೆಣ್ಣು ಮತ್ತು ಗಂಡಿನ ಫಲವತ್ತತೆ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. 

[Back To Top]

೪. ದಾಳಿಂಬೆ ಹಣ್ಣು ಮತ್ತು ದಾಳಿಂಬೆ ರಸದ ಅಡ್ಡಪರಿಣಾಮಗಳು (Side Effects Of Pomegranate Fruit And Pomegranate Juice in Kannada):

ಇಂತಹ ಪೌಷ್ಟಿಕ ಹಣ್ಣಿಗೆ ಯಾವ ಅಡ್ಡಪರಿಣಾಮವಿರಬಹುದು ಎನ್ನುವ ಯೋಚನೆ ಬರುವುದು ಸಹಜ. ಸಾಮಾನ್ಯವಾಗಿ, ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಈ ವಿಷಯದ ಕುರಿತು ವೈದ್ಯರ ಸಲಹೆ ಪಡೆಯುವುದು ಸೂಕ್ತ. 

‣ ರಕ್ತದೊತ್ತಡ ಕಡಿಮೆಗೊಳಿಸುವ ಔಷಧಿ ಸೇವಿಸುತ್ತದ್ದರೆ, ದಾಳಿಂಬೆ ಹಣ್ಣು ಅಥವಾ ಹಣ್ಣಿನ ರಸ ಸೇವಿಸುವ ಮುನ್ನ ನಿಮ್ಮ ವೈದ್ಯರ ಜೊತೆ ಚರ್ಚಿಸುವುದು ಸೂಕ್ತ. ಇದರಿಂದ ಹೈಪೋಟೆನ್ಶನ್ ಅಪಾಯವನ್ನು ತಪ್ಪಿಸಬಹುದು. 

‣ ದಾಳಿಂಬೆ ರಸ ಕೆಲವು ಔಷಧಿಗಳನ್ನು ಸಜ್ಜುಗೊಳಿಸುವಲ್ಲಿ ಪಾತ್ರ ನಿರ್ವಹಿಸಬಹುದು. 

‣ ಅಸ್ತಮಾ ಅಥವಾ ಬೇರೆ ಅಲರ್ಜಿಗಳಿಂದ ಬಳಲುತ್ತಿರುವವರು ಈ ಹಣ್ಣನ್ನು ಸೇವಿಸದೇ ಇರುವುದು ಒಳಿತು. 

‣ ದಾಳಿಂಬೆ ಹಣ್ಣಿನ ಅಧಿಕ ಸೇವನೆಯಿಂದ ಜೀರ್ಣಾಂಗವ್ಯೂಹದ ಕೆರಳಿಕೆಯುಂಟಾಗುತ್ತದೆ. ಅದರಿಂದ ಭೇದಿ, ಹೊಟ್ಟೆ ನೋವು ಅಥವಾ ವಾಂತಿ.

[Back To Top]

೫. ನಿರ್ಣಯ (Conclusion in Kannada):

ಪೌಷ್ಟಿಕ ಮೌಲ್ಯ ಮತ್ತು ಅರೋಗ್ಯ ಪ್ರಯೋಜನಗಳ ಕಾರಣದಿಂದ ದಾಳಿಂಬೆ ಹಣ್ಣು ಜನಪ್ರಿಯತೆಯನ್ನು ಪಡೆದಿದೆ - ದಾಳಿಂಬೆ ಬೀಜ, ರಸ ಅಥವಾ ಸಿಪ್ಪೆ ರೂಪದಲ್ಲಿ. ದಾಳಿಂಬೆ ಹಣ್ಣಿನ ಅಡ್ಡಪರಿಣಾಮಗಳ ವಿಷಯ ಪರಿಗಣಿಸಿದಾಗ ತೀವ್ರ ಅಡ್ಡಪರಿಣಾಮಗಳು ಕಂಡುಬರುವುದಿಲ್ಲ. ಆದರೂ ಸಹ ಯಾವುದಾದರೂ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಅಥವಾ ಅಸ್ತಮಾ ಅಥವಾ ಯಾವುದಾದರೂ ಅಲರ್ಜಿಯಂತಹ ಅರೋಗ್ಯ ತೊಂದರೆಗಳಿಂದ ಬಳಲುತ್ತಿದ್ದರೆ, ದಾಳಿಂಬೆ ಹಣ್ಣನ್ನು ಸೇವಿಸುವ ಮುನ್ನ ವೈದ್ಯರ ಜೊತೆ ಚರ್ಚಿಸುವುದು ಒಳಿತು. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon