ನವಯುಗದ ಗರ್ಭಧಾರಣೆಯ ಈ ಫೋಟೋಗಳು ನಿಮಗೆ ಈಗಲೇ ಗರ್ಭಿಣಿ ಆಗಬೇಕು ಎಂದೆನಿಸುವಂತೆ ಮಾಡುತ್ತದೆ
ಗರ್ಭಧಾರಣೆಯ ಒಂದು ಅತ್ಯುತ್ತಮ ಭಾಗ ಎಂದರೆ ಅದು ನಿಮ್ಮ ಬೆಳೆಯುತ್ತಿರುವ ಉದರವನ್ನ ಫೋಟೋಗಳಲ್ಲಿ ಕ್ಲಿಕ್ಕಿಸಿ ನೆನಪುಗಳ ಅಲ್ಮೇರಾದಲ್ಲಿ ಶೇಖರಿಸಿ ಇಡುವುದು. ಹೀಗೆ ವೃತ್ತಿಗ ಫೋಟೋಗ್ರಾಫರ್ ಅನ್ನು ಕರೆತಂದು ಗರ್ಭಧಾರಣೆಯ ಫೋಟೊಗಳನ್ನ ಕ್ಲಿಕ್ಕಿಸಿಕೊಳ್ಳುವುದು ಹೊಸತೇನಲ್ಲ ಆದರೆ ಈಗ ತಾಯಂದಿರು ಮುಂಚೆ ಕೇವಲ ಉಬ್ಬಿರುವ ಉದರ ಮಾತ್ರ ಕಾಣುವಂತೆ ಬೋರಿಂಗ್ ಸೈಡ್ ಪೋಸ್ ಬದಲು ಬೇರೇ ಬೇರೇ ರೀತಿ, ವಿನ್ಯಾಸ, ಭಂಗಿಯಲ್ಲಿ ತಮ್ಮ ಗರ್ಭಧಾರಣೆಯ ಚಿತ್ರಗಳನ್ನ ಸೆರೆಹಿಡಿದಿದ್ದಾರೆ. ಸೃಜನಶೀಲ ಫೋಟೋಗಳು ಈಗ ತೆಗೆಯಲ್ಪಡುತ್ತಿವೆ. ಈ ಫೋಟೊಗಳನ್ನ ನೋಡಿದರೆ ನಿಮಗೆ ಈಗಲೇ ಗರ್ಭಧರಿಸಿ ನೀವು ಕೂಡ ಹೀಗೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದೆನಿಸುವುದು!