Link copied!
Sign in / Sign up
0
Shares

ನಮ್ಮ ನಾಲಿಗೆಯ ರುಚಿ ನಮಗೆ ಏಕೆ ಗೊತ್ತಾಗುವುದಿಲ್ಲ? ಉತ್ತರ ಇಲ್ಲಿದೆ ಓದಿ!

ಈ ಪ್ರಶ್ನೆಯು ಮೊದಲಿಗೆ ನಿಮಗೆ ಹಾಸ್ಯಾಸ್ಪದ ಎಣಿಸಬಹುದು. ಆದರೆ, ಇದು ನಿಜಕ್ಕೂ ನಿಮ್ಮ ಮೆದುಳಿಗೆ ಕೆಲಸ ಕೊಡುವಂತದ್ದು. ನಮ್ಮ ಇತರೆ ಇಂದ್ರೀಯಗಳಾದ ಕಿವಿ, ಕಣ್ಣು, ಮೂಗು, ಚರ್ಮದೊಂದಿಗೆ, ನಾವು ಈ ಜಗತ್ತನ್ನು ಅನುಭವಿಸಲು ಮತ್ತು ಅದರ ಕಾರ್ಯ ರೂಪದ ಮಾದರಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುವುದು ನಾಲಿಗೆ.


ಈ ಮೇಲಿನ ಒಗಟು ಬಹಳಷ್ಟು ಬಾರಿ ಕಣ್ಣಿಗೆ ಅನ್ವಯಿಸಿ ಕೂಡ ಹೇಳುತ್ತಾರೆ, ಆದರೆ ನಾವು ಪ್ರತಿಬಿಂಬದಲ್ಲಿ ನಮ್ಮ ಕಣ್ಣುಗಳನ್ನ ನೋಡಿಕೊಳ್ಳಬಹುದು. ನಾವು ನಮ್ಮ ಚರ್ಮವನ್ನ ನಾವೇ ಸ್ಪರ್ಶಿಸಿ ಅನುಭವಿಸಬಹುದು. ಕಿವಿಯು ತನ್ನನ್ನು ತಾನು ಕೇಳಿಸಿಕೊಳ್ಳಲು ಆಗುವುದಿಲ್ಲ, ಆದರೆ ಕಿವಿ ಎಲ್ಲಾದರೂ ಸದ್ದು ಮಾಡುತ್ತದ? ಇಲ್ಲ. ಹೀಗಾಗಿ ಅದು ಕೂಡ ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಆದರೆ ನಮ್ಮ ನಾಲಿಗೆ ಮಾತ್ರ ನಮ್ಮ ಬಾಯಿಯಲ್ಲಿ ಮಾತಾಡುವಾಗ, ತಿನ್ನುವಾಗ ಹೊರಳಾಡುತ್ತಿರುತ್ತದೆ. ನಾವು ತಿನ್ನುವ ಆಹಾರವನ್ನ ರುಚಿಸುತ್ತದೆ. ನಮ್ಮ ಹಲ್ಲಿನ ಮಧ್ಯ ಸಿಲುಕಿಕೊಂಡಿರುವ ಆಹಾರವನ್ನ ಹೊರತೆಗೆಯುತ್ತದೆ.


ಆದರೆ ನಾವು ನಾಲಿಗೆಯ ಬಗ್ಗೆಯೇ ಹೆಚ್ಚು ಮಾತನಾಡಲು ಕಾರಣ, ಈ ನಾಲಿಗೆಯು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಒಬ್ಬೊಬ್ಬರು ನೀಡುವ ಒಂದೊಂದು ಉತ್ತರ, ಅಭಿಪ್ರಾಯಗಳು. ನಾಲಿಗೆಯು ನಮ್ಮ ಅತ್ಯಂತ ಗಟ್ಟಿಯಾದ ಸ್ನಾಯು ಕೂಡ ಅಲ್ಲ. ನಿಜವಾಗಿ ಹೇಳಬೇಕೆಂದರೆ ನಮ್ಮ ನಾಲಿಗೆಯು ಹಲವಾರು ಸ್ನಾಯುಗಳ ಗುಂಪು. ಇದಲ್ಲದೆ ನಿಮಗೆ ಶಾಲೆಯಲ್ಲಿ ಹೇಳಿ ಕೊಟ್ಟಂತೆ ನಮ್ಮ ನಾಲಿಗೆಯ ಮೇಲೆ ಇಂತದ್ದೇ ಜಾಗದಲ್ಲಿ ಮಾತ್ರ ಹುಳಿಯನ್ನು ರುಚಿಸಲು ಸಾಧ್ಯ, ಇಂತದ್ದೇ ಜಾಗದಲ್ಲಿ ಮಾತ್ರ ಸಿಹಿಯನ್ನು ರುಚಿಸಲು ಸಾಧ್ಯ ಎಂಬುದು ಕೂಡ ಸುಳ್ಳು. ಆದರೆ ಎಲ್ಲದಕ್ಕಿಂತ ದೊಡ್ಡ ತಪ್ಪು ಗ್ರಹಿಕೆ ಎಂದರೆ, ನಾಲಿಗೆ ಮಾತ್ರ ನಿಮ್ಮ ರುಚಿಯನ್ನು ತಿಳಿಸುವ ಕಾರ್ಯ ಮಾಡುತ್ತದೆ ಎಂಬುದು.


ನಮ್ಮ ನಾಲಿಗೆಯಲ್ಲಿರುವ ಟೇಸ್ಟ್ ಬಡ್ಸ್ ಅಲ್ಲಿರುವ ರಿಸೆಪ್ಟರ್ ಕಣಗಳು ರುಚಿಯ ಬಗೆಗಿನ ಮಾಹಿತಿಯನ್ನು ಮೆದುಳಿಗೆ ತಲುಪಿಸುತ್ತವೆ. ಆದರೆ ಈ ಕಣಗಳು ನಾಲಿಗೆಯ ಮೇಲ್ಭಾಗದಲ್ಲಿ ಮಾತ್ರ ಇರುತ್ತವೆ. ಆದರೆ ಈ ಕಣಗಳು ಮಾತ್ರ ರುಚಿ ಹೇಗಿದೆ ಎಂಬುದನ್ನ ನಿರ್ಧರಿಸುವುದಿಲ್ಲ. ಬದಲಿಗೆ ನಿಮ್ಮ ಮೆದುಳು ನಿಮ್ಮ ಮೂಗಿನ ಮೇಲೆ ಕೂಡ ಅವಲಂಬಿತ ಆಗಿರುತ್ತದೆ. ನಿಮ್ಮ ಮೆದುಳು ರುಚಿಯನ್ನು ನಿರ್ಧರಿಸಲು ನಿಮ್ಮ ಮೂಗಿನ ವಾಸನೆ ಗ್ರಹಿಕೆ ಶಕ್ತಿಯ ಮೇಲೆ ಕೂಡ ಅವಲಂಬಿತ ಆಗಿರುತ್ತದೆ. ನಿಮ್ಮ ನಾಲಿಗೆಯು ಕೇವಲ ಸ್ಪಾರ್ಷ ಮತ್ತು ಉಷ್ಣದ ಮಾಹಿತಿಯನ್ನು ಮಾತ್ರ ನೀಡುತ್ತದೆ. ಹೀಗಾಗಿ ಒಂದು ರುಚಿಯನ್ನು ನಿರ್ಧರಿಸುವ ಕಾರ್ಯದಲ್ಲಿ ನಾಲಿಗೆ ಮಾತ್ರ ಇರುವುದಿಲ್ಲ.

ಬಾಯಲ್ಲಿ ಉಳಿದಿರುವ ಆಹಾರವನ್ನು ನಿಮ್ಮ ನಾಲಿಗೆಯು ಖಂಡಿತವಾಗಿ ರುಚಿಸಬಹುದು. ಒಂದು ವೇಳೆ ನೀವು ನಾಲಿಗೆ ಕಡಿದುಕೊಂಡು ರಕ್ತಸ್ರಾವ ಉಂಟಾದರೆ, ರಕ್ತದ ರುಚಿಯನ್ನ ಕೂಡ ನಾಲಿಗೆ ರುಚಿಸಬಹುದು. ನೀವು ನಿಮ್ಮ ಬಾಯಿಂದ ಬರುವ ಕೆಟ್ಟ ವಾಸನೆ, ನಿಮ್ಮ ಎಂಜಲು, ಎಲ್ಲವನ್ನು ನೀವು ರುಚಿಸಬಹುದು. ಹಾಗಿದ್ದರೆ ನಮ್ಮ ನಾಲಿಗೆಯ ರುಚಿಯನ್ನ ನಮಗೆ ಏಕೆ ಗೊತ್ತಾಗುವುದಿಲ್ಲ?


ಮನೋವಿಜ್ಞಾನಿಗಳ ಹೊಂದಿಕೊಳ್ಳುವಿಕೆಯ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಅದು ಏನೆಂದರೆ, ಸ್ಟಿಮುಲಸ್ ಅಥವಾ ಪ್ರಚೋದನೆಯು ಪದೇ ಪದೇ ಉಂಟಾಗುತ್ತಿದ್ದರೆ ಅಥವಾ ತುಂಬಾ ಸಮಯ ಇದ್ದರೆ, ನಮ್ಮ ಮೆದುಳು ಅದನ್ನು ನಿರ್ಲಕ್ಷಿಸಲು ಶುರು ಮಾಡುತ್ತದೆ. ಉದಾಹರಣೆಗೆ, ನೀವು ಬೇರೆಯವರ ಮನೆಗೆ ಹೋದಾಗ, ಆ ಮನೆಯಲ್ಲಿ ಒಂದು ರೀತಿಯ ವಾಸನೆ ಇರುವುದನ್ನು ನೋಡುತ್ತೀರಾ. ಆದರೆ, ನಿಮ್ಮ ಮನೆಗೆ ಬಂದಾಗ ನಿಮಗೆ ಯಾವುದೇ ವಾಸನೆ ಗೊತ್ತಾಗುವುದಿಲ್ಲ. ಅದೇ ಬೇರೆಯವರಿಗೆ ನಿಮ್ಮ ಮನೆಯಲ್ಲಿ ವಾಸನೆ ಕಾಣಿಸಿಕೊಳ್ಳುತ್ತದೆ.

ನಾವು ನಮ್ಮ ನಾಲಿಗೆಯನ್ನು ಏಕೆ ರುಚಿಸಲು ಆಗುವುದಿಲ್ಲ ಎಂಬುದಕ್ಕೆ ಮೇಲೆ ಹೇಳಿರುವ ವಿದ್ಯಮಾನವೇ ಕಾರಣ ಆಗಿರಬಹುದು. ಆದರೆ ನಾಲಿಗೆ ತಜ್ಞರಿಗೆ ನಾವು ಈ ಪ್ರಶ್ನೆಗಳನ್ನ ಕೇಳಿದಾಗ, ಅವರಿಂದ ಯಾವುದೇ ಸಮಾಧಾನಕರ ಉತ್ತರಗಳ ಬರಲಿಲ್ಲ.


Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon