Link copied!
Sign in / Sign up
0
Shares

ನೀವು ತಿಳಿಯಲೇಬೇಕಾದ ಶುಂಠಿ ಪುಡಿಯ ೩೦ ಅದ್ಭುತ ಅರೋಗ್ಯ ಪ್ರಯೋಜನಗಳು (30 AMAZING Benefits of Ginger Powder That You Need To Know in Kannada)

ಶುಂಠಿಯನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಜಿಂಜರ್ ಏಲ್ ಅಥವಾ ಶುಂಠಿ ಸ್ವಾದವುಳ್ಳ ಕಬ್ಬಿನಹಾಲು ಅಥವಾ ಯಾವುದಾದರೂ ತಿನಿಸಿನ ಮೇಲೆ ಸಿಂಪಡಿಸಿರುವ ಶುಂಠಿ ಪುಡಿ? ಜಿಂಜರ್ ಬ್ರೆಡ್ ಮತ್ತು ಜಿಂಜರ್ ಸ್ನ್ಯಾಪ್ಸ್ ನಲ್ಲಿ ಬಳಸುವ ಶುಂಠಿ ಸಿಹಿಯಾದ ಸ್ವಾದವನ್ನು ಹೊಂದಿದ್ದರೂ ಖಾರವಾದ ಭಾವವನ್ನು ನೀಡುವ ಬೇರಾಗಿದೆ. ಬೇರೆ ಯಾವುದು ಈ ಬೇರನ್ನು ಅದ್ಭುತಗೊಳಿಸುತ್ತದೆ ಎನ್ನುವುದರ ಅರಿವು ನಿಮಗಿದೆಯೇ? ಶುಂಠಿ ಪುಡಿಯ ನಿಮಗೆ ತಿಳಿಯದೇ ಇರುವ ಅದ್ಭುತ ಅರೋಗ್ಯ ಪ್ರಯೋಜನಗಳು! ಶುಂಠಿ ಪುಡಿಯ ಇತರ ಪ್ರಯೋಜನಗಳನ್ನು ತಿಳಿದುಕೊಳ್ಳುವ ಮುನ್ನ ಶುಂಠಿ ಎಂದರೇನು ಎನ್ನುವುದನ್ನು ಮೊದಲು ತಿಳಿದುಕೊಳ್ಳೋಣ. 

ಪರಿವಿಡಿ: 

೧. ಶುಂಠಿ ಎಂದರೇನು? (What is Ginger? in Kannada)

೨. ಶುಂಠಿ ಪುಡಿಯ ಅರೋಗ್ಯ ಪ್ರಯೋಜನಗಳು (Health Benefits of Ginger Powder in Kannada)

೧. ಶುಂಠಿ ಎಂದರೇನು? (What is Ginger? in Kannada)

ಚೀನಾ ಮತ್ತು ಭಾರತದ ಸ್ಥಳೀಯ ದೀರ್ಘಕಾಲಿಕ ಮೂಲಿಕೆ ಶುಂಠಿ. ಇದು ಝಿನ್ಗಿಬರ್ ಆಫೀಸಿನೆಲ್ ಸಸ್ಯ ಕುಟುಂಬಕ್ಕೆ ಸೇರಿದೆ. ನೆಲೆದ ಕೆಳಗೆ ಬೆಳೆಯುವ ಈ ಮೂಲಿಕೆ ತನ್ನ ರುಚಿ ಮತ್ತು ವೈದ್ಯಕೀಯ ಗುಣದಿಂದಾಗಿ ಜನಪ್ರಿಯತೆಯನ್ನು ಪಡೆದಿದೆ. ಶುಂಠಿ ಪುಡಿಯ ಅರೋಗ್ಯ ಲಾಭಗಳು ಹಲವಾರು. ಅದರಲ್ಲಿನ ಪ್ರಮುಖ ೩೦ ಪ್ರಯೋಜನಗಳು ಇಲ್ಲಿವೆ. 

೨. ಶುಂಠಿ ಪುಡಿಯ ಅರೋಗ್ಯ ಪ್ರಯೋಜನಗಳು (Health Benefits of Ginger Powder in Kannada)

೧. ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ:

ಜೀರ್ಣಕ್ರಿಯೆಗೆ ಸಹಾಯ ಮಾಡುವ ಹಲವಾರು ಮೂಲಿಕೆಗಳಲ್ಲಿ ಅತ್ಯುತ್ತಮ ಮೂಲಿಕೆ ಶುಂಠಿ. ಇದು ಪಿತ್ತರಸವನ್ನು ಬಿಡುಗಡೆಗೊಳಿಸಿ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ನಾವು ಸೇವಿಸಿರುವ ಆಹಾರದ ಪೌಷ್ಟಿಕತೆಯ ಸಮೀಕರಣವನ್ನು ಇದು ಉತ್ತೇಜಿಸುತ್ತದೆ. ಶುಂಠಿ ಪುಡಿಯ ಇತರ ಪ್ರಯೋಜನಗಳು ಹೊಟ್ಟೆನೋವಿನ ಸೆಳೆತದಿಂದ ಬಿಡುಗಡೆ, ಬೇಧಿ ನಿವಾರಣೆ.

೨. ಶುಂಠಿ ಪುಡಿ ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ: 

ಹಲವಾರು ಉಸಿರಾಟದ ತೊಂದರೆಗಳನ್ನು ನಿವಾರಿಸಲು ಶುಂಠಿ ಪುಡಿಯನ್ನು ಬಳಸಬಹುದು. ಅದರ ಆಂಟಿ-ಹಿಸ್ಟಾಮೈನ್ ಗುಣದಿಂದಾಗಿ ಹಲವಾರು ಬಗೆಯ ಅಲ್ಲೆರ್ಜಿಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಮ್ಯೂಕಸ್ ಉತ್ಪಾದಿಸಿ, ಉಸಿರಿನ ನಾಳದ ಸಂಕೋಚನವನ್ನು ಪ್ರತಿಬಂಧಿಸುವಲ್ಲಿ ಇದು ಸಹಾಯ ಮಾಡುತ್ತದೆ. ಶುಂಠಿ ಬೇರಿನ ಪುಡಿಯ ಅರೋಗ್ಯ ಪ್ರಯೋಜನಗಳಲ್ಲಿ ಒಂದು ಅದು ಶೀತ ಮತ್ತು ಜ್ವರದ ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. ತಾಜಾ ಶುಂಠಿ ರಸದೊಂದಿಗೆ ಮೆಂತೆ ಸೇವಿಸುವುದರಿಂದ ಆಸ್ತಮಾ ಕೂಡಾ ತಡೆಗಟ್ಟಬಹುದು. 

೩. ಶುಂಠಿ ಪುಡಿ ವಾಕರಿಕೆಯನ್ನು ತಡೆಗಟ್ಟುತ್ತದೆ: 

ಗರ್ಭಾವಸ್ಥೆಯಲ್ಲಿ ಅಥವಾ ಸಾಮಾನ್ಯವಾಗಿ ನೀವು ವಾಕರಿಕೆ, ವಾಂತಿಯಂತಹ ತೊದರೆಗಳಿಂದ ಬಳಲುತ್ತಿದ್ದರೆ, ಶುಂಠಿ ಪುಡಿ ನಿಮಗೆ ಸಹಾಯ ಮಾಡಬಹುದು. 

೪. ಉರಿಯೂತದ ವಿರೋಧಿ ಗುಣ: 

ಶುಂಠಿ ಪುಡಿಯ ಅರೋಗ್ಯ ಪ್ರಯೋಜನಗಳು ಹಲವಾರು. ಅವುಗಳಲ್ಲಿ ಇದು ಪ್ರಮುಖವಾದದ್ದು. ಶುಂಠಿ ದೀರ್ಘಕಾಲಿಕ ಉರಿಯೂತವನ್ನು ನಿವಾರಿಸುತ್ತದೆ. ಅದು ಉರಿಯೂತವನ್ನು ಉಂಟುಮಾಡುವ ಏಜೆಂಟ್ಸ್ ಗಳನ್ನು ಕಡಿಮೆಗೊಳಿಸಿ, ಉರಿಯೂತ, ಸೆಟೆಯುವಿಕೆ ಮತ್ತು ನೋವು. 

[Back To Top]

೫. ಶುಂಠಿ ಪುಡಿ ಮುಟ್ಟಿನ ಸೆಳೆತವನ್ನು ನಿವಾರಿಸುತ್ತದೆ:

ಮುಟ್ಟಿನ ಸಮಯದಲ್ಲಿ ಯಾರಿಗೆ ತಾನೇ ಹೊಟ್ಟೆ ನೋವು ಖುಷಿಕೊಡುತ್ತದೆ? ಶುಂಠಿ ಪುಡಿ ಈ ನೋವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ಋತುಚಕ್ರದ ಶುರುವಿನ ಸಮಯದಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ಮುಟ್ಟಿನ ಸಮಯದಲ್ಲಿ ನಿಮಗೆ ಕಾಡುವ ಲಕ್ಷಣಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. 

೬. ವಾಯು ವಿರೋಧಿ ಗುಣ: 

ಹೊಟ್ಟೆ ಕೆಟ್ಟಿದೆಯೇ? ಶುಂಠಿಯ ಮತ್ತು ಜೇನುತುಪ್ಪದ ಅರೋಗ್ಯ ಲಾಭಗಳೊಂದಿಗೆ ಇದನ್ನು ನಿವಾರಿಸಿಕೊಳ್ಳಿ. ಶುಂಠಿ ಜಠರದುರಿತ, ಹೊಟ್ಟೆಯಲ್ಲಿ ಗಾಳಿ ತುಂಬುವುದು - ಇಂತಹ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. 

೭. ಕ್ಯಾನ್ಸರ್ ವಿರೋಧಿ:

ಶುಂಠಿಯಲ್ಲಿರುವ ಜಿಂಜೆರಾಲ್ ಆಂಟಿ-ಮೆಟಾಸ್ಟ್ಯಾಟಿಕ್ ಗುಣವನ್ನು ಹೊಂದಿದೆ. ಶುಂಠಿ ಅರೋಗ್ಯ ಲಾಭಗಳಿಗೆ ಇದು ಕೂಡಾ ಕಾರಣ. ಇದು ಹಲವು ಬಗೆಯ ಕ್ಯಾನ್ಸರ್ ಗಳ (ಉದಾಹರೆಣೆಗೆ ಶ್ವಾಸಕೋಶ, ಅಂಡಾಶಯ, ಪ್ರೊಸ್ಟೇಟ್, ಸ್ತನ ಮತ್ತು ಕೋಲನ್ ಕ್ಯಾನ್ಸರ್) ವಿರುದ್ಧ ಹೋರಾಡುವಲ್ಲಿ ಸಹಾಯ ಮಾಡುತ್ತದೆ. 

೮. ಶುಂಠಿ ಪುಡಿ ಮೈಗ್ರೇನ್ ನಿಂದ ಮುಕ್ತಿ ನೀಡುತ್ತದೆ: 

ಶುಂಠಿ ಪುಡಿಯ ಹಲವಾರು ಅರೋಗ್ಯ ಪ್ರಯೋಜನಗಳಲ್ಲಿ ಅತಿಯಾದ ತಲೆನೋವು ಮತ್ತು ಮೈಗ್ರೇನ್ ನಿವಾರಣೆ ಸಹ ಒಂದು. ಶುಂಠಿ ಪ್ರೋಸ್ಟಾಗ್ಲ್ಯಾಂಡಿನ್ಸ್ ಗಳ ಮಟ್ಟವನ್ನು ಕುಗ್ಗಿಸಿ, ನಿಮ್ಮ ರಕ್ತನಾಳದ ನೋವು ಮತ್ತು ಉರಿಯೂತವನ್ನು ಕಡಿಮೆಗೊಳಿಸುತ್ತದೆ. 

[Back To Top]

೯. ವ್ಯಾಯಾಮ ಮಾಡುವಾಗ ಸ್ನಾಯುಗಳ ನೋವು: 

ದೈಹಿಕ ವ್ಯಾಯಾಮದ ನಂತರ ಮೈ ನೋವು ಮತ್ತು ಸ್ನಾಯುಗಳ ನೋವು ಸಾಮಾನ್ಯ. ಪ್ರತಿ ಶುಂಠಿ ಪುಡಿ ಸೇವನೆಯಿಂದ ಈ ಸ್ನಾಯು ನೋವುಗಳನ್ನು ಶೇಖಡಾ ೨೫ ರವರೆಗೆ ಕಡಿಮೆಗೊಳಿಸಬಹುದು ಎಂದು ಒಂದು ಸಂಶೋಧನೆ ಹೇಳುತ್ತದೆ. ಇದಕ್ಕೆ ಕಾರಣ ಶುಂಠಿ ಪುಡಿ ನಿಮ್ಮ ದೇಹದೊಳಗೆ ಮಾಡುವ ಕಾರ್ಯವೈಖರಿ. 

೧೦. ಶುಂಠಿ ಪುಡಿ ಎದೆಯುರಿಯನ್ನು ನಿವಾರಿಸುತ್ತದೆ:

ಎದೆಯುರಿಯ ಅಗ್ಗವಾದ ಮತ್ತು ಪರಿಣಾಮಕಾರಿ ಚಿಕಿತ್ಸಾ ವಿಧಾನದಲ್ಲಿ ಇದು ಸಹ ಒಂದು. ಇದು ದೇಹದ ಆಮ್ಲೀಯತೆಯನ್ನು ಕಡಿಮೆಗೊಳಿಸಿ, ಆಸಿಡ್ ರಿಫ್ಲಕ್ಸ್ ಅನ್ನು ನಿವಾರಿಸುತ್ತದೆ. ಇದರಿಂದ ಎದೆಯುರಿ ಸಹ ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿವಾರಣೆಗೊಳ್ಳುತ್ತದೆ. 

೧೧. ಕಿಮೊತೆರಪಿ ನಂತರದ ವಾಕರಿಕೆ: 

ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಂತರ ಕಿಮೊತೆರಪಿ ಯನ್ನು ವೈದ್ಯರು ಸೂಚಿಸುತ್ತಾರೆ. ಇದರ ಪ್ರಮುಖ ಉದ್ದೇಶ ಕ್ಯಾನ್ಸರ್ ಜೀವಕೋಶಗಳ ಮರುಕಳಿಸದಿರುವಂತೆ ನೋಡಿಕೊಳ್ಳುವುದು. ಇದು ಕ್ಯಾನ್ಸರ್ ಮರುಕಳಿಸದಂತೆ ನಿಮ್ಮನ್ನು ಕಾಪಾಡಿದರೂ, ವಾಂತಿ ಮತ್ತು ವಾಕರಿಕೆ ಅಂತಹ ತೊಂದರೆಯನ್ನು ಉಂಟುಮಾಡುತ್ತದೆ. ಇದನ್ನು ಶುಂಠಿ ಪರಿಣಾಮಕಾರಿಯಾಗಿ ಶಮನಗೊಳಿಸುತ್ತದೆ. 

೧೨. ಶುಂಠಿ ಪುಡಿ ತೂಕ ಇಳಿಸಲು ಸಹಾಯ ಮಾಡುತ್ತದೆ:

ಶುಂಠಿ ಪುಡಿ ಊಟದ ನಂತರ ನಿಮ್ಮ ಹೊಟ್ಟೆಯನ್ನು ತಣಿಸುತ್ತದೆ. ಇದು ಹೆಚ್ಚಿನ ಆಹಾರದ ಸೇವನೆಯನ್ನೂ ತಡೆಗಟ್ಟುತ್ತದೆ ಮತ್ತು ನಿಮ್ಮ ದೇಹದ ಕೊಬ್ಬನಾಶವನ್ನು ಕುಗ್ಗಿಸುತ್ತದೆ. 

[Back To Top]

೧೩. ಶುಂಠಿ ಪುಡಿ ರಕ್ತದ ಸಕ್ಕರೆ ಮಟ್ಟವನ್ನು ನಿವಾರಿಸುತ್ತದೆ:

ಶುಂಠಿ ನಿಮ್ಮ ದೇಹದ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಶುಂಠಿಯ ಈ ಕಾರ್ಯಾಚರಣೆಯಿಂದ ನಿಮ್ಮ ತೂಕ ಗಳಿಕೆ ಅಥವಾ ಇಳಿಕೆಯಲ್ಲಿ ಇದು ಪಾತ್ರ ನಿರ್ವಹಿಸುತ್ತದೆ. 

೧೪. ಶುಂಠಿಯಲ್ಲಿನ ಅಗತ್ಯವಿರುವ ಎಣ್ಣೆ:

ಶುಂಠಿಯ ಹಲವಾರು ಅರೋಗ್ಯ ಪ್ರಯೋಜನಗಳಲ್ಲಿ ಒಂದು ಕಾರಣವೆಂದರೆ ಅದರಲ್ಲಿರುವ ಎಸ್ಸೆನ್ಶಿಯಲ್ ಎಣ್ಣೆಗಳು. ಜಿಂಜೆರೋನ್, ಜಿಂಜೆರೋಲ್, ಶೋಗಲ್, ಸಿನೆಯೊಳ್, ಫರ್ನೇಸೇನೆ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಿ, ಅದು ಪರಿಣಾಮಕಾರಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. 

೧೫. ಶುಂಠಿ ಪುಡಿ ದೇಹವನ್ನು ಬೆಚ್ಚಗಿರಿಸುವಲ್ಲಿ ಪಾತ್ರ:

ಶುಂಠಿಯ ಏಲ್ ಅನ್ನು ಶುಂಠಿಯ ಪುಡಿಯಿಂದ ತಯಾರಿಸಲಾಗುತ್ತದೆ. ಇದು ನಿಮ್ಮ ದೇಹವನ್ನು ಬೆಚ್ಚಗಿರಿಸಿ, ಶೀತದ ಸಾಮಾನ್ಯ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ಶುಂಠಿಯ ಶಾಖ ಉತ್ಪಾದಿಸುವ ಗುಣದಿಂದ ಅದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸಿ, ಹೈಪೆಥಿರ್ಮಿಯಾ ದಂತಹ ಅರೋಗ್ಯ ತೊಂದರೆಗಳಿಂದ ನಿವಾರಣೆ ನೀಡುತ್ತದೆ. 

೧೬. ಶುಂಠಿ ಪುಡಿ ಕೊಬ್ಬಿನಂಶವನ್ನು ಕಡಿಮೆಗೊಳಿಸಿ, ರಕ್ತದೊತ್ತಡವನ್ನು ನಿವಾರಿಸುತ್ತದೆ:

ಶುಂಠಿ ಉತ್ಪನ್ನಗಳು ನಿಮ್ಮ ದೇಹದ ಕೊಬ್ಬಿನಮಷವನ್ನು ಕಡಿಮೆಗೊಳಿಸಿ, ನಿಮ್ಮ ರಕ್ತದಿತ್ತಾದವನ್ನು ನಿಯಂತ್ರಿಸುತ್ತದೆ. ಇದು ಆಂತರಿಕ ರಕ್ತ ಹೆಪ್ಪುಗಟ್ಟುವಿಕೆಯನ್ನೂ ನಿವಾರಿಸುತ್ತದೆ. ಹಾಗಾಗಿ, ಇದು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಲೇಬೇಕಾದ ಆಹಾರ ಸಾಮಗ್ರಿಗಳಲ್ಲಿ ಒಂದು. 

[Back To Top]

೧೭. ಶುಂಠಿ ಪುಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ರೋಗಕ್ಕೆ ಔಷಧಿ ಸೇವಿಸುವುದಕ್ಕಿಂತ, ರೋಗವನ್ನು ತಡೆಗಟ್ಟುವುದು ಒಳಿತು. ಶುಂಠಿ ಪುಡಿ ಸಹ ಅದನ್ನೇ ಮಾಡುತ್ತದೆ. ಅದು ಎಲ್ಲ ಬಗೆಯ ಅರೋಗ್ಯ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಇದರಿಂದ ನಿಮ್ಮ ಸಮಯ ಮತ್ತು ದುಡ್ಡನ್ನು ಉಳಿಸುತ್ತದೆ. ನಿಯಮಿತವಾಗಿ ಶುಂಠಿ ಸೇವನೆಯಿಂದ ಶುಂಠಿ ಪುಡಿಯ ಅರೋಗ್ಯ ಲಾಭಗಳನ್ನು ಹೆಚ್ಚಿಸಬಹುದು. 

೧೮. ಅಸ್ಥಿರಂಧ್ರತೆಯನ್ನು ನಿವಾರಿಸುತ್ತದೆ:

ಶುಂಠಿ ಪುಡಿ ಉರಿಯೂತವನ್ನು ಕುಂದಿಸಿ, ನಿಮ್ಮ ದೇಹವನ್ನು ನಿರಾಯಾಸಗೊಳಿಸುತ್ತದೆ. ಅದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವಲ್ಲಿಯೂ ಸಹಾಯ ಮಾಡುತ್ತದೆ. 

೧೯. ಬಲವಾದ ಹೃದಯಕ್ಕೆ ಶುಂಠಿ ಪುಡಿ: 

ಶುಂಠಿಯ ಕೊಬ್ಬಿನಂಶವನ್ನು ಕಡಿಮೆಗೊಳಿಸುವ ಮತ್ತು ಫ್ಯಾಟ್ ಅನ್ನು ಸುಡುವ ಗುಣದಿಂದಾಗಿ ಶುಂಠಿ ಪುಡಿಯನ್ನು ಪೂರ್ವಜರ ಕಾಲದಿಂದಲೂ ಚೈನೀಸ್ ಔಷಧಿಗಳಲ್ಲಿ ಬಳಸಲಾಗುತ್ತಿದೆ. ಇದು ಆಂತರಿಕ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಿ, ಸಂಭವನೀಯ ಸ್ಟ್ರೋಕ್ಸ ಗಳನ್ನು ನಿವಾರಿಸುತ್ತದೆ. 

೨೦, ಶುಂಠಿ ಪುಡಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ:

ಬೇರೆ ಎಲ್ಲಾ ಶುಂಠಿ ಪುಡಿಯ ಅರೋಗ್ಯ ಪ್ರಯೋಜನಗಳೊಂದಿಗೆ ಏಕಾಗ್ರತೆ ಸಹ ಹೆಚ್ಚುತ್ತದೆ. ಶುಂಠಿ ಎಣ್ಣೆ ನಿಮ್ಮ ಆತ್ಮ ವಿಶ್ವಾಸ ಮತ್ತು ಧನಾತ್ಮಕ ಆಂತರಿಕ ಶಕ್ತಿ ಪುನಃಸ್ಥಾಪನೆಯಲ್ಲಿ ಸಹಾಯ ಮಾಡುತ್ತದೆ. ಒಟ್ಟಾರೆ, ಶುಂಠಿ ನಿಮ್ಮ ದೈನಂದಿನ ಆಹಾರದ ಭಾಗವಾಗಬೇಕಾಗಿದ್ದು, ನಿಮ್ಮ ಒಟ್ಟಾರೆ ದೈಹಿಕ ಮತ್ತು ಮಾನಸಿಕ ಸುಧಾರಣೆಯಲ್ಲಿ ಸಹಾಯ ಮಾಡುತ್ತದೆ. 

[Back To Top]

೨೧. ಶುಂಠಿ ಪುಡಿ ಆಹಾರದಿಂದಾಗುವ ವಿಷಿಕರಣವನ್ನು ತಡೆಗಟ್ಟುತ್ತದೆ:

ಆಹಾರದಿಂದಾಗುವ ವಿಷಿಕರಾವಣನ್ನು ತಡೆಗತಲೂ ನೈಸರ್ಗಿಕವಾದ ಮನೆಮದ್ದು ಬೇಕೇ? ಶುಂಠಿ ಅದಕ್ಕೆ ಉತ್ತರ! ಶುಂಠಿ ಪುಡಿ ನಿಮ್ಮ ದೇಹದಲ್ಲಿರುವ ಎಲ್ಲಾ ಕುಲ್ಮಶವನ್ನು ತೆಗೆದು ಹಾಕಿ, ನೀವು ಯಾವುದಾದರೂ ಕೆಟ್ಟಿರುವ ಆಹಾರವನ್ನು ಸೇವಿಸಿದ್ದರೇ, ಅದರಿಂದಲೂ ನಿಮ್ಮನ್ನು ರಕ್ಷಿಸುತ್ತದೆ. 

೨೨. ಹೊಟ್ಟೆ ಕಿರಿಕಿರಿಗೆ ಶುಂಠಿ ಪುಡಿ:

ಶುಂಠಿಯ ಬೇರಿನ ಪುಡಿಯ ಅರೋಗ್ಯ ಪ್ರಯೋಜನಾಗಳು ಹಲವಾರು. ಅದರಲ್ಲಿ ಶೊಗೋಲ್ಸ್ ಮತ್ತು ಜಿಂಜೆರೋಲ್ಸ್ ಗಳು ಇದ್ದು, ಅವುಗಳು ನಿಮ್ಮ ಹೊಟ್ಟೆಗೆ ಸಂಬಂಧಿತ ಯಾವುದೇ ರೀತಿಯ ತೊಂದರೆಗಳನ್ನೂ ನಿವಾರಿಸಬಹುದು. ಅವುಗಳು ನಿಮ್ಮ ಕರುಳನ್ನು ಸಹ ಆರೋಗ್ಯಕರವಾಗಿರಿಸುತ್ತದೆ. 

೨೩. ಶುಂಠಿ ಪುಡಿ ಕೀಲೂತವನ್ನು ನಿವಾರಿಸುತ್ತದೆ: 

ಕೀಲೂತ ಗಂಭೀರ ಅರೋಗ್ಯ ಸಮಸ್ಯೆ. ಅದರಲ್ಲೂ ವಯಸ್ಸಾದವರಿಗೆ ಇದು ಅತಿ ಕಷ್ಟಕರ. ಇಂತಹ ಸಂದರ್ಭಗಳಲ್ಲಿ ಶುಂಠಿ ಸಂಭವನೀಯ ಔಷಧಿಯಾಗಿ ವರ್ತಿಸುತ್ತದೆ. ಇದರ ಉರಿಯೂತದ ವಿರೋಧಿ ಗುಣಲಕ್ಷಣದಿಂದಾಗಿ ಕೀಲೂತವನ್ನು ನಿವಾರಿಸುತ್ತದೆ. 

೨೪. ಮುಪ್ಪಿನ ಸೂಚನೆಗಳ ವಿರೋಧಿ ಗುಣ:

ಶುಂಠಿಯಲ್ಲಿ ಹೆಚ್ಚಿನ ಮಟ್ಟದ ಆಂಟಿಆಕ್ಸಿಡೆಂಟ್ಸ್ ಗಳಿದ್ದು, ಅವುಗಳು ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ ಶುಂಠಿ ನಿಮ್ಮ ಚರ್ಮದ ಸುಕ್ಕುಗಳು ಮತ್ತು ಮುಪ್ಪಿನ ಗೆರೆಗಳನ್ನು ತಡೆಗಟ್ಟುತ್ತದೆ. ಅದರೊಂದಿಗೆ, ಶುಂಠಿ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶವನ್ನು ನಿವಾರಿಸಿ, ರಕ್ತ ಸಂಚಲನವನ್ನು ಪ್ರಚೋದಿಸುತ್ತದೆ. 

[Back To Top]

೨೫. ಶುಂಠಿ ಪುಡಿ ಮೊಡವೆಗಳನ್ನು ನಿವಾರಿಸಿ, ಕಲೆಗಳನ್ನು ತೊಡೆದು ಹಾಕುತ್ತದೆ:

ಶುಂಠಿಯ ಆಂಟಿಸೆಪ್ಟಿಕ್ ಮತ್ತು ಕ್ಲೆನ್ಸಿಂಗ್ ಗುಣದಿಂದಾಗಿ ಅದು ನಿಮಗೆ ಕಲೆ-ಮುಕ್ತ ಚರ್ಮ ನೀಡುವಲ್ಲಿ ಪಾತ್ರ ನಿರ್ವಹಿಸುತ್ತದೆ. ಅದರೊಂದಿಗೆ ಹಾನಿಕಾರಕ ಬ್ಯಾಕ್ಟೀರಿಯಾ ಗಳನ್ನೂ ಕೊಂಡು ನಿಮ್ಮ ಮುಖದ ಮೊಡವೆಯನ್ನು ಕಡಿಮೆ ಮಾಡುತ್ತದೆ. 

೨೬. ಶುಂಠಿ ಪುಡಿ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ:

ಶುಂಠಿಯನ್ನು ಎಣ್ಣೆಯ ರೂಪದಲ್ಲಿ ಅಥವಾ ನೀವು ಬಳಸುವ ಎಣ್ಣೆಯಲ್ಲಿ ಶುಂಠಿ ಪುಡಿ ಸೇರಿಸಿ, ನಿಮ್ಮ ನೆತ್ತಿಗೆ ಮಸಾಜ್ ಮಾಡಿಕೊಳ್ಳುವುದರಿಂದ ನಿಮ್ಮ ನೆತ್ತಿಗೆ ರಕ್ತ ಸಂಚಲನ ಸುಧಾರಿಸಿ, ನಿಮ್ಮ ಕೂದಲಿನ ಕಿರುಚೀಲಗಳನ್ನು ಪ್ರಚೋದಿಸುತ್ತದೆ. ಇದರಿಂದ ಕೂದಲ ಬೆಳವಣಿಗೆ ಆಗುತ್ತದೆ. 

೨೭. ಶುಂಠಿ ಪುಡಿ ಮೂತ್ರಪಿಂಡದ ಕಲ್ಲುಗಳನ್ನು ನಿವಾರಿಸುತ್ತದೆ:

ನೀವು ಮೂತ್ರಪಿಂಡದ ಕಲ್ಲುಗಳಿಂದ ಶಸ್ತ್ರಚಿಕಿತ್ಸೆ ವಿನಃ ನಿವಾರಣೆ ಪಡೆಯಬೇಕೆ? ಹಾಗಿದ್ದರೆ, ಶುಂಠಿಯನ್ನು ಉಪಯೋಗಿಸಿ. ಶುಂಠಿ ಏಲ್, ಶುಂಠಿ ಪುಡಿ ಅಥವಾ ಕಚ್ಚಾ ಶುಂಠಿ - ಇದನ್ನು ನಿಯಮಿತವಾಗಿ ಸೇವಿಸಿ. ಇದರಿಂದ ಮೂತ್ರಪಿಂಡದ ಕಲ್ಲುಗಳಿಂದ ಕೆಲವೇ ದಿನಗಳಲ್ಲಿ ಮುಕ್ತಿ ಪಡೆಯಬಹುದು. 

೨೮. ಶುಂಠಿ ಪುಡಿ ವೃಷಣಗಳ ಉರಿಯೂತವನ್ನು ನಿವಾರಿಸುತ್ತದೆ:

ಯಾವುದೇ ಪುರುಷನಿಗೆ ವೃಷಣದ ಉರಿಯೂತ ಅತಿಯಾದ ನೋವನ್ನುಂಟು ಮಾಡಬಹುದು. ಆದರೆ ಶುಂಠಿ ಈ ನೋವನ್ನು ಕಡಿಮೆ ಮಾಡಿ, ನಿವಾರಣೆಗೊಳಿಸಲು ಸಹಾಯ ಮಾಡುತ್ತದೆ. 

೨೯. ಶುಂಠಿ ಪುಡಿ ಸೆಲ್ಲ್ಯುಲೈಟ್ ನಿವಾರಿಸುತ್ತದೆ:

ಶುಂಠಿ ಪುಡಿಯ ಪ್ರಮುಖ ಲಾಭಗಳಲ್ಲಿ ಒಂದು - ಸೆಲ್ಲ್ಯುಲೈಟ್ ನಿವಾರಣೆ ಮತ್ತು ವೆರಿಕೋಸ್ ವಿನ್ಸ್ ಲಕ್ಷಣದ ನಿವಾರಣೆ. 

೩೦. ಶುಂಠಿ ಪುಡಿ ಸುಟ್ಟುಗಾಯದ ಬೇನೆಯನ್ನು ಕಡಿಮೆಗೊಳಿಸುತ್ತದೆ:

ಸುತ್ತು ಗಾಯದ ಮೇಲೆ ಶುಂಠಿ ರಸವನ್ನು ಹಚ್ಚಿಕೊಳ್ಳುವುದರಿಂದ ಅದು ನೋವನ್ನು ತಗ್ಗಿಸಿ, ಉರಿಯುವ ಭಾಸವನ್ನು ಕಡಿಮೆಗೊಳಿಸುತ್ತದೆ. 

[Back To Top]

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon