Link copied!
Sign in / Sign up
4
Shares

ನವಜಾತ ಶಿಶುಗಳ ಬಗ್ಗೆ ನಿಮಗೆ ತಿಳಿಯದ 6 ಅದ್ಭುತ ಸಂಗತಿಗಳು!

ದೇವರ ಸೃಷ್ಟಿಯ ಅತ್ಯಂತ ನಾಜೂಕಾದ, ಮಮತೆವೆತ್ತ, ಸುಂದರ ರೂಪವೇ ‘ಮಕ್ಕಳು’ ! ಮಕ್ಕಳನ್ನು ನೋಡಿದ ಮಾತ್ರಕ್ಕೇ, ನಮ್ಮ ತುಟಿಯಂಚಿನಲ್ಲಿ ನಗುವೊಂದು ಬಿರಿಯುವುದು. ಸ್ವಲ್ಪ ದೊಡ್ಡ ಮಕ್ಕಳು ನಿಮಗೆ ಪ್ರತಿಕಿೃಯೆ ನೀಡುವರಾದರೂ, ಪುಟ್ಟ ಕಂದಮ್ಮಗಳು ಸದಾಕಾಲ ಬೆಕ್ಕಿನ ಮರಿಗಳಂತೆ ಕಣ್ಣು ಮುಚ್ಚಿ ಕೊಂಡಿರುವುದನ್ನು ಕಾಣಬಹುದು. ಆದರೂ ಕೆಲವೊಮ್ಮೆ ಆ ಕಂದಮ್ಮಗಳ ತುಟಿಯಲ್ಲಿ ಕಿರು ನಗುವೊಂದು ಲಾಸ್ಯವಾಡುವುದನ್ನು ನೀವು ಗಮನಿಸಿರಬಹುದು.

೧.ಅಳುವ ಮಕ್ಕಳು

ಗರ್ಭ ಪಾತ್ರೆಯಲ್ಲಿರುವಾಗಲೇ ಯಾವುದೇ ಮಗುವು ಮಾತನಾಡಲು ಕಲಿಯುವುದಿಲ್ಲ.ತಮ್ಮ ಸ್ವರ ತಂತುಗಳ ಮೇಲೆ ಹಿಡಿತವನ್ನು ಸಾಧಿಸಿ ಶಬ್ದಗಳಿಂದ ವ್ಯವಹರಿಸಲು ಮಕ್ಕಳಿಗೆ ಸಮಯಾವಕಾಶಗಳ ಅಗತ್ಯವಿದೆ.

ಹಾಗಾಗಿ ನಿಮ್ಮೊಂದಿಗೆ ವ್ಯವಹರಿಸಲು ಅಥವಾ ನಿಮ್ಮ ಗಮನವನ್ನು ತಮ್ಮತ್ತ ಸೆಳೆಯಲು, ಅಳುವುದನ್ನು ಬಿಟ್ಟರೆ ಮಕ್ಕಳಿಗೆ ಬೇರೆ ದಾರಿಯಿಲ್ಲ. ಇನ್ನೊಂದು ಬಾರಿ ಮಗುವು ಅತ್ತರೆ, ಅದನ್ನು ಎತ್ತಿ ಸಮಾಧಾನಗೊಳಿಸುವ ಬದಲು, “ಮಗು ಯಾಕಾಗಿ ಅಳುತ್ತಿದೆ ?” ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ.

೨.ವಿಲಕ್ಷಣ ರೂಪ

ಮಗುವಿನ ತಲೆ ಸ್ವಲ್ಪ ಅಸಾಧಾರಣವಾಗಿ ತೋರಬಹುದು. ಶರೀರದ ತುಂಬಾ ಭ್ರೂಣ ಕೇಶ(ಲೆನುಗೊ)ಗಳಿಂದ ಆವೃತ್ತವಾಗಿರುವುದು. ಸದಾ ಮುಚ್ಚಿಕೊಂಡ ಕಣ್ಣುಗಳಿಂದ ಕೂಡಿದ ಮಗುವು, ಬಾತು ಕೊಂಡಿರುವ ಮುಖ ಚಹರೆಯನ್ನು ಹೊಂದಿರುವುದು. ಆದರೆ ನೀವೇನೂ ಗಾಬರಿ ಪಡಬೇಕಾಗಿಲ್ಲ. ಮಕ್ಕಳ ಶರೀರವು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಂತೆಯೇ, ನಿಮ್ಮ ಸಂಕಲ್ಪದಂತಿರುವ ಸುಂದರ ಕೂಸೊಂದು ನಿಮ್ಮ ಕೈಸೇರುವುದು.

೩.ಒಣ ಚರ್ಮ

ನಿಮ್ಮನ್ನು ಸತತವಾಗಿ ಒಂಭತ್ತು ತಿಂಗಳ ಕಾಲ ದ್ರವಾಂಶ ತುಂಬಿದ ಚೀಲದಲ್ಲಿಟ್ಟು, ಹಠತ್ತಾಗಿ ಒಮ್ಮೆಗೆ ಆ ಚೀಲದಿಂದ ಹೊರ ತೆಗೆದರೆ,ನಿಮಗೂ ಒಣಚರ್ಮ ಗೋಚರಿಸುವುದು. ಮಕ್ಕಳ ಮೃದುವಾದ ಚರ್ಮವು ಒಣಗುವುದು. ಇದು ಪ್ರಕೃತಿ ಸಹಜವಾದುದರಿಂದ ನಿಮ್ಮ ಯಾವುದೇ ಹಸ್ತಕ್ಷೇಪವೂ ಬೇಕಾಗಿಲ್ಲ. ಆದರೂ ಮಕ್ಕಳ ಚರ್ಮವನ್ನು ತೇವವಾಗಿರುವಂತೆ ಮಾಡ ಬಯಸುವಿರಾದರೆ ಅಲರ್ಜಿಯನ್ನುಂಟು ಮಾಡದಂತಹ ಯಾವುದಾದರೂ ಬೇಬಿ ಮೋಯ್ಚುರೈಸರ್‌ಗಳನ್ನು ಉಪಯೋಗಿಸಬಹುದು.

೪.ಹೊಕ್ಕುಳ ಬಳ್ಳಿ

ನವಜಾತ ಶಿಶುಗಳಲ್ಲಿ ಕರುಳಬಳ್ಳಿಯಿನ್ನೂ ಮಗುವಿಗಂಟಿಕೊಂಡಿರುವುದನ್ನು ಗಮನಿಸಿರಬಹುದು. ನೀವೇನು ಚಿಂತಿತರಾಗಬೇಕಾದ್ದಿಲ್ಲ.ಕೆಲ ಕಾಲಗಳ ನಂತರ ತನ್ನಿಂದ ತಾನೇ ಉದುರಿ ಬೀಳುವುದು. ಸ್ವಚ್ಛವಾಗಿ, ಒಣಗಿಸಿಟ್ಟು ಕೊಂಡರೆ ಕೇವಲ ಎರಡು ವಾರಗಳಲ್ಲಿ ಹೊಕ್ಕುಳ ಬಳ್ಳಿಯ ತುಂಡು ಬಿದ್ದು ಹೋಗುವುದು.ಮಗುವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆಗಾಗ ಸ್ಪಾಂಜ್ ಬಾತ್ ಮಾಡಿಸಿರಿ. ಸ್ನಾನ ಮಾಡಿಸುವಾಗ ಹೊಕ್ಕಳ ಬಳ್ಳಿಯ ಒದ್ದೆಯಾದರೆ ಹತ್ತಿಯಿಂದ ಅಥವಾ ಬಟ್ಟೆಯಿಂದ ನೀರನ್ನು ಸಂಪೂರ್ಣವಾಗಿ ಒತ್ತಿ ತೆಗೆಯಿರಿ.

೫.ಮುಂಜಾಗರೂಕತೆಯಿಂದ ಹೊರಗಡಿಯಿರಿಸಿರಿ

ದಿನವಿಡೀ ಮನೆ ಒಳಗಡೆಯೇ ಕುಳಿತುಕೊಳ್ಳಬೇಕೆಂದು ನಿಮಗೆ ಅಥವಾ ನಿಮ್ಮ ಮಗುವಿಗೆ ಯಾವುದೇ ಕಡ್ಡಾಯ ವಿಧಿಸಿಲ್ಲ. ಸಾಧಾರಣವಾದ ನಿಮ್ಮ ಜೀವನ ಶೈಲಿಯನ್ನು ಮುಂದುವರಿಸಿ. ಯಾವಾಗ ಬೇಕೆಂದಾಗ, ಹೊರಗಡೆ ಹೋಗಿ ಬನ್ನಿ. ಆದರೆ ಮಗುವನ್ನು ರಕ್ಷಿಸುವಂತೆ ಕೆಲವು ಮುಂಜಾಗರೂಕತೆಗಳನ್ನು ಪಾಲಿಸಿಕೊಳ್ಳಿ. ಜನಜಂಗುಳಿಯಿಂದ ದೂರವಿರಿ, ಹಲವಾರು ಜನರು ನಿಮ್ಮ ಮಗುವನ್ನು ಮುಟ್ಟದಂತೆ ಜಾಗ್ರತೆ ವಹಿಸಿ. ಮಗುವನ್ನು ಸೂರ್ಯ ತಾಪ ತ‍ಟ್ಟದಂತೆ ನೋಡಿಕೊಳ್ಳಿ.

೬.ದಿನವಿಡೀ ಕೋಳಿ ನಿದ್ರೆ

ನವಜಾತ ಶಿಶುಗಳು ದಿನದ ಪ್ರತೀ ಎರಡು ಮೂರು ಗಂಟೆಗಳಿಗೊಮ್ಮೆ, ನಿದ್ದೆಯಿಂದ ಎಚ್ಚೆತ್ತು ಅಳುತ್ತಿರುತ್ತದೆ. ಮೊಲೆಯೂಡಿಸಿದ ಬಳಿಕ ಪುನಃ ನಿದ್ರೆ ಹೋಗುತ್ತದೆ. ಹಾಗಾಗಿ ದಿನದ ಅಥವಾ ರಾತ್ರಿಯ ಹೊತ್ತಲ್ಲಿ ನಿಮಗೆ ಚೆನ್ನಾಗಿ ಮಲಗಿಕೊಳ್ಳಲು ಅಥವಾ ವಿಶ್ರಾಂತಿ ಪಡೆಯಲು ಸಮಯ ಸಿಗದು. ಆದರೆ ಚಿಂತಿಸದಿರಿ, ಮಕ್ಕಳು ಬೆಳೆಯುತ್ತಿದ್ದಂತೆಯೇ ಕರಾರುವಕ್ಕಾದ ನಿದ್ರಾ ಸಮಯವನ್ನು ಪಾಲಿಸುವುದರಿಂದ, ಅದಕ್ಕೆ ಅನುಗುಣವಾಗಿ ನೀವು ವಿಶ್ರಾಂತಿ ತೆಗೆದುಕೊಳ್ಳಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon