Link copied!
Sign in / Sign up
1
Shares

ನೀವು ತಿಳಿದಿರಲೇ ಬೇಕಾದ ವರ್ಜಿನ್ ಕೊಬ್ಬರಿ ಎಣ್ಣೆಯ ೧೩ ಅದ್ಭುತ ಲಾಭಗಳು (13 Amazing Benefits Of Virgin Coconut Oil You MUST Know in Kannada)

ನಾವು ಪ್ರತಿ ದಿನ ಬಳಸುವ ಹಲವಾರು ಸಾಮಗ್ರಿಗಳ ಉಪಯೋಗಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ವರ್ಜಿನ್ ಕೊಬ್ಬರಿ ಎಣ್ಣೆ ಅಂತಹ ಸಾಮಗ್ರಿಗಳಲ್ಲಿ ಒಂದು. ನೀವು ಅದರ ಪ್ರಯೋಜನಗಳನ್ನು ತಿಳಿದುಕೊಂಡರೆ, ತಪ್ಪದೆ ಅದನ್ನು ನಿಮ್ಮ ಅಡುಗೆಮನೆಯ ದಿನಬಳಕೆ ಸಾಮಗ್ರಿಗಳೊಂದಿಗೆ ಸೇರಿಸುತ್ತೀರಿ. ಹಾಗಾಗಿ, ನೀವು ತಿಳಿಯಲೇಬೇಕಾದ ವರ್ಜಿನ್ ಕೊಬ್ಬರಿ ಎಣ್ಣೆಯ ೧೩ ಅದ್ಭುತ ಪ್ರಯೋಜನಗಳು ಇಲ್ಲಿವೆ. 

ಪರಿವಿಡಿ:

ಕೊಬ್ಬರಿ ಎಣ್ಣೆ ಬಗೆಗಳು (Types of Coconut Oil in Kannada)

೧. ಅರೋಗ್ಯ ಚರ್ಮಕ್ಕಾಗಿ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Healthy Skin in Kannada)

೨. ವರ್ಜಿನ್ ಕೊಬ್ಬರಿ ಎಣ್ಣೆ ರಾತ್ರಿಯ ಕ್ರೀಮ್ ಆಗಿ ಬಳಸಲು ಅತ್ಯುಪಯುಕ್ತ (Virgin Coconut Oil Is Extremely Beneficial As A Night Cream in Kannada)

೩.ಪ್ರಿಮೆರ್ ಆಗಿ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil As A Primer in Kannada)

೪. ಚರ್ಮದ ಸಮಸ್ಯೆಗಳಿಗೆ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Skin Issues in Kannada)

೫. ಸ್ಟ್ರೆಚ್ ಮಾರ್ಕ್ ತೊಡೆದುಹಾಕಲು ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil Helps Fade Stretch Marks in Kannada)

೬. ಮುಪ್ಪಿನ ಸೂಚನೆಗಳ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ವರ್ಜಿನ್ ಕೊಬ್ಬರಿ ಎಣ್ಣೆ (Anti-Ageing Properties of Virgin Coconut Oil in Kannada)

೭. ಮೇಕ್ ಅಪ್ ತೆಗೆಯಲು ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil As A Makeup Remover! in Kannada)

೮. DIY ಲಿಪ್ ಸ್ಕ್ರಬ್ ಆಗಿ ವರ್ಜಿನ್ ಕೊಬ್ಬರಿ ಎಣ್ಣೆ (DIY Lip Scrub With Virgin Coconut Oil in Kannada)

೯. ಆರೋಗ್ಯಕರ ಕೂದಲಿಗೆ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Healthy Hair in Kannada)

೧೦. ಪ್ರಿ-ವಾಷ್ ಕಂಡೀಷನರ್ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil - A Good Pre-Wash Conditioner in Kannada)

೧೧. ವರ್ಜಿನ್ ಕೊಬ್ಬರಿ ಎಣ್ಣೆ ನಿಮ್ಮ ಕೂದಲನ್ನು ಅರ್ಧ್ರಿಕರಿಸುತ್ತದೆ (Virgin Coconut Oil Keeps Hair Hydrated in Kannada)

೧೨. ತೂಕ ಇಳಿಸಲು ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Weight Loss in Kannada)

೧೩. ಆರೋಗ್ಯಕರ ಹೃದಯಕ್ಕೆ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Positive Heart Health in Kannada)

ಕೊಬ್ಬರಿ ಎಣ್ಣೆ ಬಗೆಗಳು (Types of Coconut Oil in Kannada):

ಎಣ್ಣೆಯನ್ನು ಶುದ್ಧೀಕರಿಸುವುದು, ಬ್ಲೀಚಿಂಗ್ ಮಾಡುವುದು, ಅದರ ವಾಸನೆ ತೆಗೆಯುವುದು ಅತಿ ಸೂಕ್ಷ್ಮವಾದ ಪ್ರಕ್ರಿಯೆ. ಅದು ಕೊಬ್ಬರಿ ಎಣ್ಣೆಯ ರಾಸಾಯನಿಕ ಸಂಯೋಜನೆಯನ್ನೇ ಬದಲಾಯಿಸಬಹುದು. ವರ್ಜಿನ್ ಕೊಬ್ಬರಿ ಎಣ್ಣೆಯಲ್ಲಿನ ರಕ್ಷಣಾತ್ಮಕ ಉತ್ಕರ್ಷಣಗಳನ್ನು ಗಮನಾರ್ಹವಾಗಿ ಈ ಪ್ರಕ್ರಿಯೆ ಕಡಿಮೆ ಮಾಡಬಹುದು. ಹಾಗಾಗಿ, ಕೊಬ್ಬರಿ ಎಣ್ಣೆಯನ್ನು ಈ ಸಂಸ್ಕರಣೆಯ ಅನುಸಾರ ವಿಂಗಡಿಸಬಹುದು:

ವರ್ಜಿನ್ ಕೊಬ್ಬರಿ ಎಣ್ಣೆ ಮತ್ತು... ಎಕ್ಸ್ಟ್ರಾ ವರ್ಜಿನ್ ಕೊಬ್ಬರಿ ಎಣ್ಣೆ?

ಅಡುಗೆಗೆ ಲಾಭದಾಯಕವಾಗಿರುವ ವರ್ಜಿನ್ ಕೊಬ್ಬರಿ ಎಣ್ಣೆ ಅಥವಾ VCO ಕೊಬ್ಬರಿಯ ಸಾರವನ್ನು ಕೋಲ್ಡ್ ಪ್ರೆಸ್ಸಿಂಗ್ ಮೂಲಕ ಹಿಂಡಿ ತೆಗೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೊಬ್ಬರಿಯ ಸಾರವನ್ನು ಹಿಂಡಿ ಮತ್ತು ಇದರಿಂದ ಬರುವ ಮಿಶ್ರಣವನ್ನು ಒತ್ತಿ ಅಂತಿಮ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಪಡೆಯಬಹುದು. ಇದನ್ನು ಪುನಃ ಸಂಸ್ಕರಿಸಲಾಗುತ್ತದೆ. 

ವರ್ಜಿನ್ ಕೊಬ್ಬರಿ ಎಣ್ಣೆಯ ಇನ್ನೊಂದು ಇನ್ನೊಂದು ಲಾಭವೆಂದರೆ ಅದರ ಉತ್ತಮ ಶೆಲ್ಫ್ ಲೈಫ್. ಕೆಲವು ಬಾರಿ ಕೊಬ್ಬರಿ ಎಣ್ಣೆಯ ಹೆಸರನ್ನು 'ಎಕ್ಸ್ಟ್ರಾ ವರ್ಜಿನ್' ಎಂದು ಸಹ ಹೆಸರಿಸಲಾಗಿರುತ್ತದೆ. ಆಲಿವ್ ಎಣ್ಣೆಯ ರೀತಿ ಕೊಬ್ಬರಿ ಎಣ್ಣೆಯ ವರ್ಜಿನ್ ಮತ್ತು ಎಕ್ಸ್ಟ್ರಾ ವರ್ಜಿನ್ ಕೊಬ್ಬರಿ ಎಣ್ಣೆಯ ಉತ್ಪನ್ನಗಳ ನಡುವೆ ವ್ಯತ್ಯಾಸವಿರುವುದಿಲ್ಲ. 

ರಿಫೈನ್ಡ್ ಕೊಬ್ಬರಿ ಎಣ್ಣೆ:

ವಾಸ್ತವದಲ್ಲಿ ಕೊಬ್ಬರಿ ಎಣ್ಣೆಯನ್ನು ಎರಡು ವಿಧವಾಗಿ ವಿಂಗಡಿಸಲಾಗಿದೆ - ವರ್ಜಿನ್ ಮತ್ತು ರಿಫೈನ್ಡ್ ಕೊಬ್ಬರಿ ಎಣ್ಣೆ. ವರ್ಜಿನ್ ಕೊಬ್ಬರಿ ಎಣ್ಣೆ ಪರಿಮಳಭರಿತವಾಗಿದ್ದು, ಅದು ಕೊಬ್ಬರಿಯ ರೀತಿಯ ರುಚಿಯನ್ನು ನೀಡುತ್ತದೆ. ಆದರೆ, ರಿಫೈನ್ಡ್ ಕೊಬ್ಬರಿ ಎಣ್ಣೆ ರುಚಿರಹಿತವಾಗಿದ್ದು, ವಾಸನೆ ರಹಿತವೂ ಆಗಿರುತ್ತದೆ, ರಿಫೈನ್ಡ್ ಕೊಬ್ಬರಿ ಎಣ್ಣೆ ವರ್ಜಿನ್ ಕೊಬ್ಬರಿ ಎಣ್ಣೆಗಿಂತ ಹೆಚ್ಚಿನ ಅನಾನುಕೂಲಗಳನ್ನು ಹೊಂದಿದೆ. 

[Back To Top]

೧. ಅರೋಗ್ಯ ಚರ್ಮಕ್ಕಾಗಿ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Healthy Skin in Kannada)

ವರ್ಜಿನ್ ಕೊಬ್ಬರಿ ಎಣ್ಣೆಯ ಬಳಕೆಯಿಂದ ನಿಮ್ಮ ದೇಹದ ಎಲ್ಲಾ ಭಾಗಗಳ - ಮುಖ, ಕೈ, ಕಾಲುಗಳು, ಮೊಣಕಾಲುಗಳು, ಇತ್ಯಾದಿಗಳ ಚರ್ಮವನ್ನು ಅರ್ಧ್ರಿಕರಿಸಬಹುದು. ವರ್ಜಿನ್ ಕೊಬ್ಬರಿ ಎಣ್ಣೆ ಫ್ಯಾಟಿ ಆಸಿಡ್ ಗಳನ್ನು ಹೊಂದಿದ್ದು, ಅದು ಪರಿಣಾಮಕಾರಿಯಾದ ಆರ್ಧ್ರಕವಾಗಿ ವರ್ತಿಸುತ್ತದೆ. ಅದು ವೇಗವಾಗಿ ನಿಮ್ಮ ಚರ್ಮದ ಶುಷ್ಕತೆಯನ್ನು ಕಡಿಮೆಗೊಳಿಸುತ್ತದೆ. 

೨. ವರ್ಜಿನ್ ಕೊಬ್ಬರಿ ಎಣ್ಣೆ ರಾತ್ರಿಯ ಕ್ರೀಮ್ ಆಗಿ ಬಳಸಲು ಅತ್ಯುಪಯುಕ್ತ (Virgin Coconut Oil Is Extremely Beneficial As A Night Cream in Kannada):

ವರ್ಜಿನ್ ಕೊಬ್ಬರಿ ಎಣ್ಣೆ ನಿಮ್ಮ ಚರ್ಮದ ಬಣ್ಣವನ್ನು ಸುಧಾರಿಸುವುದರೊಂದಿಗೆ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಿ, ಚರ್ಮದ ಎಣ್ಣೆಯನ್ನು ಕಡಿಮೆಗೊಳಿಸುತ್ತದೆ. ಈ ಎಣ್ಣೆಯ ಅರ್ಧ್ರಿಕರಿಸುವ ಗುಣವನ್ನು ಅನುಭವಿಸಲು ಪ್ರತಿ ರಾತ್ರಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಎಣ್ಣೆ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡಿ, ನಿಮ್ಮ ಚರ್ಮವನ್ನು ಚೈತನ್ಯಭರಿತವಾಗಿ, ಮೃದುವಾಗಿಸುತ್ತದೆ. ಅರ್ಧ ಚಮಚ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಒಂದು ಮುಷ್ಟಿಯಷ್ಟು ಉಪ್ಪಿನ ಜೊತೆ ಅಥವಾ ಸಕ್ಕರೆ ಜೊತೆಗೆ ಸೇರಿಸಿ ಅದನ್ನು ಎಕ್ಸ್ಫೋಲಿಯೇಟರ್ ಆಗಿ ಬಳಸಬಹುದು. 

೩. ಪ್ರಿಮೆರ್ ಆಗಿ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil As A Primer in Kannada):

ನಿಮ್ಮ  ಚರ್ಮಕ್ಕೆ,ವರ್ಜಿನ್ ಕೊಬ್ಬರಿ ಎಣ್ಣೆ ಪ್ರಿಮೆರ್ ಆಗಿ ಅತ್ಯುಪಯುಕ್ತ. ಅದು ಮೇಕ್ ಅಪ್ ಗಿಂತ ಮೊದಲು ನಿಮ್ಮ ಚರ್ಮವನ್ನು ಮೃದುವಾಗಿಸಲು ಉಪಯೋಗಿಸಬಹುದು. ಇದು ನಿಮ್ಮ ಮೇಕ್ ಅಪ್ ಗೆ ಸೂಕ್ತವಾದ ಅಡಿಪಾಯವಾಗಿ ವರ್ತಿಸುತ್ತದೆ. 

[Back To Top]

೪. ಚರ್ಮದ ಸಮಸ್ಯೆಗಳಿಗೆ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Skin Issues in Kannada):

 ಉರಿಯೂತ, ಹುಳಗಳ ಕಡಿತ ಅಥವಾ ಜಜ್ಜುಗಾಯಗಳಂತಹ ಚರ್ಮ ಸಮಸ್ಯೆಗಳಿಗೆ ವರ್ಜಿನ್ ಕೊಬ್ಬರಿ ಎಣ್ಣೆ ಉಪಯುಕ್ತವಾಗಿದೆ. ಈ ಎಣ್ಣೆ ಎಕ್ಸಿಮಾ, ಗಾಯದ ಕಲೆಗಳನ್ನು ಮಾಯವಾಗಿಸಿ, ಚರ್ಮದ ಶುಷ್ಕತೆ, ಕಣ್ಣುಗಳ ಕೆಳಗಿನ ಕಪ್ಪು ಚೀಲಗಳನ್ನು ನಿವಾರಿಸಾಯುವಲ್ಲಿಯೂ ಸಹಾಯ ಮಾಡುತ್ತದೆ. ಅದು ನೆವೆಯನ್ನು ಕಡಿಮೆಗೊಳಿಸಿ, ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಇದು ಯಾವುದೇ ರೀತಿಯ ಹೊಸ ಕಲೆಗಳು ಆಗದಂತೆ ಸಹ ತಡೆಗಟ್ಟುತ್ತದೆ. 

೫. ಸ್ಟ್ರೆಚ್ ಮಾರ್ಕ್ ತೊಡೆದುಹಾಕಲು ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil Helps Fade Stretch Marks in Kannada):

ವರ್ಜಿನ್ ಕೊಬ್ಬರಿ ಎಣ್ಣೆಯ ಹಲವಾರು ಅರೋಗ್ಯ ಪ್ರಯೋಜನಗಳಲ್ಲಿ ನಿಮ್ಮ ಚರ್ಮದ ಸ್ಟ್ರೆಚ್ ಮಾರ್ಕ್ಸ್ ಗಳನ್ನೂ ತೊಡೆದುಹಾಕುವುದು ಸಹ ಒಂದು. ಅದರೊಂದಿಗೆ, ಯಾರೇ ಆದರೂ ಈ ವರ್ಜಿನ್ ಕೊಬ್ಬರಿ ಎಣ್ಣೆಯ ಸಹಾಯದಿಂದ ಯಾವುದೇ ಬಗೆಯ ಗಾಯ ಮತ್ತು ಅದರ ಕಲೆಗಳಿಂದ ಮುಕ್ತಿ ಪಡೆಯಬಹುದು. ನಿಮ್ಮ ಚರ್ಮ ಪದರ ಪದರವಾಗಿ ಉದುರುತ್ತಿದ್ದರೂ ಸಹ ಅದನ್ನು  ಕೊಬ್ಬರಿ ಎಣ್ಣೆ ಸಹಾಯ ಮಾಡುತ್ತದೆ. 

೬. ಮುಪ್ಪಿನ ಸೂಚನೆಗಳ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ವರ್ಜಿನ್ ಕೊಬ್ಬರಿ ಎಣ್ಣೆ (Anti-Ageing Properties of Virgin Coconut Oil in Kannada):

ವರ್ಜಿನ್ ಕೊಬ್ಬರಿ ಎಣ್ಣೆಯಲ್ಲಿ ಹೆಚ್ಚಿನ ಮಟ್ಟದ ಆಂಟಿಆಕ್ಸಿಡೆಂಟ್ಸ್ ಗಳಿದ್ದು, ಅವುಗಳು ನಿಮ್ಮ ಚರ್ಮದ ನಿರ್ವಹಣೆಯಲ್ಲಿ ಸಹಾಯ ಮಾಡುತ್ತವೆ. ಅವುಗಳು ನಿಮ್ಮ ಚರ್ಮದ ಸುಕ್ಕನ್ನು ನಿವಾರಿಸುತ್ತದೆ. ಹಾಗಾಗಿ,ವರ್ಜಿನ್ ಕೊಬ್ಬರಿ ಎಣ್ಣೆ ಮಸ್ಸಾಜ್ ನಲ್ಲಿ ಸಹ ಅತ್ಯುಪಯುಕ್ತ. ಕೊಬ್ಬರಿ ಎಣ್ಣೆಯನ್ನು ಮೈಕ್ರೋವೇವ್ ನಲ್ಲಿ ಬೆಚ್ಚಗಾಗಿಸಿ, ಅದಕ್ಕೆ ಕೆಲವು ಹನಿಗಳು ಎಸ್ಸೆನ್ಶಿಯಲ್ ಎಣ್ಣೆಯನ್ನು ಸೇರಿಸಿ. ಇದನ್ನು ಹಚ್ಚಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ. 

೭. ಮೇಕ್ ಅಪ್ ತೆಗೆಯಲು ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil As A Makeup Remover! in Kannada):

ವ್ರಿಗಿಂ ಕೊಬ್ಬರಿ ಎಣ್ಣೆಯನ್ನು ನೇರವಾಗಿ ನಿಮ್ಮ ಮುಖಕ್ಕೆ ಕ್ಲೀನ್ಸರ್ ರೀತಿಯಲ್ಲಿ ಹಚ್ಚಿಕೊಳ್ಳಿ, ಇಲ್ಲವೇ, ಅದನ್ನಿ ಹತ್ತಿ ಉಂಡೆಯಿಂದ ನಿಮ್ಮ ಚರ್ಮದ ಮೇಲೆ ಲೇಪಿಸಿಕೊಳ್ಳಿ. ಇದರಿಂದ ನಿಮ್ಮ ಮುಖದ ಮೇಲಿರುವ ಎಲ್ಲಾ ಮೇಕ್ ಅಪ್ ಮಾಯವಾಗುತ್ತದೆ. 

[Back To Top]

೮. DIY ಲಿಪ್ ಸ್ಕ್ರಬ್ ಆಗಿ ವರ್ಜಿನ್ ಕೊಬ್ಬರಿ ಎಣ್ಣೆ (DIY Lip Scrub With Virgin Coconut Oil in Kannada):

ನಿಮ್ಮ ಒಡೆದಿರುವ ತುಟಿಯ ಶುಷ್ಕ ಚರ್ಮಕ್ಕೆ ಈ ಕೊಬ್ಬರಿ ಎಣ್ಣೆ ಬಹು ಉಪಯುಕ್ತ. ಒಂದು ಚಮಚ ಕೊಬ್ಬರಿ ಎಣ್ಣೆ, ೨ ಚಮಚ ಬ್ರೌನ್ ಸಕ್ಕರೆ, ಒಂದು ಚಮಚ ಜೇನುತುಪ್ಪ, ಎಲ್ಲವನ್ನು ಬೆರೆಸಿರಿ. ಇದನ್ನು ನಿಮ್ಮ ತುಟಿಯಾನು ಅರ್ಧ್ರಿಕರಿಸಿ, ನಯವಾದ ಮನೋಭಾವ ಮಾಡುತ್ತದೆ.

೯. ಆರೋಗ್ಯಕರ ಕೂದಲಿಗೆ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Healthy Hair in Kannada):

ನಿಮ್ಮ ಕೂದಲಿನ ಎಲ್ಲಾ ಸಮಸ್ಯೆಗಳನ್ನು ವರ್ಜಿನ್ ಕೊಬ್ಬರಿ ಎಣ್ಣೆ ನಿವಾರಿಸುತ್ತವೆ. ಇದರಿಂದಾಗಿ ಈ ಎಣ್ಣೆಯನ್ನು ಪರಿಣಾಮಕಾರಿಯಾಗಿ ಕೂದಲು ಮತ್ತು ಇತರ ತೊಂದರೆಗಳಲ್ಲಿ (ಉದಾಹಾರಣೆಗೆ ತಲೆಹೊಟ್ಟು) ಸಹಾಯ ಮಾಡುತ್ತದೆ. 

- ತಲೆಹೊಟ್ಟು ಮತ್ತು ಒಣ ನೆತ್ತಿಯ ತೊಂದರೆ ಇದ್ದರೆ, ವರ್ಜಿನ್ ಕೊಬ್ಬರಿ ಎಣ್ಣೆ ನಿಮ್ಮ ಕೂದಲಿನ ಬೇರಿನಿಂದ ಅರ್ಧ್ರೀಕರಿಸುತ್ತದೆ. ಪ್ರತಿ ರಾತ್ರಿ ಕೊಬ್ಬರಿ ಎಣ್ಣೆಯನ್ನು ಬಳಸುವ ಮೂಲಕ, ನೀವು ಪರಿಣಾಮಕಾರಿ ಫಲಿತಾಂಶವನ್ನು ಕಾಣಬಹುದು. ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಮೆತ್ತಗೆ ನಿಮ್ಮ ಕೂದಲಿನ ಬೇರಿನಿಂದ ಹಚ್ಚಿ, ಮಸಾಜ್ ಮಾಡಿಕೊಳ್ಳಿ. ಇದು ನಿಮ್ಮ ಕೂದಲ ಬೆಳವಣಿಗೆಗೂ ಸಹಾಯ ಮಾಡುತ್ತದೆ. 

- ವರ್ಜಿನ್ ಕೊಬ್ಬರಿ ಎಣ್ಣೆ ತಲೆ ಹೇನನ್ನು ನಿವಾರಿಸುವಲ್ಲಿಯೂ ಸಹಾಯ ಮಾಡುತ್ತದೆ. ಮೊದಲು ನಿಮ್ಮ ಕೂದಲನ್ನು ಆಪಲ್ ಸೈಡರ್ ವಿನೆಗರ್ ನಲ್ಲಿ ತೊಳೆದುಕೊಳ್ಳಿ. ವಿನೆಗರ್ ಒಣಗಿದ ನಂತರ, ವರ್ಜಿನ್ ಕೊಬ್ಬರಿ ಎಣ್ಣೆಯನ್ನು ನಿಮ್ಮ ಸಂಪೂರ್ಣ ತಲೆಗೆ ಹಚ್ಚಿಕೊಳ್ಳಿ. ಅದನ್ನು ೧೨ರಿಂದ ೨೪ ತಾಸುಗಳವರೆಗೆ ಹಾಗೆ ಬಿಡಿ. ನಂತರ ಬಾಚಿಣಿಕೆಯಿಂದ ನಿಮ್ಮ ಕೂದಲನ್ನು ಬಾಚಿಕೊಳ್ಳಿ, ಶ್ಯಾಂಪೂವಿನಿಂದ ತೊಳೆದುಕೊಳ್ಳಿ. 

[Back To Top]

೧೦. ಪ್ರಿ-ವಾಷ್ ಕಂಡೀಷನರ್ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil - A Good Pre-Wash Conditioner in Kannada):

ಸಾಮಾನ್ಯವಾಗಿ, ಬಿಸಿ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ನಿಮ್ಮ ಕೂದಲಿಗೆ ಶ್ಯಾಂಪೂ ಹಚ್ಚುವ ಮುನ್ನ ಪ್ರಿ-ಶ್ಯಾಂಪೂ ಚಿಕಿತ್ಸೆಯಾಗಿ ನಿಮ್ಮ ಕೂದಲಿಗೆ ಉಪಯೋಸಗಿಸಬಹುದು. ನಿಮ್ಮ ಕೂದಲನ್ನು ಆರ್ಧ್ರಿಕರಿಸಲು ಎಣ್ಣೆಯನ್ನು ಕನಿಷ್ಠ ಪಕ್ಷ ಒಂದು ಗಂಟೆಯವರೆಗೆ ಹಾಗೆಯೆ ಬಿಡಿ. 

೧೧. ವರ್ಜಿನ್ ಕೊಬ್ಬರಿ ಎಣ್ಣೆ ನಿಮ್ಮ ಕೂದಲನ್ನು ಅರ್ಧ್ರಿಕರಿಸುತ್ತದೆ (Virgin Coconut Oil Keeps Hair Hydrated in Kannada):

ವರ್ಜಿನ್ ಕೊಬ್ಬರಿ ಎಣ್ಣೆ ನಿಮ್ಮ ಕೂದಲನ್ನು ಅರ್ಧ್ರಿಕರಿಸುವುದರೊಂದಿಗೆ ನಿಮ್ಮ ಕೂದಲಿಗೆ ಸೂಕ್ತವಾದ ಕಂಡೀಷನರ್ ಆಗಿ ವರ್ತಿಸುತ್ತದೆ. ಸ್ನಾನದ ನಂತರದ ಹಸಿಯಾದ ಕೂದಲೆಳೆಯ ಮೇಲೆ ಸ್ವಲ್ಪ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಅದು ನಿಮ್ಮ ಕೂದಲಿನ ಅರ್ಧ್ರಿಕತೆಯನ್ನು ಹಿಡಿದಿಡುತ್ತದೆ. ಅದರೊಂದಿಗೆ, ಸ್ವಲ್ಪ ಮಟ್ಟದ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚುವ ಮೂಲಕ ಕೂದಲನ್ನು ಬೇರಿನಿಂದ ತುದಿಯವರೆಗೆ ನಯವಾಗಿಸುತ್ತದೆ. ನಿಮ್ಮ ಕೂದಲು ಹೊಳಪಿನಿಂದ ಕೂಡಿ, ಫ್ರಿಝ್ ಮುಕ್ತ ಕೂಡಾ ಆಗುತ್ತದೆ. 

ಸೂರ್ಯ ಮತ್ತು ಕ್ಲೋರಿನ್ ಗಳಿಂದ ನಿಮ್ಮ ಕೂದಲಿನ ನಾಜೂಕಾದ ತುದಿಯನ್ನು ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಹಚ್ಚುವ ಮೂಲಕ ನಿಮ್ಮ ಕೂದಲನ್ನು ಸಂರಕ್ಷಿಸಬಹುದು. ಇದರಿಂದ ನಿಮ್ಮ ಕೂದಲು ಗಂಟಾಗದೇ, ನಯವಾಗುತ್ತವೆ. 

[Back To Top]

೧೨. ತೂಕ ಇಳಿಸಲು ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Weight Loss in Kannada):

ವರ್ಜಿನ್ ಕೊಬ್ಬರಿ ಎಣ್ಣೆಯ ಇನ್ನೊಂದು ಪ್ರಮುಖ ಲಾಭವೆಂದರೆ ಅದು ನಿಮ್ಮ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಸಂಶೋಧನೆಯ ಅನುಸಾರ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ನಿಮ್ಮ ತೂಕವನ್ನಿ ಇಳಿಸುವಲ್ಲಿ ಸಕಾರಾತ್ಮಕವಾಗಿ ಸಹಾಯ ಮಾಡುತ್ತದೇ.

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ನೀವು ಸೇವಿಸುವ ಆಹಾರದ ಬಗೆ, ನಿದ್ದೆ ಮಾಡುವ ವಿಧಾನ ಮತ್ತು ಜೇವನಶೈಲಿಯ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಕೇವಲ ವರ್ಜಿನ್ ಕೊಬ್ಬರಿ ಎಣ್ಣೆ ತೂಕವನ್ನು ಇಳಿಸಲಾರದು. ಅದನ್ನು ಮೇಲೆ ನೀಡಿರುವ ಬದಲಾವಣೆಗಳ ಜೊತೆ ಬಳಸಿದಾಗ ಅಷ್ಟೇ ಉಪಯುಕ್ತ. 

ಸುಲಭವಾಗಿ ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯನ್ನು ವರ್ಜಿನ್ ಕೊಬ್ಬರಿ ಎಣ್ಣೆಯೊಂದಿಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಬಹುದು. ಸೈದ್ಧಾಂತಿಕವಾಗಿ ಹೇಳುವುದಾದರೆ, ವೃತ್ತಿಪರರು ಹೇಳುವ ಅನುಸಾರ, ಒಂದು ಚಮಚದಷ್ಟು ಈ ಮಿಶ್ರಣವನ್ನು ಸೇವಿಸುವುದು ಹಲವು ಚಮಚದಷ್ಟು ಕೊಬ್ಬರಿ ಎಣ್ಣೆ ಸೇವಿಸುವುದರ ಸಮ. ಬೇರೆ ಫ್ಯಾಟ್ ಗಳ ನಿಯಮಿತವಾಗಿ ಸೇರಿಸುವಾಗ ಇದರ ಪ್ರಮಾಣ ಕಡಿಮೆ ಇರುವುದು ಸೂಕ್ತ. 

[Back To Top]

೧೩. ಆರೋಗ್ಯಕರ ಹೃದಯಕ್ಕೆ ವರ್ಜಿನ್ ಕೊಬ್ಬರಿ ಎಣ್ಣೆ (Virgin Coconut Oil For Positive Heart Health in Kannada):

ವರ್ಜಿನ್ ಕೊಬ್ಬರಿ ಎಣ್ಣೆ ನಿಮ್ಮ ಹೃದಯನ್ನು ಆರೋಗ್ಯಕರವಾಗಿ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇದರ ಯಶೋಗಾಥೆಯನ್ನು ಸಂಜೋಧನೆಗಳು ಸಾಬೀತು ಪಡಿಸಿವ್ವೆ. ಆದರೆ ನೀವು ಅನುಸರಿಸಬೇಕಾದ ಸೂಕ್ತ ಪದ್ಧತಿಯೆಂದರೆ ಇದನ್ನು ತಾಜಾ ತರಕಾರಿಗಳು, ಫೈಬರ್ ಆಹಾರಗಳು, ಲೀನ್ ಮಾಂಸ (ಉದಾಹರಣೆಗೆ ಸಾಲ್ಮನ್) ಮತ್ತು ಮೋನೊಸ್ಯಾಚುರೇಟೆಡ್ ಫಾಟ್ಸ್ (ಉದಾಹರೆಣೆಗೆ ಆವಕಾಡೊ, ಸೀಡ್ಸ್ ಮತ್ತು ನಟ್ಸ್) ಗಳೊಂದಿಗೆ ವರ್ಜಿನ್ ಕೊಬ್ಬರಿ ಎಣ್ಣೆಯನ್ನು ಸೇವಿಸಬೇಕು. ನೀವು ಅತಿಯಾದ ಸಕ್ಕರೆ ಅಂಶವಿರುವ ಮತ್ತು ರಿಫೈನ್ಡ್ ಕಾರ್ಬೋಹೈಡ್ರೇಟ್ಸ್ ಗಳನ್ನೂ ಹೊಂದಿರುವ ಆಹಾರವನ್ನು ಸೇವಿಸದೇ ಇರುವುದು ಸೂಕ್ತ. 

ಆರೋಗ್ಯಕರ ಸ್ಟಾರ್ಚ್ ಗಳಾಗಿರುವ ದ್ವಿದಳ ಧಾನ್ಯಗಳು (ಬೀನ್ಸ್, ಬೇಳೆಗಳು, ಬಟಾಣಿ ಮತ್ತಿ ಕಡಲೆ), ಬ್ರೌನ್ ಅಕ್ಕಿಯಂತಹ ಧಾನ್ಯಗಳು, ತರಕಾರಿಗಳು (ಗೆಣಸು, ಆಲೂಗಡ್ಡೆ, ಬೇರುಗಳನ್ನು ಹೊಂದಿರುವ ತರಕಾರಿಗಳು) ವರ್ಜಿನ್ ಕೊಬ್ಬರಿ ಎಣ್ಣೆಯ ಜೋಈತೆ ಸೇವಿಸಲು ಸೂಕ್ತ ಆಹಾರ ಪದಾರ್ಥಗಳಾಗಿವೆ. ನಿಮ್ಮ ಆಹಾರದಲ್ಲಿ ಹರ್ಬ್ ಒಮ್ಲೆಟ್,ಸಾವಯವ ಆಹಾರ, ಮೊಟ್ಟೆಗಳು, ತಾಜಾ ಬೆರ್ರೀಸ್ ಗಳನ್ನು ನಿಮ್ಮ ಆಹಾರದಲ್ಲೂ ಸೇರಿಸಬಹುದು. ಇವೆಲ್ಲವುಗಳನ್ನು ಡಿದ ನಂತರ ನಿಮ್ಮ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಸ್ನಾಕ್ಸ್ ಗಳಾವುವು ಎಂಬುವುದರ ಬಗ್ಗೆ ಅರಿವು ಖಂಡಿತಾ  ಮೂಡಿರುತ್ತದೆ.

ಇನ್ನು ಹೆಚ್ಚಿನದು ಏನಾದರೂ ಇದೆಯೇ? ವರ್ಜಿನ್ ಕೊಬ್ಬರಿ ಎಣ್ಣೆ ಕಡಿಮೆ ವೆಚ್ಚದಲ್ಲಿ ದೊರಕುವ ಕೊಬ್ಬರಿ ಎಣ್ಣೆಯಾಗಿದ್ದು, ಅದನ್ನು ಸಂಗ್ರಹಿಸಲು ಯಾವುದೇ ಬಗೆಯ ಸಂಪನ್ಮೂಲಗಳ ಅಗತ್ಯವಿರುವುದಿಲ್ಲ. ನಿಮ್ಮ ವರ್ಜಿನ್ ಕೊಬ್ಬರಿ ಎಣ್ಣೆಯ ಈ ಎಲ್ಲಾ ಪ್ರಯೋಜನಗಳ ಬಗ್ಗೆ ಅರಿವು ಇತ್ತೇ? ಇವುಗಳಲ್ಲಿ ನೀವು ಯಾವುದನ್ನೂ ಮೊದಲು ಪ್ರಯತ್ನಿಸುತ್ತೀರಿ?

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon