Link copied!
Sign in / Sign up
7
Shares

ನಾನು ಹೆರಿಗೆ ಸಮಯಕ್ಕೆ ಹತ್ತಿರವಾಗಿದ್ದೇನೆ ಎಂದು ಹೇಗೆ ತಿಳಿಯುತ್ತದೆ?

ಹೆರಿಗೆ ಸಮಯ ಹತ್ತಿರ ಬಂದಿದೆ ಎಂಬುದನ್ನು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ಪ್ರತಿಯೊಬ್ಬ ಮಹಿಳೆಯ ಹೆರಿಗೆಯ ಸಮಯವೂ ವಿಭಿನ್ನವಾಗಿರುತ್ತದೆ. ಅದು ಹೇಗೆ ಮತ್ತು ಯಾವಾಗ ಶುರುವಾಗುತ್ತದೆ ಎಂಬುದು ಪ್ರತಿ ಮಹಿಳೆಯರಲ್ಲೂ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಆದರೆ ಕೆಲವು ಸಾಮಾನ್ಯ ಚಿಹ್ನೆಗಳು ನಿಮ್ಮ ಹೆರಿಗೆ ಸಮಯ ಹತ್ತಿರವಾಗಿರುವುದನ್ನು ಸೂಚಿಸುತ್ತದೆ.

ನೀವು ಗರ್ಭಿಣಿಯಾಗಿದ್ದಾಗ ನಿಮಗೆ ಎಲ್ಲಾ ರೀತಿಯ ಭಾವನೆಗಳು ಮತ್ತು ಸಂವೇದನೆಗಳಿಗೆ ಒಳಗಾಗುತ್ತೀರಿ. ಕೆಲವು ಚಿಹ್ನೆಗಳು ನೀವು ಹೆರಿಗೆಗೆ ತುಂಬಾ ಸಮೀಪದಲ್ಲಿರುವಿರಿ ಎಂಬುದನ್ನು ಹೇಳುತ್ತವೆ. ಕೆಲವು ಚಿಹ್ನೆಗಳು ನೀವು ಹೆರಿಗೆಯಲ್ಲಿ ಪಾಲ್ಗೊಳ್ಳುತ್ತಿರುವಿರಿ ಎಂದು ಹೇಳುತ್ತವೆ, ಆದರೆ ಹೆರಿಗೆಯು ಒಂದು ಪ್ರಕ್ರಿಯೆ. ಇದು ಒಂದು ಗಂಟೆಯಿಂದ ಹಲವು ಗಂಟೆಯವರೆಗೂ ಸಮಯವನ್ನು ತೆಗೆದುಕೊಳ್ಳಬಹುದು.

ಅಂತಹ ಕೆಲವು ಚಿಹ್ನೆಗಳು ಇಲ್ಲಿವೆ

೧.ಶಿಶುವು ಗರ್ಭದಿಂದ ಹೊರಬರುವ ಅಥಾವ ಹೊರಬರಲು ತನ್ನ ಸ್ಥಾನವನ್ನು ಬದಲಿಸಿಕೊಳ್ಳುವ ಸಮಯದಿಂದ ನಿಮ್ಮ ಹೆರಿಗೆ ಸಮಯ ಪ್ರಾರಂಭವಾಗುತ್ತದೆ.

೨.ನಿಮ್ಮ ಪೆಕ್ಕೆಲುಬು ಹಗುರ ಎನಿಸಿದರೆ ಅದಕ್ಕೆ ಮಗುವು ಹೊರಬರಲು ನಿಮ್ಮ ಯೋನಿಯ ಹತ್ತಿರ ಬಂದಿರುವುದು ಕಾರಣ.

೩.ಮೊದಲಿನಿಗಿಂತ ಆರಾಮದಾಯಕವಾಗಿ ಉಸಿರಾಡಲು ಆಗುತ್ತದೆ, ಏಕೆಂದರೆ ಮಗುವು ನಿಮ್ಮ ಉದರದಿಂದ ಕೆಳಗೆ ಬಂದಿರುವುದರಿಂದ ಒತ್ತಡ ಕಡಿಮೆಯಾಗಿರುತ್ತದೆ.

೪.ನಿಯಮಿತವಾಗಿ, ಮೂತ್ರಮಾಡುವುದು, ಮಗುವು ನಿಮ್ಮ ಮೂತ್ರ ಕೋಶವನ್ನು ಅದುಮುವುದರಿಂದ ಹೀಗೆ ಆಗುತ್ತದೆ.

೫.ಎದೆಯುರಿ ಕಡಿಮೆಯಾಗುತ್ತದೆ(ಕೆಲವರಲ್ಲಿ ಮಾತ್ರ).

೬.ಯೋನಿಯಿಂದ ವಿಸರ್ಜನೆಯಾಗುವುದು ಹೆಚ್ಚಾಗುತ್ತದೆ. ಒಂದು ದಪ್ಪ ಲೋಳೆಯ ಪ್ಲಗ್ ನಿಮ್ಮ ಗರ್ಭಾವಸ್ಥೆಯ ಆರಂಭದಿಂದ ಗರ್ಭಕಂಠವನ್ನು ಆವರಿಸಿರುತ್ತದೆ. ಸೆರ್ವಿಕ್ಸ್ ಹಿಗ್ಗಲು ಪ್ರಾರಂಭಿಸಿದಾಗ, ಮ್ಯೂಕಸ್ ಯೋನಿಯ ಕಡೆ ಬರಲು ಪ್ರಾರಂಭಿಸುತ್ತದೆ. ಇದು ದ್ರವ ರೂಪದಲ್ಲಿ ನಿಮ್ಮ ಯೋನಿಯಿಂದ ಹೊರಗೆ ಬರಬಹುದು, ಮತ್ತು ಇದು ಪಿಂಕ್ ಅಥವಾ ತಿಳಿ ರಕ್ತದ ರೂಪದಲ್ಲಿ ಇರುತ್ತದೆ.

೭.ನಿಮ್ಮ ಹೊಟ್ಟೆಯೊಳಗಡೆ ಯೋನಿಯ ಕಡೆಗೆ ನೂಕಿದಂತೆ ಅಥವಾ ತಳ್ಳಿದಂತೆ ಅನಿಸುತ್ತದೆ.

೮.ನಿಮ್ಮ ಕೆಳ ಹೊಟ್ಟೆ ನೋವಲು ಶುರುವಾಗುತ್ತದೆ, ಇದಕ್ಕೆ ನಿಮ್ಮ ಸ್ನಾಯುಗಳು ಹಿಗ್ಗುತ್ತಿರುವುದು ಕಾರಣ.

ಈ ಮೇಲಿನ ಚಿಹ್ನೆಗಳು ಕಾಣಿಸಿಕೊಂಡರೆ ನೀವು ಹೆರಿಗೆಗೆ ಹತ್ತಿರವಿರುವಿರಿ ಎಂದು, ಕೂಡಲೇ ನೀವು ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಈ ಸಮಯದಿಂದ ನಿಮಗೆ ಯಾವಾಗ ಬೇಕಾದರೂ ಮಗುವು ಜನಿಸುವ ಸಮಯ ಬರಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon