Link copied!
Sign in / Sign up
37
Shares

ನನ್ನ ಮಗುವಿಗೆ ಊಟವನ್ನು ಅಗಿಯಲು ಆಗುವುದಿಲ್ಲ - ನಾನು ಏನು ಮಾಡಲಿ?

ಪ್ರತಿ ವ್ಯಕ್ತಿಯ ಕಲಿಕೆಯ ಸಾಮರ್ಥ್ಯ ಬೇರೆ ಬೇರೆಯಾಗಿರುತ್ತದೆ. ಮಕ್ಕಳಿಗೆ ಇದು ವಿಶೇಷವಾಗಿ ಅನ್ವಯಿಸುತ್ತದೆ. ಮಕ್ಕಳು ತಮ್ಮದೇ ಆದ ವೇಗದಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ನಿಮ್ಮ ಸ್ನೇಹಿತರ ಮಗು ಒಂದೂವರೆ ವರ್ಷಕ್ಕೆ ಅಗಿಯುವುದನ್ನ ಕಲಿತಿರಬಹುದು, ನಿಮ್ಮ ಮಗುವಿಗೆ ಎರಡು ವರ್ಷಗಳಾದರೂ ಅಗಿಯುವುದು ಗೊತ್ತಿಲ್ಲದೆ ಇರಬಹುದು. ಪರವಾಗಿಲ್ಲ! ಮಕ್ಕಳು ಕಲಿಯಲು ಕೆಲ ಸಮಯ ತೆಗೆದುಕೊಳ್ಳುತ್ತಾರೆ, ಆದರೆ ಅವರ ಕಲಿಕೆಯನ್ನು ಚುರುಕುಗೊಳಿಸಲು ದಾರಿಗಳಿವೆ.

೧. ಸ್ನಾಯು ಬೆಳವಣಿಗೆ

ಬಾಯಿ ಹಾಗೂ ದವಡೆಯ ಸ್ನಾಯುಗಳಿಗೆ ಕೆಲಸ ಕೊಡುವಂತಹ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ. ಈ ಸ್ನಾಯುಗಳೇ ಅಗಿಯುವ ಕಾರ್ಯದಲ್ಲಿ ಭಾಗಿಯಗಿರುವುದರಿಂದ ಇವುಗಳ ಬೆಳವಣಿಗೆಯ ನಿಟ್ಟಿನಲ್ಲಿ, ನಿಮ್ಮ ಮಗು ಬಡಬಡಿಸುವಾಗ ಹಾಗು ಏನಾದರು ಹೇಳಲು ಪ್ರಯತ್ನಿಸಿದಾಗ ಉತ್ತೇಜಿಸಿ. ವಿಚಿತ್ರ ಮುಖಭಾವಗಳು ನೀವು ತೋರಿದಾಗ, ಅವುಗಳನ್ನು ಅಣಕಿಸಲು ನಿಮ್ಮ ಮಗುವನ್ನು ಪ್ರೇರೇಪಿಸಿ, ಮುಖದ ಸ್ನಾಯುಗಳಿಗೆ ತಾಲೀಮಾಗುತ್ತದೆ.

೨. ಕಕ್ಕುವುದು

ಕಕ್ಕುವುದು ಮಾನವನ ಉಳಿವಿಗಾಗಿ ಬೇಕಾಗಿರುವ ಮೂಲಭೂತ ಪ್ರತಿಫಲಿತವಾದ ಕಾರ್ಯವಾಗಿದ್ದು, ಉಸಿರುಗಟ್ಟಿಸುವ ಪದಾರ್ಥಗಳೇನಾದರು ಇದ್ದಲ್ಲಿ ಬಾಯಿಂದ ಹೊರಗೆ ತಳ್ಳುತ್ತದೆ. ನಿಮ್ಮ ಮಗು ಬೆಳೆದಂತೆ ಎದೆಹಾಲು ಹೊರತಾಗಿ ಬೇರೆ ಪದಾರ್ಥಗಳು ಸೇವಿಸುತ್ತದೆ, ಗಟ್ಟಿ ಆಹಾರ ಕೊಡಲು ಅದು ಸೂಕ್ತ ಸಮಯ. ಆದರೂ, ಜಾಸ್ತಿ ನಿಬಿಡತೆಯ ಆಹಾರಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಹಾಗಾಗಿ, ಮೊದಮೊದಲು ನಿಮ್ಮ ಮಗು ಊಟ ಕಕ್ಕಬಹುದು. ಹಾಗಾಗಿ, ನೀವು ಗಾಬರಿಗೊಂಡು ಪುನಃ ದ್ರವ್ಯ ಆಹಾರ ಪದಾರ್ಥಗಳ ಮೊರೆ ಹೋಗಬಾರದು. ನಿಮ್ಮ ಮಗು ಅದಕ್ಕೆ ಒಗ್ಗಿಕೊಳ್ಳುವವರೆಗೆ ಪ್ರಯತ್ನ ಮುಂದುವರರಿಸಿರಿ.

೩. ಆಹಾರ ಆಯ್ಕೆಗಳು

ನಿಮ್ಮ ಮಗುವಿಗೆ ಅಗಿಯುವುದನ್ನು ಕಲಿಸಲು ಒಂದು ಒಳ್ಳೆಯ ಸಾಧನ ಅಂದರೆ ಅದು ನೀವು ಪೂರೈಸುವ ಆಹಾರದ ನಿಬಿಡತೆಯನ್ನು ನಿಖರವಾಗಿ ಏರಿಸುತ್ತಾ ಹೋಗುವುದು. ಬಹಳಷ್ಟು ಪೋಷಕರು ಪೀತ ವರ್ಣದ್ರವ್ಯದಿಂದ ಶುರು ಮಾಡುತ್ತಾರೆ.ಮುಂದಿನ ಹೆಜ್ಜೆಯಾಗಿ ಅದನ್ನು ಅನ್ನದೊಂದಿಗೆ ಬೆರೆಸಿ ಕೊಡಬಹುದು. ಮಿಶ್ರಿತ ಹಣ್ಣು ಗಳ ಬದಲು, ನೀವೇ ಕೈಯಿಂದ ಹಿಸುಕಿದ ಆಹಾರ ಕೊಡುವುದು ಒಳ್ಳೆಯದು. ನಿಮ್ಮ ಮಗು ಇಚ್ಛಿಸುವ ಆಹಾರ ಕೊಟ್ಟಲ್ಲಿ, ನಿಮ್ಮ ಮಗುವಿಗೆ ಅಗಿಯಲು ಉತ್ತೇಜನ ಕೊಟ್ಟಂತೆ ಆಗುವುದು.

೪. ಹಸಿವು

ಈ ವಿಧಾನ ಪ್ರಶ್ನಾರ್ಹ ಅನಿಸಬಹುದು, ಆದರೆ ಕಲಿಕೆಯನ್ನು ಹೆಚ್ಚಿಸಲು ಇದು ತುಂಬಾ ಸಹಾಯಕಾರಿಯಾಗಿದೆ ಎಂದು ತಿಳಿದು ಬಂದಿದೆ. ನಿಮ್ಮ ಮಗುವಿಗೆ ಹಸಿವು ಆಗುವವರೆಗೆ ಊಟ ಕೊಡುವುದನ್ನು ಕಾಯ್ದಿರಿಸಿ. ನಿಮ್ಮ ಮಗುವಿಗೆ ಹಸಿವಾದಲ್ಲಿ, ಅದರ ಮೂಲಭೂತ ಸಹಜ ಪ್ರವೃತ್ತಿ ಮಗುವಿಗೆ ಅಗಿಯುವುದನ್ನು ಒಳಗೊಂಡ ಆಹಾರ ಸೇವನೆಗೆ ಪ್ರೊತ್ಸಾಹ ನೀಡುತ್ತದೆ, ಹಾಗಾಗಿ ಮಗು ತಿನ್ನಲು ಮುಂದಾಗುವುದು. ನಿಮ್ಮ ಮಗುವಿಗೆ ಹಸಿವು ಆಗಿರದಿದ್ದಲ್ಲಿ, ಅದು ಅಗಿಯುವ ಗೋಜಿಗೆ ಹೋಗುವುದಿಲ್ಲ ಹಾಗಾಗಿ ಅದರಿಂದ ಏನು ಕಲಿಯುವುದಿಲ್ಲ.

೫. ಸ್ವಾವಲಂಬನೆ

ಕೆಲವು ಪೋಷಕರು ಮಕ್ಕಳಿಗೆ ತಾವಾಗಿಯೇ ತಿನ್ನಲು ಬಿಟ್ಟಿದ್ದರಿಂದ ಮಕ್ಕಳು ಅಗಿಯುವುದನ್ನು ಕಲಿಯಲು ಪೂರಕವಾಯಿತು ಎಂದಿದ್ದಾರೆ. ನಿಮ್ಮ ಮಗುವಿಗೆ ಚಮಚ ಕೊಟ್ಟು, ನಿಮ್ಮ ಸಹಾಯವಿಲ್ಲದೆ ಅವರನ್ನು ತಿನ್ನಲು ಬಿಡಿ. ತಾನಾಗಿಯೇ ಹೊಟ್ಟೆ ತುಂಬಿಸಿಕೊಳ್ಳುವ ಜವಬ್ದಾರಿಯನ್ನು ನೀಡುವುದರಿಂದ ಮಕ್ಕಳಲ್ಲಿ ಕುತೂಹಲ ಹೆಚ್ಚಬಹುದು, ಖುಷಿ ಹಾಗು ಪ್ರೇರಣೆ ಸಿಗಬಹುದು.ಕೇವಲ ಎರಡೇ ತುತ್ತು ತಿಂದರೂ ಮಗುವಿಗೆ ಚಮಚದ ಮೇಲೆ ಇರುವ ಆಹಾರವನ್ನು ತಿನ್ನುವುದಕ್ಕೆ ಪ್ರೇರಣೆ ಸಿಗಬಲ್ಲದು ಹಾಗು ಇದರಿಂದ ಮಗು ಅಗಿಯುವಂತಾಗುವುದು.

ಪೋಷಕರಾಗಿ ಮಕ್ಕಳಿಗೆ ಅಗಿಯುವುದರಲ್ಲಿ ನೆರವಾಗಲು ಈ ಹೆಜ್ಜೆಗಳನ್ನು ಕೈಗೊಳ್ಳಬಹುದು. ಇನ್ನೂ ಕೆಲವು ಹೆಜ್ಜೆಗಳೆಂದರೆ ಆಹಾರದ ನೇಯ್ಗೆರಚನೆಯೊಂದಿಗೆ ಕೈಚಳಕ ತೋರಿಸಿ, ನಿಮ್ಮ ಮಗುವಿಗೆ ತನ್ನ ಬಾಯಿಯ ಬೇರೆ ಬೇರೆ ಜಾಗಗಳ ಅರಿವು ಮೂಡಿಸುವುದು. ಆಹಾರದ ಸಾಂದ್ರತೆಯ ನಿಖರತೆಯು ಹೆಚ್ಚಿದಲ್ಲಿ ,ಅದು ಮಗುವಿಗೆ ಉಸಿರುಗಟ್ಟದಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ, ನಿಮ್ಮ ಮಗುವಿಗೆ ತಿನ್ನಲು ಕಲಿಸುವ ಕಾರ್ಯದಲ್ಲಿ ತಾಳ್ಮೆ ಕಾಪಾಡಿಕೊಳ್ಳಿ, ಮಕ್ಕಳು ಕಲಿಯಲು ತಮ್ಮದೇ ಸಮಯ ತೆಗೆದುಕೊಳ್ಳುತ್ತಾರೆ ಹಾಗು ಪೀಡಿಸುತ್ತಾರೆ. ಆದರೆ, ಮಜಾ ಇರೋದೇ ಅಲ್ಲಿ ತಾನೆ !

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon