Link copied!
Sign in / Sign up
0
Shares

ನೀವು ತಿಳಿದುಕೊಳ್ಳಬೇಕಾದ ಅನಾನಸ್ ಹಣ್ಣಿನ ೨೫ ಆರೋಗ್ಯಕರ ಪ್ರಯೋಜನಗಳು (25 Amazing Health Benefits Of Pineapple You Need To Know In Hindi)

ಕಿತ್ತಳೆ ಬಣ್ಣದ ಈ ವಿದೇಶಿ ಹಣ್ಣು ಹೊರಗಡೆ ಅಡ್ಡಗೆರೆಯ ಚರ್ಮವನ್ನು ಹೊಂದಿದ್ದು, ಒಳಗಡೆ ರಸಭರಿತ ತಿರುಳಿನೊಂದಿಗೆ ಸುವಾಸನೆ ಮತ್ತು ಸಿಹಿ ರುಚಿಯ ಹಣ್ಣನ್ನು ಹೊಂದಿದೆ. ಈ ಹಣ್ಣು ಎಂಥವರಿಗಾದರೂ ಪ್ರಿಯವಾಗುವಂತದ್ದು - ನಾವು ಅನಾಸನ್ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದೇವೆ. ಒಂದು ಸಿಹಿ ಸತ್ಕಾರದ ಜೊತೆಗೆ, ಅನಾನಸ್ ಅನ್ನು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಲಭ್ಯಗೊಳಿಸುತ್ತದೆ. ಹಾಗಾಗಿ ಇದು ನಮ್ಮ ಅರೋಗ್ಯ ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಅನಾಸನ್ ಹಣ್ಣಿನ ಬಹುಮುಖ ಪ್ರಯೋಜನಗಳಿಂದ, ಅನಾಸನ್ ಹಣ್ಣನ್ನು ಹಲವು ರೂಪದಲ್ಲಿ ಸೇವಿಸಬಹುದು - ಹಣ್ಣಿನ ರಸ ಅಥವಾ ವಿವಿಧ ಪಾಕವಿಧಾನಗಳಲ್ಲಿ ಅನಾಸನ್ ಹಣ್ಣನ್ನು ಉಪಯೋಗಿಸಬಹುದು. ಆದರೆ ಅನಾನಸ್ ಹಣ್ಣಿನ ಅರೋಗ್ಯ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳಾವುವು? ಇಲ್ಲಿದೆ ಅದಕ್ಕೆ ಉತ್ತರ. 

ಪರಿವಿಡಿ:

೧. ಅನಾನಸ್ ಎಂದರೇನು? (What Is Pineapple? in Kannada)

೨. ಅನಾನಸ್ ಹಣ್ಣಿನ ಪೌಷ್ಟಿಕಾಂಶದ ಮೌಲ್ಯ (Nutritional Value Of Pineapple in Kannada)

೩. ಅನಾನಸ್ ಹಣ್ಣಿನ ೨೫ ಅರೋಗ್ಯ ಪ್ರಯೋಜನಗಳು (25 Health Benefits Of Pineapple in Kannada)

೪. ಅನಾನಸ್ ಹಣ್ಣಿನ ಅಡ್ಡಪರಿಣಾಮಗಳು (Side Effects Of Pineapple in Kannada)

೧. ಅನಾನಸ್ ಎಂದರೇನು? (What Is Pineapple? in Kannada)

ಅನಾನಸ್ ಹಣ್ಣಿನ ಲಾಭಗಳು ಮತ್ತು ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳುವ ಮೊದಲು, ಅನಾಸಿನ್ ಹಣ್ಣು ಎಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ.  

ಅನಾನಸ್ ಎಂದು ಕರೆಯಲ್ಪಡುವ ಈ ಹಣ್ಣಿನ ಮೇಲೆ ಮುಳ್ಳುಗಳನ್ನು ಹೊಂದಿದ್ದು, ಅದರ ಎಳೆಗಳು ಮೇಣದಂತಹ ಪದರವನ್ನು ಹೊಂದಿರುತ್ತದೆ. ಅನಾನಸ್ ಉಷ್ಣವಲಯದ ಹಣ್ಣುಗಳಲ್ಲಿ ಒಂದು. ಅನಾನಸ್ ಕೊಮೊಸಸ್  ಅನಾನಸ್ ಹಣ್ಣಿನ ವೈಜ್ಞಾನಿಕ ಹೆಸರು. ಇದು ಬ್ರೊಮೆಲಿಯಾಸಿಯ ಕುಟುಂಬಕ್ಕೆ ಸೇರಿದೆ. "ಪೈನ್ಆಪಲ್" ಎಂಬ ಹೆಸರು 17 ನೇ ಶತಮಾನದಲ್ಲಿ ಹುಟ್ಟಿಕೊಂಡಿತು ಏಕೆಂದರೆ ಇದು ಪೈನ್ಕೋನ್ಸ್ಗೆ ಹೋಲುತ್ತದೆ.

[Back To Top]

೨. ಅನಾನಸ್ ಹಣ್ಣಿನ ಪೌಷ್ಟಿಕಾಂಶದ ಮೌಲ್ಯ (Nutritional Value Of Pineapple in Kannada):

ಅನಾನಸ್ ನ ಕ್ಯಾಲೋರಿಗಳು ಕಡಿಮೆಯಾದರೂ ಅದರ ಪೌಷ್ಟಿಕಾಂಶ ಹೆಚ್ಹಿದೆ. ಪ್ರತಿ ೧೬೫ ಗ್ರಾಂ ಅನಾನಸ್ ಹಣ್ಣಿನಲ್ಲಿ (೧ ಕಪ್) ೮೨.೫ ಕ್ಯಾಲೋರಿಗಳಿರುತ್ತವೆ ಮತ್ತು ಇತರ ಅಗತ್ಯ ಪೌಷ್ಟಿಕಾಂಶಗಳಿರುತ್ತವೆ. ಅದರಲ್ಲಿ ಕೆಲವು ಬ್ರೊಮೆಲೈನ್, ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ನಾರಿನಂಶ, ಸಕ್ಕರೆ ಅಂಶ. ಅನಾನಸ್ ಹಣ್ಣಿನಲ್ಲಿರುವ ವಿಟಮಿನ್ ಗಳ ಪಟ್ಟಿ ಇಲ್ಲಿದೆ: ವಿಟಮಿನ್ ಎ, ವಿಟಮಿನ್ ಸಿ, ಬೀಟಾ-ಕೆರೋಟಿನ್, ಥಿಯಾಮೈನ್, ವಿಟಮಿನ್ ಬಿ೫, ವಿಟಮಿನ್ ಬಿ೬, ಫೋಲೇಟ್. ಅನಾನಸ್ ನಲ್ಲಿರುವ ಖನಿಜಾಂಶಗಳು ಇಲ್ಲಿವೆ: ಪೊಟ್ಯಾಸಿಯಂ, ಕಾಪರ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಸೋಡಿಯಂ, ಮೆಗ್ನೀಷಿಯಂ.

ಅನಾನಸ್ ನಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ಇವುಗಳು ನಿಮ್ಮ ತೂಕ ನಿಯಂತ್ರಣದಲ್ಲಿಯೂ ಸಹಾಯ ಮಾಡಬಹುದು. ಅನಾನಸ್ ಹಣ್ಣನ್ನು ನಿಮ್ಮ ತೂಕ ಹೆಚ್ಚುವ ಚಿಂತೆಯಿಲ್ಲದೆ ಸೇವಿಸಬಹುದು. 

[Back To Top]

೩. ಅನಾನಸ್ ಹಣ್ಣಿನ ೨೫ ಅರೋಗ್ಯ ಪ್ರಯೋಜನಗಳು (25 Health Benefits Of Pineapple in Kannada):

ಅನಾನಸ್ ಹಣ್ಣಿನ ಬಳಕೆಗಳು ಮತ್ತು ಲಾಭಗಳು ಅಸಂಖ್ಯಾತ. ಅದಕ್ಕೆ ಕಾರಣ ಅನಾನಸ್ ಹಣ್ಣಿನ ಪೌಷ್ಟಿಕಾಂಶ. ಅನಾನಸ್ ಹಣ್ಣಿನ ಪ್ರಯೋಜನಗಳು ಕೇವಲ ತ್ವಚೆ ಅಥವಾ ಕೂದಲಿಗಸ್ಥೆ ಅಲ್ಲದೆ, ನಿಮ್ಮ ಒಟ್ಟಾರೆ ಆರೋಗ್ಯವನ್ನು ವರ್ಧಿಸುವಲ್ಲಿಯೂ ಸಹಾಯ ಮಾಡುತ್ತದೆ. ಆ ರೀತಿಯ ಪ್ರಯೋಜನಗಳ ಪಟ್ಟಿ ಇಲ್ಲಿದೆ:

I. ಚರ್ಮಕ್ಕೆ ಅನಾನಸ್ ಹಣ್ಣಿನ ಪ್ರಯೋಜನಗಳು:

೧. ಯವ್ವನಭರಿತ ತ್ವಚೆ: ನಿಮ್ಮ ತ್ವಚೆ ಯವ್ವನಭರಿತವಾಗಿ, ಮೃದು ಮತ್ತು ಸುಂದರವಾಗಿ ಕಾಣಬೇಕೆಂದು ನೀವು ಬಯಸುತ್ತೀರಾ? ಹಾಗಿದ್ದರೆ ಖಂಡಿತವಾಗಿಯೂ ಈ ವಿದೇಶಿ ಹಣ್ಣನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಒಳಿತು. ಪೌಷ್ಠಿಕತೆಯಲ್ಲಿ ಉತ್ತಮವಾಗಿರುವ ಈ ಹಣ್ಣು, ಕೊಲ್ಲಾಜೆನ್ ಎನ್ನುವ ಪ್ರೋಟೀನ್ ಅನ್ನು ಉತ್ಪಾದಿಸುವಲ್ಲಿ ಸಹಾಯ ಮಾಡುತ್ತದೆ. ಈ ಪ್ರೋಟೀನ್, ಇತರ ಅಮೈನೊ ಆಮ್ಲಗಳು ಮತ್ತು ವಿಟಮಿನ್ ಸಿ ಜೊತೆ ಸೇರಿ ನಿಮ್ಮ ತ್ವಚೆಯನ್ನು ಸುಂದರಗೊಳಿಸಿ, ನಿಮ್ಮ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಅದರೊಂದಿಗೆ ಈ ಹಣ್ಣು ಹಾನಿಗೊಳಗಾಗಿರುವ ಜೀವಕೋಶಗಳನ್ನು ಗುಣಮುಖಗೊಳಿಸುವಲ್ಲಿ ಸಹಾಯ ಮಾಡುತ್ತದೆ. ನಿಮಗೆ ತ್ವರಿತ ಪರಿಣಾಮವನ್ನು ನೋಡುವ ಆಸೆ ಇದ್ದರೆ, ಅನಾನಸ್ ಹಣ್ಣಿನ ರಸವನ್ನು ನೇರವಾಗಿ ನಿಮ್ಮ ಮುಖಕ್ಕೆ ಲೇಪಿಸಿರಿ. ೧೦ ನಿಮಿಷದ ನಂತರ ನಿಮ್ಮ ಮುಖವನ್ನು ಶುಚಿಗೊಳಿಸಿಕೊಳ್ಳಿ. ಇದರಿಂದ ನಿಮ್ಮ ತ್ವಚೆ ಮೃದುವಾಗಿ, ಸುಂದರವಾಗಿ, ಹೊಳಪಿನಿಂದ ಕೂಡಿರುತ್ತದೆ. 

೨. ಎಕ್ಸ್ಪೋಲಿಟರ್: ಅನಾನಸ್ ಹಣ್ಣಿನ ರಸವಷ್ಟೇ ಅಲ್ಲದೆ, ಅದರ ತಾಜಾ ಅನಾನಸ್ ಹಣ್ಣಿನ ತುಂಡುಗಳೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅನಾನಸ್ ಹಣ್ಣಿನ ತುಂಡುಗಳು ಸಹ ಹಣ್ಣಿನ ರಸದಷ್ಟೇ ಲಾಭಕಾರಿ. ಅನಾನಸ್ ಹಣ್ಣಿನ ಒರಟು ವಿನ್ಯಾಸ ನಿಮ್ಮ ಚರ್ಮಕ್ಕೆ ತಿಕ್ಕಿದಾಗ ನಿಮ್ಮ ಚರ್ಮದ ಎಲ್ಲಾ ಸತ್ತ ಜೀವಕೋಶಗಳನ್ನು ತೊಡೆದುಹಾಕುತ್ತದೆ. ಅದರೊಂದಿಗೆ ನಿಮ್ಮ ರಕ್ತ ಸಂಚಲನವನ್ನು ಉತ್ತಮಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಆಗುವ ಲಾಭವೇನು? ನಿಮ್ಮ ಚರ್ಮ ಸುಂದರವಾಗಿ, ಹೊಳಪಿನಿಂದ ಕೂಡುತ್ತದೆ. 

೩. ಮೊಡವೆ-ಮುಕ್ತ ಚರ್ಮಕ್ಕೆ: ಮೊಡವೆ ಕುರೂಪವಾಗಿ ಕಾಣುವಂತೆ ಮಾಡುವ ಮತ್ತು ಪ್ರತಿ ಹೆಣ್ಣು ಅತ್ಯಂತ ದ್ವೇಷಿಸುವ ಕುರುಹು ಆಗಿದೆ. ಅದನ್ನು ಹೇಗೆ ನಿಭಾಯಿಸಬೇಕು? ಅನಾನಸ್ ಹಣ್ಣಿನ ಸಹಾಯದಿಂದ! ಅನಾನಸ್ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿದೆ. ಹಾಗಾಗಿಯೇ ಅನಾನಸ್ ಹಣ್ಣು ದೇಹದ ಒಳಗೆ ಸಹಾಯ ಮಾಡುವಷ್ಟೇ ದೇಹದ ಹೊರಗೂ ಸಹಾಯ ಮಾಡುತ್ತದೆ. ಹಾಗಾಗಿ, ಅನಾನಸ್ ಹಣ್ಣಿನ ಹಲವಾರು ಪ್ರಯೋಜನಗಳಲ್ಲಿ ಮೊಡವೆಯನ್ನು ನಿವಾರಿಸುವುದು ಮತ್ತು ಇನ್ನಿತರ ಚರ್ಮ ರೋಗಗಳನ್ನು ನಿವಾರಿಸುವಲ್ಲಿ ಪಾತ್ರ ನಿರ್ವಹಿಸುತ್ತದೆ. 

೪. ಅರ್ಧ್ರೀಕೃತಗೊಂಡಿರುವ ಮತ್ತು ಹೊಳೆಯುವ ಚರ್ಮ: ಯಾರು ಸುಂದರವಾದ ಅರ್ಧರಿಕೃತಗೊಂಡಿರುವ ಚರ್ಮವನ್ನು ಹೊಂದಲು ಬಯಸುವುದಿಲ್ಲ? ಕೇವಲ ಅರ್ಧ್ರೀಕೃತಗೊಂಡಿರುವ ಚರ್ಮವಷ್ಟೇ ನಿಮ್ಮ ಚರ್ಮಕ್ಕೆ ನೀವು ಬಯಸುವ ಬೆರಗನ್ನು ನೀಡಬಲ್ಲದು. ಇಂದಿನ ಕಾಲದಲ್ಲಿ, ಮಾಲಿನ್ಯ ಮತ್ತು ಶಾಖದ ವಾತಾವರಣದಿಂದಾಗಿ ಸುಂದರ ಚರ್ಮವನ್ನು ಹೊಂದುವುದು ಕನಸಿನ ರೀತಿಯಾಗಿದೆ ಎಂದರೆ ತಪ್ಪಾಗಲಾರದು. ಹಾಗಿದ್ದರೆ, ಅದನ್ನು ಪಡೆಯುವುದಾದರೂ ಹೇಗೆ? ಅದಕ್ಕೆ ಉತ್ತರ ಅನಾನಸ್. ಅನಾನಸ್ ಹಣ್ಣು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಅರ್ಧ್ರೀಕರಿಸುತ್ತದೆ. ಅದನ್ನು ಹೇಗೆ ಮಾಡಬೇಕು? ತಾಜಾ ಅನಾನಸ್ ಹಣ್ಣಿನ ರಸದೊಂದಿಗೆ, ಮೊಟ್ಟೆ ಮತ್ತು ಸ್ವಲ್ಪ ಹಾಲನ್ನು ಸೇರಿಸಿ, ಮಿಶ್ರಣ ತಯಾರಿಸಿ. ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ನಂತರ ನಿಮ್ಮ ಚರಾಂವನ್ನು ನೀರಿನಿಂದ ಶುಚಿಗೊಳಿಸಿ. ಇದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. 

೫. ನಿಮ್ಮ ಒಡೆದ ಪಾದವನ್ನು ಚಿಕಿತ್ಸಿಸುತ್ತದೆ: ಅನಾನಸ್ ಹಣ್ಣಿನ ಕೆಲವು ಅರೋಗ್ಯ ಪ್ರಯೋಜನಗಳು ಅನಾನಸ್ ಹಣ್ಣಿನ ಎಕ್ಸ್-ಫೋಲಿಯೇಟಿಂಗ್ ಗುಣದ ಮೇಲೆ ಅವಲಂಬಿತವಾಗಿದೆ. ಅವಿಗಳಲ್ಲಿ ಒಂದು ಒಡೆದ ಪಾದಗಳನ್ನು ಚಿಕಿತ್ಸಿಸುವುದು. ಒಡೆದ ಪಾದಗಳು ಕಿರಿಕಿರಿ ಮತ್ತು ನೋವನ್ನುಂಟು ಮಾಡುತ್ತವೆ. ಇದನ್ನು ಚಿಕಿತ್ಸಿಸುವಲ್ಲಿ ಅನಾನಸ್ ಹಣ್ಣಿನ ಚರ್ಮ ಅತ್ಯುಪಯುಕ್ತ. ಅದರೊಂದಿಗೆ ಈ ವಿಧಾನ ಅಗ್ಗದ ಪದ್ಧತಿ. ಹಣ್ಣಿನ ಎಕ್ಸ್-ಫೋಲಿಯೇಟಿಂಗ್ ಗುಣ ಮತ್ತು ಕೊಲ್ಲಾಜೆನ್ ಉತ್ಪಾದಿಸುವ ಗುಣದಿಂದಾಗಿ ನಿಮ್ಮ ಪಾದಗಳನ್ನು ಸ್ಕ್ರಬ್ ಮಾಡಿ, ನಿಮ್ಮ ಪಾದದಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಇದರಿಂದಾಗಿ ನಿಮ್ಮ ಚರ್ಮ ಮೃದುವಾಗುತ್ತದೆ. 

೬. ಒಣಗಿದ ತುಟಿಯನ್ನು ಚಿಕಿತ್ಸಿಸುತ್ತದೆ: ಅನಾನಸ್ ಹಣ್ಣಿನ ಅರ್ಧ್ರೀಕರಿಸುವ ಮತ್ತು ಪೋಷಿಸುವ ಗುಣದಿಂದಾಗಿ, ಅನಾನಸ್ ಹಣ್ಣಿನ ರಸ ನಿಮ್ಮ ಒಣಗಿದ ಮತ್ತು ಒಅಡೆದಿರುವ ತುಟಿಗಳನ್ನು ಚಿಕಿತ್ಸಿಸುತ್ತದೆ. 

೭. ಉಗುರುಗಳನ್ನು ಬಲಿಷ್ಠಗೊಳಿಸುತ್ತದೆ: ನಿಮ್ಮ ದೇಹದಲ್ಲಿ ವಿಟಮಿನ್ ಎ ಮತ್ತು ಬಿ ಕೊರತೆ ಇದ್ದಲ್ಲಿ ನಿಮ್ಮ ಉಗುರುಗಳು ಒಣಗಿ, ದುರ್ಬಲವಾಗಿ ಕಾಣಬಹುದು. ಇದನ್ನು ಹೇಗೆ ನಿವಾರಿಸಬೇಕು? ಅನಾನಸ್ ಹಣ್ಣಿನ ಸಹಾಯದಿಂದ. ಅನಾನಸ್ ಹಣ್ಣಿನ ರಸ ನಿಮ್ಮ ಉಗುರುಗಳನ್ನು ಅಗತ್ಯತೆಗೆ ತಕ್ಕಂತೆ ಮೃದುಗೊಳಿಸಿನ್ ಅವುಗಳನ್ನು ಬಲಿಷ್ಠಗೊಳಿಸುವಲ್ಲಿಯೂ ಸಹಾಯ ಮಾಡುತ್ತದೆ. 

[Back To Top]

II. ಕೂದಲಿಗೆ ಆರೋಗ್ಯ ಪ್ರಯೋಜನಗಳು:

೮. ಕೂದಲುದುರುವಿಕೆಯನ್ನು ತಡೆಗಟ್ಟುತ್ತದೆ: ಸರಾಸರಿ ಪ್ರತಿ ಮನುಷ್ಯ ದಿನಕ್ಕೆ ೫೦ ರಿಂದ ೧೦೦ ಕೂದಲೆಳೆಗಳನ್ನು ಕಳೆದುಕೊಳ್ಳುತ್ತಾರೆ. ಅದಕ್ಕಿಂದ ಹೆಚ್ಚಾದಲ್ಲಿ ಅಥವಾ ನೀವು ಕಳೆದುಕೊಂಡ ಕೂದಲ ಬದಲಿಗೆ ಹೊಸತಾದ ಕೂದಲುಗಳ ಬೆಳವಣಿಗೆ ಆಗದಿದ್ದಲ್ಲಿ, ಅದನ್ನು ಕೂದಲುದುರುವಿಕೆ ಎನ್ನುತ್ತಾರೆ. ಈ ರೀತಿಯ ಕೂದಲುದುರುವಿಕೆಯ ತೊಂದರೆಯನ್ನು ಅನಾನಸ್ ಹಣ್ಣಿನ ಸಹಾಯದಿಂದ ನಿವಾರಿಸಬಹುದು. ಅನಾನಸ್ ಹಣ್ಣಿನ ವಿಟಮಿನ್ ಸಿ ಈ ವಿಷಯದಲ್ಲಿ ನಿಮಗೆ ಸಹಾಯ ಮಾಡುತ್ತದೆ. ಅನಾನಸ್ ಹಣ್ಣಿನ ಸೇವನೆಯಿಂದ ನಿಮ್ಮ ಕೂದಲುದುರುವಿಕೆಯನ್ನು ನಿವಾರಿಸಬಹುದು. ಹಾರ್ಭಾವಸ್ಥೆಯಲ್ಲಿ ಕೂದಲುದುರುವಿಕೆ ಎಲ್ಲರಿಗು ಕಾಡುವ ಸಾಮಾನ್ಯ ಸಮಸ್ಯೆ. ಅನಾನಸ್ ಹಣ್ಣನ್ನು ಸೇವಿಸುವುದರಿಂದ ನಿಮಗೆ ಈ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ. 

೯. ಕೂದಲ ಪರಿಮಾಣವನ್ನು ಹೆಚ್ಚಿಸುತ್ತದೆ: ರಾಪುಂಜಿಲ್ ನ ರೀತಿಯ ಕೂದಲನ್ನು ಪಡೆಯುವ ಆಸೆ ನಿಮಗಿದೆಯೇ? ಹಾಗಿದ್ದರೆ, ಅನಾನಸ್ ಹಣ್ಣು ನಿಮಗೆ ಸಹಾಯ ಮಾಡಬಲ್ಲದು. ಅನಾನಸ್ ಹಣ್ಣಿನ ಪೌಷ್ಟಿಕ ಮೌಲ್ಯ ನಿಮ್ಮ ಕೂದಲಿನ ಕಿರುಚೀಲಗಳನ್ನು ಪೋಷಿಸಿ, ನಿಮ್ಮ ಕೂದಲ ಬೆಳವಣಿಗೆಗೆ ಉತ್ತೇಜಿಸುತ್ತದೆ. 

೧೦. ನೆತ್ತಿಗೆ ಸಂಬಂಧಿತ ತೊಂದರೆಗಳನ್ನು ನಿವಾರಿಸುತ್ತದೆ: ನೆತ್ತಿಗೆ ಸೋಂಕಾದಲ್ಲಿ ನಿಮ್ಮ ನೆತ್ತಿ ನೆವೆಭರಿತವಾಗಿ, ಕಿರಿಕಿರಿ ಉಂಟು ಮಾಡಬಹುದು. ಅನಾನಸ್ ಈ ರೀತಿಯ ತೊಂದರೆಯಿಂದ ತ್ವರಿತವಾಗಿ ಮುಕ್ತಿ ನೀಡುತ್ತದೆ. ಅನಾನಸ್ ನಲ್ಲಿರುವ ಆಂಟಿಯೋಕ್ಸಿಡೇಟಿವ್ ಕಿಣ್ವಗಳು ಉರಿಯೂತದ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಅನಾನಸ್ ಹಣ್ಣು ಎಲ್ಲಾ ರೀತಿಯ ನೆತ್ತಿಯ ಸಂಬಂಧಿತ ತೊಂದರೆಗಳನ್ನು ನಿವಾರಿಸುತ್ತದೆ. 

೧೧. ಶೀತವಾಗುವುದನ್ನು ತಡೆಯುತ್ತದೆ: ಅನಾನಸ್ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಬ್ರೊಮೆಲೈನ್ ಗಳಿವೆ. ಇವುಗಳಲ್ಲಿ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ. ಹಾಗಾಗಿ, ಅನಾನಸ್ ಹಣ್ಣನ್ನು ಸೇವಿಸುವುದರಿಂದ ಸಾಮಾನ್ಯ ಶೀತ ಮತ್ತು ಕೆಮ್ಮಣ್ಣು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಅನಾನಸ್ ಹಣ್ಣನ್ನು ಗರ್ಭಾವಸ್ಥೆಯಲ್ಲಿ ಸೇವಿಸುವುದರಿಂದ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯವಾಗುತ್ತದೆ. 

೧೨. ಒಸಡುಗಳನ್ನು ಆರೋಗ್ಯಕರವಾಗಿಸುತ್ತದೆ: ಅನಾನಸ್ ಹಣ್ಣನ್ನು ಉಪಯೋಗಿಸುವುದರಿಂದ ನಿಮ್ಮ ಹಲ್ಲುಗಳು ಮತ್ತು ಒಸಡುಗಳು ಬಲಿಷ್ಠಗೊಳ್ಳುತ್ತವೆ. ಅನಾನಸ್ ಹಣ್ಣಿನ ತುಂಡುಗಳನ್ನು ತಿನ್ನುವುದರಿಂದ ಹಲ್ಲು ಮತ್ತು ಒಸಡುಗಳು ಆರೋಗ್ಯಕರವೂ ಆಗುತ್ತವೆ. 

೧೩. ಸೈನಸೈಟಿಸ್ ಚಿಕಿತ್ಸೆ: ಸೈನಸೈಟಿಸ್, ಗಂಟಲು ನೋವು, ಬಾವು ಬರುವುದು - ಇಂತಹ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಅನಾನಸ್ ಹಣ್ಣು ಸಹಾಯಕಾರಿ. 

೧೪. ಮೂಳೆಗಳನ್ನು ಬಳಲಿಷ್ಠಗೊಳಿಸುತ್ತದೆ: ಅನಾನಸ್ ಹಣ್ಣಿನಲ್ಲಿರುವ ಮ್ಯಾಗ್ನೇಸಿಯಂಸ್ ನಿಮ್ಮ ಮೂಳೆಗಳನ್ನು ಮತ್ತು ಸಂಯೋಜಕ ಅಂಗಾಂಶಗಳನ್ನು ಬಲಿಷ್ಠಗೊಳಿಸುವಲ್ಲಿ ಪೂರಕ. 

೧೫. ಅಥೆರೋಸ್ಕ್ಲೆರೋಸಿಸ್ ತಡೆಗಟ್ಟುತ್ತದೆ: ಈ ಅರೋಗ್ಯ ಪರಿಸ್ಥಿತಿಯಲ್ಲಿ, ಅಪಧಮನಿಗಳ ಒಳಗೆ ಪ್ಲೇಕ್ ರಚನೆಯಿಂದ ಅಪಧಮನಿಗಳು ಕುಗ್ಗಿರುತ್ತವೆ. ಇದನ್ನು ತಡೆಗಟ್ಟುವುದು ಅನಾನಸ್ ಹಣ್ಣಿನ ಪ್ರಮುಖ ಪ್ರಯೋಜನಗಳಲ್ಲಿ ಒಂದು. 

೧೬. ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತದೆ: ಅಧಿಕ ರಕ್ತದೊತ್ತಡ ಒಂದು ಸಾಮಾನ್ಯ ಅರೋಗ್ಯ ತೊಂದರೆಗಳಲ್ಲಿ ಒಂದು. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಹಲವಾರು ತೊಂದರೆಗಳಿಗೆ ಕಾರಣವಾಗಬಹುದು. ಅಂತಹ ಸಂಗತಿಗಳಲ್ಲಿ ಅನಾನಸ್ ನಿಮ್ಮ ಸಹಾಯಕ್ಕೆ ಬರುತ್ತದೆ. ಗರ್ಭಾವಸ್ಥೆಯಲ್ಲಿ ಅನಾನಸ್ ಹಣ್ಣನ್ನು ಸೇವಿಸುವುದರಿಂದ ತಾಯಿ ಹಾಗೂ ಮಗು - ಇಬ್ಬರ ಆರೋಗ್ಯಕ್ಕೂ ಪೂರಕ. ಅನಾನಸ್ ಹಣ್ಣಿನಲ್ಲಿರುವ ಪೊಟ್ಯಾಸಿಯಂ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿರಿಸುತ್ತದೆ. 

೧೭. ಕರುಳಲ್ಲಿರುವ ಹುಳಗಳ ಚಿಕಿತ್ಸೆ: ಅನಾನಸ್ ಹಣ್ಣಿನಲ್ಲಿರುವ ಜೀರ್ಣಕಾರಿ ಕಿಣ್ವ ಬ್ರೊಮೆಲೈನ್, ಕರುಳಲ್ಲಿರುವ ಪಾರಾವಲಂಬಿ ಹುಳಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. 

೧೮. ಜೀರ್ಣಕ್ರಿಯೆಯಲ್ಲಿ ಪಾತ್ರ: ಅನಾನಸ್ ಹಣ್ಣಿನಲ್ಲೂರುವ ಬ್ರೊಮೆಲೈನ್, ವಿಟಮಿನ್ ಸಿ, ಮತ್ತು ನಾರಿನಂಶ ನಿಮ ದೇಹದ ಜೇರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. 

೧೯. ರೋಗನಿರುಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಅನಾನಸ್ ನ ಇತರ ಅರೋಗ್ಯ ಪ್ರಯೋಜನಗಳ ಜೊತೆಗೆ, ಈ ಹಣ್ಣು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರ ನಿರ್ವಹಿಸುತ್ತದೆ. 

೨೦. ಗರ್ಭಾವಸ್ಥೆಯಲ್ಲಿ ಅನಾನಸ್: ಮಾರ್ನಿಂಗ್ ಸಿಕ್ಕ್ನೆಸ್ಸ್ ಅಥವಾ ವಾಕರಿಕೆ ಅನೇಕ ಗರ್ಭಿಣಿಯರಿಗ ಕಾಡುವ ಸಾಮಾನ್ಯ ಸಮಸ್ಯೆ. ಅನಾನಸ್ ಹಣ್ಣನ್ನು ಸೇವಿಸುವುದರಿಂದ ಈ ತೊಂದರೆಗಳಿಂದ ಮುಕ್ತಿ ಪಡೆಯಬಹುದು. 

೨೧. ಉರಿಯೂತದ ವಿರೋಧಿ ಗುಣ: ಅನಾನಸ್ ಹಣ್ಣಿನ ಕೆಲವು ಲಾಭಗಳು ಉರಿಯೂತವನ್ನು ನಿವಾರಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿವೆ. ಅಂತಹ ಕೆಲವು ಅರೋಗ್ಯ ತೊಂದರೆಗಳು ಸಂಧಿವಾತ ಮತ್ತು ಇತರ ಅರೋಗ್ಯ ತೊಂದರೆಗಳು. 

೨೨. ಹೃದಯದ ಬಗ್ಗೆ ಕಾಳಜಿವಹಿಸುತ್ತದೆ: ಅನಾನಸ್ ಹಣ್ಣು ಸೇವಿಸುವುದರಿಂದ ನಿಮ್ಮ ದೇಹದ ಕೊಬ್ಬಿನಂಶ ಕಡಿಮೆಗೊಂಡು, ನಿಮ್ಮ ಹೃದಯಕ್ಕೆ ಸಂಬಂಧಿತ ಖಾಯಿಲೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. 

೨೩. ಫ್ರೀ ರಾಡಿಕಲ್ ತಡೆಗಟ್ಟುತ್ತದೆ: ಅನಾನಸ್ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಿ, ನಿಮ್ಮ ಜೀವಕೋಶಗಳಿಗೆ ಆಗಬಹುದಾದ ಹಾನಿಯನ್ನು ತಡೆಗಟ್ಟುತ್ತದೆ. 

೨೪. ಮಕ್ಯುಲರ್ ಅವನತಿ ತಡೆಗಟ್ಟುವಿಕೆ: ಈ ಅರೋಗ್ಯ ತೊಂದರೆಯಲ್ಲಿ ವಯಸ್ಸಾದವರೂ ಕ್ರಮೇಣ ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಅನಾನಸ್ ಹಣ್ಣಿನಲ್ಲಿರುವ ಬೀಟಾ-ಕೆರೋಟಿನ್ ಇಂತಹ ಅರೋಗ್ಯ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಸಹಾಯ ಮಾಡುತ್ತದೆ. 

೨೫. ಕ್ಯಾನ್ಸರ್-ವಿರೋಧಿ ಗುಣಲಕ್ಷಣ: ಅನಾನಸ್ ಹಣ್ಣಿನ ಹಲವಾರು ಅರೋಗ್ಯ ಲಾಭಗಳಲ್ಲಿ ಇದೂ ಕೂಡಾ ಒಂದು. ಈ ಹೆಣ್ಣಿನಲ್ಲಿರುವ ಆಂಟಿಯೋಕ್ಸಿಡಾಂಟ್ಸ್ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತವೆ. 

[Back To Top]

೪. ಅನಾನಸ್ ಹಣ್ಣಿನ ಅಡ್ಡಪರಿಣಾಮಗಳು (Side Effects Of Pineapple in Kannada):

ತಾಜಾ ಮತ್ತು ಬಲಿತ ಅನಾನಸ್ ಹಣ್ಣಿನ ಅರೋಗ್ಯ ಪ್ರಯೋಜನಗಳು ಹಲವಾರು. ಆದರೆ, ಹಣ್ಣು ಮಾಗದೇ ಇದ್ದರೆ, ಅದು ತೀವ್ರವಾದ ವಾಂತಿಯನ್ನು ಉಂಟುಮಾಡಬಹುದು. ನಿಮಗೆ ತಿಳಿದಿರಬೇಕಾದ ಕೆಲವು ಅಡ್ಡಪರಿಣಾಮಗಳನ್ನು ನಾವು ಇಲ್ಲಿ ವಿವರಿಸಿದ್ದೇವೆ.

‣ ನಿಮ್ಮದು ಸೂಕ್ಷ್ಮ ಸಂವೇದನೆಯ ಹೊಟ್ಟೆಯಾಗಿದ್ದರೆ, ಗರ್ಭಾವಸ್ಥೆಯಲ್ಲಿ ಅತಿಯಾಗಿ ಅನಾನಸ್ ಹಣ್ಣನ್ನು ಸೇವಿಸುವುದರಿಂದ ನೀವು ಎದೆಯುರಿತದಂತಹ ಅರ್ಗ್ಯ ಸಮಸ್ಯೆಯಿಂದ ಬಳಲಬಹುದು. ಅತಿಯಾದ ಅನಾನಸ್ ಹಣ್ಣಿನ ಸೇವನೆ ಕಾರಣದಿಂದ ಗರ್ಭಪಾತ ಅಥವಾ ಅವಧಿಗೆ ಮುನ್ನ ಪ್ರಸವ ವೇದನೆ ಆಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣ ಈ ಹಣ್ಣಿನಲ್ಲಿರುವ ಬ್ರೊಮೆಲೈನ್ ಅಂಶ. 

‣ ಅನಾನಸ್ ಹಣ್ಣಿನಲ್ಲಿರುವ ಬ್ರೊಮೆಲೈನ್ ಸೇವಿಸುವುದರಿಂದ ಪ್ರತಿಕೂಲ ಪ್ರಕ್ರಿಯೆಗಳು ಕೆಲವು ಇವೆ. ಉದಾಹರೆಣೆಗೆ: ವಾಕರಿಕೆ, ಚರ್ಮದ ದದ್ದು, ವಾಂತಿ, ಬಾಧಿ, ಇತ್ಯಾದಿ.

‣ ಅನಾನಸ್ ಹಣ್ಣಿನಲ್ಲಿ ಮೃದುಗೊಳಿಸುವ ಸ್ವಭಾವವಿರುವುದರಿಂದ ಅತಿಯಾಗಿ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಕೆನ್ನೆ ಮತ್ತು ಬಾಯಿ ಊದಿಕೊಳ್ಳುವ ಸಾಧ್ಯತೆ ಇರುತ್ತದೆ. 

ಈಗಾಗಲೇ ತಿಳಿದಿರುವಂತೆ ಅನಾನಸ್ ಹಣ್ಣಿನ ಲಾಭಗಳು, ಅಡ್ಡಪರಿಣಾಮಗಳಿಗಿಂತ ಹೆಚ್ಚಿದೆ. ಹಾಗಾಗಿ ಈ ಹಣ್ಣಿನ ಅರೋಗ್ಯ ಪ್ರಯೋಜನಗಳನ್ನು ಅನುಭವಿಸಲು ಈ ಹಣ್ಣನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಸೂಕ್ತ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon