Link copied!
Sign in / Sign up
3
Shares

ನೀವು ತಿಳಿದುಕೊಳ್ಳಬೇಕಾದ ನಿಂಬೆ ರಸದ ೧೨ ಲಾಭಗಳು (12 Benefits Of Lemon Juice You Need To Know in Kannada)

ಹಣ್ಣಿನ ಗುಂಪಿಗೆ ಸೇರಿರುವ ಅತ್ಯಮೂಲ್ಯ ನೈಸರ್ಗಿಕ ಮತ್ತು ಆರೋಗ್ಯಕರವಾದ ಭಾಗಗಳಲ್ಲಿ ಒಂದು ನಿಂಬೆ ರಸ. ಪಾಕಶಾಲೆಯ ಪ್ರಾಮುಖ್ಯತೆ ಅಷ್ಟೇ ಅಲ್ಲದೇ ಇತರ ಪ್ರಾಮುಖ್ಯತೆಯನ್ನೂ ಪಡೆದಿರುವ ಈ ನಿಂಬೆ ಹಣ್ಣು ನಿಮ್ಮ ಜೀವನಶೈಲಿಯ ಮುಖ್ಯ ಭಾಗಗಳಲ್ಲಿ ಒಂದು. ಅದರ ಪ್ರಯೋಜನಗಳು ಹಲವಾರು ಮತ್ತು ವಿವಿಧ ಬಗೆಯನ್ನು ಹೊಂದಿವೆ. ಅದರಲ್ಲಿನ ೧೨ ಅತ್ಯಂತ ಮುಖ್ಯ ಮತ್ತು ಪರಿಣಾಮಕಾರಿ ಅರೋಗ್ಯ ಲಾಭಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. 

ಪರಿವಿಡಿ: 

೧. ನಿಂಬೆ ರಸ ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಕಾರಿ (Lemon Juice is Beneficial for General Health and Well-Being in Kannada)

೨. ನಿಂಬೆ ರಸ ಕಡಿಮೆ ಕಾರ್ಬೋಹೈಡ್ರೇಟ್ಸ್ ಗಳನ್ನು ಹೊಂದಿದೆ (Lemon Juice Comprises of Low-Carbs in Kannada)

೩. ನಿಂಬೆ ರಸದಿಂದಾಗಿ ಪರಿಣಾಮಕಾರಿ ಪ್ರೋಟೀನ್ ಹೀರಿಕೊಳ್ಳುವಿಕೆ (Effective Protein Absorption through Lemon Juice in Kannada)

೪. ಉತ್ತಮ ಜೀರ್ಣಕ್ರಿಯೆಗೆ ನಿಂಬೆ ರಸ (Lemon Juice for Perfect Digestion in Kannada)

೫. ನಿಮ್ಮ ಹಲ್ಲುಗಳಿಗಾಗಿ ನಿಂಬೆ ರಸ (Lemon Juice for Your Teeth in Kannada)

೬. ಹೃದಯ ಸಂಬಂಧಿತ ರೋಗಗಳನ್ನು ತಡೆಗಟ್ಟಲು ನಿಂಬೆ ರಸ (Lemon Juice Reduces Heart Disease Risks in Kannada)

೭. ಮೂತ್ರಪಿಂಡದ ಅರೋಗ್ಯ ಸುಧಾರಿಸಲು ನಿಂಬೆ ರಸ (Boosting Kidney Health with Lemon Juice in Kannada)

೮. ಸೋಂಕುಗಳ ವಿರುದ್ಧ ಹೋರಾಡಲು ನಿಂಬೆ ರಸ (Lemon Juice Easily Fights A Range of Infection in Kannada)

೯. ನಿಂಬೆ ರಸದಲ್ಲಿರುವ ವಿಟಮಿನ್ ಸಿ ಇಂದ ಆಗುವ ಲಾಭಗಳು (Vitamin C in Lemon Juice Advantages is Especially A Significant Benefit in Kannada)

೧೦. ತೂಕ ಇಳಿಸಲು ನಿಂಬೆ ರಸ (Lemon Juice is Perfect for Daily Consumption if You're Looking to Lose Weight in Kannada)

೧೧. ಒಟ್ಟಾರೆ ಸೌಂದರ್ಯ ಮತ್ತು ಚರ್ಮ ಸೌಂದರ್ಯ ವರ್ಧಿಸಲು ನಿಂಬೆ ರಸ (Lemon Juice for Enhancing Your Beauty And Skin Care Management in Kannada)

೧೨. ಆಹಾರದ ರುಚಿ ಹೆಚ್ಚಿಸಲು ನಿಂಬೆ ರಸ (Lemon Juice to Enhance Any Flavour in Kannada)

೧. ನಿಂಬೆ ರಸ ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಪ್ರಯೋಜನಕಾರಿ (Lemon Juice is Beneficial for General Health and Well-Being in Kannada):

ನಿಮ್ಮ ಒಟ್ಟಾರೆ ರೋಗಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು, ಅಂದರೆ ವಿಟಮಿನ್ಸ್ ಮತ್ತು ಮಿನರಲ್ಸ್ ಗಳನ್ನು ನಿಂಬೆ ರಸ ಹೊಂದಿದೆ. ಇದು ಪೌಷ್ಟಿಕಾಂಶಗಳ ಪವರ್-ಹೌಸ್ ಕೂಡಾ  ಆಗಿದೆ.ಸಂಶೋಧನೆಗಳ ಅನುಸಾರ ನಿಂಬೆ ರಸ ಭರವಸೆಯ ಗುಣಗಳನ್ನು ಹೊಂದಿದೆ. ಉದಾಹರೆಣೆಗೆ ನಿಂಬೆ ರಸದಲ್ಲಿ ಫ್ಲ್ಯಾವೊನೊಯ್ಡ್ಸ್ ನ ಅಸ್ಥಿತ್ವ ಮತ್ತು ಅದರ ಕ್ಯಾನ್ಸರ್ ವಿರೋಧಿ ಗುಣ. 

ನಿಂಬೆ ರಸದಲ್ಲಿ ಆರೋಗ್ಯಕರ ಪ್ರಮಾಣದ ಕ್ಯಾಲ್ಸಿಯಂ, ಕಾಪರ್, ಐರನ್, ಮೆಗ್ನೀಷಿಯಂ ಮತ್ತು ಪೊಟ್ಯಾಸಿಯಂ ಗಳಿವೆ. ನಿಂಬೆ ರಸದಲ್ಲಿರುವ ಪೊಟ್ಯಾಸಿಯಂ ನಿಮ್ಮ ಮೆದಳು ಮತ್ತು ನರಕ್ಕೆ ಸಂಬಂಧಿತ ಜೀವಕೋಶಗಳ ನಿರ್ವಹಣೆಯಲ್ಲಿ ಸಹಕರಿಸುತ್ತವೆ. ನಿಂಬೆ ರಸದಲ್ಲಿರುವ ಮೆಗ್ನೀಷಿಯಂ ನಿಮ್ಮ ದೇಹಕ್ಕೆ ಸಂಬಂಧಿಸಿದ ಹಲವಾರು ಅರೋಗ್ಯ ತೊಂದರೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಉದಾಹರೆಣೆಗೆ: ಆಸ್ತಮಾ, ಸ್ಕರ್ವಿ, ಜ್ವರ ಮತ್ತು ಎದೆಯುರಿತ. ಅದರೊಂದಿಗೆ, ನಿಂಬೆ ರಸ ಒತ್ತಡ ದಿಂದ ನಿಮ್ಮನ್ನು ಮುಕ್ತಿಗೊಳಿಸಿ, ಆತಂಕವನ್ನು ಕಡಿಮೆಗೊಳಿಸುತ್ತದೆ. 

ಸಂಶೋಧನೆಯ ಅನುಸಾರ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಹಲವಾರು ಬಗೆಯ ಆಂಟಿಆಕ್ಸಿಡೆಂಟ್ಸ್ ಗಳಿದ್ದು, ಹೆಚ್ಚಿನ ಮಟ್ಟದ ಲಿಮೋನೋಯ್ಡ್ಸ್ ಅಂಶವಿರುತ್ತದೆ. ಇದರಿಂದ ನಿಮ್ಮ ಆರೋಗ್ಯದ ಕಾರ್ಯನಿರ್ವಹಣೆಗೆ ಸಹಾಯವಾಗುತ್ತದೆ. ಉದಾಹರಣೆಗೆ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುವುದು, ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ದೇಹದ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುವುದು ಮತ್ತು ನಿಮ್ಮ ಥೈರೊಯ್ಡ್ ಗ್ಲ್ಯಾಂಡ್ಸ್ ಗಳನ್ನೂ ಸಂರಕ್ಷಿಸುವುದು. 

೨. ನಿಂಬೆ ರಸ ಕಡಿಮೆ ಕಾರ್ಬೋಹೈಡ್ರೇಟ್ಸ್ ಗಳನ್ನು ಹೊಂದಿದೆ (Lemon Juice Comprises of Low-Carbs in Kannada):

ನಿಂಬೆ ರಸದಲ್ಲಿ ಸ್ವಲ್ಪ ಮಟ್ಟದ ಸಕ್ಕರೆ ಅಂಶವಿದ್ದರೂ, ಅದರಲ್ಲಿ ಹೆಚ್ಚಿನ ಮಟ್ಟದ ಡೈಟರಿ ಫೈಬರ್ ಹೊಂದಿರುತ್ತದೆ. ಹಾಗಾಗಿ, ನಿಂಬೆ ರಸದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಅಂಶವಿರುತ್ತದೆ. ವೃತ್ತಿಪರರ ಅನುಸಾರ ಪ್ರತಿ ೧೦೦ ಗ್ರಾಂ ನಿಂಬೆ ಹಣ್ಣಿನ ತಿರುಳಿನಲ್ಲಿ ಕೇವಲ ೯ ಗ್ರಾಂ ನಷ್ಟು ಕಾರ್ಬಿಹೈಡ್ರಾಟ್ಸ್ ಇರುತ್ತದೆ. 

[Back To Top]

 

೩. ನಿಂಬೆ ರಸದಿಂದಾಗಿ ಪರಿಣಾಮಕಾರಿ ಪ್ರೋಟೀನ್ ಹೀರಿಕೊಳ್ಳುವಿಕೆ (Effective Protein Absorption through Lemon Juice in Kannada):

ತಜ್ಞರ ಪ್ರಕಾರ ಪ್ರತಿ ೧೦೦ ಗ್ರಾಂ ನಿಂಬೆ ಹಣ್ಣಿನ ತಿರುಳಿನಲ್ಲಿ ಅತಿ ಕಡಿಮೆ ಮಟ್ಟದ ಪ್ರೋಟೀನ್ ಇರುತ್ತದೆ (೧.೧ ಗ್ರಾಂ ನಷ್ಟು). ನಿಂಬೆ ರಸದಲ್ಲಿ ಪ್ರೋಟೀನ್ ಹೆಚ್ಚಿರದಿದ್ದರೂ, ನೀವು ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವಾಗ, ನಿಂಬೆ ಹಣ್ಣಿನ ರಸವನ್ನು ಅದರ ಮೇಲೆ ಹಾಕಿಕೊಂಡು ಸವಿಯಬಹುದು. 

೪. ಉತ್ತಮ ಜೀರ್ಣಕ್ರಿಯೆಗೆ ನಿಂಬೆ ರಸ (Lemon Juice for Perfect Digestion in Kannada):

ನಿಮ್ಮ ದೈನಂದಿನ ಆಹಾರದೊಂದಿಗೆ ಇದನ್ನು ಮಿಶ್ರಿಸುವುದರಿಂದ ನಿಂಬೆ ರಸದ ಆಮ್ಲದಿಂದ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದು. ಸಂಶೋಧನೆಗಳ ಪ್ರಕಾರ ಈ ರೀತಿ ನಿಂಬೆ ರಸವನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗಕ್ಕೆ ಸಂಬಂಧಿಸಿದ ಸಾಮಾನ್ಯ ತೊಂದರೆಯನ್ನು ತಪ್ಪಿಸಬಹುದು. ಇದರಿಂದ ವಾಕರಿಕೆ, ಎದೆಯುರಿ, ಬ್ಲಾಟಿಂಗ್, ಬೆಲ್ಚಿನ್ಗ್ ನಂತಹ ತೊಂದರೆಗಳಿಂದ ಮುಕ್ತಿ ಪಡೆಯಬಹುದು. ನಿಂಬೆ ರಸದ ಅತ್ಯುಪಯುಕ್ತ ಲಾಭಗಳಲ್ಲಿ ಒಂದು ಎಂದರೆ ಅಜೀರ್ಣದ ಯಾವುದೇ ನಕಾರಾತ್ಮಕ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ನಿಂಬೆ ರಸದ ಈ ಲಾಭವನ್ನು ಅನುಭವಿಸಲು ನಿಂಬೆ ಹಣ್ಣನ್ನು ಹಿಂಡಿ, ಅದರ ರಸವನ್ನು ಬಿಸಿ ನೀರಿಗೆ ಸೇರಿಸಿ, ಪ್ರತಿದಿನ ಬೆಳಿಗ್ಗೆ ಸೇವಿಸಬೇಕು. 

[Back To Top]

೫. ನಿಮ್ಮ ಹಲ್ಲುಗಳಿಗಾಗಿ ನಿಂಬೆ ರಸ (Lemon Juice for Your Teeth in Kannada):

ನಿಮ್ಮ ಹಲ್ಲಿನ ಆರೋಗ್ಯಕ್ಕೆ ಪರಿಣಾಮಕಾರಿ ಪರಿಹಾರಗಳನ್ನು ಹುಡುಕುತ್ತಿದ್ದಿರಾ? ತಜ್ಞರು ತಿಳಿಸುವ ಅನುಸಾರ ಅದಕ್ಕೆ ಉತ್ತರ ನಿಂಬೆ ರಸ. ನಿಂಬೆ ಹಣ್ಣಿನ ರಸ ಕೇವಲ ನಿಮ್ಮ ಹಲ್ಲನ್ನು ಬೆಳ್ಳಗಾಗಿಸುವುದಷ್ಟೇ ಅಲ್ಲದೆ, ನಿಮ್ಮ ಒಟ್ಟಾರೆ ಹಲ್ಲಿನ ಆರೋಗ್ಯಕ್ಕೆ ಸಕಾರಾತ್ಮಕವಾಗಿ ಸಹಾಯ ಮಾಡುತ್ತದೆ. ಹಲ್ಲು ನೋವು ಇರುವ ಜಾಗದಲ್ಲಿ ತಾಜಾ ನಿಂಬೆ ರಸವನ್ನು ಹಚ್ಚಿಕೊಳ್ಳುವುದರಿಂದ ಅದು ನೋವಿನ ಲಕ್ಷಣವನ್ನು ಹೋಗಲಾಡಿಸುತ್ತದೆ. ಅದರೊಂದಿಗೆ, ನಿಂಬೆ ರಸ ನಿಮ್ಮ ಒಸಡಿನಿಂದ ಆಗುವ ರಕ್ತಸ್ರಾವವನ್ನು, ಬಾಯಿಯ ದುರ್ವಾಸನೆಯನ್ನು ಮತ್ತು ಒಸಡಿಗೆ ಸಂಬಂಧಿತ ತೊಂದರೆಗಳನ್ನು ತಡೆಗಟ್ಟುತ್ತದೆ.

೬. ಹೃದಯ ಸಂಬಂಧಿತ ರೋಗಗಳನ್ನು ತಡೆಗಟ್ಟಲು ನಿಂಬೆ ರಸ (Lemon Juice Reduces Heart Disease Risks in Kannada):

ಅಧ್ಯಯನದ ಪ್ರಕಾರ ನಿಂಬೆ ರಸ ಹೃದಯಕ್ಕೆ ಸಂಬಂಧಿತ ಎಲ್ಲಾ ರೋಗವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿರುವ ಹೆಸ್ಪರಿಡಿನ್, ಹೈಪರ್ಟೆನ್ಶನ್ ಗುಣಲಕ್ಷಣಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅದರೊಂದಿಗೆ, ನಿಂಬೆ ರಸದಲ್ಲಿ ಪೆಕ್ಟಿನ್ ಮತ್ತು ಲಿಮೋನೋಯ್ಡ್ ಅಂಶಗಳಿವೆ. ಅಪಧಮನಿ ಕಾಠಿಣ್ಯವನ್ನು ನಿಧಾನಗೊಳಿಸುವ ಅವಶ್ಯಕ ಅಂಶಗಳಿವು. 

 

೭. ಮೂತ್ರಪಿಂಡದ ಅರೋಗ್ಯ ಸುಧಾರಿಸಲು ನಿಂಬೆ ರಸ (Boosting Kidney Health with Lemon Juice in Kannada):

ನಿಂಬೆ ಹಣ್ಣು ಮೂತ್ರಪಿಂಡದ ಅರೋಗ್ಯ ಸುಧಾರಿಸುವಲ್ಲಿ ಸಹ ಸಹಾಯ ಮಾಡುತ್ತದೆ. ನಿಂಬೆ ರಸ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯನ್ನು ತಡೆಗಟ್ಟುತ್ತದೆ. ಅದಕ್ಕೆ ಕಾರಣ ನಿಂಬೆ ರಸದಲ್ಲಿರುವ ಸಿಟ್ರೇಟ್ ಅಂಶ. ಇದು ಮೂತ್ರಪಿಂಡದ ಕ್ಯಾಲ್ಸಿಯಂ ಮಟ್ಟ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ. ನಿಂಬೆ ರಸವನ್ನು ಪ್ರತಿದಿನ ಕಚ್ಚಾ ಮತ್ತು ಸಕ್ಕರೆ ಸೇರಿಸದೇ ಕುಡಿಯುವುದು ನಿಮ್ಮ ಮೂತ್ರಪಿಂಡದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. 

[Back To Top]

೮. ಸೋಂಕುಗಳ ವಿರುದ್ಧ ಹೋರಾಡಲು ನಿಂಬೆ ರಸ (Lemon Juice Easily Fights A Range of Infection in Kannada):

ನಿಂಬೆ ರಸ ಹಲವು ಬಗೆಯ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಸಹ ಸಹಾಯ ಮಾಡುತ್ತದೆ. ಅದು ನೈಸರ್ಗಿಕವಾದ ಮೂತ್ರವರ್ಧಕ ಗುಣವನ್ನು ಹೊಂದಿದೆ. ಇದರಿಂದ ಸಕಾರಾತ್ಮಕವಾಗಿ ನೀರಿನ ಧಾರಣದ ವಿರುದ್ಧ ಹೋರಾಡಿ, ನಿಮ್ಮ ದೇಹದಲ್ಲಿ ಸೂಕ್ತವಾದ pH ನಿರ್ವಹಿಸುತ್ತದೆ. ನಿಂಬೆ ರಸ ನಿಮ್ಮ ದೇಹದಿಂದ ಬ್ಯಾಕ್ಟೀರಿಯಾ ಗಳನ್ನು ಹೊರಹಾಕಿ, ಯಾವುದೇ ಬಗೆಯ ಸೋಂಕುಗಲುಂಟಾಗದಂತೆ ಕಾಪಾಡುತ್ತದೆ. 

೯. ನಿಂಬೆ ರಸದಲ್ಲಿರುವ ವಿಟಮಿನ್ ಸಿ ಇಂದ ಆಗುವ ಲಾಭಗಳು (Vitamin C in Lemon Juice Advantages is Especially A Significant Benefit in Kannada):

ನಿಮ್ಮ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ವರ್ಧಿಸಲು ನಿಂಬೆ ಹಣ್ಣಿನ ರಸದಲ್ಲಿರುವ ವಿಟಮಿನ್ ಸಿ ಸಹಾಯ ಮಾಡುತ್ತದೆ. ನಿಂಬೆ ರಸದ ವಿಟಮಿನ್ ಸಿ ನಿಮ್ಮ ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ನಿಮ್ಮ ಚರ್ಮವನ್ನು, ಟೆಂಡನ್ ಗಳನ್ನು, ಕಾರ್ಟಿಲೇಜ್, ಅಸ್ಥಿರಜ್ಜುಗಳು ಮತ್ತು ರಕ್ತನಾಳಗಳನ್ನು ಆರೋಗ್ಯಕರವಾಗಿಡುತ್ತದೆ. ನಿಂಬೆ ರಸ ಚಳಿಜ್ವರದಂತಹ ಸಾಮಾನ್ಯ ರೋಗಗಳ ವಿರುದ್ಧ ಸಹ ಹೋರಾಡುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ವಿಟಮಿನ್ ಸಿ. ಅದರೊಂದಿಗೆ, ಸಂಧಿವಾತ ಮತ್ತಿ ಅಸ್ಥಿರಂಧ್ರತೆಯಂತಹ ರೋಗಗಳನ್ನು ನಿವಾರಿಸುವಲ್ಲಿಯೂ ಸಹಾಯ ಮಾಡುತ್ತದೆ. 

ನಿಂಬೆ ರಸದಲ್ಲಿ ಕೇವಲ ವಿಟಮಿನ್ ಸಿ ಅಷ್ಟೇ ಅಲ್ಲದೇ, ಅದರಲ್ಲಿ ಇತರೆ ವಿಟಮಿನ್ ಗಳಿವೆ ಉದಾಹರೆಣೆಗೆ ವಿಟಮಿನ್ ಬಿ೫, ಬಿ೬, ಬಿ೧ ಮತ್ತು ಬಿ೨. ಬಿಟಮಿನ್ ಬಿ೫ ಆಹಾರದ ಚಯಾಪಚಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ. ಹಾರ್ಮೋನ್ ಗಳ ರಚನೆಯಲ್ಲಿ ಸಹ ಇದು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ದೇಹದ ಒಳ್ಳೆಯ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. 

ಒಂದು ಔನ್ಸ್ ಕಚ್ಚಾ ನಿಂಬೆ ರಸದಲ್ಲಿ ಸರಿಸುಮಾರು ೧೨ ಮಿಲಿಗ್ರಾಮ್ ವಿಟಮಿನ್ ಸಿ ಇರುತ್ತದೆ. ಕೆಳಗೆ ನೀಡಿರುವುದು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಬೇಕಾದ ಮಟ್ಟ:

- ವಯಸ್ಕ ಪುರುಷರಿಗೆ ೧೩ ಶೇಕಡಾ 

- ವಯಸ್ಕ ಸ್ತ್ರೀಯರಿಗೆ ೧೬ ಶೇಕಡಾ 

- ಗರ್ಭಿಣಿಯರಿಗೆ ೧೪ ಶೇಕಡಾ 

- ಸ್ತನ್ಯಪಾನ ಮಾಡಿಸುವ ಸ್ತ್ರೀಯರಿಗೆ ೧೦ ಶೇಕಡಾ 

[Back To Top]

೧೦. ತೂಕ ಇಳಿಸಲು ನಿಂಬೆ ರಸ (Lemon Juice is Perfect for Daily Consumption if You're Looking to Lose Weight in Kannada):

ನಿಂಬೆ ರಸ ಒಂದು ಬಗೆಯ ಸಿಟ್ರಸ್ ಹಣ್ಣಿನ ರಸವಾಗಿದ್ದು, ಅತೀ ಕಡಿಮೆ ಕ್ಯಾಲೋರಿಸ್ ಹೊಂದಿದೆ. ಪ್ರತೋ ೧೦೦ ಗ್ರಾಂ ನಿಂಬೆ ಹಣ್ಣಿನ ತಿರುಳಿನಲ್ಲಿ ಕೇವಲ ೨೯ ಕ್ಯಾಲೋರಿಗಳಿರುತ್ತವೆ. ನಿಂಬೆ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಡೈಟರಿ ಫೈಬರ್ ಗಳು ಮತ್ತು ಕಡಿಮೆ ಕ್ಯಾಲೊರಿ ಗಳಿರುವುದರಿಂದ, ನಿಮ್ಮ ತೂಕ ಇಳಿಸಲು ಸೂಕ್ತ ಆಹಾರಗಳಲ್ಲಿ ಇದು ಕೂಡಾ ಒಂದು. 

೧೧. ಒಟ್ಟಾರೆ ಸೌಂದರ್ಯ ಮತ್ತು ಚರ್ಮ ಸೌಂದರ್ಯ ವರ್ಧಿಸಲು ನಿಂಬೆ ರಸ (Lemon Juice for Enhancing Your Beauty And Skin Care Management in Kannada):

ನಿಮ್ಮ ಚರ್ಮದ ಬಣ್ಣವನ್ನು ಸುಧಾರಿಸಲು ನಿಂಬೆ ರಸ ಅತ್ಯಂತ ಜನಪ್ರಿಯತೆ ಪಡೆದಿರುವ ಪರಿಹಾರ. ನಿಂಬೆ ಹಣ್ಣಿನ ರಸದ ಉರಿಯೂತದ ವಿರೋಧಿ ಲಕ್ಷಣ ಮತ್ತು ಮುಪ್ಪನ್ನು ತಡೆಗಟ್ಟುವ ಗುಣದಿಂದಾಗಿ ಅದು ಸೂಕ್ಷ್ಮ ಚರ್ಮವುಳ್ಳವರಿಗೆ ನೈಸರ್ಗಿಕವಾದ ಅತ್ಯುತ್ತಮ ಪರಿಹಾರ. ಇದಕ್ಕೆ ಕಾರಣ ನಿಂಬೆ ರಸ ಫ್ರೀ ರಾಡಿಕಲ್ಸ್ ಗಳನ್ನು ತೊಡೆದುಹಾಕುತ್ತದೆ. ಇದರಿಂದ ಯಾವುದೇ ರೀತಿಯ ಚರ್ಮದ ಉರಿತ ಕಡಿಮೆಗೊಳಿಸಿ, ಯೌವ್ವನ ತುಂಬಿದ ನೈಸರ್ಗಿಕ, ಹೊಳೆಯುವ ಚರ್ಮವನ್ನು ನಿಮ್ಮದಾಗಿಸುತ್ತದೆ. 

ನಿಂಬೆ ರಸ ಅತ್ಯತ್ತಮ ನೈಸರ್ಗಿಕ ನಂಜುನಿರೋಧಕ ಔಷಧಿ. ಇದು ನಿಮ್ಮ ಚರ್ಮಕ್ಕೆ ಸಂಬಂಧಿತ ಎಲ್ಲಾ ತೊಂದರೆಗಳನ್ನು (ಮೊಡವೆ, ಕಲೆ, ಇತ್ಯಾದಿ) ತೊಡೆದುಹಾಕಲು ಸಹಾಯ ಮಾಡುತ್ತದೆ. 

ನೀವು ಸುಂದರವಾದ, ಹೊಳೆಯುವ, ಆರೋಗ್ಯಕರ ಕೂದಲನ್ನು ಬಯಸುತ್ತಿದ್ದರೇ, ನಿಂಬೆ ರಸ ನಿಮ್ಮ ಸಹಾಯಕ್ಕೆ ಬರುತ್ತದೆ. ಇದು ನಿಮ್ಮ ತಲೆಯ ಹೊಟ್ಟನ್ನು ನಿವಾರಿಸಿ, ನಿಮ್ಮ ಕೂದಲನ್ನು ಆರೋಗ್ಯಕರವಾಗಿಸುತ್ತದೆ. 

೧೨. ಆಹಾರದ ರುಚಿ ಹೆಚ್ಚಿಸಲು ನಿಂಬೆ ರಸ (Lemon Juice to Enhance Any Flavour in Kannada):

ನಿಂಬೆ ರಸ ಅದರ ಬಳಕೆಗಳಲ್ಲಿ ನಮ್ಯತೆಯನ್ನು ಹೊಂದಿದೆ. ಅರ್ಥಾತ್ ಅದನ್ನು ಬೇರೆ ಬೇರೆ ಬಗೆಯಲ್ಲಿ ಉಪಯೋಗಿಸಬಹುದು. ಅದರ ಸಂತೋಷಕರ ಸಂಗತಿ ಎಂದರೆ ಅದನ್ನು ಯಾವುದೇ ಬಗೆಯಲ್ಲಿ ಉಪಯೋಗಿಸಿದರೂ, ಅದರಿಂದ ಲಾಭಗಳು ಹಲವಾರು. ನಿಂಬೆ ಹಣ್ಣನ್ನು ಜ್ಯೂಸ್ ಮಾಡಬಹುದು, ಆಹಾರದ ನಿಂಬೆ ಹಣ್ಣಿನ ರಸವನ್ನು ಹಾಕಬಹುದು. ಈ ರೀತಿ ಹಲವಾರು ಪ್ರಯೋಜನಗಳನ್ನು ಹೊಂದಿರುವ ನಿಂಬೆ ರಸವನ್ನು ೭೫ ಶೇಖಡಾದವರೆಗೂ ತೆಳುಗೊಳಿಸಿದರೂ, ಅದರಿಂದಾಗುವ ಅರೋಗ್ಯ ಲಾಭಗಳು ಕಡಿಮೆಗೊಳ್ಳುವುದಿಲ್ಲ. 

ಹಾಗಿದ್ದರೆ, ಯಾವುದಕ್ಕಾಗಿ ಕಾಯುತ್ತಿರುವಿರಿ? ನೈಸರ್ಗಿಕವಾಗಿ ಲಭ್ಯವಿರುವ ಈ ನಿಂಬೆ ಹಣ್ಣಿನ ರಸವನ್ನು ಬಳಸಿ, ಅದರಿಂದಾಗುವ ಲಾಭಗಳನ್ನು ಅನುಭವಿಸಿ!

[Back To Top]

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon