Link copied!
Sign in / Sign up
2
Shares

ಮಕ್ಕಳಿಂದ ಪೋಷಕರು ದೂರವಿರುವುದು : ನಾಣ್ಯದ ಎರಡೂ ಮುಖಗಳನ್ನೂ ನೀವು ನೋಡಿದ್ದೀರಾ?

ಒಬ್ಬ ವ್ಯಕ್ತಿ ಸತ್ತ ನಂತರ ಅವನ ಬಗ್ಗೆ ಎಲ್ಲರೂ ಒಳ್ಳೆಯ ಮಾತನ್ನೇ ಆಡುತ್ತಾರೆ, ಅದು ಆ ವ್ಯಕ್ತಿ ತನ್ನ ಬದುಕಿನಲ್ಲಿ ಒಳಿತನ್ನ ಮಾಡಿದ್ದರು ಅಥವಾ ಇಲ್ಲದಿದ್ದರೂ. ಏಕೆಂದರೆ ಅದು ಸಮಾಜವು ಬೆಳೆಸಿಕೊಂಡು ಬಂದ ಒಂದು ಹವ್ಯಾಸ. ನಾವು ಯಾವಾಗಲಾದರೂ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ವೃದ್ಧರನ್ನ ನೋಡಿದಾಗ, ನಾವು ಅವರು ಅಲ್ಲಿ ಏಕೆ ಇರುವರು ಎಂದು ತಿಳಿಯುವ ಮುನ್ನವೇ ಅವರ ಮಕ್ಕಳನ್ನ ನಾವು ಶಪಿಸುತ್ತೇವೆ. ಇದು ಕೂಡ ನಮ್ಮ, ನಮ್ಮ ಸಮಾಜದ ಪೂರ್ವಗ್ರಹಪೀಡಿತ ಯೋಚನೆಗಳಿಂದ ಉಂಟಾಗುವ ಭಾವನೆ. ಆದರೆ ಬಹುತೇಕ ಅಲ್ಲವೆಂದರೂ ಬಹಳಷ್ಟು ಬಾರಿ ವೃದ್ಧರು ಅಲ್ಲಿರುವುದಕ್ಕೆ ಕಾರಣ ಅವರಿಗೆ ಗೊತ್ತೋ, ಗೊತ್ತಿಲ್ಲದೇ ಅವರೂ ಕಾರಣ ಆಗಿರುತ್ತಾರೆ. ತಪ್ಪು ತಿಳಿಯಬೇಡಿ, ಇಲ್ಲಿ ಕೇವಲ ನಾವು ವೃದ್ಧಾಶ್ರಮವನ್ನ ಒಂದು ಉದಾಹರಣೆಗಾಗಿ ತೆಗೆದುಕೊಂಡಿದ್ದೀವಿ. ಇಲ್ಲಿ ನಾವು ಹೇಳಲು ಹೊರಟಿರುವುದು ತಮ್ಮ ಮಕ್ಕಳಿಂದ ಬೇರ್ಪಡೆ ಹೊಂದು ಪೋಷಕರು ಬೇರೆ ಕಡೆ ವಾಸಿಸುವ ಬಗ್ಗೆ.


ಹೀಗೆ ಬೇರೆ ಕಡೆ ವಾಸಿಸುವ ಪೋಷಕರೆಲ್ಲರೂ ತಮ್ಮ ಮಗ, ಸೊಸೆಯ ಕಾರಣದಿಂದಲೇ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ನೀವು ಹೇಳಲು ಆಗುತ್ತದೆಯೇ? ಇಲ್ಲ, ಎಲ್ಲಾ ಸಮಯದಲ್ಲೂ ಇದು ನಿಜವಾಗಿರುವುದಿಲ್ಲ. ನಾವು ಅಧ್ಯಯನ ಮಾಡಿದರೆ, ಪೋಷಕರು, ವಯೋವೃದ್ಧರು ತಮ್ಮ ಮಕ್ಕಳನ್ನ ತ್ಯಜಿಸಿ ಬೇರೆ ಕಡೆ ಬದುಕುತ್ತಾರೆ ಎಂದರೆ ಅದಕ್ಕೆ ಮೂರು ಕಾರಣಗಳು ಇವೆ ಎಂಬುದು ತಿಳಿಯುತ್ತದೆ.


೧. ಮೊದಲನೆಯದಾಗಿ ಒಳ್ಳೆಯ ಕಾರಣದಿಂದ ಶುರು ಮಾಡೋಣ. ಬಹಳಷ್ಟು ವೃದ್ಧರು ತಮ್ಮ ಮಕ್ಕಳೊಂದಿಗೆ ಯಾವುದೇ ಭಿನ್ನಾಭಿಪ್ರಾಯ, ಜಗಳ, ಮನಸ್ತಾಪಗಳನ್ನ ಹೊಂದಿರದೆ ಇದ್ದರೂ, ಅವರು ವೃದ್ಧಾಶ್ರಮಕ್ಕೆ ಬರುತ್ತಾರೆ. ಅದಕ್ಕೆ ಕಾರಣ, ಅವರಿಗೆ ಅವರ ವಯಸ್ಸಿನ ಜನರೊಂದಿಗೆ, ಸಮಾನ ಮನಸ್ಕರರೊಂದಿಗೆ ಕಾಲ ಕಳೆಯುವ, ಒಡನಾಟ ಹೊಂದುವ ಆಸೆ ಇರುತ್ತದೆ. ಅವರು ಇದರಲ್ಲಿ ಖುಷಿ ಕಂಡುಕೊಳ್ಳುತ್ತಾರೆ. ಇದು ಕೇವಲ ಒಂಟಿ ಪೋಷಕರಿಗೂ ಅನ್ವಯವಾಗುತ್ತದೆ. ಅವರ ಪ್ರಕಾರ ಅವರು ಮುಕ್ತಜೀವಿಗಳಾಗಿರುತ್ತಾರೆ. ಅವರು ತಮ್ಮ ಮಕ್ಕಳ ಜೀವನದಲ್ಲಿ ತಾವು ಮೂಗು ತೂರಿಸಬಾರದು ಎಂದು ಮತ್ತು ತಾನು ಇತರರಿಗೆ ಭಾರವಾಗದೆ ತನಗಿಷ್ಟವಾದಂತೆ ಬದುಕಬೇಕು ಎಂದುಕೊಳ್ಳುತ್ತಾರೆ. ಇವರು ದೂರವಿದ್ದಷ್ಟೂ ಪ್ರೀತಿ ಹೆಚ್ಚುತ್ತದೆ ಎಂಬುದನ್ನ ನಂಬುತ್ತಾರೆ. ಸದಾಕಾಲ ಜೊತೆಯಲ್ಲಿದ್ದರೆ ಮನಸ್ತಾಪ, ಭಿನ್ನಾಭಿಪ್ರಾಯ ಉಂಟಾಗುವುದು ಖಂಡಿತ ಎಂದು ಇವರು ಭಾವಿಸುತ್ತಾರೆ. ಇಲ್ಲಿ ಪೋಷಕರು ಮತ್ತು ಅವರ ಮಗ, ಸೊಸೆ ನಡುವೆ ಯಾವುದೇ ರೀತಿಯ ವೈಷಮ್ಯವಾಗಲಿ ಅಥವಾ ಕಹಿ ಭಾವನೆಗಳು ಆಗಲಿ ಇರುವುದಿಲ್ಲ.


೨. ಎರಡನೇ ರೀತಿಯ ಜನರು ಎಂದರೆ, ಅದು ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗಿರುವ ಪೋಷಕರು. ನಮ್ಮ ಪೂರ್ವಗ್ರಹಪೀಡಿತ ಯೋಚನೆಗಳು ರೂಪುಗೊಂಡಿರುವುದು ಇಂತಹ ಪ್ರಕರಣಗಳಿಂದಲೇ. ನಾವು ವೃದ್ಧಾಶ್ರಮ ಎಂದರೆ ಮೊದಲು ನಮ್ಮ ತಲೆಯಲ್ಲಿ ಬರುವ ಯೋಚನೆಯೇ ಈ ವಿಭಾಗದ ಜನರ ಬಗ್ಗೆ. ಈ ರೀತಿಯಾಗಿ ಮಕ್ಕಳಿಂದ ಬೇರೆಯಾಗಿರುವ ಪೋಷಕರ ಬಗ್ಗೆ ಕಾಳಜಿ ವಹಿಸುವುದಿರಲಿ, ನೋಡಲೂ ಸಹಾ ಮಕ್ಕಳು ಮನಸು ಮಾಡುವುದಿಲ್ಲ. ಹೀಗೆ ವೃದ್ದಾಶ್ರಮ ಸೇರುವ ಪೋಷಕರ ಪ್ರಕರಣಗಳನ್ನೂ ನಾವು ಎರಡು ಭಾಗಗಳಾಗಿ ವಿಂಗಡಿಸಬಹುದು.

ಮೊದಲನೇ ರೀತಿಯಲ್ಲಿ, ಸೊಸೆ ಒಳ್ಳೆಯ ಮನಸ್ಸಿನವಳು ಆಗಿದ್ದು, ಆಕೆ ತನ್ನ ಅತ್ತೆ-ಮಾವನಿಗೆ ಒಳ್ಳೆಯದನ್ನೇ ಬಯಸಿದರೂ, ಮಗನು ಆತನ ಪೋಷಕರ ಬಗ್ಗೆ ನಿರ್ಲಕ್ಷ ಹೊಂದಿರುವುದು. ಇಂತಹ ಸಮಯದಲ್ಲಿ ಸೊಸೆಯು ಅತ್ತೆ-ಮಾವನ ಪರವಾಗಿದ್ದರೂ, ಮಗನ ಜೊತೆಗಿನ ಮನಸ್ತಾಪಗಳ ಕಾರಣ ಪೋಷಕರು ಬೇರೆಯಾಗಬೇಕಾಗುತ್ತದೆ.

ಎರಡನೇ ರೀತಿಯಲ್ಲಿ, ಮಗ ಒಳ್ಳೆಯವನು ಅಥವಾ ಕೆಟ್ಟವನೋ ಇದ್ದು, ಸೊಸೆಯು ಕೂಡ ಆತನ ಯೋಚನೆಗಳನ್ನ ತಿರುಚಿ, ಆತನನ್ನು ಆತನ ಪೋಷಕರ ಮೇಲೆ ಎತ್ತಿಕಟ್ಟಬಹುದು. ಆಗಲೂ ಪೋಷಕರು ಬೇರೆ ಆಗಬೇಕಾಗುತ್ತದೆ.


೩. ಮೂರನೇ ರೀತಿಯೇ, ನಾವು, ಅಂದರೆ ನಮ್ಮ ಸಮಾಜವು ನೋಡದ ನಾಣ್ಯದ ಇನ್ನೊಂದು ಮುಖ. ಇದರರ್ಥ, ಕೆಲವೊಮ್ಮೆ ಪೋಷಕರು ಮಕ್ಕಳಿಂದ ಬೇರೆಯಾಗುವುದಕ್ಕೆ ಕಾರಣ ಅವರೇ ಆಗಿರುತ್ತಾರೆ. ಕೆಲವರು ಸ್ವಾಭಿವಕವಾಗಿ ಹೆಚ್ಚು ಭಂಡತನ, ಹೆಚ್ಚು ಅಧಿಕಾರ ಮನೋಭಾವ ಹೊಂದಿರುತ್ತಾರೆ. ಇಂತವರು ತಮ್ಮ ಮಕ್ಕಳ ಜೀವನದಲ್ಲಿ ಬಹಳಷ್ಟು ಬಾರಿ ಅನಗತ್ಯವಾಗಿ ಮೂಗು ತೂರಿಸಬಹುದು ಮತ್ತು ಅವರ ಮಾತಿನಂತೆ ನಡೆದುಕೊಳ್ಳದಿದ್ದರೆ ತಾವು ಮನೆ ಬಿಟ್ಟು ಹೋಗುವುದಾಗಿಯೂ ಧಮಕಿ ಹಾಕಬಹುದು. ಇವರ ಕೆಲವೊಂದು ನಡೆಗಳನ್ನ ಸ್ವತಃ ತಾವೇ ಪಾಲಿಸದಿದ್ದರೂ, ಅದನ್ನ ಮಕ್ಕಳ ಮೇಲೆ ಹೇರುವ ಪ್ರಯತ್ನ ಮಾಡುತ್ತಾರೆ. ಬೋಧನೆಯು ನುಡಿದಂತೆ ನಡೆದಾಗ ಮಾತ್ರ ಚೆನ್ನಾಗಿರುತ್ತದೆ. ಇಂತವರು ತಮ್ಮ ಮಕ್ಕಳು, ಸೊಸೆಯಂದಿರು, ಹೊಸ ಪೀಳಿಗೆಯ ಕುಟುಂಬದಲ್ಲಿ ಅಧಿಕಾರ ಮನೋಭಾವದಿಂದ ತಮ್ಮ ನೆಮ್ಮದಿ, ಮನೆಮಂದಿಯ ನೆಮ್ಮದಿ ಕೆಡಿಸಿಕೊಳ್ಳುತ್ತಾರೆ. ಇವರ ಇದೇ ಭಂಡತನವು ಇವರು ಮೊದಲೇ ಧಮಕಿ ಹಾಕಿದಂತೆ ತಮ್ಮ ಮಕ್ಕಳನ್ನ ತ್ಯಜಿಸಿ ಬೇರೆಯಾಗಿ ಬದುಕುವುದಕ್ಕೆ ಮನಸ್ಸು ಮಾಡುವಂತೆ ಮಾಡಿಬಿಡುತ್ತದೆ.

ಹೀಗೆ ಬೇರೆಯಾಗುವ ಪೋಷಕರ ಮೇಲೆ ಮಕ್ಕಳಿಗೆ ಮನಸ್ತಾಪಗಳು ಇದ್ದರೂ, ಯಾವುದೇ ಕಹಿ ಭಾವನೆ ಇರುವುದಿಲ್ಲ. ಹೀಗಾಗಿ ಇವರ ಮಕ್ಕಳು ಇವರನ್ನ ವಿಚಾರಿಸಲು ವೃದ್ಧಾಶ್ರಮಕ್ಕೆ ಭೇಟಿ ಕೂಡ ಕೊಡುವರು. ಆದರೆ ಈ ರೀತಿಯ ಪೋಷಕರು ಅಲ್ಲಿಯೂ ತಮ್ಮ ಭಂಡತನ ಪ್ರದರ್ಶಿಸುವವರು.

ಬದುಕುಗಳು, ಕುಟುಂಬಗಳ ಮೇಲೆ ಇಂತಹ ಎಷ್ಟೊಂದು ಅಂಶಗಳು, ಅಭಿಪ್ರಾಯಗಳು, ಸನ್ನಿವೇಶಗಳು ಪ್ರಭಾವ ಬೀರಿದರೂ, ಸಮಾಜವು ನೋಡುವುದು ನಾಣ್ಯದ ಕೇವಲ ಒಂದು ಮುಖವನ್ನ ಮಾತ್ರವೇ. ಪ್ರತಿಯೊಂದು ಬಾರಿ ನೀವು ವೃದ್ದಾಶ್ರಮದ ಬಗ್ಗೆ ಕೇಳಿದಾಗ, ನೀವು ಅಲ್ಲಿರುವ ಜನರ ಮಕ್ಕಳನ್ನ, ಸೊಸೆಯಂದಿರನ್ನೇ ದೂಷಿಸುವುದು, ಶಪಿಸುವುದು ಎಷ್ಟು ಸೂಕ್ತ? ಹೀಗಾಗಿ ಪ್ರತಿಯೊಂದು ಕಥೆಯ ಎರಡೂ  

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon